Sathya ; ದಿವ್ಯ ಗೆ ವಿಚ್ಛೇದನ ನೀಡಿದ ಬಾಲ, ಬಾಲ ನಿರ್ಧಾರದಿಂದ ಕಂಗಾಲಾದ ದಿವ್ಯ ..!
ಬಾಲ ಬಹಳ ಸ್ವಾಭಿಮಾನಿಯಾಗಿದ್ದಾನೆ. ಆತ ಮೊದಲೆಲ್ಲ ಕಳ್ಳತನ ಮಾಡಿಯೋ ಅಥವಾ ಬೇರೆಯವರನ್ನು ಸುಲಿಗೆ ಮಾಡಿಯೋ ಜೀವನ ನಡೆಸುತ್ತಿದ್ದ. ದಿವ್ಯಗೆ ಇಲ್ಲದ ಆಸೆಯನ್ನು ತೋರಿಸಿ ಆಕೆಯ ಮನಸ್ಸನ್ನು ನೋಯಿಸುತ್ತಿದ್ದ. ಆದರೆ ಇದೀಗ ಬಾಲ ಖುಷಿಯಾಗಿ ಜೀವನ ನಡೆಸುತ್ತಿದ್ದಾನೆ. ಮೊದಲು ಬಾಲ ಗೆ ದಿವ್ಯ ಡೈವರ್ಸ್ ನೋಟಿಸ್ ಕಳುಹಿಸುತ್ತಾಳೆ. ಅದಾದ ಬಳಿಕ ರುಕ್ಕು ಜೊತೆ ಬಾಲನನ್ನ ನೋಡಿ ಬಹಳ ಕೋಪ ಬರುತ್ತದೆ. ರುಕ್ಕು ಗೆ ಬಾಲ ನನ್ನು ಬಿಟ್ಟು ಕೂಡಲೇ ಬಾರದು. ಆಕೆಯ ಜೊತೆ ಆತನನ್ನು ಬೆರೆಯಲು ಬಿಡಬಾರದು ಎಂದು ಅಂದುಕೊಂಡು ಇರುತ್ತಾಳೆ .
ಆದರೆ ಇದೀಗ ಬಾಲ ಗೆ ದಿವ್ಯ ಉಪಟಳ ಹೆಚ್ಚಾಗಿದೇ. ದಿವ್ಯ ಅಹಂಕಾರವನ್ನು ಮಟ್ಟ ಹಾಕಲೇ ಬೇಕೆಂದು ಬಾಲ ಅಂದುಕೊಂಡು ಇರುತ್ತಾನೆ ಅದೇ ರೀತಿ ಮನೆಗೆ ಬಂದು ಬಾಲ ದಿವ್ಯ ಗೆ ಡೈವರ್ಸ್ ನೋಟಿಸ್ ಕೊಟ್ಟಿದ್ದಾನೆ ಆವತ್ತು ನೀನು ನನಗೆ ಡೈವರ್ಸ್ ನೋಟಿಸ್ ಕೊಟ್ಟಿದ್ದೆ ಅಲ್ವಾ ಅದಕ್ಕೆ ಉತ್ತರ ಇದು ಎಂದು ಹೇಳುತ್ತಾನೆ. ಇದನ್ನು ಕೇಳಿದ ದಿವ್ಯ ಗೆ ಆಕಾಶವೇ ತಲೆ ಕೆಳಗೆ ಆಗಿ ಬಿದ್ದ ಹಾಗೆ ಆಗುತ್ತದೆ.ಏನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗಿ ಹೋಗುತ್ತಾಳೆ.

ಇತ್ತ ದಿವ್ಯ ಬಳಿ ಬಾಲ ನಮ್ಮಿಬ್ಬರ ಸಂಬಂಧ ದೈಹಿಕವಾಗಿ ಯಾವತ್ತೂ ಮುಗಿದು ಹೋಗಿದೆ. ಆದರೆ ಇದೀಗ ಮಾನಸಿಕವಾಗಿಯೂ ನಮ್ಮ ಸಂಬಂಧ ಮುಗಿದು ಹೋಯಿತು ಅಷ್ಟೇ ಎಂದಾಗ ಮನೆಯ ಒಳಗಡೆಯಿಂದ ಜಾನಕಿ ಬಹಳ ಖುಷಿಯಿಂದಲೇ ಬರುತ್ತಾರೆ. ಅಳಿಯಂದಿರೆ ಎಂಥ ಸುದ್ದಿ ಕೊಟ್ರಿ ಇನ್ಮೇಲೆ ಆದರೂ ನೀವು ನೆಮ್ಮದಿಯಿಂದ ಇರಬಹುದು ಎಂದು ಹೇಳುತ್ತಾಳೆ.ಇದನ್ನು ಕೇಳಿದ ದಿವ್ಯ ಗೆ ಆಕಾಶವೇ ಬಿದ್ದಂತೆ ಆಗುತ್ತದೆ. ಹೀಗಾಗಿ ಬಾಲ ನನಗೆ ನಿನಗೂ ನಿಜವಾಗಲೂ ಡೈವರ್ಸ್ ಆಗಿದೆಯಾ? ಎನ್ನುತ್ತಾಳೆ
ಬಾಲನ ಮಾತು ದಿವ್ಯ ಹೃದಯ ಚುಚ್ಚಿದೆ
ಕೈಯಲ್ಲೇ ಪೇಪರ್ಸ್ ಎಲ್ಲಾ ಇದೆಯಲ್ಲ ಚೆಕ್ ಮಾಡು ಸುಳ್ಳು ಹೇಳುತ್ತಿದ್ದೇನೆ ಎಂದಾದರೆ ಅದೆಲ್ಲವನ್ನೂ ಪರಿಶೀಲನೆ ಮಾಡು ಎಂದು ಹೇಳುತ್ತಾನೆ. ಇದನ್ನು ಕೇಳಿದ ದಿವ್ಯ ಗೆ ಏನು ಮಾಡಬೇಕು ಎಂದು ದಿಕ್ಕೇ ತೋಚದ ಹಾಗೆ ಆಗುತ್ತದೆ. ಇತ್ತ ರುಕ್ಕು ಹಾಗೆಯೇ ಗಿರಿಜಮ್ಮ ಕೂಡ ಬಹಳ ಖುಷಿಯಾಗಿ ಇರುತ್ತಾರೆ. ದಿವ್ಯ ಗೆ ಸರಿಯಾಗಿಯೇ ಬುದ್ದಿ ಕಲಿಸಿದ್ದಾನೆ ಈ ಬಾಲ ಎಂದು ಅಂದುಕೊಂಡು ಇರುತ್ತಾರೆ. ಆದರೆ ದಿವ್ಯ ಮಾತ್ರ ಬಹಳ ಆಘಾತಕ್ಕೆ ಒಳಗಾಗಿದ್ದಾಳೆ. ಬಾಲ ಯಾವತ್ತೂ ನನ್ನನ್ನು ಬಿಟ್ಟು ಹೋಗುವುದು ಇಲ್ಲ ಆತ ನನ್ನ ಗಂಡ ಎಂದೆಲ್ಲ ಹೇಳುತ್ತಿದ್ದ ದಿವ್ಯ ಗೆ ಬರ ಸಿಡಿಲು ಎರಗಿದೆ.

ಬಾಲ ಬಳಿ ಬೇಡಿಕೊಂಡ ದಿವ್ಯ
ಬಾಲ ಬಳಿ ದಿವ್ಯ ಅದೆಷ್ಟೇ ಬೇಡಿಕೊಂಡರು ಆತ ಮಾತ್ರ ಕರಗುತ್ತಿಲ್ಲ. ನಾನು ಡೈವರ್ಸ್ ಪೇಪರ್ ಗೆ ಸಹಿ ಹಾಕಿಲ್ಲ ಆದರೂ ಹೇಗೆ ಇದೆಲ್ಲ ಸಾಧ್ಯ ಎಂದು ಆಲೋಚನೆ ಮಾಡುತ್ತಾಳೆ. ಹಾಗೆಯೇ ಬಾಲ ಬಳಿ ಪ್ರಶ್ನೆ ಮಾಡುತ್ತಾಳೆ. ಆದರೆ ಬಾಲ ಮಾತ್ರ ದಿವ್ಯ ಪ್ರತಿ ಪ್ರಶ್ನೆಗಳಿಗೆ ಖಡಕ್ ಆಗಿಯೇ ಉತ್ತರ ನೀಡುತ್ತಾನೆ. ಇನ್ನೂ ದಿವ್ಯ ಮಾತ್ರ ಬಹಳ ಬೇಸರದಲ್ಲಿ ಇರುತ್ತಾಳೆ ಆಕೆಯ ಕಣ್ಣಾಲಿಗಳು ತುಂಬಿ ಬರುತ್ತದೆ. ಇತ್ತ ಗಿರಿಜಮ್ಮ ಜಾನಕಿಯ ಬಳಿ ಹೇಳುತ್ತಾರೆ ಯಾರೇ ಕೆಡುಕು ಮಾಡಿದರು ಕೊನೆಗೆ ಗೆಲ್ಲುವುದು ಯಾವುದು ಒಳ್ಳೆತನ ಅಲ್ವಾ ಎಂದಾಗ ಜಾನಕಿ ಎಲ್ಲರ ಬಾಯಿಗೆ ಸಕ್ಕರೆ ಹಾಕಿ ಖುಷಿ ವ್ಯಕ್ತಪಡಿಸುತ್ತಾಳೆ.
ಗೆಳೆಯರ ಜೊತೆ ಕಿಟ್ಟಿ ಪಾರ್ಟಿ ಆಯೋಜನೆ ಮಾಡಿದ ಸೀತಾ
ಇತ್ತ ಸೀತಾ ಆಕೆಯ ಹಳೆಯದನ್ನೆಲ್ಲ ಕರೆದು ಸತ್ಯಗಾಗಿ ಕಿಟ್ಟಿ ಪಾರ್ಟಿ ಇಟ್ಟುಕೊಂಡು ಇದ್ದಾಳೆ. ಸತ್ಯ ಬಗ್ಗೆ ತುಚ್ಚವಾಗಿ ಮಾತನಾಡಿದವರಿಗೆ ಬಹಳ ಖಡಕ್ ಆಗಿ ಉತ್ತರ ಕೊಟ್ಟಿದ್ದಾಳೆ ಸೀತಮ್ಮ . ನಾನಾ ಸೊಸೆ ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಇದ್ದಳು ಆದರೆ ಇದೀಗ ಪೊಲೀಸ್ ಆಗಿದ್ದಾಳೆ ನನಗೆ ಇದರಿಂದ ಬಹಳ ಹೆಮ್ಮೆ ಇದೆ . ಸತ್ಯ ಜೊತೆ ಕಾಲ ಕಳೆಯಲು ನನಗೆ ಪೊಲೀಸ್ ನವರೆ ಸಮಯ ಕೊಟ್ಟಿದ್ದಾರೆ ಎಂದು ಖುಷಿಯಿಂದ ಹೇಳುತ್ತಾಳೆ. ಸತ್ಯ ಗೆ ಮುಜುಗರ ಆಗುತ್ತದೆ. ಎನು ಮಾಡಬೇಕು ಎಂಬುವುದು ತಿಳಿಯದ ಹಾಗೆ ಆಗುತ್ತದೆ.


Click it and Unblock the Notifications











