Puttakkana Makkalu: ಹಬ್ಬದ ಸಂಭ್ರಮದಲ್ಲಿ ಪುಟ್ಟಕ್ಕನ ಸಂಸಾರ, ಮಕ್ಕಳ ಜೊತೆ ಖುಷಿಯಿಂದ ಕಾಲ ಕಳೆಯುತ್ತಿರುವ ಪುಟ್ಟಕ್ಕ
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಹಾಗೂ ಕಂಠಿ ಪುಟ್ಟಕ್ಕನ ಮನೆಗೆ ಹೋಗಲು ರೆಡಿ ಆಗಿದ್ದಾರೆ. ಇದಕ್ಕಿಂತ ಮುಂಚೆ ಬಂಗಾರಮ್ಮನ ಬಳಿ ತವರು ಮನೆಗೆ ಹೋಗಲು ಪರ್ಮಿಷನ್ ಕೇಳುತ್ತಿದ್ದಳು ಸ್ನೇಹಾ. ಇದನ್ನು ಕೇಳಿದ ಬಂಗಾರಮ್ಮಗೆ ಕೊಂಚ ಆಶ್ಚರ್ಯ ಆದರೂ ಆ ಬಳಿಕ ಸುಮ್ಮನೆ ಆಗುತ್ತಾಳೆ.
ಆ ಬಳಿಕ ಕಂಠಿ ಹಾಗೂ ಸ್ನೇಹಾ ಬಂಗಾರಮ್ಮನ ಆಶೀರ್ವಾದ ಕೇಳಿ ಕಾಲಿಗೆ ಬೀಳುತ್ತಾಳೆ. ಇದನ್ನು ನೋಡಿದ ಬಂಗಾರಮ್ಮ ಸರಿ ಸರಿ ಇಬ್ಬರೂ ಹೋಗಿ ಬನ್ನಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ಕಂಠಿಗೆ ಕೊಂಚ ಖುಷಿ ಆಗುತ್ತದೆ. ಇನ್ನೂ ಸ್ನೇಹಾ ಮನೆಯ ಒಳಗೆ ಹೋದ ಬಳಿಕ ಅಮ್ಮನ ಬಳಿ ಹೇಳುತ್ತಾನೆ. ಅಮ್ಮ ನಾನು ಮತ್ತು ಸ್ನೇಹಾ ಒಂದಾಗಿಲ್ಲ ಅಜ್ಜಿ ಸಂತಸಕ್ಕೆ ನಾವು ಈ ರೀತಿ ಮಾಡಿದ್ದೇವೆ ಎಂದು ಹೇಳುತ್ತಾನೆ.

ಇದನ್ನು ಕೇಳಿದ ಬಂಗಾರಮ್ಮ ಕೊಂಚ ಜೋರಾಗಿ ಮಗನ ಬಳಿ ಹೇಳುತ್ತಾಳೆ ಇದೀಗ ಎಲ್ಲಾ ನಡೆಯಿತು.. ಅಮ್ಮನ ವಿರುದ್ದ ಕೇಸ್ ಬೇರೆ ಕೊಟ್ಟಿದ್ದಿಯಾ ಇದನ್ನು ನನ್ನ ಬಳಿ ಹೇಳುವ ಅಗತ್ಯ ಆದರೂ ಏನಿದೆ ಎಂದೆಲ್ಲ ಹೇಳುತ್ತಾಳೆ. ಅವ್ವನಿಗೆ ನಿಜ ಕೋಪ ಬಂದಿದೆ ಎಂದು ತಿಳಿದು ಪುಟ್ಟಕ್ಕನ ಮನೆಗೆ ಹೋಗುತ್ತಾನೆ ಕಂಠಿ.
ಕಂಠಿ ಮಾತಿಗೆ ಮಣೆ ಹಾಕದ ಬಂಗಾರಮ್ಮ
ಕಂಠಿ ಅಲ್ಲಿಂದ ತೆರಳಿದ ಬಳಿಕ ಅಲ್ಲಿಗೆ ಆಣೆ ಚೌಡವ್ವ ಬರುತ್ತಾಳೆ. ಆಕೆ ಮೆತ್ತಗೆ ಬಂಗಾರಮ್ಮನ ಬಳಿ ಕೇಳುತ್ತಾಳೆ. ಏನು ನಿನ್ನ ಮಗನ ಮೇಲೆ ಕೋಪ ಹೋಗಿಲ್ವ? ಎಂದೆಲ್ಲ ಹೇಳಿ ಕಂಠಿ ಮಾಡಿದ ಕೆಲಸವನ್ನು ಹೇಳುತ್ತಾಳೆ. ಇದನ್ನು ಕೇಳಿದ ಬಳಿಕ ಬಂಗಾರಮ್ಮಗೆ ತನ್ನ ತಪ್ಪಿನ ಅರಿವಾಗುತ್ತದೆ.
ಅಮ್ಮನ ಮಾತು ಕೇಳಿ ಬೇಸರ ಪಟ್ಟ ಬಂಗಾರಮ್ಮ
ಏನು ಮಾಡುವುದು ಎಂದು ತಿಳಿಯದೇ ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ. ನನ್ನ ಮಗನನ್ನು ನಾನೇ ಅರ್ಥ ಮಾಡಿಕೊಂಡು ಇಲ್ವಲ್ಲ ಎಂದು ಬಹಳ ಬೇಸರ ಪಡುತ್ತಾಳೆ. ಕಂಠಿ ಹಾಗೂ ಸ್ನೇಹಾ ಪುಟ್ಟಕ್ಕನ ಮನೆಗೆ ಹೋಗುತ್ತಾರೆ. ಇನ್ನೂ ಅವ್ವನಿಗೆ ಸಹಾಯ ಮಾಡುತ್ತಾ ಸ್ನೇಹಾ ಬಹಳ ಸಂತೋಷದಿಂದ ಇರುತ್ತಾಳೆ.

ಮಕ್ಕಳ ಜೊತೆ ಹಬ್ಬದ ಸಂಭ್ರಮದಲ್ಲಿ ಪುಟ್ಟಕ್ಕ
ಪುಟ್ಟಕ್ಕಗೆ ಕೂಡ ಮಗಳು ಅಳಿಯ ಬಂದಿದ್ದಾರೆ ಎಂದು ಬಹಳ ಖುಷಿಯಿಂದ ಇರುತ್ತಾರೆ. ಇನ್ನೂ ರಂಗೋಲಿ ಹಾಕುವ ವೇಳೆ ಗಣೇಶ ಎಂದು ಬರೆಯುವ ಬದಲು ಸಹನಾ ಗಣೇಸ ಎಂದು ಬರೆಯುತ್ತಲೇ ಇರುವುದನ್ನು ನೋಡಿದ ಸುಮಾ ಅಕ್ಕನ ತಪ್ಪನ್ನು ತಿದ್ದುತ್ತಾಳೆ. ಆಗ ಅಲ್ಲಿಗೆ ಬಂದ ಮುರಳಿ ಬನ್ನಿ ನಾವು ನೀವು ಇಬ್ಬರು ಸೇರಿ ರಂಗೋಲಿ ಹಾಕೋಣ ಎಂದಾಗ ನಾಚಿದ ಸಹನಾ ಆಯಿತು ಎಂದು ಒಪ್ಪಿಕೊಂಡು ಮೆತ್ತಗೆ ರಂಗೋಲಿ ಹಾಕಲು ಹೋಗುತ್ತಾಳೆ.
ಮುರಳಿ ಮಾತು ಕೇಳಿ ನಾಚಿದ ಸಹನಾ
ಆದರೆ ಸುಮಾ ಪದೇ ಪದೇ ಕಾಲು ಎಳೆಯುತ್ತಾ ಇರುತ್ತಾಳೆ. ಇನ್ನೂ ಕಂಠಿ ಕೂಡ ಹಬ್ಬಕ್ಕೆ ಸಂಭ್ರಮದಿಂದ ತಯಾರಿ ನಡೆಸುತ್ತಾ ಇರುತ್ತಾನೆ . ಇನ್ನೂ ಇದೆಲ್ಲವನ್ನೂ ನೋಡಿದ ಪುಟ್ಟಕ್ಕ ಖುಷಿ ಇಮ್ಮಡಿ ಆಗುತ್ತದೆ. ಬಂಗಾರಮ್ಮಗೆ ಪುಟ್ಟಕ್ಕನ ಮೆಸ್ ಸುಟ್ಟು ಹಾಕಿದ್ದು ಯಾರು ಎಂದು ತಿಳಿದಿದೆ. ಆಕೆ ಪುಟ್ಟಕ್ಕನ ಬಳಿ ಅವರ್ಯಾರೂ ಎಂದು ಹೇಳಲೇ ಬೇಕು.. ತನ್ನ ಮೇಲೆ ಇದ್ದ ಕಳಂಕ ತೆಗೆದು ಹಾಕಲೇ ಬೇಕು ಎಂದು ನಿರ್ಧಾರ ಮಾಡುತ್ತಾಳೆ.


Click it and Unblock the Notifications











