ಸ್ನೇಹಾಗೆ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿರುವ ಕಂಠಿ!

By ಪೂರ್ವ

'ಪುಟ್ಟಕನ ಮಕ್ಕಳು' ಧಾರವಾಹಿ ಚೆನ್ನಾಗಿ ಮೂಡಿಬರುತ್ತಿದೆ. ಮುರಳಿ ಮೇಷ್ಟ್ರು ಕೊಟ್ಟಿರುವ ಗಿಫ್ಟ್ ಬಾವಿಗೆ ಬಿದ್ದಿದೆ ಇದರಿಂದ ಚಿಂತಿತಳಾದ ಸಹನಾ ಬಾವಿಗೆ ನೀರು ಸೇದಲು ಯಾರನ್ನು ಕಳುಹಿಸುವುದಿಲ್ಲ. ನಾನೇ ನೀರು ಸೇದುತ್ತೇನೆ ಎಂದು ಮುಂದೆ ಬರುತ್ತಾಳೆ. ಪುಟ್ಟಕ್ಕ, ಸಹನಾ ಬಳಿ ಬಂದು ಏನಾದರು ಸುಮಾ ಮಾತನಾಡಿದ್ಲಾ ಕೇಳುತ್ತಾಳೆ ಅದಕ್ಕೆ ಸಹನಾ ಇಲ್ಲ ಎನ್ನುತ್ತಾಳೆ. ಅದಕ್ಕೆ ಪುಟ್ಟಕ್ಕ ಇರಲಿ ಊಟ ಮಾಡುವ ಸಂದರ್ಭದಲ್ಲಿ ಅವಳು ಬರುತ್ತಾಳೆ ಅಲ್ವಾ ಆಗಲೇ ಮಾತನಾಡುತ್ತೇನೆ ಎಂದು ಹೇಳುತ್ತಾಳೆ.

ಇದನ್ನು ಕೇಳಿದ ಸಹನಾ ತಲೆಯಾಡಿಸುತ್ತಾಳೆ. ಸುಮಾಳ ಬಳಿ ಓಡಿ ಬಂದ ಸಹನಾಗೆ ಸುಮಾಳ ಕೋಪದ ಮುಖ ಕಂಡಿತು ಇದನ್ನು ನೋಡಿದ ಸುಮಾ ಏನಕ್ಕ ನಗುತ್ತಿದ್ದಿಯಾ ಎಂದಾಗ ಸಹನಾ ಏನಿಲ್ಲ ಎಂದು ಹೇಳುತ್ತಾಳೆ. ಬಳಿಕ ಆಕೆಯ ಬಳಿ ಸಹಾಯ ಕೇಳುತ್ತಾಳೆ. ಈ ವೇಳೆ ಸುಮಾಗೆ ಅಕ್ಕನ ಮೇಲೆ ಕೋಪ ಕಡಿಮೆ ಆಗಿ ಏನೆಂದು ಕೇಳುತ್ತಾಳೆ. ನಡೆದ ವಿಚಾರವನ್ನು ಸುಮಾ ಬಳಿ ಹೇಳುತ್ತಾಳೆ. ಎಲ್ಲರೂ ಮಲಗಿದ ವೇಳೆ ಬಾವಿ ಬಳಿ ಬರುವಂತೆ ಹೇಳುತ್ತಾಳೆ. ಇದನ್ನು ಕೇಳಿದ ಸುಮಾ ಮೊದಲಿಗೆ ಒಪ್ಪುವುದಿಲ್ಲ ಬಳಿಕ ಒಪ್ಪಿಕೊಂಡು ಆಯ್ತು ಎಂದು ಹೇಳುತ್ತಾಳೆ.

ಇತ್ತ ಕಂಠಿ ಹಾಗೂ ಸ್ನೇಹಾ ರಾಮ ದುರ್ಗಕ್ಕೆ ತೆರಳುತ್ತಾರೆ. ಸ್ನೇಹಾ, ದೊರೆಯನ್ನು ಹುಡುಕಿಕೊಂಡು ಹೋಗುತ್ತಾಳೆ ಆದರೆ ದೊರೆ ಮಾತ್ರ ಆಕೆಯ ಕಣ್ಣಿಗೆ ಬೀಳಲೇ ಇಲ್ಲ. ರಾಮದುರ್ಗ ಕ್ಕೆ ಬಂದ ವೇಳೆ ಸ್ನೇಹಾ ಕಟೌಟ್ ಅಲ್ಲಿ ಇರುತ್ತೆ ಅಲ್ಲಿಯೇ ಒಂದು ಪತ್ರಾನು ಇರುತ್ತದೆ. ಇದನ್ನು ಕಂಡು ಸ್ನೇಹಾ ಆ ಪತ್ರವನ್ನು ಓದುತ್ತಾಳೆ. ಸ್ನೇಹಾಳ ಮುಖದಲ್ಲಿ ಇರುವ ಸಂತಸ ವನ್ನು ಕಂಡು ಕಂಠಿ ಏನು ಬರೆದಿದ್ದಾರೆ ಎಂದು ಕಾತರದಿಂದ ಕೇಳುತ್ತಾನೆ ಈ ವೇಳೆ ಕಕ್ಕಾ ಬಿಕ್ಕಿ ಆದ ಕಂಠಿ ನೀವೇ ಹೇಳಿ ಎಂದು ಹೇಳುತ್ತಾನೆ.

ಕಂಠಿಗೆ ಸಹಾಯ ಮಾಡಿದ ಮುಂಗುಸಿ

ಕಂಠಿಗೆ ಸಹಾಯ ಮಾಡಿದ ಮುಂಗುಸಿ

ಅದಕ್ಕೆ ಸ್ನೇಹಾ ಇಲ್ಲ ನೀವೇ ಜೋರಾಗಿ ಓದಿ ಹೇಳಿ ಎಂದು ಹೇಳುತ್ತಾಳೆ. ಬಳಿಕ ಕಿವಿಗೆ ಬ್ಲೂಟುತ್ ಅನ್ನು ಹಾಕಿ ಕಂಠಿ ಗೆಳೆಯ ಮುಂಗುಸಿ ಹೇಳಿದ ಹಾಗೆಯೇ ಓದಿ ಹೇಳುತ್ತಾನೆ. ಇದನ್ನು ಕೇಳಿದ ಸ್ನೇಹಾ ಖುಷಿ ಪಡುತ್ತಾರೆ. ಮುಂಗುಸಿ ಬಳಿ ಆತನ ಸ್ನೇಹಿತ ಬಂದು ಕೇಳುತ್ತಾನೆ ಇದೆಲ್ಲ ಏನು ಎಂದು ಆಗ ಮುಂಗುಸಿ ಹೇಳುತ್ತಾನೆ ಹೀಗೆಲ್ಲಾ ಆಗುತ್ತದೆ ಎಂದು ನನಗೆ ಗೊತ್ತಿತ್ತು. ಅದಕ್ಕೆ ಒಂದು ಪತ್ರವನ್ನು ಜೆರಾಕ್ಸ್ ಮಾಡಿಕೊಂಡು ಇದ್ದೆ ಎಂದು ಹೇಳುತ್ತಾನೆ. ಕಂಠಿಗೆ ಶ್ರಿರಕ್ಷೆ ಯ ಹಾಗೆ ಮುಂಗುಸಿ ಇದ್ದಾನೆ ಎಂಬುವುದು ಇನ್ನೊಂದು ಬಾರಿ ನಿಜವಾಯಿತು. ಇನ್ನೂ ರಾಮದುರ್ಗದಿಂದ ಇಬ್ಬರು ಹೊರಡುತ್ತಾರೆ. ಸ್ನೇಹ ಬಳಿ ಕಂಠಿ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಉತ್ತರ ಎಂಬಂತೆ ಸ್ನೇಹಾ ಹೇಳುತ್ತಾಳೆ ನಾಡಿದ್ದು ಗಣೇಶನ ಹಬ್ಬದಂದು ಸಿಗುತ್ತಾನೆ ಆಗ ಆತನ ಬಳಿ ಕೇಳೋಣ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಂಠಿ ಹೇಳುತ್ತಾನೆ ಆ ದೊರೆಗೆ ನೀವಂದ್ರೆ ಬಹಳ ಇಷ್ಟ ಇರಬೇಕು. ನನ್ನ ಬಳಿ ಮಾತನಾಡ ಬೇಡ ಎಂದು ಹೇಳಿದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸುತ್ತಾನೆ.

ಕಂಠಿ ಫುಲ್ ಖುಷ್

ಕಂಠಿ ಫುಲ್ ಖುಷ್

ನನ್ನ ಮೊದಲ ಗೆಳೆಯ ನೀವೇ. ಅದೆಲ್ಲಾ ಖಂಡಿತ ಆಗದ ಮಾತು ಎಂದು ಹೇಳುತ್ತಾಳೆ. ಇದನ್ನು ಕೇಳಿ ಕಂಠಿಗೆ ಬಹಳ ಖುಷಿ ಆಗುತ್ತದೆ. ರಾಮದುರ್ಗ ದಿಂದ ಇಬ್ಬರು ದ್ವಿ ಚಕ್ರ ವಾಹನದಲ್ಲಿ ಇಬ್ಬರು ಒಟ್ಟಾಗಿ ಹೋಗುತ್ತಾರೆ. ಮೆಸ್ ಬಳಿ ಬರಬೇಕಾದರೆ ರಾತ್ರಿ ಆಗುತ್ತದೆ. ಈ ವೇಳೆ ಸಹನಾ ಹಾಗೂ ಸುಮಾ ಮೇಷ್ಟ್ರು ಕೊಟ್ಟಿರುವ ಗಿಫ್ಟ್ ಅನ್ನು ಬಾವಿ ಕಟ್ಟೆಯ ಬಳಿ ನೀರು ಸೇದುತ್ತಾ ಹುಡುಕುತ್ತಾ ಇರುತ್ತಾರೆ. ಬಾವಿಯಿಂದ ನೀರು ಸೇದಿ ಸೇದಿ ಸುಸ್ತಾ ಆಗುತ್ತದೆ ಸಹನಾಗೆ ಆದರೆ ಗಿಫ್ಟ್ ಮಾತ್ರ ಸಿಗಲಿಲ್ಲ.

ಸ್ನೇಹಾಳನ್ನು ನೋಡಿ ಮುಖ ಗಂಟು ಹಾಕಿದ ಸುಮಾ

ಸ್ನೇಹಾಳನ್ನು ನೋಡಿ ಮುಖ ಗಂಟು ಹಾಕಿದ ಸುಮಾ

ಈ ವೇಳೆ ಬಂದ ಸ್ನೇಹಾ ಅಕ್ಕ ನೀವಿಬ್ಬರೂ ಎನು ಮಾಡುತ್ತಿದ್ದೀರಿ ಎಂದಾಗ ಸ್ನೇಹಾಳನ್ನು ನೋಡಿದ ಸುಮಾ ಮನೆ ಒಳಗೆ ಹೋಗುತ್ತಾಳೆ. ಇದನ್ನೂ ಕಂಡ ಸ್ನೇಹಾ ಏನಕ್ಕ ನಿನ್ನ ಬಳಿ ಮಾತನಾಡುತ್ತಾಳ ಎಂದೆಲ್ಲಾ ಕೇಳುತ್ತಾಳೆ ಅದಕ್ಕೆ ಸ್ನೇಹಾ ಹೇಳುತ್ತಾಳೆ ಹೌದು ಮಾತನಾಡುತ್ತಾಳೆ ಎಂದು ಹೇಳುತ್ತಾಳೆ. ಇನ್ನೂ ಮಳೆಯಲ್ಲಿ ನೆನೆದುಕೊಂಡು ಬಂದಿದ್ದ ಸ್ನೇಹಾ ಸ್ನಾನ ಮಾಡಲು ತೆರಳುತ್ತಾಳೆ. ಸಹನಾಗಾಗಿ ಮೇಷ್ಟ್ರು ದೇವಾಲಯದ ಬಳಿ ಕಾಯುತ್ತಾ ನಿಂತಿರುತ್ತಾರೆ. ಎಷ್ಟೇ ಕಾದರು ಸಹನಾ ಬಾರದೆ ಇರುವುದನ್ನು ಕಂಡು ಬಹಳ ಬೇಸರಿಸಿಕೊಳ್ಳುತ್ತಾರೆ. ಸಹನಾ ಗೆ ನನ್ನ ಮೇಲೆ ಇನ್ನೂ ಕೋಪ ಹೋಗಿಲ್ವಾ ಎಂದೆಲ್ಲ ಹೇಳುತ್ತಾನೆ. ಬಳಿಕ ಅಲ್ಲಿಂದ ತೆರಳುತ್ತಾನೆ.

ಮುಂದೇನು ಮಾಡುತ್ತಾಳೆ ಬಂಗಾರಮ್ಮ!

ಮುಂದೇನು ಮಾಡುತ್ತಾಳೆ ಬಂಗಾರಮ್ಮ!

ಮನೆಗೆ ಬಂದ ಬಂಗಾರಮ್ಮ ಬಹಳ ಖುಷಿಯಲ್ಲಿ ತನ್ನ ಗಂಡ ಬಳಿ ಹೇಳುತ್ತಾರೆ. ಪುಟ್ಟಕ್ಕ ನಿಮಗೆ ಎಣ್ಣೆ ಕೊಟ್ಟು ಕಳುಹಿಸಿದ್ದಾರೆ. ನೀವು ಆದಷ್ಟು ಬೇಗ ಸರಿ ಹೋಗುತ್ತೀರಾ ಎಂದು ಹೇಳುತ್ತಾಳೆ ಇದನ್ನು ಕೇಳಿದ ಬಂಗಾರಮ್ಮನ ಗಂಡ ಖುಷಿ ಪಡುತ್ತಾರೆ. ಈ ವೇಳೆ ಲೆಕ್ಕಾಚಾರ ಹೇಳುತ್ತಾನೆ. ಪುಟ್ಟಕ್ಕಗೆ ಏನೋ ತೊಂದರೆ ಆದ ಹಾಗೆ ಕಾಣುತ್ತದೆ ಅಮ್ಮಾವರೇ. ನೀವು ಮನೆ ಒಳಗೆ ಕುಳಿತಿರಬೇಕಾದರೆ ಮನೆ ಹೊರಗೆ ಪೊಲೀಸ್ ಬಂದಿದ್ದರು. ಪುಟ್ಟಕ್ಕ ಈ ಬಗ್ಗೆ ನಿಮಗೆ ಏನು ಹೇಳಿಲ್ಲ. ಪುಟ್ಟಕ್ಕನಿಗೆ ಏನಾದರು ತೊಂದರೆ ಆಗಿದೆಯಾ ಎಂದು ಅನ್ನಿಸುತ್ತಿದೆ ಎಂದು ಹೇಳುತ್ತಾನೆ. ವಿಚಾರ ತಿಳಿದ ಬಂಗಾರಮ್ಮ ಏನು ಮಾಡುತ್ತಾಳೆ ಎಂದು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 8th September. Know more about episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X