Ramachari: ಚಾರು ಬಟ್ಟೆ ತಂದಿದ್ದನ್ನು ನೋಡಿ ವೈಶಾಖ ಶಾಕ್, ಹೆಂಡತಿಯ ಕೆಲಸಕ್ಕೆ ಖುಷಿಯಾಗಿ ತಬ್ಬಿಕೊಂಡ ರಾಮಾಚಾರಿ

ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಹೆಂಡತಿ ಚಾರು ದಿಕ್ಕು ತಪ್ಪಿಸುವ ಎಲ್ಲಾ ಕೆಲಸ ಸಲೀಸಾಗಿ ನಡೆಯುತ್ತಿದೆ.. ಹೌದು ಇದೀಗ ವೈಶಾಖಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಶಾಕ್ ನೀಡಿದ್ದಾಳೆ ಚಾರು. ತನ್ನ ಮನೆಯಲ್ಲಿ ವಿಶೇಷವಾದ ಕಾರ್ಯಕ್ರಮ ನಡೆಯುತ್ತಿದೆ. ಈ ದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಬೇಕು ಎಂಬುವುದು ಚಾರು ಆಸೆ. ಆ ಕಾರಣದಿಂದ ಆಗಿ ಚಾರು ಲೆಕ್ಕಾ ಹಾಕಿ ಕೆಲಸ ಮಾಡುತ್ತಾ ಇರುತ್ತಾಳೆ.

ಮನೆ ಮಂದಿಗೆಲ್ಲ ಬಟ್ಟೆ ಕೊಡಿಸುತ್ತಾಳೆ ಚಾರು. ಆದರೆ ಚಾರು ಬಟ್ಟೆಗಾಗಿ ಇಟ್ಟಿದ್ದ ಹಣವನ್ನು ವೈಶಾಖ ಕದಿಯುತ್ತಾಳೆ . ಈ ವಿಚಾರ ವೈಶಾಖ ಬಳಿ ಕೇಳಿದಾಗ ದೇವರ ಮೇಲೆ ಆಣೆ ಮಾಡಿ ಸುಳ್ಳು ಹೇಳುತ್ತಾಳೆ. ಇನ್ನೂ ಚಾರು ಹೇಗಾದರೂ ಮಾಡಿ ಸಾಲ ತೆಗೆದುಕೊಂಡು ಮನೆಯವರಿಗೆ ಬಟ್ಟೆ ತಂದಾಗ ವೈಶಾಖ ಗೆ ಶಾಕ್ ಆಗುತ್ತದೆ..

Kannada serial ninadena written updated on 19th October

ಹೇಗೆ ಇವಳು ಬಟ್ಟೆ ತಂದಳು ಎನ್ನುವುದೇ ಅವರ ಮನದಲ್ಲಿ ಕಾಡುತ್ತಾ ಇರುತ್ತದೆ. ಇನ್ನೂ ಡ್ರೆಸ್ ನೋಡಿದ ರಾಮಾಚಾರಿ ತಂಗಿ ಮಾತ್ರ ಬಹಳ ಖುಷಿ ಪಟ್ಟಿದ್ದಾಳೆ. ರಾಮಾಚಾರಿ ತಾಯಿಗೂ ಬಹಳ ಖುಷಿ ಆಗುತ್ತದೆ. ವೈಶಾಖ ಮಾತ್ರ ಹೊಟ್ಟೆ ಉರಿದುಕೊಂಡಿದ್ದಾಳೆ.

ಚಾರು ಮಾತಿಗೆ ಖುಷಿಪಟ್ಟ ಮನೆ ಮಂದಿ

ಇನ್ನೂ ವೈಶಾಖ ಬಳಿ ಚಾರು ಅಕ್ಕ ನಿಮಗೂ ಬಟ್ಟೆ ತಂದಿದ್ದೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ವೈಶಾಖ ತನ್ನ ದುಃಖವನ್ನು ತೋರ್ಪಡಿಸಲು ಆಗದೆ ಸುಮ್ಮನೆ ಇರುತ್ತಾಳೆ. ಇನ್ನೂ ಚಾರು ರೂಮ್‌ನ ಒಳಗೆ ಹೋಗುತ್ತಾಳೆ. ಕಾರ್ಯಕ್ರಮಕ್ಕೆ ಎಲ್ಲವನ್ನೂ ಮಾಡಿದ್ದೇನೆ. ಆದರೆ ಯಾವ ಕೆಲಸ ಬಾಕಿ ಉಳಿದಿದೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

ಹೆಂಡತಿಯನ್ನು ನೋಡುತ್ತಾ ನಿಂತ ರಾಮಾಚಾರಿ

ಚಾರುವನ್ನು ನೋಡಿ ರಾಮಾಚಾರಿಗೆ ಬಹಳ ಖುಷಿ ಆಗುತ್ತದೆ. ಚಾರುಗಾಗಿ ರಾಮಾಚಾರಿ ಸೀರೆ ತಂದಿದ್ದಾನೆ. ಇದನ್ನು ನೋಡಿ ಚಾರು ಓಡಿ ಬಂದು ರಾಮಾಚಾರಿಯನ್ನ ತಬ್ಬಿಕೊಳ್ಳುತ್ತಾಳೆ. ಇದನ್ನು ನೋಡಿದ ರಾಮಾಚಾರಿಗೆ ಕೂಡ ಪ್ರೀತಿ ಉಕ್ಕಿ ಹರಿಯುತ್ತದೆ. ತನ್ನ ಹೆಂಡತಿ ಎಷ್ಟೆಲ್ಲ ಕಷ್ಟ ಪಡುತ್ತಾ ಇದ್ದಾಳಲ್ಲ ಎಂದು ತಿಳಿದುಕೊಂಡು ಆಕೆಯನ್ನು ಮೆತ್ತಗೆ ತಬ್ಬಿಕೊಂಡು ಬಿಡುತ್ತಾನೆ.

Kannada serial ninadena written updated on 19th October

ಅಮ್ಮನನ್ನು ನೋಡಿ ಹೌಹಾರಿದ ರಾಮಚಾರಿ

ಮೊದಲೆಲ್ಲ ಚಾರುವನ್ನು ದ್ವೇಷ ಮಾಡುತ್ತಾ ಇದ್ದ ರಾಮಾಚಾರಿ ನಿಧಾನವಾಗಿ ಚಾರು ಬಲೆಯಲ್ಲಿ ಬೀಳುತ್ತಾ ಇರುತ್ತಾನೆ. ಇನ್ನೂ ಅಷ್ಟರಲ್ಲೇ ಚಾರುವನ್ನು ಕೂಗುತ್ತಾ ಆಕೆಯ ಅತ್ತೆ ಬರುತ್ತಾಳೆ. ರಾಮಾಚಾರಿ ಹಾಗೂ ಚಾರು ತಬ್ಬಿಕೊಂಡು ನಿಂತುಕೊಂಡು ಇರುವುದನ್ನು ನೋಡಿದ ರಾಮಾಚಾರಿ ಅಮ್ಮ ನಾಚಿ ನೀರಾಗಿ ಬಿಡುತ್ತಾಳೆ. ಆ ವೇಳೆ ರಾಮಾಚಾರಿಗೆ ಎನು ಮಾಡಬೇಕು ಎಂದು ತಿಳಿಯದೇ ಗಾಬರಿಯಾಗುತ್ತಾನೆ. ಕೊನೆಗೆ ಅಲ್ಲಿಂದ ಚಾರು ಅತ್ತೆ ಹೋಗುತ್ತಾರೆ. ಇದನ್ನೆಲ್ಲ ನೋಡಿದ ರಾಮಾಚಾರಿ ಇದಕ್ಕೆಲ್ಲ ನೀನೇ ಕಾರಣ ಎಂದು ಚಾರು ಮೇಲೆ ಕೋಪ ಮಾಡಿಕೊಳ್ಳುತ್ತಾನೆ. ಚಾರು ಮಾತ್ರ ಇದೆಲ್ಲವನ್ನೂ ಕಂಡು ನಕ್ಕು ಬಿಡುತ್ತಾಳೆ.

More from Filmibeat

English summary
Kannada serial Ramachari written updated on 19th October.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X