Puttakkana Makkalu: ತನ್ನ ನೋವು ಯಾರ ಬಳಿಯೂ ಹಂಚಿಕೊಳ್ಳದ ಸಹನಾ, ಸುಮಾಳಿಗೆ ಧೈರ್ಯ ಹೇಳಿದ ಪುಟ್ಟಕ್ಕ
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಇದೀಗ ಪುಟ್ಟಕ್ಕ ತಳ್ಳೋ ಗಾಡಿಯಲ್ಲಿ ಮೆಸ್ ಅನ್ನು ನಡೆಸುತ್ತಾ ಇದ್ದಾರೆ. ಇದ್ದ ತಲೆ ನೋವು ಹೋಯಿತು ಎಂದು ತಿಳಿದುಕೊಂಡರೆ ಗೋಪಾಲನ ಕಿರಿ ಕಿರಿ ಬೇರೆ ಶುರಯವಾಗಿದೆ. ಆತ ಸುಟ್ಟು ಹೋಗಿರುವ ಮೆಸ್ ಮೇಲೆಯೇ ಲೋನ್ ತೆಗೆದುಕೊಂಡು ಇದ್ದಾನೆ ಎಂಬುದು ಪುಟ್ಟಕ್ಕಗೆ ತಿಳಿದಿದೆ. ಆದರೂ ಎನು ಮಾತನಾಡದೆ ಸುಮ್ಮನೆ ಇರುತ್ತಾರೆ. ಇದೀಗ ಸುಮಾ ಹಾಗೂ ಸಹನಾ ಒಂದೇ ಮನೆಯಲ್ಲಿ ಇದ್ದಾರೆ ಪುಟ್ಟಕ್ಕ ಮಾತ್ರ ಒಬ್ಬರೇ ಒಬ್ಬೊಂಟಿಯಾಗಿ ಜೀವನ ನಡೆಸುತ್ತಾ ಇದ್ದಾರೆ.
ಸಹನಾ ಮನೆಯಲ್ಲಿ ಬಹಳ ಜಿಪುಣತನ ಮಾಡುತ್ತಾ ಬಂದಿದ್ದಾರೆ ಕೌಸಲ್ಯ. ಇದೀಗ ಕೂಡ ಹಾಗೆಯೇ ಎಲ್ಲರೂ ಊಟ ಮಾಡಿದ ಬಳಿಕ ಸಹನಾಗೆ ಅಷ್ಟಾಗಿ ಊಟ ಉಳಿಯುವುದಿಲ್ಲ. ಇದೆಲ್ಲವನ್ನೂ ನೋಡಿದ ಸುಮಾ ಮಾತ್ರ ಅಕ್ಕನ ಬಳಿ ಈ ವಿಚಾರದ ಬಗ್ಗೆ ರೂಮ್‌ನಲ್ಲಿ ಮಾತನಾಡುವ ಎಂದುಕೊಂಡಳು. ರೂಮ್‌ಗೆ ಹೋದ ಸುಮಾಳಿಗೆ ಸಹನಾ ಹಾಳು ತೆಗೆದುಕೊಂಡು ಬರುತ್ತಾಳೆ.

ಅಕ್ಕ ನಡೆಯ ಬಗ್ಗೆ ಅನುಮಾನಗೊಂಡ ಸುಮಾ
ಸುಮಾ ಸಹನಾ ಬಳಿ ಕೇಳುತ್ತಾಳೆ, ನೀನು ಯಾವತ್ತು ಇಷ್ಟೇ ಅಡುಗೆ ಮಾಡುವುದಾ..? ನಿನಗೆ ಸ್ವಲ್ಪ ಊಟ ಇತ್ತು ಅದಕ್ಕೆ ಕೇಳಿದೆ ಎಂದಾಗ ತಂಗಳನ್ನ ಇತ್ತು, ಊಟ ಯಾಕೆ ಹಾಳು ಮಾಡುವುದು ಎಂದು ಸ್ವಲ್ಪ ಮಾಡಿದೆ. ನೀನು ಚೆನ್ನಾಗಿ ಊಟ ಮಾಡು. ಪಾತ್ರೆ ನೋಡಿ ಊಟ ಮಾಡಬೇಡ ಎಂದು ಹೇಳಿದರು. ಇನ್ನೂ ಸುಮಾಗೆ ಹಾಲಿ ಕೊಟ್ಟಾಗ ಸಹನಾ ಅಷ್ಟಾಗಿ ಊಟ ಮಾಡದೇ ಇರುವುದು ಗೊತ್ತಿರುತ್ತದೆ ಆಕೆ ಹಾಲನ್ನು ಅಕ್ಕನಿಗೆ ಕೊಡುತ್ತಾಳೆ.
ಅಕ್ಕನ ಮಾತನ್ನು ನಂಬಿದ ಸುಮಾ
ಹಾಲು ನೀನು ಕೂಡಿ ಎಂದು ಸುಮಾ ಸಹನಾಗೆ ಕೊಟ್ಟಾಗ ಸಹನಾಗೆ ಖುಷಿ ಆಗುತ್ತದೆ. ಆ ಬಳಿಕ ಸಹನಾ ನನಗೆ ಹೊಟ್ಟೆ ಫುಲ್ ಆಯಿತು ಎಂದು ಹೇಳುತ್ತಾಳೆ. ಇನ್ನೂ ಸುಮಾಗೆ ಮನೆಯವರ ನಡವಳಿಕೆಯ ಬಗ್ಗೆ ಡೌಟ್ ಬರದೆ ಇರುವ ಹಾಗೆ ನೋಡಿಕೊಂಡಿದ್ದಾಳೆ. ಇಷ್ಟರ ಹೊತ್ತಿಗೆ ಸುಮಾಗೆ ತನ್ನ ಅಮ್ಮನ ನೆನಪು ಬರುತ್ತದೆ. ಪುಟ್ಟಕ್ಕನ ನೆನಪಾಗಿ ಸಹನಾ ಸುಮಾ ಕರೆ ಮಾಡುತ್ತಾರೆ.. ಪುಟ್ಟಕ್ಕ ಕೆಲಸದಿಂದ ಆಗಷ್ಟೇ ಬಂದು ಕುಳಿತುಕೊಂಡು ಇರುತ್ತಾಳೆ.
ಅಮ್ಮನ ನೆನಪಾಗಿ ಬೇಸರಗೊಂಡ ಸುಮಾ
ಇನ್ನೂ ಪುಟ್ಟಕ್ಕನ ಧ್ವನಿ ಕೇಳುತ್ತಾ ಇದ್ದ ಹಾಗೆಯೇ ಸಂತೋಷಗೊಂಡ ಸಹನಾ ಅವ್ವ ಎಂದು ಕರೆಯುತ್ತಾಳೆ. ಪುಟ್ಟಕ್ಕಗೆ ಸುಮಾ ಓದಿನ ಚಿಂತೆ. ಹಾಗೆಯೇ ಸಹನಾ ಮನೆಯವರ ಚಿಂತೆ. ಎನು ಮಾಡುತ್ತಾ ಇದ್ದೀಯಾ ಓದುತ್ತಿದ್ದಿಯಾ. ಸಹನಾಗೆ ಎನು ತೊಂದರೆ ಕೊಡುತ್ತಾ ಇಲ್ಲವಲ್ಲ ಎಂದು ಹೇಳುತ್ತಾಳೆ.. ಇದನ್ನು ಕೇಳಿದ ಸುಮಾ ನೋಡಕ್ಕ ಅವ್ವ ಹೇಗೆ ಕೇಳುತ್ತಾಳೆ.. ಎಂದಾಗ ಸಹನಾ ಹೇಳುತ್ತಾಳೆ ಅಮ್ಮ ಹಾಗೇನೂ ಇಲ್ಲ.. ಅವಳು ಓದಿಕೊಳ್ಳುತ್ತಿದ್ದಾಳೆ ನೀನು ಎನು ಚಿಂತೆ ಮಾಡಬೇಡ ಎಂದು ಹೇಳುತ್ತಾರೆ.

ಮಗಳ ಧ್ವನಿ ಕೇಳಿ ಖುಷಿಪಟ್ಟ ಪುಟ್ಟಕ್ಕ
ಸಹನಾ ಧ್ವನಿ ಕೇಳಿದ ಕೂಡಲೇ ಪುಟ್ಟಕ್ಕ ಹೇಳುತ್ತಾರೆ ಸಹನಾ ಏನಾದರು ಪ್ರಾಬ್ಲಂ ಆದರೆ ಹೇಳು ಎಂದೆಲ್ಲ ಹೇಳಿದಾಗ ಸಹನಾ ಒಮ್ಮೆಲೆ ಏನು ಪ್ರಾಬ್ಲಂ ಆಗಲ್ಲ ನೀನು ಟೆನ್ಶನ್ ಮಾಡಿಕೊಳ್ಳಬೇಡ ಎಂದು ಹೇಳುತ್ತಾರೆ. ಇದನ್ನು ಕೇಳಿದ ಪುಟ್ಟಕ್ಕ ಸಮಾಧಾನ ಮಾಡಿಕೊಳ್ಳುತ್ತಾಳೆ. ಅಕ್ಕ, ಅವ್ವನ ಜೊತೆಗೆ ಮಾತನಾಡಿ ಸುಮಾ ಕೊಂಚ ಸಮಾಧಾನದಿಂದ ಕರೆ ಕಟ್ ಮಾಡುತ್ತಾಳೆ.. ಆ ಬಳಿಕ ಸಹನಾ ಮಲಗಿದರೆ ಸುಮಾ ಓದುತ್ತಾ ಇರುತ್ತಾಳೆ.. ಪುಟ್ಟಕ್ಕ ಮಾತ್ರ ಒಬ್ಬೊಂಟಿಯಾಗಿ ಬಂದದ್ದು ಬರಲಿ ಎಂದಿಕೊಂಡಿದ್ದಾಳೆ.


Click it and Unblock the Notifications











