ರಾಕೇಶ್ - ರಿತುಗೆ ಅಡ್ಡಗಾಲು ಹಾಕಿದ ಲಕ್ಷ್ಮಣ; ಸತ್ಯ ಮುಂದಿನ ನಿರ್ಧಾರ ಎನು ?

By Poorva

ಆ ಬಳಿಕ ಊರ್ಮಿಳಾ ಕೂಡ ಬಹಳ ಕೋಪಗೊಂಡಿರುತ್ತಾಳೆ. ಈ ವೇಳೆ ರಿತು ತಂದೆಯ ಬಳಿ ಬಂದು ಅಪ್ಪ ನಾನು ರಾಕೇಶ್ ನನ್ನು ಬಹಳ ಪ್ರೀತಿ ಮಾಡುತ್ತಾ ಇದ್ದೇನೆ ನನಗೆ ಅವನಿಲ್ಲದೆ ಬದುಕಲು ಖಂಡಿತ ಸಾಧ್ಯ ಇಲ್ಲ, ನನಗೆ ಆತ ಬೇಕು ಆತ ಇಲ್ಲದೆ ನನಗೆ ಬದುಕಲು ಸಾಧ್ಯ ಇಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಲಕ್ಷ್ಮಣನಿಗೆ ಬಹಳ ಕೋಪ ಬರುತ್ತದೆ. ಆತ ಮಾತ್ರ ಮಗಳ ಮಾತುಗಳನ್ನು ಕೇಳಿ ಕೋಪಗೊಂಡು ರಿತುಗೆ ಬುದ್ದಿ ಹೇಳುತ್ತಾನೆ ಸತ್ಯ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರ ಮನಸೂರೆಗೊಂಡಿದೆ. ಇದೀಗ ಲಕ್ಷ್ಮಣ ಮಾಡದ ತಪ್ಪಿಗೆ ಸತ್ಯ ಮುಂದೆ ಕ್ಷಮೆ ಯಾಚಿಸುತ್ತಾ ಇದ್ದಾನೆ. ಆದರೆ ಸತ್ಯ ಮಾತ್ರ ಕ್ಷಮಿಸುವ ಯೋಚನೆ ಮಾತ್ರ ಮಾಡುತ್ತಿಲ್ಲ. ಯಾಕೆಂದರೆ ರಾಜೇಶ್ ಭವಿಷ್ಯ ಹಾಳಾಗಿ ಬಿಟ್ಟಿದೆ ಆತನ ಕನಸು ನುಚ್ಚು ನೂರಾಗಿದೆ. ಆತನ ಭವಿಷ್ಯವನ್ನು ಯಾರಿಂದಲೂ ಕಟ್ಟಿಕೊಡಲು ಅಸಾಧ್ಯ. ರಾಕೇಶ್ ಕೈ ಮುರಿದು ಆತನ ಭವಿಷ್ಯ ಹಾಳು ಮಾಡಿದ್ದಾರೆ.

ಇನ್ನು ರಿತು ಹಾಗೂ ರಾಕೇಶ್ ಪ್ರೀತಿ ಉಳಿಯಲಿ ಎಂದು ಸತ್ಯ ಪ್ರಯತ್ನ ಪಡುತ್ತಾ ಇದ್ದಾಳೆ. ಅಷ್ಟರಲ್ಲಿ ಕೀರ್ತನ ತನ್ನ ಚಿಕ್ಕಪ್ಪ ಲಕ್ಷ್ಮಣನ ಬಳಿ ಯಾಕೆ ಹೀಗೆ ಆಡುತ್ತಾ ಇದ್ದೀರಾ ಚಿಕ್ಕಪ್ಪ ಯಾರ ಬಳಿಯೂ ಕ್ಷಮೆ ಯಾಚನೆ ಮಾಡುವ ಆಗತ್ಯ ಇಲ್ಲ ಎಂದು ಹೇಳಿದಾಗ ಲಕ್ಷ್ಮಣ ಕೀರ್ತನ ವಿರುದ್ದ ಕೆರಳಿ ಕೆಂಡವಾಗುತ್ತಾನೆ. ಕೀರ್ತನ ನೀನು ಒಂದು ಮಾತು ಆಡಿದರೆ ನಾನು ಸುಮ್ಮನೆ ಇರುವುದಿಲ್ಲ ನಿನ್ನ ಸಿಗಿದು ಹಾಕಿ ಬಿಡುತ್ತೇನೆ ಎಂದು ಜೋರಾಗಿ ಹೇಳಿದಾಗ ಕೀರ್ತನಗೆ ಏನು ಮಾಡಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾಳೆ.

Kannada serial Sathya written update on 13th April

ಇನ್ನು ಸತ್ಯ ಬಳಿ ಲಕ್ಷಣ ಪರಿ ಪರಿ ಆಗಿ ಕ್ಷಮೆ ಕೇಳುತ್ತಾನೆ. ಹಾಗೆಯೇ ರಾಜೇಶ್ ಬಳಿ ಕ್ಷಮೆ ಕೇಳಿದಾಗ ಸತ್ಯ ಅದಕ್ಕೆ ಒಪ್ಪದೇ ಇರುವುದನ್ನು ಕಂಡು ಕುಪಿತಗೊಂಡ ಲಕ್ಷ್ಮಣ ನನಗೆ ಇಷ್ಟೇ ತಿಳಿದಿರುವುದು ಇನ್ನೂ ಏನು ಆತನಿಗೆ ಕಾಲು ತೊಳೆದು ನಾನು ನನ್ನ ಅಳಿಯ ಎಂದು ಸ್ವೀಕಾರ ಮಾಡಬೇಕಾಗಿತ್ತ ಎಂದಾಗ ಯಾಕೆ ಹಾಗೆ ಆಗಬಾರದ ಎಂದು ಸತ್ಯ ಹೇಳುತ್ತಾಳೆ.

ಇದನ್ನು ಕೇಳಿದ ಲಕ್ಷ್ಮಣ ಸುಮ್ಮನೆ ಆಗದೆ ಕೋಪಗೊಂಡು ನಾನು ನನ್ನ ಮಗಳನ್ನು ಬಹಳ ಮುದ್ದಾಗಿ ಬೆಳೆಸಿದ್ದೇನೆ ಆಕೆಯನ್ನು ಈ ಹುಡುಗನಿಗೆ ಕೊಡುವುದು ಇಲ್ಲ, ಆತನ ಸ್ಟೇಟಸ್ ಏನು ನನ್ನ ಸ್ಟೇಟಸ್ ಏನು ನಾನು ನನ್ನ ಮಗಳನ್ನು ಬಾವಿಗೆ ತಳ್ಳಲು ಇಷ್ಟ ಪಡಲ್ಲ, ದಯಮಾಡಿ ನನ್ನ ಮಗಳನ್ನು ಮದುವೆ ಆಗಬೇಕು ಎಂಬುದು ನಿಮ್ಮ ಆಸೆ ಆದರೆ ಈ ಜನ್ಮದಲ್ಲಿ ಅದು ನೆರವೇರುವುದು ಇಲ್ಲ.. ಎಂದಾಗ ಸತ್ಯ ಎನು ಮಾಡುವುದು ಎಂದು ತೋಚದೇ ಸುಮ್ಮನೆ ಆಗುತ್ತಾಳೆ

ಆದರೆ ರಿತು ಮಾತ್ರ ಅದ್ಯಾವುದನ್ನು ತಲೆಗೆ ಹಾಕಿಕೊಳ್ಳದೆ ನನಗೆ ರಾಕೇಶ್ ಬೇಕು ಎಂದು ಹಠ ಹಿಡಿದಿದ್ದಾಳೆ. ಇನ್ನು ರಾಕೇಶ್ ಅಳುತ್ತಾ ಇರುತ್ತಾನೆ. ರಿತು ಬಳಿ ರಾಕಿ ಆಕೆಗೆ ಹೇಳಬೇಕಾದ ಎಲ್ಲಾ ಬುದ್ದಿ ಮಾತನ್ನು ಹೇಳುತ್ತಾನೆ . ಆದರೆ ರಾಕೇಶ್ ಮಾತು ಕೇಳದೆ ಇದೀಗ ಇಬ್ಬರು ಪೇಚಾಟಕ್ಕೇ ಸಿಲುಕುತ್ತಾರೆ.‌ ಇನ್ನು ಊರ್ಮಿಳಾ ಮಾತ್ರ ರಿತು ಕೆನ್ನೆಗೆ ಹೊಡೆಯುತ್ತಾಳೆ. ತಂದೆ ಬಳಿ ಬಂದು ನನಗೆ ಈ ಹುಡುಗ ಇಷ್ಟ ಎನ್ನುವ ಮಟ್ಟಿಗೆ ಬೆಳೆದೆ ಅಲ್ವಾ ಎಂದು ಜೋರಾಗಿ ಹೇಳುತ್ತಾಳೆ. ಇದನ್ನು ನೋಡಿದ ಸತ್ಯ ಗೆ ಶಾಕ್ ಆಗುತ್ತದೆ.

ಇನ್ನು ಲಕ್ಷ್ಮಣನ ಬಳಿ ಕಾರ್ತಿಕ್ ಕೂಡ ಮಾತನಾಡುತ್ತಾನೆ. ಆದರೆ ಕಾರ್ತಿಕ್ ಮಾತನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳದೆ ರಿತು ರಾಕೇಶ್ ನನ್ನು ದೂರ ಮಾಡಲು ನಿರ್ಧಾರ ಮಾಡುತ್ತಾರೆ.‌

More from Filmibeat

English summary
Kannada serial satya written updated on 13th april
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X