Sathya: ರಾಕೇಶ್‌ಗಾಗಿ ಮನೆಯವರನ್ನು ಎದುರು ಹಾಕಿಕೊಂಡ ಸತ್ಯ

ಸತ್ಯ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನಸೂರೆಗೊಳ್ಳುವ ಹಾಗೆ ಮಾಡುತ್ತಿದೆ. ಇದೀಗ ರಾಕೇಶ್ ರಿತು ಪ್ರೀತಿಗಾಗಿ ಸತ್ಯ ಮನೆ ಮಂದಿಯನ್ನು ಎದುರು ಹಾಕಿಕೊಂಡು ಮಾತನಾಡುತ್ತಾ ಇರುತ್ತಾಳೆ. ಇನ್ನು ಹೆಂಡತಿಯ ಮಾತಿನಲ್ಲಿ ಇರುವ ಸತ್ಯ ಅಂಶವನ್ನು ತಿಳಿದ ಕಾರ್ತಿಕ್ ಸತ್ಯ ಪರವಾಗಿ ನಿಲ್ಲುತ್ತಾನೆ.
ಇನ್ನು ರಿತು ರಾಕೇಶ್ ಪ್ರೀತಿಯನ್ನ ಲಕ್ಷ್ಮಣನ ಮುಂದೆ ಹೇಳುತ್ತಾಳೆ. ಕಾರ್ತಿಕ್ ಹಾಗೆಯೇ ಅವರಿಬ್ಬರೂ ಬೇರೆ ಬೇರೆ ಆದರೆ ಬಹಳ ಕಷ್ಟ ಇದೆ ಎಂದೆಲ್ಲ ಹೇಳುತ್ತಾನೆ. ನಾನು ಸತ್ಯ ಮದುವೆ ಆಗಿದ್ದು ಆಕಸ್ಮಿಕ ಆದರೆ ರಿತು ಹಾಗಲ್ಲ ಆಕೆ ಆತನನ್ನು ಬಹಳ ಪ್ರೀತಿ ಮಾಡುತ್ತಾ ಇದ್ದಾಳೆ ಎಂದೆಲ್ಲ ಹೇಳುತ್ತಾನೆ.
ಇದನ್ನು ಕೇಳಿದ ಲಕ್ಷ್ಮಣ ಯಾವ ಕಾರಣಕ್ಕೂ ಕೂಡ ಮದುವೆ ಆಗಲು ನಾನು ಒಪ್ಪಿಗೆ ನೀಡಲ್ಲ ನನ್ನ ಮಗಳ ಮದುವೆ ನಿರ್ಧಾರವನ್ನು ನನಗೆ ಬಿಡಿ, ಆಕೆಗೆ ಏನು ಇಷ್ಟ ಏನು ಇಷ್ಟ ಇಲ್ಲ ಎನ್ನುವುದು ನನಗೆ ಬಹಳ ಚೆನ್ನಾಗಿ ತಿಳಿದಿದೆ, ನೀವು ನನಗೆ ಹೇಳಿ ಕೊಡುವ ಅಗತ್ಯ ಇಲ್ಲ, ನನ್ನ ಮಗಳ ಮದುವೆ ವಿಚಾರದಲ್ಲಿ ಯಾರೂ ಮೂಗು ತೂರಿಸುವುದು ಬೇಡ ಎನ್ನುತ್ತಾಳೆ.
ಈ ವೇಳೆ ಸತ್ಯ ರಾಕೇಶ ನಾಳೆ ಐ ಎ ಎಸ್ ಆಫೀಸರ್ ಆದ ಬಳಿಕ ಕೂಡ ನೀವು ಆತನನ್ನು ರಿಜೆಕ್ಟ್ ಮಾಡುತ್ತೀರಾ ಎಂದೆಲ್ಲ ಕೇಳಿದಾಗ ಲಕ್ಷಣ ಸ್ವಲ್ಪ ಹೊತ್ತು ತಡವರಿಸಿ ಆತ ಸಿಎಂ ಆದರೂ ನಾನು ಆತನಿಗೆ ನನ್ನ ಮಗಳು ಕೊಡುವುದಿಲ್ಲ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಆತನ ಹಿಂದೆ ಮನೆ ಮಂದಿ ಹೋಗುತ್ತಾರೆ.
ಇನ್ನು ಆತನ ಗೆಳೆಯರು ಕೂಡ ಅಲ್ಲಿಂದ ಹೋಗುತ್ತಾರೆ. ಇದನ್ನೆಲ್ಲ ನೋಡಿದ ಸತ್ಯಗೆ ಬಹಳ ಬೇಸರ ಆಗುತ್ತದೆ. ಇನ್ನು ಸತ್ಯ ಮುಖ ನೋಡಿ ಕೀರ್ತನ ಜೋರಾಗಿ ನಗುತ್ತಲೇ ಇರುತ್ತಾಳೆ. ಇದನ್ನು ನೋಡಿದ ಸತ್ಯ ಕೆರಳುತ್ತಲೇ ಇರುತ್ತಾಳೆ. ಕೀರ್ತನ ಮಾತು ಕೇಳಿದ ಸತ್ಯ ಬಹಳ ಕೋಪಗೊಂಡಿರುತ್ತಾಳೆ.
ಕಾರ್ತಿಕ್ ಸತ್ಯ ಮುಖ ನೋಡಿ ಬಾ ಸತ್ಯ ಬೇಡ ನೀನು ಏನು ಕೆಟ್ಟ ಕೆಲಸ ಮಾಡಬೇಡ ಎಂದೆಲ್ಲ ಹೇಳಿದಾಗ ಅಮುಲ್ ಬೇಬಿ ನೀನು ಹೋಗು ನಾನು ನಿನ್ನ ಹಿಂದೆ ಬಂದೆ ಎಂದು ಹೇಳುತ್ತಾಳೆ. ಆ ಬಳಿಕ ಕೀರ್ತನ ಹತ್ತಿರ ಬಂದು ನನ್ನ ತಮ್ಮನ ಕೈ ಮುರಿದ ನೀನು ಯಾರೇ ಎಂದು ಹೇಳಿ ಬಲವಾಗಿ ಕೀರ್ತನ ಕೆನ್ನೆಗೆ ಹೊಡೆಯುತ್ತಾಳೆ. ಇದನ್ನು ನೋಡಿದ ಕೀರ್ತನ ಬಹಳ ಕೋಪಗೊಳ್ಳುತ್ತಾಳೆ.
ಕೀರ್ತನ ಮಾತಿಗೆ ಆಕೆ ಕಿಂಚಿತ್ತೂ ಕುಮ್ಮಕ್ಕು ನೀಡದೆ ಅಲ್ಲಿಂದ ಹೋಗುತ್ತಾಳೆ. ಸತ್ಯ ಕಾರ್ತಿಕ್ ನೀನು ನನಗೆ ಸಿಕ್ಕಿರುವುದು ನನ್ನ ಪುಣ್ಯ ಯಾವತ್ತೂ ನೀನು ನನ್ನ ಬೆಂಬಲಕ್ಕೆ ಇರುತ್ತೀಯಾ ಎಂದಾಗ ಕಾರ್ತಿಕ್ ಬಹಳ ಪ್ರೀತಿಯಿಂದ ಸತ್ಯ ಬಳಿ ಬರುತ್ತಾನೆ. ನೀನು ನನ್ನ ಹೆಂಡತಿ ಸತ್ಯ, ನಿನಗಾಗಿ ನಾನು ಯಾವತ್ತೂ ಏನು ಮಾಡಲು ಸಿದ್ದ ಎಂದಾಗ ಸತ್ಯ ಕಾರ್ತಿಕ್ ಮಾತಿಗೆ ಕರಗಿ ನೀರಾಗಿ ಹೋಗುತ್ತಾಳೆ . ಮನೆಯವರೆಲ್ಲ ಸತ್ಯ ವಿರುದ್ದ ತಿರುಗಿ ಬಿದ್ದಿದ್ದಾರೆ. ಆದರೆ ಸತ್ಯ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಇರುತ್ತಾಳೆ.


Click it and Unblock the Notifications











