ಸ್ನೇಹಾಗಾಗಿ ಬದಲಾಗುತ್ತಿರುವ ಕಂಠಿ: ಕಂಠಿ ಮುಂದೆ ಕರಗುತ್ತಿದೆ ಸ್ನೇಹಾ ಮನಸ್ಸು!?
ದಿನ ದಿನಕ್ಕೂ ತಿರುವು ಪಡೆಯುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡುಗರ ಮನಸನ್ನು ಸೆಳೆಯುತ್ತಿದೆ. ಸ್ನೇಹಾಗಾಗಿ ಕಂಠಿ ಬದಲಾಗುತ್ತಾ ಇರುವುದಕ್ಕೆ ಸ್ನೇಹಾ ಬಹಳ ಖುಷಿ ಪಡುತ್ತಾ ಇದ್ದಾಳೆ . ಆದರೂ ಕಂಠಿ ಮೇಲೆ ಮುನಿಸು ಮಾತ್ರ ಇದೆ.. ಮುನಿಸಿನ ನಡುವೆ ಬೆಟ್ಟದ ಹಾಗೆ ಇರೋ ಪ್ರೀತಿ ಬೇರೆ.
ಇತ್ತ, ಪುಟ್ಟಕ್ಕನ ಬಳಿ ಬಂದ ಕಂಠಿ ಸ್ನೇಹಾಗೆ ನಾನು ಕೆಲಸ ಮಾಡಬೇಕು ಎಂಬುವುದು ಬಹು ದೊಡ್ಡ ಆಸೆ. ನಾನು ಏನು ಕೆಲಸ ಬೇಕಾದರೂ ಮಾಡಬಲ್ಲೆ. ಆದರೆ. ನನಗೆ ಸರಿಯಾಗಿ ಯಾರು ಕೆಲಸನೆ ಕೊಡುವುದಿಲ್ಲ .. ಪುಟ್ಟಕ್ಕ ನಿಮ್ಮ ಮನೆಯ ಮೆಸ್‌ನಲ್ಲಿ ನನಗೆ ಕೆಲಸ ಕೊಡಿ ಎಂದು ಬಹಳ ಬೇಡಿಕೊಂಡಿದ್ದಾನೆ.

ಕಂಠಿ ಮನವಿ ನೋಡಿದ ಪುರುಷೋತ್ತಮ, ಮೆಸ್‌ನಲ್ಲಿ ಕೆಲಸ ಮಾಡಲು ನಾನು ಇದ್ದೇನೆ. ನನಗೂ ನಿಮಗೂ ಒಂದು ಪೈಪೋಟಿ ಇಡೋಣ ಯಾರು ಹೇಗೆ ಕೆಲಸ ಮಾಡುತ್ತಾರೆ ನೋಡೋಣ ಎಂದು ಹೇಳುತ್ತಾರೆ. ಇದನ್ನು ಕೇಳಿದ ಕಂಠಿ ಓಕೆ ಎಂದು ಹೇಳಿದರು ಪುಟ್ಟಕ್ಕ ಮಾತ್ರ ಅಳಿಯಂದಿರನ್ನು ಮನೆಯಲ್ಲಿ ಕೆಲಸಕ್ಕೆ ಇಟ್ಟುಕೊಂಡರೆ ಜನ ಎನು ಅನ್ನುತ್ತಾರೆ ಎನ್ನುವ ಆತಂಕದಲ್ಲಿ ಇದ್ದಾರೆ.
ಇನ್ನೂ ಕಂಠಿ ಮಾತ್ರ ಸ್ನೇಹಾ ಮನಸ್ಸು ಗೆಲ್ಲುವುದಕ್ಕೆ ಏನು ಬೇಕಾದರೂ ಮಾಡಲು ರೆಡಿ ಇರುತ್ತಾನೆ. ತಾನು ಏನಾದರು ಕೆಲಸ ಮಾಡಿಕೊಂಡು ಇರಬೇಕು... ಏನಾದರು ಒಂದು ಸಾಧನೆ ಮಾಡಬೇಕು ಎನ್ನುವ ಹಂಬಲ ಆತನಿಗೆ ಇರುತ್ತದೆ.

ಕೆಲಸಕ್ಕೆ ಹೋಗಲು ನಿರ್ಧಾರ ಮಾಡಿದ ಕಂಠಿ
ಸ್ನೇಹಾಗಾಗಿ ಕೆಲಸ ಮಾಡಲು ನಿರ್ಧಾರ ಮಾಡಿರುವ ಕಂಠಿ ಗೆಳೆಯರ ಜೊತೆ ಮಾತನಾಡುತ್ತಾ ಇರುವುದನ್ನು ಕಂಡು ಸ್ನೇಹಾಗೆ ಖುಷಿಯಾಗುತ್ತದೆ. ಕಂಠಿ ತಾನೇ ದುಡಿದು .. ಜಮೀನನ್ನು ಕೊಂಡು ಕೊಳ್ಳಬೇಕು ಎನ್ನುವ ಆಸೆಯನ್ನು ಸ್ನೇಹಾ ಹೊಂದಿರುತ್ತಾಳೆ. ಮುತ್ತಿನಂಥ ಮಗ ಕೆಲಸಕ್ಕೆ ಹೋಗುತ್ತಾನೆ ಎಂದರೆ ಅದು ಆತನ ಅಮ್ಮನಿಗೆ ಬಹಳ ನೋವು ತರುವ ವಿಚಾರವೇ.. ಆಕೆ ಮಗುವನ್ನು ಆ ರೀತಿ ಬೆಳೆಸಿದ್ದಾಳೆ. ಜೊತೆಗೆ ಬಡ್ಡಿ ವಸೂಲಿ ಮಾಡಲು ಮಗನನ್ನು ಕಳುಹಿಸುತ್ತಿರುತ್ತಾರೆ.
ಕಂಠಿ ಮಾತು ಕೇಳಿಸಿಕೊಳ್ಳುವ ಸ್ನೇಹಾ
ಸ್ನೇಹಾಗೆ ಬಡ್ಡಿ ವಸೂಲಿ ಮಾಡುವುದು ಎಂದರೆ ಚೂರು ಇಷ್ಟವಿಲ್ಲ. ಇದನ್ನೆಲ್ಲ ಮನಗಂಡ ಕಂಠಿ ತನ್ನ ಸ್ನೇಹಿತರ ಬಳಿ ಈ ಬಗ್ಗೆ ಮಾತಾಡುತ್ತಾನೆ. ನಾನಿನ್ನೂ ಬಡ್ಡಿ ವಸೂಲಿ ಮಾಡುವುದು ಇಲ್ಲ.. ನಾನು ಇನ್ನೂ ಅಮ್ಮನ ಕಾಸಿನಲ್ಲಿ ಬದುಕದೆ... ನಾನೇ ದುಡಿದು ಊಟ ಮಾಡುತ್ತೇನೆ. ಹಾಗೆ ಜಾಮೀನು ತೆಗೆದುಕೊಳ್ಳುತ್ತೇನೆ. ಜಮೀನಿಗೆ ಈಗಿನ ರೇಟ್ ಎಷ್ಟೇಲ್ಲ ಇದೆ ಎಂದು ವಿಚಾರಣೆ ಮಾಡುತ್ತಾ ಇರುತ್ತಾನೆ. ಆ ಬಳಿಕ ಸ್ನೇಹಾ ರೂಮ್ ಲೈಟ್ ಆಫ್ ಆಗಿದೆಯೋ ಇಲ್ವಾ ಎಂಬುವುದನ್ನು ಬಗ್ಗಿ ನೋಡುತ್ತಾನೆ.
ಸ್ನೇಹಿತರ ಜೊತೆ ಜೀವನದ ಬಗ್ಗೆ ಮಾತನಾಡುತ್ತಿರುವ ಕಂಠಿ
ಸ್ನೇಹಾ ರೂಮ್ ಲೈಟ್ ಆನ್ ಆಗಿ ಇರುತ್ತದೆ. ಇದೆಲ್ಲವನ್ನೂ ನೋಡಿದ ಸ್ನೇಹಾ ಮಾತ್ರ ರೂಮ್‌ಗೆ ಹೋಗಿ ಲೈಟ್ ಆಫ್ ಮಾಡುತ್ತಾಳೆ.. ಸ್ನೇಹಾ ಮಲಗಿ ಬಿಟ್ಟಳು ಎಂದುಕೊಂಡು ಫೋನ್ ಇಟ್ಟು ರೂಮ್ ನತ್ತ ಹೋಗುತ್ತಾ ಇರುವಾಗ ಸ್ನೇಹಾ ಕುಳಿತುಕೊಂಡು ಇರುತ್ತಾಳೆ. ಕಂಠಿ ಬಂದಿರುವುದನ್ನು ನೋಡಿದ ಸ್ನೇಹಾ ಬನ್ನಿ ಮಲಗಿ ಎಂದು ಹೇಳುತ್ತಾಳೆ. ಕಂಠಿ ರೂಮ್ ಒಳಗೆ ಬರುತ್ತಾನೆ. ಇನ್ನೂ ಕಂಠಿ ಮಲಗಬೇಕು ಎನ್ನುವಷ್ಟರಲ್ಲಿ ಸ್ನೇಹಾ ಎತ್ತಿಟ್ಟಿದ್ದ ಪೇಪರ್‌ಗಳು ದಿಕ್ಕಪಾಲಾಗಿ ಬೀಳುತ್ತದೆ.
ಸ್ನೇಹಾ ಹಣೆಗೆ ಡಿಕ್ಕಿ ಹೊಡದ ಕಂಠಿ
ಸ್ನೇಹಾ ಪೇಪರ್‌ಗಳನ್ನು ಎತ್ತಿಕೊಂಡ ಕಂಠಿ ಸ್ನೇಹಾಗೆ ಕೊಡಬೇಕು ಎನ್ನುವಷ್ಟರಲ್ಲಿ ಇಬ್ಬರ ಹಣೆ ತಾಗಿಕೊಳ್ಳುತ್ತದೆ.. ಇದನ್ನು ನೋಡಿದ ಕಂಠಿ ಮಾತ್ರ ಎನು ಹೇಳದೆ ಸುಮ್ಮನೆ ಇದ್ದರೆ ಸ್ನೇಹಾ ಇನ್ನೊಮ್ಮೆ ಹಣೆ ತಾಗಿಸಿ ಎಂದು ಹೇಳುತ್ತಾಳೆ.


Click it and Unblock the Notifications











