Sathya: ಪರೀಕ್ಷೆ ಬರೆಯುವ ಖುಷಿಯಲ್ಲಿದ್ದ ಸತ್ಯಳ ಕೈ ಮೇಲೆ ಕಲ್ಲು ಹಾಕಿದ ಕೀರ್ತನಾ!

By Poorva

ಸತ್ಯ ಧಾರವಾಹಿಯಲ್ಲಿ ಸತ್ಯ ತನ್ನ ಓದಿನ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿದ್ದಾಳೆ. ಅದಕ್ಕೋಸ್ಕರ ಏನು ಬೇಕಾದರೂ ಮಾಡಲು ಸಿದ್ಧಳಿದ್ದಾಳೆ. ಈ ಮುಂಚೆ ಸತ್ಯ ಓದುವುದೇ ಬೇಡ ಎಂದು ಹೇಳುತ್ತಿದ್ದ ಸೀತಾ ಕೂಡ ಅವಳಿಗೆ ಬೆಂಬಲ ನೀಡುತ್ತಿದ್ದಾಳೆ. ಸೀತಾಗೆ ಸತ್ಯ ಪೋಲಿಸ್ ಆಗುವುದು ಇಷ್ಟವಿಲ್ಲ ಪೊಲೀಸ್ ಆದರೆ ಆಕೆಗೆ ಎಲ್ಲಿ ತೊಂದರೆ ಆಗಿ ಬಿಡುತ್ತದೆ ಎನ್ನುವ ಯೋಜನೆಯಿಂದಾಗಿ ಸೀತಾ ಈ ನಿರ್ಧಾರವನ್ನು ತೆಗೆದುಕೊಂಡಿದ್ದಳು.

ಸೀತಾ ಮಾತಿಗೆ ಸತ್ಯ ಕೂಡ ಆಯ್ತು ನಾನು ಓದುವುದಿಲ್ಲ ಎಂದು ಹೇಳುತ್ತಾಳೆ. ಆದರೆ ಸತ್ಯಗೆ ಮಾತ್ರ ನಾನು ಓದಿ ದೊಡ್ಡ ವ್ಯಕ್ತಿಯಾಗಬೇಕು ಎನ್ನುವ ಆಸೆ ಇರುತ್ತದೆ .ಆದರೆ ಸೀತಾ ಮಾತ್ರ ಆ ಆಸೆಗೆ ತಣ್ಣೀರು ಎರಚಿರುತ್ತಾಳೆ. ಆ ಬಳಿಕ ಮಗನ ಸಂತೋಷಕ್ಕೆ ಹಾಗೂ ಸತ್ಯ ಸಂತೋಷಕ್ಕೆ ಆಯಿತು ಎಂದು ಒಪ್ಪಿಕೊಳ್ಳುತ್ತಾಳೆ.

Kannada Serial Sathya written update on 1st December

ಇದಾದ ನಂತರ ಮನೆಯಲ್ಲಿ ಖುಷಿ ತುಂಬಿರುತ್ತದೆ. ಇನ್ನು ಸತ್ಯ ಖುಷಿಯನ್ನ ನೋಡಲಾಗದ ಪರಿಸ್ಥಿತಿ ಕೀರ್ತನಾಳದ್ದು . ಕೀರ್ತನಾಗೆ ಸತ್ಯ ಓದುವುದು ಇಷ್ಟ ಇಲ್ಲ. ಯಾಕೆ ಓದಿ ಏನಾಗಬೇಕು ಎನ್ನುವುದೇ ಕೀರ್ತನಾ ವಾದ. ಕೀರ್ತನಾಗೆ ಸತ್ಯ ಪೊಲೀಸಾಗುವುದು ಸ್ವಲ್ಪವೂ ಇಷ್ಟ ಇರುವುದಿಲ್ಲ ಅದಕ್ಕಾಗಿ ಸತ್ಯ ಪರೀಕ್ಷೆಗೆ ಕೂರದ ಹಾಗೆ ಮಾಡುತ್ತೇನೆ ಎಂದು ಹೇಳುತ್ತಿರುತ್ತಾಳೆ.

ಸತ್ಯಗೆ ಓದಲು ಹೇಳುತ್ತಿರುವ ಊರ್ಮಿಳಾ

ಇನ್ನು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೀರ್ತನಾ ಸತ್ಯ ಬಗ್ಗೆ ಯೋಚನೆ ಮಾಡುತ್ತಿರುತ್ತಾಳೆ. ಆ ವೇಳೆ ಸತ್ಯ ಅಲ್ಲಿಗೆ ಬರುತ್ತಾಳೆ. ಊರ್ಮಿಳಾ ಸತ್ಯಳನ್ನು ನೋಡಿ ನೀನು ಇಲ್ಲಿಗೆ ಯಾಕೆ ಬರಲು ಹೋದೆ ನೀನು ಹೋಗು ಓದಿಕೋ ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿದ ಸತ್ಯ ಇಲ್ಲ ನಾನು ಕೂಡ ನಿಮಗೆ ಸ್ವಲ್ಪ ಸಹಾಯವನ್ನು ಮಾಡುತ್ತೇನೆ. ನನಗೆ ಓದಿ ಓದಿ ಸ್ವಲ್ಪ ಬೋರ್ ಆಗಿದೆ ಎಂದೆಲ್ಲ ಹೇಳುತ್ತಾಳೆ.

Kannada Serial Sathya written update on 1st December

ಸೀತಾ ಮಾತಿಗೆ ಸತ್ಯ ಡೋಂಟ್ ಕೇರ್

ಊರ್ಮಿಳ ಅವಳ ಮಾತನ್ನು ಕೇಳಲು ಸಿದ್ಧವಿರುವುದಿಲ್ಲ. ಇದೆಲ್ಲಾ ನೋಡಿ ಕೀರ್ತನಾಗೆ ಹೊಟ್ಟೆ ಉರಿಯಾಗಿರುತ್ತದೆ . ಅಷ್ಟೊತ್ತಿಗೆ ಅಲ್ಲಿಗೆ ಸೀತಾ ಬರುತ್ತಾಳೆ. ಯಾಕೆ ನೀವಿಬ್ಬರೂ ಇಷ್ಟಕ್ಕೊಂದು ಜಗಳ ಆಡುತ್ತಾ ಇದ್ದೀರಾ ಏನಾದರೂ ಸಮಸ್ಯೆ ಆಯ್ತಾ ಎಂದೆಲ್ಲಾ ಕೇಳಿದಾಗ ಊರ್ಮಿಳ, ಅಕ್ಕ ಸತ್ಯಳನ್ನ ನಾನು ಓದಲು ಹೇಳುತ್ತಿದ್ದೆ. ಆದರೆ ಸತ್ಯ ಮಾತ್ರ ಓದಿನತ್ತ ಗಮನ ಹರಿಸುತ್ತಿಲ್ಲ ಎಂದು ಹೇಳಿದಾಗ ಸೀತಾ ಸತ್ಯಳನ್ನು ಗುರಾಯಿಸಿ ನೋಡುತ್ತಾಳೆ.

ಕೀರ್ತನಾ ಮರ್ಯಾದೆ ತೆಗೆದ ಸೀತಾ

ಸೀತಾ ಸತ್ಯನ ಬಳಿ ನೀನು ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ತೆಗೆದರೆ ಮತ್ತೆ ನೋಡಿಕೋ. ನಾನು ನಾನಾಗಿರುವುದಿಲ್ಲ ಎಂದೆಲ್ಲಾ ಜೋರಾಗಿ ಹೇಳುತ್ತಾಳೆ. ಅದಕ್ಕೆ ಸತ್ಯ ನಾನು ಖಂಡಿತವಾಗಿಯೂ ಮೊದಲನೇ ಸ್ಥಾನ ಬಂದೇ ಬರುತ್ತೇನೆ ಎಂದಾಗ ಕೀರ್ತನಾ , ಹೌದ್ ಹೌದು ನೀನು ಪಾಸಾದ ಹಾಗೆ ಎಂದು ವ್ಯಂಗ್ಯವಾಡುತ್ತಾಳೆ. ಇದನ್ನು ಕೇಳಿದ ಸೀತಾ, ಕೀರ್ತನಾ ನೀನು 10ನೇ ಕ್ಲಾಸ್ ನಲ್ಲಿ ತೆಗೆದ ಅಂಕಗಳು ಎಷ್ಟು ಎಂದು ಕೇಳಿ ಕೀರ್ತನಾಳನ್ನು ಮುಜುಗರಕ್ಕ ಈಡು ಮಾಡುತ್ತಾಳೆ. ಇದನ್ನು ಕೇಳಿದ ಸತ್ಯ ಮಾತ್ರ ಜೋರಾಗಿ ನಗುತ್ತಾಳೆ.

ಸತ್ಯ ಕೈಗೆ ಕಲ್ಲು ಬೀಳಿಸಿದ ಕೀರ್ತನಾ

ಆ ಬಳಿಕ ಸೀತಾ ಅಲ್ಲಿಂದ ಹೋಗುತ್ತಾಳೆ. ಸೀತಾ ಹೋದಾಗ ಊರ್ಮಿಳ ಬಳಿ ಕೀರ್ತನಾಳನ್ನು ಜಾಡಿಸುತ್ತಾಳೆ ಸತ್ಯ. ಇನ್ನು ಊರ್ಮಿಳ ಸ್ವಲ್ಪ ಕೆಲಸವಿದೆ ಎಂದು ಸತ್ಯ ಬಳಿ ಹಾಲು ನೋಡಿಕೊಳ್ಳಲು ಹೇಳಿ ಹೋಗುತ್ತಾಳೆ. ಆಗ ಸತ್ಯ ಕೈಯಲ್ಲಿ ಇದ್ದ ಪುಸ್ತಕ ಕೆಳಗೆ ಬೀಳುತ್ತದೆ. ಪುಸ್ತಕ ಎತ್ತಿಕೊಳ್ಳುವ ಭರದಲ್ಲಿ ಸತ್ಯ ಇರುತ್ತಾಳೆ ಈ ವೇಳೆ ಕೀರ್ತನ ಉಪಾಯದಿಂದ ಅಲ್ಲಿಯೇ ಇದ್ದ ದೊಡ್ಡ ಕಲ್ಲನ್ನು ಆಕೆಯ ಕೈ ಮೇಲೆ ಎತ್ತಿ ಹಾಕುತ್ತಾಳೆ. ಸತ್ಯ ಕೈ ನೋವಿನಿಂದ ಜೋರಾಗಿ ಅರಚುತ್ತಾಳೆ.

More from Filmibeat

English summary
Sathya serial 01th December episode written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X