Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರೀತಿಸುತ್ತಿದ್ದೇನೆ ಎಂದು ಒಪ್ಪಿಕೊಂಡು ಸ್ನೇಹಾ ಎದುರು ಸಿಕ್ಕಿಬಿದ್ದ ಕಂಠಿ!
ಪುಟ್ಟಕ್ಕನ ಮಕ್ಕಳು ಧಾರವಾಹಿ ಕಥೆ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಸಹನಾ ಅಮ್ಮನ ಬಳಿ ಮೇಷ್ಟ್ರು ಹೇಳಿದ ಮಾತು ಹೇಳಬೇಕು ಎಂದು ಆಕೆಯ ಗೆಳತಿ ಬಳಿ ಹೇಳುತ್ತ ಇರುತ್ತಾಳೆ ಇದನ್ನು ನೋಡಿದ ಟೈಲರಿಂಗ್ ಮೇಡಂ ಬಯ್ಯುತ್ತಾರೆ. ಈ ವೇಳೆ ಸಹನಾ ಗೆಳತಿ, 'ಸಹನಾಗೆ ತಲೆ ನೋವಂತೆ ಅದಕ್ಕೆ ಮನೆಗೆ ಹೋಗಬೇಕು ಎಂದು ಕೇಳುತ್ತಿದ್ದಳು ಎಂದಾಗ ಮೇಡಂ ಸಹನಾಳನ್ನು ಮನೆಗೆ ಹೋಗಲು ಹೇಳುತ್ತಾರೆ.
ಇನ್ನು ಪುಟ್ಟಕ್ಕ ಹಾಗೂ ಊರಿನ ಮೇಷ್ಟ್ರು ಮುರಳಿ ಮನೆಗೆ ಬರುತ್ತಾರೆ. ಇವರನ್ನು ನೋಡಿದ ಮುರಳಿ ತಾಯಿ ಬಾಗಿಲು ಹಾಕುತ್ತಾರೆ. ಮೇಷ್ಟ್ರು ಅದೆಷ್ಟು ಬಾರಿ ಕರೆದರೂ ಮುರಳಿ ತಂದೆ-ತಾಯಿ ಬಾಗಿಲು ತೆರೆಯದ್ದನ್ನು ನೋಡಿ ಪುಟ್ಟಕ್ಕ ಮನೆಗೆ ಹೋಗಲು ಯತ್ನಿಸುತ್ತಾರೆ. ಈ ವೇಳೆ ಬಾಗಿಲು ತೆಗೆದ ಮುರಳಿ ತಾಯಿ ಮನೆ ಒಳಗೆ ಕರೆಯದೆ ಪುತ್ತಕ್ಕಳನ್ನು ಅವಮಾನ ಮಾಡುತ್ತಾರೆ. ಮನೆ ಗುಡಿಸಿ ಒರೆಸಿ ಆಗಿದೆ ಆದುದರಿಂದ ಮನೆಯ ಒಳಗೆ ಕರೆಯುತ್ತಿಲ್ಲ ಎಂದು ಹೇಳುತ್ತಾರೆ. ಬಂದ ವಿಚಾರವನ್ನು ಹೇಳಲು ಹೇಳುತ್ತಾರೆ. ಇದನ್ನು ಕೇಳಿದ ಪುಟ್ಟಕ್ಕ ಮದುವೆ ವಿಚಾರ ಮಾತನಾಡಲು ಎಂದು ಹೇಳುತ್ತಾರೆ. ಅಣ್ಣ ಇದ್ದರೆ ಬರ ಹೇಳಿ ಎಂದು ಹೇಳುತ್ತಾರೆ. ಆ ವೇಳೆ ಮುರಳಿ ತಂದೆಯನ್ನು ಕರೆಯಲು ಆತನ ತಾಯಿ ಹೋಗುತ್ತಾರೆ.

ಸ್ನೇಹಾ ಬಳಿಗೆ ಓಡಿ ಬಂದ ಕಂಠಿ
ಆದರೆ ಶ್ರೀ ಮಾತ್ರ ಇಲ್ಲ ಮಿಸ್ಸು ಮಾತನಾಡೋಣ ಎಂದು ಬಂದೆ ಎನ್ನುತ್ತಾನೆ. ಇದನ್ನು ಕೇಳಿದ ಸ್ನೇಹಾಗೆ ನಗು ಬರುತ್ತದೆ. ಸ್ನೇಹಾ ಬೀಳುವ ಹಾಗೆ ಆಕ್ಟಿಂಗ್ ಮಾಡುತ್ತಾಳೆ. ಇದನ್ನು ನೋಡಿದ ಶ್ರೀ ಸ್ನೇಹ ಕೈ ಹಿಡಿದು ಮೆತ್ತಗೆ ಹೆಜ್ಜೆ ಹಾಕಲು ಹೇಳುತ್ತಾರೆ. ಇದನ್ನೆಲ್ಲ ನೋಡಿದ ಸ್ನೇಹಾ ಮಾತ್ರ ಮೆತ್ತಗೆ ನಗುತ್ತಾಳೆ. ಇನ್ನು ಪೂರ್ವಿ ಬಗ್ಗೆ ಸ್ನೇಹಾ ಕಂಠಿ ಬಳಿ ವಿಚಾರಣೆ ಮಾಡುತ್ತಾಳೆ. ಪೂರ್ವಿಯನ್ನು ಯಾಕೆ ಬಿಟ್ಟೆ ಏನಾಯಿತು ಎಂದೆಲ್ಲ ಹೇಳುತ್ತಾಳೆ. ಇದನ್ನೆಲ್ಲ ಕೇಳಿದ ಶ್ರೀ ಹೇಳುತ್ತಾನೆ ನನಗೂ ಆಕೆಗೂ ಆಗಿ ಬರುವುದಿಲ್ಲ ಎನ್ನುತ್ತಾನೆ.

ಪ್ರೀತಿಸುತ್ತಿದ್ದೇನೆ ಎಂದ ಕಂಠಿ
ಬದಲಾಗಿ ನಾನು ಇನ್ನೊಂದು ಹುಡುಗಿನ ಪ್ರೀತಿ ಮಾಡುತ್ತಾ ಇದ್ದೇನೆ ಆದುದರಿಂದ ಎಂದಾಗ ಸ್ನೇಹಾ ಏನು ಎಂದು ಕೇಳಿದಾಗಲೇ ಆತನಿಗೆ ತಿಳಿದಿದ್ದು ಈ ವಿಚಾರ ತಪ್ಪಿ ಪ್ರಸ್ತಾಪ ಮಾಡಿ ಬಿಟ್ಟೆನಲ್ಲ ಎಂದು ಇನ್ನೂ ಸ್ನೇಹಾ ಬಳಿ ತನ್ನ ಪ್ರೀತಿ ಹೇಳಬೇಕು ಎಂದುಕೊಂಡು ಮನದಲ್ಲಿ ಯೋಚನೆ ಮಾಡುತ್ತಾ ಇರುತ್ತಾನೆ. ಈ ವೇಳೆ ಸ್ನೇಹಾ ಕಂಠಿಯನ್ನು ಕರೆದಾಗ ಕಂಠಿ ಮಾತ್ರ ಮೆತ್ತಗೆ ಹು ಎಂದು ಹೇಳುತ್ತಾನೆ ಮತ್ತೆ ವಾಸ್ತವಕ್ಕೆ ಬಂದ ಕಂಠಿಗೆ ಏನು ಹೇಳಬೇಕು ತಿಳಿಯದಾಗುತ್ತದೆ.

ಚಂದ್ರು ಕಾರಿಗೆ ಅಪಘಾತ
ಇನ್ನು ವಸು ಕಾರು ಡ್ರೈವ್ ಮಾಡಿಕೊಂಡು ಕೋರ್ಟ್ ಗೆ ಹೋಗುತ್ತಾ ಇರುತ್ತಾಳೆ. ನಾನು ಏನಾದರೂ ದುಡುಕಿ ನಿರ್ಧಾರ ತೆಗೆದುಕೊಂಡು ಬಿಟ್ಟೆನಾ? ಯಾಕೆ ಹೀಗಾಯಿತು. ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾರೆ ಇತ್ತ ಚಂದ್ರು ಕೂಡ ಅದನ್ನೇ ಯೋಚನೆ ಮಾಡುತ್ತಾ ಬರುತ್ತಾನೆ. ಆದ ಕಾರಣ ಆತನ ಕಾರು ನಿಯಂತ್ರಣಕ್ಕೆ ಸಿಗದೆ ಮರಕ್ಕೆ ಡಿಕ್ಕಿ ಹೊಡೆಯುತ್ತವೆ. ಇನ್ನೂ ಆದೆ ಮಾರ್ಗವಾಗಿ ವಸು ಕೋರ್ಟ್ ಗೆ ಹೋಗುತ್ತಾ ಇರುವಾಗ ಚಂದ್ರು ಕಾರು ಡಿಕ್ಕಿ ಆಗಿರುವುದನ್ನು ನೋಡಿ ಕಾರು ನಿಲ್ಲಿಸಿ ಚಂದ್ರುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾಳೆ. ಮುಂದೇನು ಕಾದು ನೋಡಬೇಕಿದೆ.