For Quick Alerts
  ALLOW NOTIFICATIONS  
  For Daily Alerts

  ಹೆಚ್ಚಾಯ್ತು ಬಂಗಾರಮ್ಮ-ಸ್ನೇಹಾ ನಡುವಿನ ಮುನಿಸು: ಕಂಠಿಗೆ ಮುಂದೆ ಸಂಕಷ್ಟ!

  By ಪೂರ್ವ
  |

  'ಪುಟ್ಟಕ್ಕನ ಮಕ್ಕಳು' ಧಾರವಾಹಿ ಉತ್ತಮ ವಾಗಿ ಮೂಡಿ ಬರುತ್ತಿದ್ದು ಜನರ ಮನ ಗೆಲ್ಲುತ್ತಿದೆ. ಪುಟ್ಟಕ್ಕನ ಮನೆಗೆ ಬಂಗಾರಮ್ಮ ಇರುವಾಗಲೇ ಪೋಲಿಸಪ್ಪ ಬರುತ್ತಾರೆ. ಇದನ್ನು ಕಂಡ ಲೆಕ್ಕಾಚಾರ ಬಂಗಾರಮ್ಮಗೆ ಹೇಳುತ್ತಾರೆ. ಪುಟ್ಟಕ್ಕ ಗೆ ಏನಾದರು ಸಮಸ್ಯೆ ಆಗಿರಬಹುದು ಎಂದುಕೊಂಡು ಫೋನ್ ಮಾಡುತ್ತಾರೆ. ಫೋನ್ ಬರುವ ವೇಳೆ ಸ್ನೇಹಾ ಅಲ್ಲಿಯೇ ಇರುತ್ತಾಳೆ.

  ಅಮ್ಮ ನ ಫೋನ್ ಅನ್ನು ಸ್ನೇಹಾ ರಿಸೀವ್ ಮಾಡಿ ಮಾತನಾಡುತ್ತಾಳೆ. ಬಂಗಾರಮ್ಮನ ಧ್ವನಿ ಕೇಳಿ ಸ್ನೇಹಾ ಕೋಪದಿಂದ ನೀವ್ಯಾಕೆ ಅಮ್ಮನಿಗೆ ಕರೆ ಮಾಡಿದಿರಿ ಎಂದೆಲ್ಲ ಹೇಳುತ್ತಾಳೆ. ಆಗ ಬಂಗಾರಮ್ಮ ಹೇಳುತ್ತಾರೆ ನಾನು ನಿಮ್ಮ ಮನೆಗೆ ಬಂದಿದ್ದೆ ನೀನು ಇರಲಿಲ್ಲ. ಹಾಗೆಯೇ ಮಾತನಾಡಿಕೊಂಡು ಬಂದೆ. ನನ್ನ ಮಗನಿಗೆ ಮದುವೆ ಗೊತ್ತಾಗಿದೆ. ಅದಕ್ಕಾಗಿ ಅದನ್ನು ಹೇಳಲು ಬಂದೆ ಎಂದು ಹೇಳುತ್ತಾಳೆ. ಇದಕ್ಕೆ ಸ್ನೇಹಾ ಪ್ರತ್ಯುತ್ತರವಾಗಿ ನಿಮ್ಮ ಮಗನನ್ನು ಮದುವೆ ಆಗುವವರು ಇದ್ದಾರಲ್ಲ ಎಂದು ವ್ಯಂಗ್ಯ ಆಗಿ ಹೇಳುತ್ತಾಳೆ.

  ಇದನ್ನು ಕೇಳಿದ ಬಂಗಾರಮ್ಮಗೆ ಕೋಪ ಉಕ್ಕಿ ಬರುತ್ತದೆ. ಯಾಕಮ್ಮ ನನ್ನ ಮಗನನ್ನು ಯಾರು ಮದುವೆ ಆಗ ಬಾರದ ಎಂದು ಹೇಳುತ್ತಾಳೆ. ಸ್ನೇಹಾ ಹಾಗೇನಿಲ್ಲ, ಬಡ್ಡಿ ವ್ಯವಹಾರ ಮಾಡುವವರು ಅಲ್ವಾ ಹಾಗಾಗಿ ಹೇಳಿದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಂಗಾರಮ್ಮಗೆ ಇನ್ನೂ ಕೋಪ ಬರುತ್ತದೆ. ಈ ಮಾತನ್ನು ಬೇರೆ ಯಾರಾದರು ಹೇಳಿದರೆ ನಾನು ಅವರನ್ನು ಸುಮ್ಮನೆ ಬಿಡುತ್ತಿರಲಿಲ್ಲ'' ಎನ್ನುತ್ತಾಳೆ.

  ಬಂಗಾರಮ್ಮನ ಬಳಿ ಕ್ಷಮೆ ಕೇಳಿದ ಪುಟ್ಟಕ್ಕ

  ಬಂಗಾರಮ್ಮನ ಬಳಿ ಕ್ಷಮೆ ಕೇಳಿದ ಪುಟ್ಟಕ್ಕ

  ಪುಟ್ಟಕ್ಕನ ಮಗಳು ಆಗಿರೋದಕ್ಕೆ ನಿನ್ನ ಸುಮ್ಮನೆ ಬಿಡುತ್ತಿದ್ದೇನೆ ಎನ್ನುತ್ತಾಳೆ ಬಂಗಾರಮ್ಮ. ಆದರೆ ಇದಕ್ಕೆ ಅಂಜದೆ ಮಾತನಾಡಿದ ಸ್ನೇಹಾ ನಿಮ್ಮ ಬಳಿ ಒಂದು ವಿಚಾರ ಹೇಳಬೇಕಿದೆ ಎಂದು ಹೇಳುತ್ತಾಳೆ. ಆ ವೇಳೆ ಪುಟ್ಟಕ್ಕ ಬಂದು ಫೋನ್ ಅನ್ನು ಕಸಿದು ಕೊಳ್ಳುತ್ತಾಳೆ. ಬಳಿಕ ಬಂಗಾರಮ್ಮ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಂಗಾರಮ್ಮ ಎಲ್ಲಿ ಹೋಗಿದ್ದೆ ಎಂದೆಲ್ಲ ಕೇಳಿ ಕ್ಷೇಮ ವಿಚಾರ ಮಾತನಾಡಿ ಬಳಿಕ ಫೋನ್ ಇಡುತ್ತಾಳೆ. ಇದನ್ನೆಲ್ಲ ನೋಡಿದ ಸ್ನೇಹಾ ಹೇಳುತ್ತಾಳೆ ಏಷ್ಟು ದಿನದಿಂದ ಇಂಥ ಕಳ್ಳಾಟ ನಡೆಯುತ್ತಿದೆ. ನನ್ನ ಬಳಿ ಎನು ಹೇಳದೆ ಮುಚ್ಚಿಟ್ಟಿದ್ದಿರಾ. ಅಕ್ಕ ನೀನು ಕೂಡ ಹಾಗೆಯೇ ನಾನು ಎಲ್ಲಾ ವಿಚಾರ ನಿಮ್ಮ ಬಳಿ ಹೇಳುತ್ತೇನೆ ಆದರೆ ನೀವು ಮಾತ್ರ ನನ್ನ ಬಳಿ ಎಲ್ಲಾ ಮುಚ್ಚಿಡುತ್ತಿರಿ ಎಂದು ಬೇಸರದಿಂದ ಹೇಳುತ್ತಾಳೆ.

  ಎಷ್ಟೇ ಸಮಜಾಯಿಷಿ ನೀಡಿದರು ಒಪ್ಪದ ಸ್ನೇಹಾ

  ಎಷ್ಟೇ ಸಮಜಾಯಿಷಿ ನೀಡಿದರು ಒಪ್ಪದ ಸ್ನೇಹಾ

  ಬಂಗಾರಮ್ಮ ಒಳ್ಳೆಯವರು, ಅವರ ಗಂಡನಿಗೆ ಎಣ್ಣೆ ತೆಗೆದುಕೊಂಡು ಹೋಗಲು ಬಂದಿದ್ದರು ಎಂದು ಹೇಳುತ್ತಾರೆ ಬಳಿಕ ಎಲ್ಲರನ್ನೂ ಊಟಕ್ಕ ಕರೆಯುತ್ತಾಳೆ ಪುಟ್ಟಕ್ಕ. ಇದೀಗ ಸುಮಾಳ ಮನ ಒಲಿಸಲು ಸ್ನೇಹಾ ಪ್ರಯತ್ನ ಮಾಡುತ್ತಿದ್ದಾಳೆ. ಊಟದ ಸಮಯದಲ್ಲಾದರೂ ಸುಮಾ ಮಾತನಾಡುತ್ತಾಳ ಎಂದು ಕಾದು ಕುಳಿತಿದ್ದಾರೆ ಪುಟ್ಟಕ್ಕ. ಸುಮಾ ಊಟಕ್ಕೇ ಬರಲಿಲ್ಲ ಎಂದು ಹೇಳಿಕೊಂಡು ಕುಂಬಳ ಕಾಯಿ ಸ್ವೀಟ್ ಇದೆ, ಆಹಾ ಇವತ್ತು ಸರಿಯಾಗಿ ಜಮಾಯಿಸಿ ಬಿಡಬಹುದು ಎಂದು ಸುಮಾಗೆ ಕೇಳಲಿ ಎಂದು ಜೋರಾಗಿ ಹೇಳುತ್ತಾಳೆ.

  ಊಟದ ಸಮಯದಲ್ಲೂ ಕುಪಿತಗೊಂಡಿರುವ ಸುಮಾ

  ಊಟದ ಸಮಯದಲ್ಲೂ ಕುಪಿತಗೊಂಡಿರುವ ಸುಮಾ

  ಇದನ್ನು ಕೇಳಿದ ಕೂಡಲೇ ಏನು ಮಾಡಬೇಕು ಎಂದು ಯೋಚಿಸುತ್ತಾ ಕುಳಿತುಕೊಳ್ಳುತ್ತಾಳೆ. ಆ ವೇಳೆಗೆ ಸ್ನೇಹಾ ಇನ್ನೂ ಚೆನ್ನಾಗಿರುವ ಆಕೆಗೆ ಇಷ್ಟ ಆದ ಪಲ್ಯದ ಹೆಸರು ಹೇಳುತ್ತಾಳೆ. ಇದನ್ನು ಕೇಳಿದ ಸುಮಾ ಓಡೋಡಿ ಬರುತ್ತಾಳೆ. ಪಾತ್ರೆಗಳನ್ನು ತೆಗೆದು ತೆಗೆದು ನೋಡುತ್ತಾ ಎಲ್ಲಿ ಕುಂಬಳ ಕಾಯಿ ಸ್ವೀಟ್ ಎನ್ನುತ್ತಾಳೆ. ಬಳಿಕ ಸ್ನೇಹಾ ಮಾತಿಗೆ ಮುನಿಸಿಕೊಂಡು ತಟ್ಟೆಗೆ ಅಣ್ಣ ಸಾಂಬಾರ್ ಬಡಿಸಿಕೊಂಡು ಊಟ ಮಾಡಲು ಹೋಗುತ್ತಾಳೆ. ಸುಮಾಳನ್ನು ಎಷ್ಟೇ ಕರೆದರೂ ಸುಮಾ ಮಾತ್ರ ವಾಪಸ್ ಬರದೆ ಇರುವುದನ್ನು ಕಂಡು ಪುಟ್ಟಕ್ಕಗೆ ನಿರಾಸೆ ಆಗುತ್ತದೆ.

  ಇನ್ನೊಂದು ಕಥೆ ಶುರು ಮಾಡಿದ ಕಂಠಿ ಗೆಳೆಯರು

  ಇನ್ನೊಂದು ಕಥೆ ಶುರು ಮಾಡಿದ ಕಂಠಿ ಗೆಳೆಯರು

  ಇನ್ನೂ ಮುರಳಿ ಮೇಷ್ಟ್ರು ದೇವಾಲಯದ ಬಳಿ ಸಹನಾಗಾಗಿ ಕಾಯುತ್ತಿರುತ್ತಾರೆ. ಇದನ್ನು ನೋಡಿದ ಕಂಠಿಯ ಗೆಳೆಯರು ಆತನನ್ನು ಹೇಗಾದರೂ ಕಿಡ್ನಾಪ್ ಮಾಡಿ ಕರೆದುಕೊಂಡು ಹೋಗಬೇಕು ಎಂದು ಯೋಚನೆ ಮಾಡುತ್ತಾರೆ. ಆ ವೇಳೆ ಕರೆಂಟ್ ಕೂಡ ಹೋಗುತ್ತದೆ ಇದನ್ನು ಕಂಡ ಮೇಷ್ಟ್ರು ಮನೆಯತ್ತ ಹೋಗುತ್ತಾರೆ. ಅಲ್ಲಿಗೆ ಕಾಳಿ ಬರುತ್ತಾನೆ. ಕಾಳಿಯನ್ನು ಕಂಠಿ ಗೆಳೆಯರು ಕಿಡ್ನಾಪ್ ಮಾಡಿ ಮೇಷ್ಟ್ರನ್ನು ಕಿಡ್ನಾಪ್ ಮಾಡಿದ್ದೇವೆ ಎಂದು ಕಂಠಿ ಬಳಿ ಹೇಳುತ್ತಾರೆ. ಇನ್ನು ಕಂಠಿ ಗೋಣಿ ಚೀಲದ ಕಟ್ ಬಿಚ್ಚಿ ನೋಡಿದಾಗ ಅದು ಕಾಳಿ! ಕಾಳಿಯನ್ನು ನೋಡಿ ಎಲ್ಲರೂ ಶಾಕ್ ಆಗುತ್ತಾರೆ. ಕಾಳಿ ಮಾತ್ರ ಕಂಠಿ ಶರ್ಟ್ನ್ನೂ ತೆಗೆದು ನೋಡುತ್ತಾನೆ. ಆತನ ಎದೆಯಲ್ಲಿ ಅವ್ವ ಎಂದು ಅಚ್ಚೆ ಹಾಕಿಸಿಕೊಂಡದ್ದನ್ನು ನೋಡಿ ಈತನೇ ನನಗೆ ಅಂದು ಹೊಡೆದದ್ದು ಎಂದು ಕನ್ಫರ್ಮ್ ಆಗುತ್ತದೆ.

  English summary
  Kannada serial Puttakkana Makkalu written updated on 9th September. Know more about the episode.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X