Sathya: ಲಕ್ಷ್ಮಣ-ಪದ್ಮ ಸಂಬಂಧದ ಮೇಲೆ ಬಿತ್ತು ಕೀರ್ತನಾ ಕಣ್ಣು: ಆತಂಕದಲ್ಲಿ ಸತ್ಯ!
ಸತ್ಯ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ. ಇದೀಗ ಸತ್ಯ ಕಾರ್ತಿಕ್ ಜೊತೆ ನಿಜ ವಿಚಾರವನ್ನು ಹಂಚಿಕೊಂಡಿದ್ದಾಳೆ. ಕಾರ್ತಿಕ್ ಬಳಿ ಪದ್ಮ ಹಾಗೂ ಲಕ್ಷ್ಮಣ ಅವರ ವಿಚಾರವನ್ನು ತಿಳಿಸಿದರೆ ಮನಸ್ಸು ನಿರಾಳವಾಗುತ್ತದೆ ಎನ್ನುವುದು ಸತ್ಯ ನಂಬಿಕೆ. ಹೀಗಾಗಿ ಸತ್ಯ ಕಾರ್ತಿಕ್ ಜೊತೆ ಎಲ್ಲಾ ವಿಚಾರವನ್ನು ಹೇಳಿ ಮುಗಿಸಬೇಕು ಎನ್ನುವಷ್ಟರಲ್ಲಿ ಲಕ್ಷ್ಮಣ ಮತ್ತೆ ಕೋಪಿಸಿಕೊಂಡಿದ್ದಾನೆ.
ಹೌದು ಲಕ್ಷ್ಮಣ ಇದೀಗ ಪದ್ಮ ಮೇಲಿನ ಸಿಟ್ಟಿನಿಂದ ಕುಡಿಯುವ ನೀರಿನ ಜಗ್ಗನ್ನೆ ಕೈಯಿಂದಲೇ ದೂರಕ್ಕೆ ತಳ್ಳಿ ಬಿಡುತ್ತಾನೆ. ಇದರಿಂದಾಗಿ ಗಾಜಿನ ಜಗ್ ಒಡೆದು ಹೋಗುತ್ತದೆ. ಆ ಶಬ್ಧಕ್ಕೆ ಕಾರ್ತಿಕ್ ಜೊತೆ ನಿಜ ವಿಚಾರ ಹೇಳಬೇಕು ಅಂದುಕೊಂಡರೂ ಆಗದೆ ಲಕ್ಷ್ಮಣ ಅವರ ರೂಮ್ ಬಳಿ ಬರುತ್ತಾರೆ. ಆ ವೇಳೆ ತನ್ನ ಚಿಕ್ಕಪ್ಪನ ಸಿಟ್ಟು ನೋಡಿ ಬಹಳ ಬೇಸರ ಮಾಡಿಕೊಳ್ಳುತ್ತಾನೆ ಕಾರ್ತಿಕ್ .

ಸೀತಾ ಕೂಡ ಓಡಿ ಬಂದು ಲಕ್ಷ್ಮಣನನ್ನು ಪ್ರಶ್ನೆ ಮಾಡುತ್ತಾಳೆ. ಇದೆಲ್ಲವನ್ನೂ ನೋಡಿದ ಲಕ್ಷ್ಮಣ ಮಾತ್ರ ಎನು ಹೇಳಬೇಕು ಎಂದು ತಿಳಿಯದೇ ಸುಮ್ಮನೆ ಇರುತ್ತಾನೆ. ಲಕ್ಷ್ಮಣ ಪದ್ಮ ಮೇಲೆ ಬಹಳ ಸಿಟ್ಟು ಮಾಡಿಕೊಂಡಿದ್ದಾನೆ. ಆಕೆ ಈ ಮನೆಯಲ್ಲಿ ಇರುವುದು ನನಗೆ ಆಪತ್ತು ಎನ್ನುವ ನಿಟ್ಟಿನಲ್ಲಿ ಈ ರೀತಿ ಲಕ್ಷ್ಮಣ ನಡೆದುಕೊಳ್ಳುತ್ತಾ ಇದ್ದಾರೆ. ಲಕ್ಷ್ಮಣನ ನಡವಳಿಕೆಗೆ ಪದ್ಮ ಬಹಳ ಬೇಸರ ಪಟ್ಟುಕೊಂಡಿದ್ದಾಳೆ.
ಊರ್ಮಿಳಾ ಮನದಲ್ಲಿ ತುಂಬಿದ ನೋವು
ಇನ್ನು ಲಕ್ಷ್ಮಣ ಯಾರ ಬಳಿ ಎನು ಹೇಳಲು ಆಗದೆ ಸುಮ್ಮನೆ ಇರುತ್ತಾನೆ. ಇನ್ನು ಊರ್ಮಿಳಾ ಮನದಲ್ಲಿ ಇರುವ ನೋವನ್ನು ಹೊರಗೆ ಹಾಕುತ್ತಾಳೆ. ಇತ್ತೀಚಿನ ದಿನಗಳಲ್ಲಿ ಇವರು ಬಹಳ ಕೋಪ ಮಾಡಿಕೊಳ್ಳುತ್ತಾರೆ . ಇವರ ಬಳಿ ಮಾತನಾಡಲು ಕೂಡ ನನಗೆ ಬಹಳ ಭಯ ಆಗುತ್ತದೆ. ಎಂದು ಬಹಳ ಬೇಸರ ವ್ಯಕ್ತ ಪಡಿಸುತ್ತಾ ಇರುತ್ತಾಳೆ.

ಪದ್ಮ ಅಳುವುದನ್ನು ನೋಡಿ ಕೀರ್ತನಾಗೆ ಅನುಮಾನ
ಬಳಿಕ ಲಕ್ಷ್ಮಣ ಕೈಯಲ್ಲಿ ರಕ್ತ ಸೋರುತ್ತಿರುವುದನ್ನು ಕಂಡು ಇನ್ನಷ್ಟು ಭಯಭೀತಳಾಗುತ್ತಾಳೆ. ಇನ್ನೂ ಕಾರ್ತಿಕ್ ಇದನ್ನೆಲ್ಲ ನೋಡಿ ಮೆಡಿಕಲ್ ಕಿಟ್ ಅನ್ನು ತರಲು ಹೋದರೆ ಪದ್ಮ ಅಳುಮುಂಜಿ ಮುಖ ಮಾಡಿಕೊಂಡು ಬಹಳ ಬೇಸರದಿಂದ ಆತನ ಕೈಯಲ್ಲಿ ಇರುವ ರಕ್ತವನ್ನು ಬಟ್ಟೆಯಿಂದ ಒರೆಸುತ್ತ ಇರುತ್ತಾಳೆ.
ಇನ್ನು ಪದ್ಮ ಮುಖ ನೋಡಿ ಕೀರ್ತನಾಗೆ ಮಾತ್ರ ಸಖತ್ ಡೌಟ್ ಬರುತ್ತಿದೆ. ಇದೇನು ಪದ್ಮ ಇಲ್ಲಿಗೆ ಬಂದ ಮೇಲೆ ಚಿಕ್ಕಪ್ಪ ಯಾಕೆ ಹೀಗೆ ಆಡುತ್ತಿದ್ದಾರೆ ಎನ್ನುವ ಅನುಮಾನ ಕೂಡ ಆಕೆಯಲ್ಲಿ ಮೂಡಿದೆ. ಆದರೆ ಇದೇ ಇದೀಗ ಸತ್ಯಗೆ ಬಹಳ ಭಯ ತರಿಸಿದೆ.


Click it and Unblock the Notifications











