Sathya: ಸತ್ಯಗೆ ಎದುರಾಡುತ್ತಿದ್ದ ದಿವ್ಯಗೆ ಖಡಕ್ ಉತ್ತರ ಕೊಟ್ಟ ಸೀತಾ!; ಬೆದರು ಗೊಂಬೆಯಾದ ದಿವ್ಯ
ಸತ್ಯ ಮನೆತನದ ಬಗ್ಗೆ ಮನೆಯವರ ಬಗ್ಗೆ ಬಹಳ ಕಾಳಜಿ ವಹಿಸಿ ಬಿಡುತ್ತಾಳೆ ಯಾಕೆಂದರೆ ಮನೆಯವರ ಮೇಲೆ ಸತ್ಯ ಗೆ ಇರುವ ನಂಬಿಕೆ ಅಷ್ಟಿಷ್ಟಲ್ಲ. ಮನೆ ಮಂದಿಗಾಗಿ ಜೀವ ಕೊಡಲು ರೆಡಿ ಇರುತ್ತಾಳೆ ಸತ್ಯ. ಆದರೆ ಇದೀಗ ರಿತು ನಚ್ಚಿಕೇತ್‌ನನ್ನು ದೂರ ಮಾಡುತ್ತಿದ್ದಾಳೆ. ಕಾರಣ ಏನೆಂದರೆ ತನ್ನ ತಂದೆಯ ಎರಡನೇ ಹೆಂಡತಿ ಎಂಬ ಕಾರಣಕ್ಕೆ.
ಹಾಗೆಯೇ ತನ್ನ ತಂದೆಯನ್ನು ಎಷ್ಟೆಲ್ಲ ನಂಬಿದ್ದೆ, ಆದರೆ ನನ್ನ ತಾಯಿಗೆ ಮೋಸ ಮಾಡಿಬಿಟ್ಟರು ಎಂಬ ವಿಚಾರ ರಿತು ಮನದಲ್ಲಿ ಮೂಡಿದೆ. ಅದರಿಂದಾಗಿ ನಚ್ಚಿಕೇತ್ ಅದೆಷ್ಟೇ ರಿತು ಹತ್ತಿರ ಹೋದರೂ ಆಕೆ ಆತನನ್ನು ದೂರ ತಳ್ಳುತ್ತಾ ಇರುತ್ತಾಳೆ. ಇದನ್ನು ನೋಡಿದ ಲಕ್ಷ್ಮಣ ಪಿತ್ತ ನೆತ್ತಿಗೆ ಏರುತ್ತದೆ. ಯಾಕೆ ಹೀಗೆ ಮಾಡುತ್ತಾ ಇದ್ದೀಯಾ ರಿತು ಎಂದು ಪ್ರಶ್ನೆ ಮಾಡುತ್ತಾನೆ. ಇದನ್ನು ಕೇಳಿದ ರಿತುಗೆ ಕೋಪ ನೆತ್ತಿಗೆ ಏರುತ್ತದೆ. ಹಾಗೆಯೇ ತಂದೆಯ ವಿರುದ್ಧವೇ ರಿತು ಗುಡುಗುತ್ತಾಳೆ.

ರಿತುಗೆ ಬುದ್ದಿ ಹೇಳಿದ ಸತ್ಯ
ಅಷ್ಟರಲ್ಲಿ ಅಲ್ಲಿಗೆ ಸತ್ಯ ಬಂದು ರಿತುಗೆ ಬುದ್ದಿ ಮಾತು ಹೇಳುತ್ತಾಳೆ. ರಿತು ಯಾವತ್ತೂ ಹೀಗೆಲ್ಲ ನೀನು ಮಾಡಿದವಳು ಅಲ್ಲ. ಆದರೆ ನಚ್ಚಿ ಕೇತ್ ಬಳಿ ನೀನು ಹೀಗೆ ನಡೆದುಕೊಂಡು ಇರುವುದು ಸರಿಯಲ್ಲ ಎಂದು ಹೇಳಿದಾಗ ಕೋಪಗೊಂಡ ರಿತು ನನಗೆ ಈತನ ಜೊತೆ ಇರಲು ಆಗುವುದಿಲ್ಲ ಹಾಗೆಯೇ ಮಾತನಾಡಲು ಆಗುವುದು ಇಲ್ಲ. ದಯವಿಟ್ಟು ನಚ್ಚಿಕೇತ್ ನನ್ನಿಂದ ದೂರ ಇರುವ ಹಾಗೆ ಆತನಿಗೆ ತಿಳಿ ಹೇಳಿ ಎಂದು ಅಲ್ಲಿಂದ ಹೊರಟು ಹೋಗುತ್ತಾಳೆ.
ದಿವ್ಯಳನ್ನು ಭೇಟಿ ಆದ ಸತ್ಯ
ಸತ್ಯ ತನ್ನ ಅಕ್ಕ ಗರ್ಭಿಣಿ ಎಂದು ತಿಳಿದ ಬಳಿಕ ಆಕೆಯನ್ನು ನೋಡಲು ಹೋಗುತ್ತಾಳೆ. ದಿವ್ಯ ಮೊದಲ ಮಗುವಿಗೆ ತಾಯಿ ಆಗುತ್ತಿದ್ದಾರೆ. ಎನ್ನುವ ವಿಚಾರ ತಿಳಿದು ಮನೆ ಮನಗಳಲ್ಲಿ ರಂಗೇರುತ್ತದೆ. ಸತ್ಯ ತನ್ನ ತವರು ಮನೆಗೆ ಬಂದು ದಿವ್ಯ ಬಳಿ ಬಹಳ ಪ್ರೀತಿಯಿಂದ ಮಾತನಾಡಿದಾಗ ದಿವ್ಯ ಕೊಂಚವೂ ಬದಲಾವಣೆ ಆಗದೆ ಬಹಳ ನಿಷ್ಠುರದಿಂದ ಮಾತುಗಳನ್ನು ಆಡುತ್ತಾಳೆ.

ಪದ್ಮ ಬಗ್ಗೆ ಹಗುರವಾಗಿ ಮಾತನಾಡಿದ ದಿವ್ಯ
ಪದ್ಮ ವಿಚಾರ ಅದು ಹೇಗೆ ದಿವ್ಯಗೆ ಗೊತ್ತಾಯಿತು ಎಂದು ಸತ್ಯ ಮನದಲ್ಲಿ ಯೋಚನೆ ಮಾಡುತ್ತಾಳೆ. ಅಷ್ಟರಲ್ಲಿ ದಿವ್ಯ ಹೇಳುತ್ತಾಳೆ. ಏನು ಸತ್ಯ ಶಾಕ್ ಆಯಿತಾ..? ಈ ವಿಚಾರ ನನಗೆ ತಿಳಿದಿದೆ ಎಂದು ಹೇಳಿದಾಗ ಸತ್ಯ ದಿವ್ಯ ಬಳಿ ಕೇಳಿಕೊಳ್ಳುತ್ತಾ ಇರುತ್ತಾಳೆ. ಯಾವುದೇ ಕಾರಣಕ್ಕೂ ಈ ವಿಚಾರ ಊರ್ಮಿಳಾ ಅತ್ತೆಗೆ ಗೊತ್ತಾಗಬಾರದು ಎಂದಾಗ ದಿವ್ಯ ಹೇಳುತ್ತಾಳೆ ನಾನು ಈ ವಿಚಾರವನ್ನು ಹೇಳಿಯೇ ಹೇಳುತ್ತಾನೆ. ಯಾರಿಗೂ ಕೂಡ ಇದನ್ನು ತಡೆಯಲು ಸಾಧ್ಯ ಇಲ್ಲ ಎಂದು ಊರ್ಮಿಳಾ ಗೆ ಸತ್ಯ ಹೇಳಲು ದಿವ್ಯ ಹೋಗುವ ವೇಳೆ ಬಾಗಿಲಿಗೆ ಅಡ್ಡಲಾಗಿ ಸೀತಾ ನಿಂತಿರುತ್ತಾಳೆ.
ಆಕೆ ಹೇಳುತ್ತಾಳೆ ಏನು ನೀವಿಬ್ಬರೂ ಅಷ್ಟಕ್ಕೊಂದು ಮಾತನಾಡುವುದು ಏನಿದೆ. ಎಂದಾಗ ದಿವ್ಯ ಗೆ ಶಾಕ್ ಆಗುತ್ತದೆ . ಆಕೆ ಎನು ಮಾಡುವುದು ಎಂದು ತಿಳಿಯದೇ ಆಗುತ್ತದೆ. ಕೊನೆಗೆ ಸೀತಾ ದಿವ್ಯ ಹತ್ತಿರ ಬಂದು ಹೇಳುತ್ತಾಳೆ. ಸತ್ಯ ನಿನ್ನ ಬಳಿ ಅಷ್ಟೆಲ್ಲ ಸಮಾಧಾನದಿಂದ ಹೇಳುತ್ತಿದ್ದಾಳೆ ಆದರೆ ನೀನು ಕೇಳಿಸಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ. ಆದರೆ ನೀನು ಎಲ್ಲಾದರೂ ಈ ವಿಚಾರ ಬಾಯಿಬಿಟ್ಟರೆ ನಿನಗೆ ದಂಡಂ ದಶಗುಣಂ ಗ್ಯಾರಂಟಿ ಎಂದು ಹೇಳುತ್ತಾಳೆ.


Click it and Unblock the Notifications











