Sathya: ಸಂಕ್ರಾಂತಿ ಖುಷಿಯಲ್ಲಿ ಸತ್ಯ, ಕಲಹದಿಂದ ದೂರ ಸರಿದು ಹಬ್ಬದ ಸಂಭ್ರಮದಲ್ಲಿದೆ ಕೋಟೆಮನೆ
ಕೋಟೆ ಮನೆಯ ಮರ್ಯಾದೆ ಉಳಿಸಬೇಕು ಎಂಬುವುದು ಸತ್ಯ ನಿಲುವು. ಆಕೆಗೆ ಮಾವ ಹಾಗೂ ಗಂಡನ ಸಪೋರ್ಟ್ ಇರುತ್ತದೆ. ಆದರೆ ಅತ್ತೆಗೆ ಸತ್ಯ ಮಾಡುವ ಕೆಲಸ ಸ್ವಲ್ಪವೂ ಇಷ್ಟ ಆಗುವುದು ಇಲ್ಲ. ಯಾಕೆಂದರೆ ಆಕೆಗೆ ಕೋಟೆ ಮನೆಯ ಪ್ರತಿಷ್ಠೆಗಿಂತ ಮರ್ಯಾದೆಗಿಂತ ಊರ್ಮಿಳ ಜೀವನ ಮುಖ್ಯವಾಗಿರುತ್ತದೆ.
ಊರ್ಮಿಳಾ ಜೀವನ ಚೆನ್ನಾಗಿ ಇರಬೇಕು ಆಕೆಗೆ ಯಾವುದೇ ತೊಂದರೆ ಲಕ್ಷ್ಮಣ ಆಗಬಾರದು ಎನ್ನುವ ಉದ್ದೇಶ . ಲಕ್ಷ್ಮಣನಿಂದ ಊರ್ಮಿಳಾಗೆ ಮೋಸ ಆಗಿದೆ ಎಂದು ತಿಳಿದರೆ ಊರ್ಮಿಳಾ ಇದನ್ನು ಹೇಗೆ ತೆಗೆದುಕೊಳ್ಳುತ್ತಾಳೆ ಎನ್ನುವುದು ಸೀತಾಗೆ ಭಯ. ಅದಕ್ಕಾಗಿ ವಿಶ್ವಾಸ್‌ಗೆ ಕೂಡ ನಿಜ ವಿಚಾರ ಹೇಳದೆ ಹಾಗೆ ತಾಕೀತು ಮಾಡಿರುತ್ತಾಳೆ ಸತ್ಯ.

ಆ ಬಳಿಕ ವಿಶ್ವಾಸ್ ಕೊಂಚ ಸುಮ್ಮನಿದ್ದರೆ ಕೀರ್ತನಾ ಮಾತ್ರ ಏನಾದರು ಹಿಂಟ್ ಸಿಗುತ್ತಾ ಎಂದು ಕಾಯುತ್ತಾ ಇದ್ದಾಳೆ. ಆಕೆಗೆ ಕೂಡ ಅಮ್ಮ ಸೀತಾನ ಭಯ. ನಾನು ನಿಜ ಹೇಳಿಬಿಟ್ಟರೆ ಅಮ್ಮ ಸುಮ್ಮನೆ ನನ್ನನ್ನು ಬಿಡುವುದು ಇಲ್ಲ ಎಂದುಕೊಂಡು ಇರುತ್ತಾಳೆ. ಆದ ಕಾರಣ ಆಕೆ ಎನು ಮಾತನಾಡದೆ ಸುಮ್ಮನೆ ಇದ್ದು ಬಿಡುತ್ತಾಳೆ. ವಿಶ್ವಾಸ್ ಹಾಗೂ ಕೀರ್ತನಾ ಲಕ್ಷ್ಮಣನ ಮಗನನ್ನು ನೋಡಿ ಜೋರಾಗಿ ನಗುತ್ತಾರೆ.
ವಿಶ್ವಾಸ್ ಮಾತಿಗೆ ಎದುರೇಟು ಕೊಟ್ಟ ಸತ್ಯ
ಲಕ್ಷ್ಮಣನ ಮಗನಿಗೆ ಮಾತು ಬರುವುದು ಇಲ್ಲ ಎಂದು ಕೀರ್ತನಾಹಾಗೂ ಆಕೆಯ ಗಂಡ ವಿಶ್ವಾಸ್ ಪದೇ ಪದೇ ಹೇಳುತ್ತ ಇರುತ್ತಾರೆ. ಇದನ್ನು ಕಂಡ ಲಕ್ಷ್ಮಣ ಎರಡನೇ ಹೆಂಡತಿಗೆ ನೋವಾದರೆ, ಲಕ್ಷ್ಮಣ ಕೀರ್ತನಾ ಮಾತು ಕೇಳಲು ಆಗದೆ ಸರಿಯಾಗಿ ಬೈಯುತ್ತಾರೆ. ಇನ್ನು ಇದನ್ನೆಲ್ಲ ನೋಡಿದ ಸತ್ಯ ಆ ಮಗುವಿನ ಬಳಿ ಅಮ್ಮ ಎನ್ನುವ ಮಾತನ್ನು ಹೇಳುವಂತೆ ಹೇಳಿದಾಗ ಅಮ್ಮ ಎಂದು ಬಹಳ ಕಷ್ಟದಿಂದ ಹೇಳುತ್ತಾನೆ. ಇದನ್ನು ಕೇಳಿ ಮನೆ ಮಂದಿಗೆ ಬಹಳ ಖುಷಿ ಆಗುತ್ತದೆ.
ಸಂಕ್ರಾತಿ ಹಬ್ಬದ ತಯಾರಿಯಲ್ಲಿ ಸತ್ಯ
ಇನ್ನು ಸತ್ಯ ಸಂಕ್ರಾಂತಿ ಹಬ್ಬದ ಖುಷಿಯಲ್ಲಿ ಇರುತ್ತಾಳೆ. ಅದಕ್ಕಾಗಿ ಪೂರ್ವ ತಯಾರಿ ಮಾಡಿಕೊಂಡು ಇರುತ್ತಾಳೆ. ಮಂಜನ ಬಳಿ ಹಬ್ಬಕ್ಕಾಗಿ ಎಲ್ಲಾ ಸಾಮಗ್ರಿಯನ್ನು ತೆಗೆದುಕೊಂಡು ಬರಲು ಹೇಳಿರುತ್ತಾಳೆ. ಮಂಜ ಅದನ್ನೆಲ್ಲ ಮಾರುಕಟ್ಟೆಯಿಂದ ತರುತ್ತಾನೆ. ಇವರಿಬ್ಬರೂ ಸೇರಿ ಹಬ್ಬದ ತಯಾರಿ ಮಾಡಿಕೊಂಡು ಇರುವುದನ್ನು ನೋಡಿ ಎಲ್ಲರೂ ಖುಷಿ ಪಟ್ಟಿದ್ದಾರೆ. ಕೋಟೆ ಮನೆಯಲ್ಲಿ ಕಲಹಗಳೆ ಹೆಚ್ಚಾಗಿದೆ ಆದರೆ ಇದೀಗ ಹಬ್ಬದ ಕಳೆಯೇ ಎದ್ದು ಕಾಣುತ್ತಿದೆ.

ಸೊಸೆಯ ಬಗ್ಗೆ ಸಂತಸ ವ್ಯಕ್ತ ಪಡಿಸಿದ ರಾಮಚಂದ್ರರಾಯರು
ಇದರಿಂದ ಕೋಟೆ ಮನೆಯಲ್ಲಿ ಕಲಹ ಕಾಣದೆ ಸಂತೋಷದಿಂದ ಹಬ್ಬದ ತಯಾರಿ ಮಾಡುತ್ತಾ ಇದ್ದಾರೆ. ಇನ್ನು ಪೂಜೆಗೆ ಎಳ್ಳು, ಬೆಲ್ಲ, ಕಬ್ಬು ತಂದು ಪೂಜೆಗೆ ಎಲ್ಲವೂ ರೆಡಿ ಇದೆ ಎಂದು ಮನೆಯವರ ಬಳಿ ಸತ್ಯ ಆಗಾಗ ಹೇಳುತ್ತಲೇ ಇರುತ್ತಾಳೆ. ಇದನ್ನು ನೋಡಿದ ರಾಮಚಂದ್ರ ರಾಯರು ಅತ್ತೆಗೆ ತಕ್ಕ ಸೊಸೆ ಎಂದು ಬಹಳ ಖುಷಿಯಲ್ಲಿ ಹೇಳುತ್ತ ಇರುತ್ತಾರೆ. ಇನ್ನು ಸೀತಾ ಬಳಿ ರಾಮಚಂದ್ರ ರಾಯರು, ಸತ್ಯ ಬಗ್ಗೆ ಬಹಳ ತಪ್ಪಾಗಿ ಸೀತಾ ತಿಳಿದುಕೊಂಡಿದ್ದೆ. ಆದರೆ ಇದೀಗ ಸತ್ಯ ಎಲ್ಲಾ ಪೂಜೆಯನ್ನು ಮಾಡುತ್ತಾಳೆ. ಹಬ್ಬ ಹರಿದಿನ ಆಚರಣೆ ಮಾಡುತ್ತಾಳೆ. ಇದಕ್ಕಿಂತ ಖುಷಿಯ ಸಂಗತಿ ಮತ್ತೇನು ಇಲ್ಲ ಎಂದು ಹೇಳುತ್ತಾರೆ. ಖುಷಿಯಲ್ಲಿ ಇರುವ ಕೋಟೆ ಮನೆ ಮೇಲೆ ಯಾವ ಕೆಟ್ಟ ದೃಷ್ಟಿ ಬೀಳದೆ ಇರಲಿ ಎಂದು ಧಾರಾವಾಹಿ ವೀಕ್ಷಕರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.


Click it and Unblock the Notifications











