ಸವಾಲಲ್ಲಿ ಸೋತು ಪುಟ್ಟಕ್ಕನ ಮನೆಗೆ ಬಂದ ರಾಜೇಶ್ವರಿ

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಪುಟ್ಟಕ್ಕನ ಮನೆಗೆ ಯಾರು ಬಾರದೆ ಇರುವುದನ್ನು ಕಂಡು ಪುಟ್ಟಕ್ಕ ಬಹಳ ಬೇಸರಿಸಿಕೊಂಡಿದ್ದಾಳೆ. ಆದರೆ ಕೊನೆಗೂ ಜನಗಳು ಪುಟ್ಟಕ್ಕನ ಮನೆಗೆ ಆಗಮಿಸುತ್ತಾರೆ. ಜನರ ಜೊತೆ ರಾಜೇಶ್ವರಿಯೂ ಮನೆಗೆ ಬರುತ್ತಾಳೆ!

ರಾಜೇಶ್ವರಿಯನ್ನೂ ನೋಡಿ ಸ್ನೇಹಾ ಕೆಂಡಾಮಂಡಲ ಆಗಿದ್ದಾಳೆ. ಪುಟ್ಟಕ್ಕ ಪ್ರೀತಿಯಿಂದ ರಾಜೇಶ್ವರಿ ಯನ್ನು ಮನೆಯೊಳಗೆ ಕರೆಯುತ್ತಾಳೆ. ಬಾ ರಾಜವ್ವ ಬಾರವ್ವ ಎಂದು ಕರೆಯುತ್ತಾಳೆ. ಬಳಿಕ ಸ್ನೇಹಾನಾನ್ನೂ ಕರೆದು ಆರತಿ ಕೊಡವ್ವ ಎನ್ನುತ್ತಾರೆ. ಸ್ನೇಹಾ ರಾಜೇಶ್ವರಿ ಗೆ ಆರತಿ ಕೊಡುತ್ತಾಳೆ.

ಆಗ ರಾಜೇಶ್ವರಿ ಹೇಳುತ್ತಾಳೆ ಸವಾಲಲ್ಲಿ ಸೋತರೂ ಇಲ್ಲಿ ತನಕ ಯಾಕೆ ಬಂದಿದ್ದಾಳೆ ಎಂದು ಯೋಚನೆ ಮಾಡುತ್ತಿರಬೇಕು ಅಲ್ವಾ ಎನ್ನುತ್ತಾಳೆ ಅದಕ್ಕೆ ಸ್ನೇಹಾ ಹೇಳುತ್ತಾಳೆ ಹಾಗೇನೂ ಇಲ್ಲ ರಾಜೇಶ್ವರಿ ಅವರೆ, ಸವಾಲು ನೀವು ಹಾಕಿದ್ದು ಅದಕ್ಕೂ ನಮಗೂ ಸಂಬಂಧವೇ ಇಲ್ಲ. ನೀವು ಬಂದರೆ ಅವ್ವನಿಗೆ ಖುಷಿ ಆಗುತ್ತಲ್ವಾ ಅಂತ ಕರೆದಿದ್ದು. ಬಂದಿದ್ದಕ್ಕೆ ಥಾಂಕ್ಸ್ ಎನ್ನುತ್ತಾಳೆ. ಆ ಮೇಲೆ ಊರ ಹೆಂಗಸರ ಬಳಿ 'ಎಷ್ಟೇ ಆದರೂ ಪುಟ್ಟಕ್ಕನ ನೀವು ಬಿಟ್ಟುಕೊಡಲ್ಲ ಅಲ್ವಾ' ಎನ್ನುತ್ತಾಳೆ ರಾಜೇಶ್ವರಿ.

ರಾಜವ್ವನನ್ನು ಒಳಗೆ ಕರೆವ ಪುಟ್ಟಕ್ಕ

ರಾಜವ್ವನನ್ನು ಒಳಗೆ ಕರೆವ ಪುಟ್ಟಕ್ಕ

ದೇವರ ವಿಚಾರದಲ್ಲಿ ಹಿಂದೂ ಮುಂದೂ ನೋಡಬಾರದು ಎಂಬ ಪರಿಜ್ಞಾನ ನನಗೂ ಇದೆ ಅದಕ್ಕೆ ಬಂದಿದ್ದೇನೆ ಎನ್ನುತ್ತಾಳೆ ಅದಕ್ಕೆ ಪುಟ್ಟಕ್ಕ ಹೇಳುತ್ತಾಳೆ ರಾಜವ್ವ ನೀನು ಬಂದಿದ್ದು ನನಗೆ ತುಂಬಾ ಸಂತೋಷ ಆಯ್ತು. ಆಗ ಸ್ನೇಹಾ ಹೇಳುತ್ತಾಳೆ ಬನ್ನಿ ರಾಜೇಶ್ವರಿ ಅವರೆ ನಮಸ್ಕಾರ ಮಾಡಿ ಎಂದಾಗ ರಾಜೇಶ್ವರಿ ಕೋಪದಿಂದ ನಾನು ಬರೋದಿಲ್ಲ ಎಂದು ಹೇಳುತ್ತಾಳೆ.

ಪುಟ್ಟಕ್ಕನ ಕಾಲಿಗೆ ಬೀಳುವ ಮಕ್ಕಳು

ಪುಟ್ಟಕ್ಕನ ಕಾಲಿಗೆ ಬೀಳುವ ಮಕ್ಕಳು

ಬಳಿಕ ಸ್ನೇಹಾ ಅವ್ವ ಎಂದು ಕರೆದು ಅಮ್ಮನ ಕಾಲಿಗೆ ಮೂವರು ಮಕ್ಕಳು ಅಡ್ಡ ಬೀಳುತ್ತಾರೆ. ಅದಕ್ಕೆ ಪುಟ್ಟಕ್ಕ ಹೇಳುತ್ತಾರೆ. ಏಳಿ ಮಕ್ಕಳೇ ದೇವರ ಸನ್ನಿಧಾನದಲ್ಲಿ ಇದೇನಿದು ಏಳಿ ಎಂದು ಹೇಳುತ್ತಾಳೆ. ಸ್ನೇಹಾ ಹೇಳುತ್ತಾಳೆ ನೀನೇ ಹೇಳಿದ್ದೆ ಅಲ್ವಾ ಅವ್ವ ಲಕ್ಷ್ಮಿ ಕೇವಲ ದುಡ್ಡಿನ ದೇವತೆ ಅಲ್ಲ ಧನ , ಧಾನ್ಯ, ಧೈರ್ಯ, ಸಂತಾನ, ಎಲ್ಲದಕ್ಕೂ ಆಕೇನೆ ದೇವತೆ. ನಮಗೆ ನೀನೇ ನನ್ನ ಅಷ್ಟ ಲಕ್ಷ್ಮೀ ಎನ್ನುತ್ತಾಳೆ.

ಪುಟ್ಟಕ್ಕನ ಕಾಲಿಗೆ ಬೀಳುವ ಕಂಠಿ

ಪುಟ್ಟಕ್ಕನ ಕಾಲಿಗೆ ಬೀಳುವ ಕಂಠಿ

ಆ ವೇಳೆ ಕಂಠಿ ಗೆಳೆಯ ಮೆತ್ತಗೆ ಕಂಠಿಯನ್ನೂ ಕರೆಯುತ್ತಾನೆ. ಸಿಕ್ಕಿದ್ದೇ ಚಾನ್ಸ್ ಎಂದು ಆ ಮೇಷ್ಟ್ರು ಕಾಲಿಗೆ ಬಿದ್ದು ಬಿಡ್ತಾನೆ. ನೀನು ಬೇಗ ಬಿದ್ದು ಬಿಡು ಎನ್ನುತ್ತಲೆ ಪುಟ್ಟಕ್ಕನ ಕಾಲಿಗೆ ಬೀಳುತ್ತಾರೆ ಕಂಠಿ. ಪುಟ್ಟಕ್ಕ ಆಶಿರ್ವಾದ ಮಾಡುತ್ತಾಳೆ. ಬಳಿಕ ಮೇಷ್ಟ್ರು ಕೂಡ ಪುಟ್ಟಕ್ಕನ ಕಾಲಿಗೆ ನಮಸ್ಕಾರ ಮಾಡುತ್ತಾರೆ. ಅದಕ್ಕೆ ಪುಟ್ಟಕ್ಕ ಅಯ್ಯೋ ಮೇಷ್ಟ್ರೇ ಇದ್ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ಹೇಳುತ್ತಾಳೆ. ಬಳಿಕ ಪುಟ್ಟಕ್ಕ ಒಳ್ಳೆದಾಗಲಿ ಎಂದು ಹೇಳುತ್ತಾಳೆ. ಆ ತಾಯಿ ನಿಮಗೆಲ್ಲರಿಗೂ ಒಳ್ಳೇದು ಮಾಡಲಿ ಎಂದು ಹೇಳುತ್ತಾಳೆ.

ಸವಾಲಿನಲ್ಲಿ ಸೋತ ರಾಜೇಶ್ವರಿ

ಸವಾಲಿನಲ್ಲಿ ಸೋತ ರಾಜೇಶ್ವರಿ

ಏನೇ ಆಗಲಿ ಸವಾಲಿನಲ್ಲಿ ಸದ್ಯಕ್ಕೆ ಪುಟ್ಟಕ್ಕ ಗೆದ್ದಿದ್ದಾಳೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಊರ ಹೆಣ್ಣು ಮಕ್ಕಳು ನಮ್ಮ ಮನೆಗೆ ಬರುತ್ತಾರೆ ನಿಮ್ಮ ಮನೆಗೆ ಬರಲ್ಲ ಎಂದು ರಾಜೇಶ್ವರಿ ಸವಾಲು ಎಸೆದಿದ್ದಳು. ಅಂತೆಯೇ ವರಮಹಾಲಕ್ಷ್ಮಿ ಪೂಜೆಗೆ ಬಂದವರಿಗೆ ಬೆಳ್ಳಿ ನಾಣ್ಯ ಕೊಡುವುದಾಗಿಯೂ ರಾಜೇಶ್ವರಿ ಹೇಳಿದ್ದಳು. ಊರ ಕೆಲವು ಹೆಂಗಸರು ರಾಜೇಶ್ವರಿ ಮನೆಗೆ ಹೋಗಿದ್ದರು ಆದರೆ ಅಲ್ಲಿ ಪೂಜೆ ಪ್ರಾರಂಭವಾಗುವ ಮುನ್ನವೇ ಪುಟ್ಟಕ್ಕನ ಮನೆಗೆ ವಾಪಸ್ಸಾದರು. ಆ ಮೂಲಕ ಸವಾಲಿನಲ್ಲಿ ರಾಜೇಶ್ವರಿ ಸೋಲುವಂತೆ ಮಾಡಿದರು.

Recommended Video

Aryavardha Guruji |ಆರ್ಯವರ್ಧನ್ ಈ ಅವತಾರಕ್ಕೆ ಇವರೇ ಕಾರಣ | Bigg Boss OTT | Filmibeat Kannada

More from Filmibeat

English summary
Kannada serial Puttakkana Makkalu written updated on 9th August. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X