ಬಂಗಾರಮ್ಮ ಗೆ ಮಗನ ವಿಚಾರದಲ್ಲಿ ಮೂಡಿದ ಆತಂಕ
ಮಕ್ಕಳೆಲ್ಲರೂ ಎಂದು ಮ್ಯಾಚ್ ಆಡಲು ಹೋಗುತ್ತಾ ಇದ್ದಾರೆ. ಈ ವೇಳೆ ಪುಟ್ಟಕ್ಕನ ಆಶಿರ್ವಾದ ತೆಗೆದುಕೊಳ್ಳುತ್ತಾರೆ. ಬಳಿಕ ಸುಮಾ ಅಮ್ಮನ ಬಳಿ ಹೇಳುತ್ತಾಳೆ ನೋಡು ಅಮ್ಮ ಅದು ಹೇಗೆ ಪಂದ್ಯ ಗೆದ್ದುಕೊಂಡು ಬರುತ್ತೇವೆ ಎಂದು . ಆ ಟೀಂ ನವರು ಏಷ್ಟು ಸ್ಟ್ರಾಂಗ್ ಎನು ಅಲ್ಲ. ಈ ಮ್ಯಾಚ್ ನ್ನೂ ನಾವು ಗೆದ್ದೆ ಗೆಲ್ಲುತ್ತೇವೆ. ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ ಹೇಳುತ್ತಾಳೆ ಇದನ್ನೇ ನಾವು ಹೇಳುವುದು ತಪ್ಪು ಎಂದು . ಪಂದ್ಯ ಆದರೂ ಆಗಲಿ ಯುದ್ದ ಆದರೂ ಆಗಲಿ ಎದುರಾಳಿಗಳಿಗೆ ನಾವು ಗೌರವ ಕೊಡಬೇಕು. ಇದು ಇರುವೆ ಅಲ್ವಾ ಎಂದು ಆನೇ ಅಂದುಕೊಂಡರೆ ಇರುವೆ ಎನು ಮಾಡುತ್ತದೆ ಕಿವಿಯೊಳಗೆ ಹೋಗಿ ಆನೆಯನ್ನು ಸೋಲಿಸಿ ಬಿಡುತ್ತದೆ ಎಂದು ಹೇಳುತ್ತಾ ಇರುವಾಗ ಅಲ್ಲಿಗೆ ಬಂದ ಸ್ನೇಹಾ ಹೇಳುತ್ತಾಳೆ ನಾನು ಇದೆ ಹೇಳುತ್ತಾ ಇರುತ್ತೇನೆ ಪರೀಕ್ಷೆಯಲ್ಲೂ ಇದೆ ರೀತಿ ವರ್ತನೆ ಮಾಡುತ್ತಾ ಇರುತ್ತಾಳೆ, ಕೊನೆಗೆ ಸುಲಭವಾದ ಪ್ರಶ್ನೆಗೆ ತಪ್ಪು ಉತ್ತರ ಬರೆದು ಬರುತ್ತಾಳೆ ಎನ್ನುತ್ತಾಳೆ.
ಆಗ ಸುಮಾ, ಅಮ್ಮ ಈ ಬಾರಿ ಆಟದಲ್ಲಿ ಉತ್ತಮವಾಗಿ ಆಡುತ್ತೇನೆ, ನೀನು ಏನೂ ಯೋಚನೆ ಮಾಡಬೇಡ ಎಂದು ಹೇಳುತ್ತಾಳೆ. ಆದರೆ ಸುಮಾ ಗೆಳತಿಗೆ ಒಂದೇ ಬೇಸರ ಆಟ ನೋಡಲು ನೀವು ಇರ್ಬೇಕು ಇತ್ತು ಎಂದಾಗ ಪುಟ್ಟಕ್ಕ ಅವರಿಗೆ ಸಮಾಧಾನ ಮಾಡುತ್ತಾ ಕೊನೆಯ ಪಂದ್ಯಕ್ಕೆ ನಾನು ಬರಲೇಬೇಕು ಅಲ್ವಾ. ಈ ಪಂದ್ಯಾನ ನೀವು ಗೆದ್ದುಕೊಂಡು ಬರುತ್ತೀರಿ ಎಂಬ ಧೈರ್ಯ ಇದೆ ನನಗೆ ಹೋಗಿ ಗೆದ್ದುಕೊಂಡು ಬನ್ನಿ ಎಂದು ಹೇಳುತ್ತಾಳೆ. ಬಳಿಕ ಪಂದ್ಯ ಆಡಲು ಸುಮಾ ಹಾಗೂ ಆಕೆಯ ಗೆಳೆಯರು ಹೋಗುತ್ತಾರೆ.

ರಾಜಿಗೆ ಪಾಠ ಕಲಿಸುವುದಾಗಿ ಹೇಳಿದ ಸ್ನೇಹಾ
ಆಗ ಸ್ನೇಹಾ ಬಳಿ ಪುಟ್ಟಕ್ಕ ಹೇಳುತ್ತಾಳೆ, ಇವಳು ಫೈನಲ್ ಗೆಲ್ಲಲಿ ಆಗ ನಾನು ರಾಜಿ ಮನೆಗೆ ಹೋಗಿ ಹಬ್ಬ ಮಾಡ್ತೀನಿ ಎಂದಾಗ ಪುಟ್ಟಕ್ಕ, ಸುಮ್ಮನೆ ಅವರಿವರ ತಂಟೆಗೆ ಯಾಕೆ ಹೋಗುವುದು ನಮಗೆ ಈಗಿರುವ ತೊಂದರೆ ಹೆಚ್ಚಾಗಿದೆ ಎಂದು ಹೇಳುತ್ತಿರುವಾಗ ಸಹನಾ, ಸ್ನೇಹಾ ಬಳಿ ರಾಜಿ, ಮುರಳಿ ಮನೆಗೆ ಹೋಗಿರುವ ವಿಚಾರವನ್ನು ಹೇಳುತ್ತಾರೆ. ಇದನ್ನು ಕೇಳಿದ ಸ್ನೇಹಾ ಕೆಂಡಾಮಂಡಲ ಆಗುತ್ತಾಳೆ.

ಪುಟ್ಟಕ್ಕನ ಬಳಿ ನಿಜ ವಿಚಾರ ಹೇಳಲು ಬಂದ ಗೋಪಾಲಯ್ಯ
ಬಳಿಕ ಕಾಲೇಜಿಗೆ ಹೋಗಬೇಕು ಎಂದು ಹೊರಡಲು ಹೋಗುತ್ತಾಳೆ. ಈ ವೇಳೆ ಅಲ್ಲಿಗೆ ಬಂದ ಗೋಪಾಲ ಪುಟ್ಟಕ್ಕನನ್ನೂ ಕರೆದು ರಾಜಿ ಮದುವೆ ತಪ್ಪಿಸಲು ಮುರಳಿ ಮೇಷ್ಟ್ರ ಮನೆಗೆ ಹೋಗಿರುವ ವಿಚಾರವನ್ನು ಹೇಳುತ್ತಾನೆ. ಇದನ್ನು ಕೇಳಿದ ಪುಟ್ಟಕ್ಕ ಈ ವಿಚಾರ ನನಗೆ ಗೊತ್ತಿದೆ. ಆತನ ಅಕ್ಕ ಬಂದು ಹೇಳಿದರು ಎಂದಾಗ ಸ್ನೇಹಾ ಅಮ್ಮನನ್ನು ಕರೆದುಕೊಂಡು ಅಲ್ಲಿಗೆ ಬರುತ್ತಾಳೆ. ಇದನ್ನು ನೋಡಿದ ಪುಟ್ಟಕ್ಕ ಏನವ್ವ ಎಂದಾಗ ಸ್ನೇಹಾ ಅನುಮಾನದಿಂದ ನೀನು ಇಲ್ಲಿ ಏನು ಮಾಡುತ್ತಾ ಇದ್ದೀಯಾ ಎಂದು ಹೇಳುತ್ತಾಳೆ. ಆಗ ಪುಟ್ಟಕ್ಕ ಏನಿಲ್ಲ ಎಂದು ಹೇಳುತ್ತಾಳೆ ಬಳಿಕ ಮನೆಯ ಒಳಗೆ ಕರೆದುಕೊಂಡು ಹೋಗುತ್ತಾಳೆ. ಗೋಪಾಲಯ್ಯ ಸ್ನೇಹಾ ಬರುವುದನ್ನು ಕಂಡು ಅಡಗಿ ಕೂರುತ್ತಾನೆ.

ಒಳ್ಳೆ ಸೊಸೆ ಬರುತ್ತಾಳೆ ಎಂದ ಜ್ಯೋತಿಷಿ
ಇನ್ನು ಬಂಗಾರಮ್ಮ ಮಗನಿಗೆ ಬರುತ್ತಿರುವ ಗಂಡಾಂತರದಿಂದ ಆತನಿಗೆ ಮುಕ್ತಿ ಯಾವಾಗ ಎಂದು ಜ್ಯೋತಿಷಿಯ ಬಳಿ ಕೇಳುತ್ತಿರುತ್ತಾಳೆ. ನಿಮ್ಮ ಮಗನ ಸಮಸ್ಯೆಗೆ ಉತ್ತರ ನೀಡಲು ಹಾಗೂ ಈ ಮನೆಗೆ ನಿಮಗೆ ತಕ್ಕನಾಗೆ ಇರುವ ಹುಡುಗಿ ಸೊಸೆಯಾಗಿ ಬರುತ್ತಾಳೆ. ಆಕೆಯಿಂದ ನಿಮ್ಮ ಮನೆಯಲ್ಲಿ ಇರುವ ಎಲ್ಲ ಸಮಸ್ಯೆನೂ ಪರಿಹಾರ ಆಗುತ್ತದೆ ಎಂದು ಹೇಳುತ್ತಾರೆ ಜ್ಯೋತಿಷಿ.

ಸೊಸೆಯ ನಿರೀಕ್ಷೆಯಲ್ಲಿ ಇದ್ದಾರೆ
ಇದನ್ನು ಕೇಳಿ ಖುಷಿಗೊಂಡ ಬಂಗಾರಮ್ಮ ಸೊಸೆಯ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಕಂಠಿ ತಂದೆಗೆ ಈಗಾಗಲೇ ಅನುಮಾನ ಶುರು ಆಗಿದೆ. ಪ್ರೀತಿ ಬಲೆಯಲ್ಲಿ ಕಂಠಿ ಬಿದ್ದಿದ್ದಾನೆಯೆ ಎಂದು ತಿಳಿಯಲು ಅವರ ಬಳಿಯೆ ಕೇಳುತ್ತಾ ಇರುತ್ತಾರೆ. ಕಂಠಿ ಇದಕ್ಕೆ ಏನು ಉತ್ತರ ನೀಡುತ್ತಾನೆ ಕಾದು ನೋಡಬೇಕಿದೆ.


Click it and Unblock the Notifications











