ದಾವಣಗೆರೆಯಲ್ಲಿ ಸೀರಿಯಲ್ ಸಂತೆ: ರಾಮಾಚಾರಿ ಕೈಲಿ ಅಕ್ಷರಾಭ್ಯಾಸ ಮಾಡಿಸಿದ ಅಭಿಮಾನಿ, ಅತಿಯಾಯ್ತು ಎಂದ ವೀಕ್ಷಕರು!
ರಾಮಾಚಾರಿ ಸೀರಿಯಲ್ ಜನವರಿ 31,2022 ರಂದು ಪ್ರಸಾರವನ್ನು ಕಂಡಿದೆ. ರಿತ್ವಿಕ್ ಕೃಪಾಕರ್, ಮೌನ ಗುಡ್ಡೆಮನೆ, ಮಿಥುನ್ ತೇಜಸ್ವಿ, ಶಂಕರ್ ಅಶ್ವತ್, ಸಿರಿಜಾ, ಅಂಜಲಿ ಸುಧಾಕರ್ ಹಾಗೂ ಚಿ.ಗುರುದತ್ ಅಭಿನಯಿಸಿದ್ದಾರೆ. ಈ ಸೀರಿಯಲ್ ದಿನಕೊಂದು ತಿರುವು ಪಡೆದುಕೊಳ್ಳುತ್ತಾ ಅಭಿಮಾನಿಗಳ ಹೃದಯದಲ್ಲಿ ಜಾಗವನ್ನ ಪಡೆದುಕೊಂಡಿದೆ. ಈಗ ರಾಮಾಚಾರಿ ಸೀರಿಯಲ್ ನಲ್ಲಿ ಮೆಗಾ ಟ್ವಿಸ್ಟ್ ಸಿಕ್ಕಿದೆ. ರಾಮಾಚಾರಿ ಪಾತ್ರಧಾರಿಯನ್ನ ಇಬ್ಬರನ್ನಾಗಿ ಮಾಡಲಾಗಿದ್ದು ಎರಡು ಪಾತ್ರಗಳಲ್ಲಿ ರಾಮಾಚಾರಿ ಅಭಿನಯಿಸುತ್ತಾ ಇದ್ದಾರೆ. ಇದಕ್ಕಾಗಿ ಜನರು ಬಹಳಷ್ಟು ಕನ್ಫ್ಯೂಸ್ ಆಗಿದ್ದು ನಿಜವಾಗಿಯೂ ರಾಮಾಚಾರಿಗೆ ಸೋಲಾಗಿ ಚಾರು ಮನೆಯಿಂದ ಹೊರಗಡೆ ಹೋಗುತ್ತಾಳಾ ಎಂಬುದನ್ನು ನೋಡುತ್ತಿದ್ದಾರೆ.
ಸದ್ಯಕ್ಕೆ ರಾಮಾಚಾರಿ ಸೀರಿಯಲ್ 500 ಎಪಿಸೋಡ್‌ಗಳತ್ತ ದಾಪುಗಾಲು ಇಟ್ಟಿದೆ. ಇದೇ ಖುಷಿಯಲ್ಲಿ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸೀರಿಯಲ್ ಸಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಭಿಮಾನಿಗಳು ಅಷ್ಟೇ ರಾಮಾಚಾರಿ ಸೀರಿಯಲ್ ತಂಡಕ್ಕೆ ಅದ್ದೂರಿ ಸ್ವಾಗತವನ್ನು ಕೋರಿ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ. ರಾಮಾಚಾರಿ ಸೀರಿಯಲ್ ತಂಡದ ಜಾನಕಿ ಪಾತ್ರಧಾರಿ ಅಂಜಲಿ ಸುಧಾಕರ್ ಅವರು ತಮ್ಮ ಅಣ್ಣ ಹಾಗೂ ತಮ್ಮನನ್ನು ನೆನಪಿಸಿಕೊಂಡು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಪ್ರಸಂಗ ಕೂಡ ನಡೆದಿದೆ. ಇದೇ ವೇಳೆ ಅಂಜಲಿ ಸುಧಾಕರ್ ಅವರಿಗೆ ಅವರ ಅಣ್ಣ ಹಾಗೂ ತಮ್ಮನ ನೆನಪಿಗಾಗಿ ಒಂದು ಫೋಟೋವನ್ನು ಕಾಣಿಕೆಯಾಗಿ ನೀಡಿದ್ದು ಭಾವುಕರಾಗಿದ್ದಾರೆ.

ರಾಮಾಚಾರಿ ಸೀರಿಯಲ್ ಬಂದ ದಿನದಿಂದಲೂ ಕೂಡ ಮೌನ ಗುಡ್ಡೆಮನೆ ಹಾಗೂ ರಿತ್ವಿಕ್ ಕೃಪಾಕರ್ ತಮ್ಮದೇ ಆದ ಅಭಿಮಾನಿ ವರ್ಗವನ್ನ ಹೊಂದಿದ್ದಾರೆ. ರಾಮಾಚಾರಿ ಹಾಗೂ ಚಾರು ಇಬ್ಬರ ಕ್ಯೂಟ್ ಜೋಡಿ ನೋಡಲು ಸೀರಿಯಲ್ ನೋಡುತ್ತೇವೆ ಎಂದು ಕೂಡ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಇನ್ನು ರಾಮಾಚಾರಿ ಹಾಗೂ ಚಾರು ಇಬ್ಬರು ಕೂಡ ಸೀರಿಯಲ್ ಸೆಟ್ನಲ್ಲಿ ಏನು ಮಾಡುತ್ತೇವೆ ಏನು ಮಾಡುವುದಿಲ್ಲ ಎಂಬುದನ್ನು ತಿಳಿಸಿದ್ದಾರೆ. ಯಾರು ಅತಿ ಹೆಚ್ಚು ಸುಳ್ಳು ಹೇಳುತ್ತಾರೆ ಯಾರು ಡಯಟ್ ಮಾಡೋದಿಲ್ಲ ಎಂಬ ಬಗ್ಗೆ ತಿಳಿಸಿದ್ದಾರೆ.
ರಾಮಾಚಾರಿ ಕೈನಲ್ಲಿ ಅಕ್ಷರಾಭ್ಯಾಸ ಮಾಡಿಸಿದ ಅಭಿಮಾನಿ..!
ರಾಮಾಚಾರಿ ಧಾರಾವಾಹಿ ಅಭಿಮಾನಿ ವರ್ಗ ಸೀರಿಯಲ್ ಸಂತೆಯಲ್ಲಿ ತಮ್ಮ ಮಗನಿಗೆ ರಾಮಾಚಾರಿ ಕೈನಲ್ಲಿ ಅಕ್ಷರಾಭ್ಯಾಸವನ್ನು ಕೂಡ ಮಾಡಿಸಿದ್ದಾರೆ. ರಾಮಾಚಾರಿ ಸೀರಿಯಲ್‌ನಲ್ಲಿ ತಂದೆಗೆ ತಕ್ಕ ಮಗನಾಗಿದ್ದು ನನ್ನ ಮಗ ಕೂಡ ನಿಮ್ಮಂತೆ ಆಗಲಿ ಎಂಬುದೇ ನಮ್ಮ ಆಶಯ ಎಂದಿದ್ದಾರೆ. ಖುಷಿಯಾಗಿ ರಾಮಾಚಾರಿ ಮಗುವಿಗೆ ಅಕ್ಷರಾಭ್ಯಾಸ ಮಾಡಿಸಿದ್ದಾರೆ. ಇನ್ನೂ ರಾಮಾಚಾರಿಗೆ ಶಂಕರ್ ಅಶ್ವಥ್ ಅವರು ಸಹ ಸಾಥ್ ನೀಡಿದ್ದಾರೆ.

ಇನ್ನೂ ಅಕ್ಷರಾಭ್ಯಾಸಕ್ಕೂ ಮುನ್ನ ರಾಮಾಚಾರಿ ವೇದಿಕೆಯ ಮೇಲೆ ಅಭಿಮಾನಿಗಳ ಪ್ರೀತಿಗೆ ನಾನು ಚಿರರುಣಿ ಇಂತಹ ಪ್ರೀತಿ ಕೊಟ್ಟ ಅಭಿಮಾನಿಯನ್ನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ ಎಂದಿದ್ದಾರೆ. ಇಂತಹ ಅದ್ಭುತವಾದ ಕ್ಷಣವನ್ನು ನಾನು ಸದಾಕಾಲವೂ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ ಎಂದಿದ್ದಾರೆ. ವೇದಿಕೆಯ ಮೇಲೆಯೇ ಎಲ್ಲರ ಸಮ್ಮುಖದಲ್ಲಿ ಅಕ್ಷರಾಭ್ಯಾಸವನ್ನು ಮಾಡಿಸಿದ್ದಾರೆ.
ಸೆಟ್‌ಗೆ ಲೇಟ್ ಆಗಿ ಬಂದು ಸುಳ್ಳು ಹೇಳೋರು ಯಾರು..!
ರಾಮಾಚಾರಿ ತಮ್ಮ ಕಾಮೆಂಟ್ ಬಾಕ್ಸ್ ನೋಡ್ತಾರಾ..?
ರಾಮಾಚಾರಿ ಹಾಗೂ ಚಾರು ಇಬ್ಬರು ಕೂಡ ತಮ್ಮ ಜೀವನದಲ್ಲಿ ಇರುವ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಸೀರಿಯಲ್ ಸೆಟ್‌ಗೆ ಯಾರು ಲೇಟ್ ಆಗಿ ಬಂದು ಸುಳ್ಳು ಹೇಳಿದ್ದೀರಾ ಎಂಬ ಪ್ರಶ್ನೆಯನ್ನು ಕೇಳಲಾಗಿದ್ದು, ಇದಕ್ಕೆ ರಾಮಾಚಾರಿ ನಾನು ಕೆಲವು ಸಲ ಸುಳ್ಳು ಹೇಳಿದ್ದೇನೆ ಎಂದು ಅಂದಿದ್ದಾರೆ. ಬೈಕ್ ಕೆಟ್ಟು ಹೋಯಿತು ಎಂದೆಲ್ಲ ಕಾರಣ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಇನ್ನೂ ಚಾರು ನಾನು ಲೇಟ್ ಆಗಿ ಬಂದರೆ ಸರಿಯಾದ ಕಾರಣವನ್ನು ಕೊಟ್ಟಿದ್ದೇನೆ ಸುಳ್ಳು ಹೇಳಲಿಲ್ಲ ಎಂದು ಹೇಳಿದ್ದಾರೆ.
ರಾಮಾಚಾರಿ ನಾನು ನನಗೆ ಬರುವ ಕಾಮೆಂಟ್ಸ್ ಓದೋದಿಲ್ಲ ಎಂದಿದ್ದಾರೆ. ಆದರೆ ಚಾರು ಕಾಮೆಂಟ್ಸ್ ಓದಿ ಪಾಸಿಟಿವ್ ಆಗಿ ಅದನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಕನ್ನಡಿ ಮುಂದೆ ನಿಂತು ಪೋಸ್ ಕೊಡುವ ಅಭ್ಯಾಸ ಇಬ್ಬರಿಗೂ ಇರುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನೂ ಇಬ್ಬರು ಕೂಡ ಡಯಟ್ ಚೀಟಿಂಗ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ರಾಮಾಚಾರಿ ಹೊರಗೆ ಹೋದಾಗ ಡಯಟ್ ಮಾಡೋದಿಲ್ಲ ಎಂದರು. ಚಾರು ಕೂಡ ನಾನು ಕೆಲವೊಮ್ಮೆ ಮಾಡುತ್ತೇನೆ ಇನ್ನೂ ಕೆಲವೊಮ್ಮೆ ಮಾಡೋದಿಲ್ಲ ಎಂದಿದ್ದಾರೆ. ರಾಮಾಚಾರಿ ಸೀರಿಯಲ್ ಸಂತೆಯಲ್ಲಿ ಎಲ್ಲರೂ ಕೂಡ ತಮಗೆ ಇಷ್ಟ ಬಂದಂತಹ ಡೈಲಾಗ್ ಹಾಗೂ ಡ್ಯಾನ್ಸ್ ಮಾಡಿ ಅಭಿಮಾನಿಗಳಿಗೆ ಖುಷಿಪಡಿಸಿದ್ದಾರೆ.


Click it and Unblock the Notifications











