Puttakkana Makkalu ; ಸ್ನೇಹ ಕಂಠಿ ಬಾಡಿಂಗ್ ನೋಡಿ ಖುಷಿಪಟ್ಟು, ಸಿಕ್ಕರೆ ಇಂತ ಗಂಡ ಸಿಗಬೇಕು ಎಂದ ಫ್ಯಾನ್ಸ್..!

By ಪೂರ್ವ

ಕಂಠಿ ಹಾಗೂ ಸ್ನೇಹ ಇವರಿಬ್ಬರನ್ನ ಕ್ಯೂಟ್ ಜೋಡಿ ಎಂದೇ ಕರೆಯಲಾಗುತ್ತಿದೆ. ಕಂಠಿಗೆ ತನ್ನ ಹೆಂಡತಿ ಎಂದರೆ ಬಹಳ ಪ್ರೀತಿ. ಆಕೆ ಡಿಸಿ ಆಗಬೇಕು ಎಂದು ಹೇಳಿದಾಗಲೆಲ್ಲಾ ಕಂಠಿ ಸ್ನೇಹಾಗೆ ಹೆಗಲಾಗಿ ನಿಂತಿದ್ದಾನೆ. ಇದೀಗ ಸ್ನೇಹಾ ಇಡೀ ಊರಿಗೆ ಡಿಸಿ ಆಗಿದ್ದಾಳೆ. ಇದರಿಂದ ಕಂಠಿ ಬಹಳ ಖುಷಿ ಪಟ್ಟಿದ್ದಾನೆ . ಹೆಂಡತಿ ಯಾವುದೇ ಕೆಲಸ ಮಾಡಿದರು ಕೂಡ ಗಂಡ ಸಪೋರ್ಟ್ ಮಾಡಿದರೆ ಹೆಂಡತಿಗೆ ಬಹಳ ಖುಷಿಯಾಗುತ್ತದೆ. ಇಂತಹ ಗಂಡ ನಮಗೂ ಕೂಡ ಸಿಗಬಾರದ? ಎಂದು ಅನೇಕ ಹೆಣ್ಣು ಮಕ್ಕಳು ಅಂದುಕೊಂಡಿರುತ್ತಾರೆ.

ಆದರೆ ಕೆಲವರಿಗೆ ಒಳ್ಳೆಯ ಗಂಡ ಸಿಕ್ಕರೆ ಇನ್ನೂ ಹಲವರಿಗೆ ತಾನು ಅಂದುಕೊಂಡಿರುವ ಹುಡುಗ ಸಿಕ್ಕಿರುವುದಿಲ್ಲ. ಇದೆಲ್ಲವನ್ನೂ ನೋಡಿದ ಸೀರಿಯಲ್ ಪ್ರೇಮಿಗಳು ಕಂಠಿ ಹಾಗೂ ಸ್ನೇಹಾ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. ಗಂಡ ಸಿಕ್ಕರೆ ಕಂಠಿ ಹಾಗಿರುವ ಗಂಡ ಸಿಗಬೇಕು ಎಂದು ಅನೇಕ ಜನರು ಬೇಡಿಕೊಳ್ಳುತ್ತಿದ್ದಾರೆ. ಇನ್ನು ಸ್ನೇಹಾ ಏನೇ ಕೆಲಸ ಮಾಡಿದರೂ ಆಕೆಯ ಬೆನ್ನ ಹಿಂದೆ ಇರುತ್ತಾನೆ ಕಂಠಿ ಪ್ರೀತಿ ಮಾಡಿದ ಹುಡುಗಿಯನ್ನು ಯಾವತ್ತೂ ನೋಯಿಸಬಾರದು . ಅವರು ಎಲ್ಲಿಯೇ ಇದ್ದರೂ ಖುಷಿಯಾಗಿ ಇರಬೇಕು ಎಂದು ದೇವರಲ್ಲಿ ಸದಾ ಬೇಡಿಕೊಳ್ಳುತ್ತಾನೆ

kannada serial puttakkana makkalu writting sneha and kanthi cupls

ಡಿಸಿ ಟ್ರೈನಿಂಗ್ ಗೆ ಹೋಗಬೇಕಾದರೆ ಸ್ನೇಹನಿಂಗಿಂತ ಹೆಚ್ಚಾಗಿ ಫೀಲ್ ಮಾಡಿಕೊಂಡಿದ್ದೆ ಕಂಠಿ ಎಂದು ಹೇಳಿದರೆ ತಪ್ಪಾಗದು. ಅಷ್ಟು ತನ್ನ ಹೆಂಡತಿಯನ್ನು ಪ್ರೀತಿ ಮಾಡುವ ವ್ಯಕ್ತಿ. ಯಾವತ್ತೂ ಹೆಂಡತಿಯನ್ನು ಬಿಟ್ಟಿರದ ವ್ಯಕ್ತಿ ಕಂಠಿ. ಸ್ನೇಹಾ ಏನೇ ಮಾಡಿದರೂ ಅದರಲ್ಲಿ ಒಂದು ಅರ್ಥ ಇರುತ್ತದೆ ಹಾಗೆಯೇ ಆಕೆ ಡಿಸಿ ಆಗಿ ಬರುತ್ತಿದ್ದಾಳೆ ಎಂದು ಮನಸ್ಸನ್ನು ಗಟ್ಟಿ ಮಾಡಿಕೊಂಡು ಟ್ರೈನಿಂಗ್ ಗೆ ಕಳಿಸಿದ್ದ ಕಂಠಿ. ಸ್ನೇಹಾ ಕನಸಿಗೆ ಕಂಠಿ ಹೆಗಲಾಗಿ ನಿಂತಿರುವುದು ಮಾತ್ರ ಸತ್ಯ.

ಪುಟ್ಟಕ್ಕನ ಕಷ್ಟಕ್ಕೆ ಹೆಗಲಾಗಿರುವ ಅಳಿಮಯ್ಯ

ಇನ್ನು ಪುಟ್ಟಕ್ಕಗೆ ಒಳ್ಳೆಯ ಅಳಿಮಯ್ಯ. ಅತ್ತೆಗೆ ಏನೇ ಕಷ್ಟ ಆದರೂ ಅಲ್ಲಿ ಕಂಠಿ ಇದ್ದೆ ಇರುತ್ತಾನೆ. ಇದರಿಂದ ಪುಟ್ಟಕ್ಕಗೆ ಕೂಡ ಕಂಠಿ ಎಂದರೆ ಬಹಳ ಪ್ರೀತಿ. ಸುಳ್ಳು ಹೇಳಿ ಸ್ನೇಹಾನಾ ಮದುವೆ ಆದಾಗ ಪುಟ್ಟಕ್ಕಗೆ ಕೊಂಚ ಮಟ್ಟಿಗೆ ನೋವು ಆಗಿತ್ತು. ಆದರೆ ಅದಾದ ಬಳಿಕ ಕಂಠಿ ಹಾಗೂ ಸ್ನೇಹಾನನ್ನು ಒಂದು ಮಾಡಲು ಪುಟ್ಟಕ್ಕ ಸಹಕಾರಿ ಆಗಿದ್ದರು ಎಂದು ಹೇಳಿದರೆ ತಪ್ಪಾಗದು. ಇನ್ನು ಸಹನಾ ಕಾಳಿ ಜೋಡಿ ನೋಡಿ ಅನೇಕ ಜನರು ಖುಷಿ ಪಟ್ಟಿದ್ದಾರೆ. ಕಾಳಿಗೆ ಸಹನಾ ಎಂದರೆ ಚಿಕ್ಕ ವಯಸ್ಸಿನಿಂದಲೂ ಹುಚ್ಚು ಪ್ರೀತಿ ಎಂದು ಹೇಳಿದರೆ ತಪ್ಪಾಗದು. ಸಹನಾ ಮುರಳಿಯನ್ನು ಮದುವೆ ಆದಾಗ ಮಾತ್ರ ಎಲ್ಲರಿಗೆ ಕೂಡ ಬಹಳ ಬೇಸರ ಆಗಿತ್ತು.

kannada serial puttakkana makkalu writting sneha and kanthi cupls

ಸಹನಾಳನ್ನು ಕಾಳಿ ಮದುವೆ ಆಗಲಿ ಎಂದ ಫ್ಯಾನ್ಸ್..!

ಕಾಳಿ ಸ್ಥಿತಿ ನೋಡಲು ಆಗುತ್ತಿರಲಿಲ್ಲ. ಆದರೂ ತಾನು ಪ್ರೀತಿಸಿದ ಹುಡುಗಿ ಚೆನ್ನಾಗಿ ಇರಲಿ ಎನ್ನುವ ಭಾವನೆ ಆತನಿಗೆ. ಇನ್ನು ಜೀವನದಲ್ಲಿ ಇದೀಗ ಬಹಳ ಖುಷಿಯಾಗಿರುವ ಕಾಳಿಗೆ ಮಾತ್ರ ಸಹನಾ ಸಿಗಲಿ ಎನ್ನುವುದೇ ಅಭಿಮಾನಿಗಳ ಆಶಯ . ಇನ್ನು ಮುರಳಿಗೆ ಬೇರೆ ಮದುವೆ ಆಗಿದೆ. ಆತ ವಿನುತ ಟೀಚರ್ ಜೊತೆ ಖುಷಿಯಾಗಿ ಇದ್ದಾನೆ. ಹಾಗೆಯೇ ಸಹನಾ ಕೂಡ ಬೇರೆ ಮದುವೆ ಆಗಿ ಖುಶಿಯಾಗಿರಬೇಕು . ಮೊದಲು ತಾನು ಎಂದುಕೊಂಡಿದ್ದನ್ನು ಸಾಧಿಸಲೀ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X