Sathya Serial: ಮನದಲ್ಲೇ ಗುಟ್ಟಾಗಿ ಪ್ರೀತಿಸಿದ ಪ್ರೇಯಸಿ 'ಸತ್ಯ'ಗೆ ಕಾರ್ತಿಕ್ ಚಾಲೆಂಜ್

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ಈಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಆಗುತ್ತಿದೆ. ತುಂಬಾ ಇನ್‌ಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದ್ದು, ಪ್ರೀತಿಸಿದ ಹುಡುಗಿಯನ್ನೇ ದ್ವೇಷಿಸುವ ಸ್ಥಿತಿ ತಲುಪಿರುವ ಸತ್ಯ ಧಾರಾವಾಹಿಯ ನಾಯಕ ಕಾರ್ತಿಕ್, ಸತ್ಯಾಳಿಗೆ ಚಾಲೆಂಜ್ ಮಾಡಿದ್ದಾನೆ. ಅಪ್ಪನ ಜೀವಕ್ಕೆ ಏನೂ ಆಗಬಾರದು. ಅವರು ಚೆನ್ನಾಗಿರಬೇಕು ಎಂಬ ಒಂದೇ ಒಂದು ಕಾರಣಕ್ಕಾಗಿ, ಕಾರ್ತಿಕ್ ತಮ್ಮ ಮನದರಸಿ ಸತ್ಯಳಿಂದ ದೂರ ಉಳಿದಿದ್ದಾನೆ. ದಿವ್ಯಾ ಜೊತೆ ಮದುವೆಯಾಗಲು ಹೋಗಿ ಈಗ ಸತ್ಯಳಿಂದಲೇ ಮದುವೆ ಮುರಿದು ಬಿದ್ದಿದೆ.

ಇತ್ತ ಅಕ್ಕನಿಗಾಗಿ, ಅಪ್ಪ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುವುದಕ್ಕಾಗಿ ಸತ್ಯ ತನ್ನ ಪ್ರಿಯಕರ ಅಮುಲ್ ಬೇಬಿಯನ್ನು ಅಕ್ಕನಿಗೆ ಬಿಟ್ಟುಕೊಟ್ಟು ಬಿಟ್ಟಿದ್ದಾಳೆ. ಅಕ್ಕನ ಆಸೆಯಂತೆಯೇ ಮದುವೆ ನೆರವೇರಲೆಂದು ಸತ್ಯ ತನ್ನ ಬೈಕ್, ಗ್ಯಾರೇಜ್ ಹಾಗೂ ಮನೆಯನ್ನು ಅಡವಿಟ್ಟು ಹಣ ತಂದು, ದುಃಖದಲ್ಲೂ ಖುಷಿ ಖುಷಿಯಾಗಿ ವಿವಾಹ ಕಾರ್ಯಗಳು ಸಸೂತ್ರವಾಗಿ ನಡೆಯುವಂತೆ ಮಾಡಿದ್ದಾಳೆ. ಇದೆ ನಡುವೆ ಅಪ್ಪನ ಸಾವಿಗೆ ಕಾರಣ ತಿಳಿಯಲು ಹೋಗಿ ಅಕ್ಕನ ಮದುವೆಯನ್ನೂ ತನ್ನ ಕೈಯಾರೆ ಹಾಳು ಮಾಡಿದ್ದು, ಚಿದಗ್ನಿ ಭಾಯಿ ಕೊಲೆ ಯತ್ನದ ಆರೋಪದಲ್ಲಿ ಜೈಲು ಪಾಲಾಗಿದ್ದಾಳೆ.

ಇನ್ಮುಂದೆ ದಿವ್ಯಾಗೆ ಸತ್ಯ ತಂಗಿಯಲ್ಲ ಶತ್ರು

ಇನ್ಮುಂದೆ ದಿವ್ಯಾಗೆ ಸತ್ಯ ತಂಗಿಯಲ್ಲ ಶತ್ರು

ಇನ್ನು ಯಾರು ಹೇಗಾದರೂ ಇರಲಿ ತಾನು ಚೆನ್ನಾಗಿರಬೇಕು. ತನ್ನ ಸುಖವೇ ಮುಖ್ಯ ಎನ್ನುವ ದಿವ್ಯಾ, ಸುಳ್ಳಿನ ಕೋಟೆ ಕಟ್ಟಿರುವ ಬಾಲಾನ ಜೊತೆಗೆ ಓಡಿ ಹೋಗಲು ಪ್ಲಾನ್ ಮಾಡಿದ್ದಳು. ಆದರೆ ಸತ್ಯ ಮದುವೆ ಮನೆಗೆ ಎಂಟ್ರಿ ಕೊಟ್ಟು ದೊಡ್ಡ ಅವಾಂತರವೇ ಸೃಷ್ಟಿ ಆದಂತಾಗಿದೆ. ಆದರೆ, ಇದೇ ಸಂದರ್ಭವನ್ನೇ ಸದುಪಯೋಗ ಮಾಡಿಕೊಂಡಿರುವ ದಿವ್ಯಾ ಮದುವೆ ನಿಲ್ಲುವುದಕ್ಕೆ ಸತ್ಯಾಳೇ ಕಾರಣ. ಅವಳಿನ್ನು ನನ್ನ ತಂಗಿಯೇ ಅಲ್ಲ. ಶತ್ರು ಎಂದು ಮನೆಯಲ್ಲಿ ಹೊಸ ತಗಾದೆ ಎತ್ತಿದ್ದಾಳೆ.

ಸತ್ಯಗೆ ಸದ್ಯಕ್ಕಿಲ್ಲ ಬಿಡುಗಡೆ ಸಾಧ್ಯವಿಲ್ಲ

ಸತ್ಯಗೆ ಸದ್ಯಕ್ಕಿಲ್ಲ ಬಿಡುಗಡೆ ಸಾಧ್ಯವಿಲ್ಲ

ಚಿದಗ್ನಿ ಭಾಯಿಗೆ ಗುಂಡು ಹಾರಿದ್ದು, ಕೊಲೆ ಯತ್ನ ನಡೆದಿದೆ. ಈ ವೇಳೆ ಚಿದಗ್ನಿ ಭಾಯಿ ಜೊತೆಗೆ ಇದ್ದದ್ದು ಸತ್ಯ. ಅಸಲಿಗೆ ಸತ್ಯ ತನ್ನ ತಂದೆಯ ಸಾವಿನ ಗುಟ್ಟನ್ನು ಅರಿಯಲು ಚಿದಗ್ನಿ ಭಾಯಿಯನ್ನು ಭೇಟಿ ಮಾಡಿದ್ದಳು. ಈ ವೇಳೆ ಯಾರೋ ಚಿದಗ್ನಿ ಭಾಯಿ ಎಡ ಭುಜದ ಬಳಿ ಗುಂಡು ಹಾರಿಸುತ್ತಾರೆ. ಹೆದರಿದ ಸತ್ಯ ಅಲ್ಲಿಂದ ಕಾಲ್ಕಿಳುತ್ತಾಳೆ. ಆದರೆ, ಚಿದಗ್ನಿ ಭಾಯಿಯನ್ನು ಕೊಲೆ ಮಾಡಲು ಸತ್ಯ ಯತ್ನಿಸಿದ್ದಾಳೆ ಎಂಬ ಆರೋಪದ ಮೇಲೆ ಪೊಲೀಸರು ಆಕೆಯನ್ನೇ ಅರೆಸ್ಟ್ ಮಾಡಿದ್ದಾರೆ. ಸತ್ಯ ತಿಳಿಯ ಬೇಕೆಂದರೆ ಚಿದಗ್ನಿ ಭಾಯಿ ಕೋಮಾದಿಂದ ಹೊರಗೆ ಬರಬೇಕು. ಆದರೆ, ಸತ್ಯಾಳನ್ನು ಬಿಡಿಸಿಕೊಳ್ಳಲು ಆಕೆಯ ಸ್ನೇಹಿತರು ದಾರಿ ತಿಳಿಯದೆ ಒದ್ದಾಡುತ್ತಿದ್ದಾರೆ.

ಸತ್ಯ ಮೇಲೆ ದ್ವೇಷ ಕಾರುತ್ತಿರೋದೇಕೆ?

ಸತ್ಯ ಮೇಲೆ ದ್ವೇಷ ಕಾರುತ್ತಿರೋದೇಕೆ?

ಅಪ್ಪನಿಗೆ ಇನ್ನೂ ಪ್ರಜ್ಞೆ ಬಂದಿಲ್ಲ ಎಂದು ಕಾರ್ತಿಕ್ ಮನೆಯವರು ಚಿಂತೆಯಲ್ಲಿ ಮುಳುಗಿದ್ದಾರೆ. ರೊಚ್ಚಿಗೆದ್ದ ಕಾರ್ತಿಕ್ ಮನದರಸಿ ಸತ್ಯಾಳನ್ನು ನೋಡಲು ಜೈಲಿಗೆ ಬಂದು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾನೆ. ನೀನು ಮಾಡಿದ ಪಾಪ ಕರ್ಮಗಳು ನಿನ್ನನ್ನು ಎಲ್ಲಿಗೆ ತಂದು ಕೂರಿಸಿದೆ ನೋಡಿದ್ಯಾ.? ಎಂದು ಅಣಕಿಸಿದ್ದಾನೆ. ಜೊತೆಗೆ ನಿನ್ನಿಂದಲೇ ಈ ರಾದ್ಧಾಂತ, ಬೇಕಂತಲೇ ನೀನು ಇದನ್ನೆಲ್ಲಾ ಮಾಡಿದ್ಯಾ. ನಿನಗೆ ಮೊದಲಿನಿಂದಲೂ ಚಾಲೆಂಜ್ ಮಾಡಿ ಗೆಲ್ಲೋದು ಎಂದರೆ ಒಂಥರಾ ಕ್ರೇಜ್ ಅಲ್ವಾ.? ಆದರೆ ಈ ಚಾಲೇಂಜ್‌ನಲ್ಲಿ ನೀನು ಗೆದ್ದರೆ, ನೀನು ಲೈಫ್‌ನಲ್ಲಿ ಬೇರೆ ರೀತಿಯ ಶಿಕ್ಷೆ ಅನುಭವಿಸ್ತೀಯಾ ಎಂದು ಚಾಲೆಂಜ್ ಮಾಡಿದ್ದಾನೆ. ನನ್ನ ಅಪ್ಪನಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ನಾನು ಸುಮ್ಮನಿರೊಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾನೆ.

ಮೌನಕ್ಕೆ ಜಾರಿದ ಸತ್ಯ

ಮೌನಕ್ಕೆ ಜಾರಿದ ಸತ್ಯ

ಸದಾ ಇತರರ ಒಳ್ಳೆಯದನ್ನೇ ಬಯಸೋ ಸತ್ಯ, ಈಗ ಎಲ್ಲರ ಕಣ್ನಿಗೂ ಕೆಟ್ಟವಳಾಗಿದ್ದಾಳೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಕೊಲೆ ಯತ್ನದ ಆರೋಪದಲ್ಲಿ ಜೈಲು ಪಾಲಾಗಿದ್ದಾಳೆ. ಅಕ್ಕನ ಮದುವೆ ಚೆನ್ನಾಗಿ ಆಗಲಿ, ಅಕ್ಕ ಬಯಸಿದ್ದೆಲ್ಲಾ ಸಿಗಲಿ ಅನ್ನೋ ಸತ್ಯಾಳೇ ತನ್ನಅಕ್ಕನ ಮದುವೆ ಮುರಿದಳು ಎಂಬ ಆರೋಪವನ್ನೂ ಹೊತ್ತಿದ್ದಾಳೆ. ಇತ್ತ ಅಮುಲ್ ಬೇಬಿ ಮಾತುಗಳನ್ನು ಕೇಳಿ ಗೊಂದಲದಲ್ಲಿರುವ ಸತ್ಯ ಪೂರ್ತಿ ಮೌನಕ್ಕೆ ಜಾರಿದ್ದಾಳೆ. ತಾನೇನು ಮಾಡಿದೆ. ತನ್ನದೇನು ತಪ್ಪು, ಯಾಕೆ ಹೀಗೆಲ್ಲಾ ಆಯ್ತು ಎನ್ನುವ ಚಿಂತೆಯಲ್ಲಿ ಮುಳುಗಿದ್ದಾಳೆ.

More from Filmibeat

English summary
Kannada serial Sathya serial march 20th update. Serial main character Karthik challenged Sathya to save her father
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X