Sathya serial: ಕಾರ್ತಿಕ್ ಮಾತಿಗೆ ನೊಂದುಕೊಂಡ ಸೀತಾ

By Poorva

ಕೀರ್ತನ ಹಾಗೂ ಸುಹಾಸ್ ಸತ್ಯ ಜೀವನದಲ್ಲಿ ಬೇಕಾದಷ್ಟು ಆಟ ಆಡಿದ್ದಾರೆ ಹಾಗೆಯೇ ಆಟ ಆಡುತ್ತ ಇದ್ದಾರೆ. ಸತ್ಯ ಕಾರ್ತಿಕ್ ಒತ್ತಾಯದ ಮೇರೆಗೆ ತನ್ನ ಹಿಂದಿನ ಬದುಕಿನಲ್ಲಿ ಹಾಕುತ್ತ ಇದ್ದ ಬಟ್ಟೆಯನ್ನು ಹಾಕಲು ಹೇಳುತ್ತಾನೆ. ಆದರೆ ಸತ್ಯ ಕಾರ್ತಿಕ್ ಅದೆಷ್ಟೇ ಹೇಳಿದರೂ ಅದನ್ನು ಹಾಕಲು ಒಪ್ಪದೇ ಸುಮ್ಮನೆ ಇರುತ್ತಿದ್ದಳು. ಆದರೆ ಈ ಬಾರಿ ಮಾತ್ರ ಕಾರ್ತಿಕ್ ಬಹಳ ಒತ್ತಾಯ ಮಾಡುತ್ತಾನೆ. ದಯಮಾಡಿ ಈ ಡ್ರೆಸ್ ಅನ್ನು ಹಾಕಿಕೋ ಎಂದು ಒತ್ತಾಯ ಕೂಡ ಮಾಡುತ್ತಾನೆ. ಆ ಕಾರಣಕ್ಕೆ ಆ ಡ್ರೆಸ್ ಅನ್ನ ಹಾಕಿಕೊಳ್ಳುತ್ತಾ ಇರುತ್ತಾಳೆ

ಸತ್ಯ ಹಾಗೂ ಕಾರ್ತಿಕ್ ಬೆನ್ನ ಹಿಂದೆಯೇ ಸುಹಾಸ್ ಬಂದಿರುವುದು ಇಬ್ಬರಿಗೂ ತಿಳಿದೇ ಇರುವುದಿಲ್ಲ. ಅನೇಕ ಸಂಕಷ್ಟಗಳನ್ನು ಎದುರಿಸಿ ಅವರು ಅವಾರ್ಡ್ ಕಾರ್ಯಕ್ರಮ ಕೂಡ ಗೆದ್ದುಕೊಳ್ಳುತ್ತಾರೆ. ಇದನ್ನು ಸಹಿಸಿಕೊಳ್ಳಲು ಆಗದ ಕೀರ್ತನ ತನ್ನ ತಾಯಿಯ ಬಳಿ ಸತ್ಯ ಬಗ್ಗೆ ಇಲ್ಲಸಲ್ಲದನ್ನು ಹೇಳಿ ಅವರ ತಲೆ ಕೆಡಿಸುತ ಇರುತ್ತಾಳೆ. ಇನ್ನು ಆಕೆ ಅಲ್ಲಿ ತೊಟ್ಟಿದ್ದ ಬಟ್ಟೆಯ ಫೋಟೋ ತೋರಿಸಿ ಸೀತಾ ಕೋಪಕ್ಕೆ ತುಪ್ಪ ಸುರಿಯುತ್ತಾ ಇರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಕಾರ್ತಿಕ್ ಹಾಗೂ ಸತ್ಯ ಬರುತ್ತಾರೆ.

Kannada serial Sathya written update on 27th March

ಸತ್ಯ ಕೊಂಚ ಅಳುಕಿನಿಂದಲೇ ಬರುತ್ತಾಳೆ. ಆದರೆ ಕಾರ್ತಿಕ್ ಸತ್ಯಗೆ ಧೈರ್ಯ ತುಂಬುತ್ತಾ ಈ ಬಾರಿ ನಾವೇ ಕಪ್ ಗೆದ್ದಿದ್ದೇವೆ ಎಂದೆಲ್ಲ ಹೇಳುತ್ತಾನೆ. ಇನ್ನು ಅವಾರ್ಡ್ ತೆಗೆದುಕೊಂಡು ಮನೆಯ ಒಳಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ಸತ್ಯಾಳನ್ನ ಸೀತಾ ತಡೆಯುತ್ತಾಳೆ. ಇದನ್ನು ನೋಡಿ ಸತ್ಯಗೆ ಕೊಂಚ ಗಾಬರಿ ಆಗುತ್ತದೆ. ಬಳಿಕ ಸತ್ಯಗೆ ಸೀತಾ ಬಾಯಿಗೆ ಬಂದ ಹಾಗೆ ಬಯ್ಯುತ್ತಾ ಇರುತ್ತಾಳೆ. ಸೀತಾ ನೀನು ಹೇಳಿದ ಹಾಗೆಯೇ ಹಿಂದಿನ ಹಾಗೆ ಡ್ರೆಸ್ ಹಾಕಲ್ಲ ಈ ಮನೆಗೆ ತಕ್ಕನ ಹಾಗೆ ಇರುತ್ತೇನೆ ಎಂದೆಲ್ಲ ಹೇಳಿ ಇವಾಗ ಇಂಥ ಬಟ್ಟೆ ಹಾಕಿಕೊಂಡು ಓಡಾಡುತ್ತಾ ಇದ್ದೀಯಾ ಅಲ್ವಾ ನಾಚಿಕೆ ಆಗಲ್ವಾ ನಿನಗೆ ಎಂದಾಗ ಸತ್ಯ ಮಾತ್ರ ಮೌನ ವಹಿಸುತ್ತಾಳೆ.

ತನ್ನದಲ್ಲದ ತಪ್ಪಿಗೆ ಸತ್ಯ ಅತ್ತೆಯ ಕೈಯಲ್ಲಿ ಬೈಗುಳ ಕೇಳುತ್ತಲೇ ಇರುತ್ತಾಳೆ. ಇದನ್ನೆಲ್ಲ ನೋಡಿದ ಕೀರ್ತನ ಹಾಗೂ ಸುಹಾಸ್ ಎಂಜಾಯ್ ಮಾಡುತ್ತಾ ಇರುತ್ತಾರೆ. ಇನ್ನು ಸೀತಾ ಜೊತೆ ಕಾರ್ತಿಕ್ ಚಿಕ್ಕಪ್ಪ ಕೂಡಾ ಸತ್ಯಗೆ ಬಯ್ಯುತ್ತಾರೆ . ಇದನ್ನು ಕೇಳಿಸಿಕೊಂಡ ಸತ್ಯ ಚಿಕ್ಕ ಅತ್ತೆ ಸತ್ಯ ಕಾರ್ತಿಕ್ ಒಳಗೆ ಬನ್ನಿ ಆಮೇಲೆ ಮಾತನಾಡೋಣ ಎಂದು ಹೇಳುತ್ತಾರೆ. ಇದನ್ನು ಕೇಳಿದ ಸತ್ಯ ಮಾತ್ರ ಬಹಳ ಬೇಸರ ಪಟ್ಟುಕೊಂಡು ಇರುತ್ತಾಳೆ.

ಇನ್ನು ಸತ್ಯಗೆ ಯಾಕೆ ಬಯ್ಯುತ್ತಾ ಇದ್ದಾರೆ ಎಂಬುವುದು ಕಾರ್ತಿಕ್‌ಗೆ ಸರಿಯಾಗಿ ತಿಳಿದಿರಲಿಲ್ಲ. ಆ ಬಳಿಕ ಕಾರ್ತಿಕ್ ಆ ಫೋಟೋ ನೋಡಿ ಜೋರಾಗಿ ನಗುತ್ತಾನೆ. ಇದಕ್ಕೆಲ್ಲ ಇಷ್ಟೆಲ್ಲ ಡ್ರಾಮಾ ಮಾಡಬೇಕಾ ಆ ಫೋಟೋದಲ್ಲಿ ಏನಾದರು ತಪ್ಪಿದೆಯ ನಾನು ಆಕೆಯ ಜೊತೆ ಆ ಬಟ್ಟೆ ಧರಿಸಿಕೊಂಡು ಬರಲು ಹೇಳಿದ್ದು ಆ ಕಾರಣಕ್ಕೆ ಸತ್ಯ ಆ ಬಟ್ಟೆ ಧರಿಸಿದ್ದು ಎಂದು ಹೇಳುತ್ತಾನೆ. ಇದನ್ನು ಕೇಳಿದ ಸೀತಾ ಇನ್ನೂ ಬಯ್ಯುತ್ತಾ ಇರುತ್ತಾಳೆ. ಆತನಿಗೆ ಬುದ್ದಿ ಇಲ್ಲ. ನಿನಗೂ ಕೂಡ ಬುದ್ದಿ ಇಲ್ಲ ಎಂದು ಹೇಳುತ್ತ ಇರುತ್ತಾಳೆ.

Kannada serial Sathya written update on 27th March

ಇದನ್ನು ಕೇಳಿದ ಸತ್ಯ ಅಳುತ್ತಾಳೆ. ಇದರಿಂದ ಕೋಪಗೊಂಡ ಕಾರ್ತಿಕ್ ಏನಮ್ಮ ನಾವು ಅವಾರ್ಡ್ ಗೆದ್ದ ಖುಷಿಯಲ್ಲಿ ಇದ್ದೆವು ಅಷ್ಟು ಬೇಗ ನಮ್ಮ ಖುಷಿಯನ್ನೆ ಕಿತ್ತುಕೊಂಡರಲ್ಲ, ಸತ್ಯ ಆ ಬಟ್ಟೆ ಹಾಕಿಕೊಂಡದ್ದು ನಾನು ಆಕೆಗೆ ಹೇಳಿದರಿಂದ, ನಾನು ಆಕೆಯ ಗಂಡ ನಾನೇ ಇದನ್ನು ಪ್ರಶ್ನೆ ಮಾಡುತ್ತಿಲ್ಲ, ಯಾರೋ ಮೂರನೇಯವರು ಕದ್ದು ಫೋಟೋ ತೆಗೆದು ನಿನಗೆ ತೋರಿಸಿದ್ದಕ್ಕೆ ನಿನಗೆ ಅಷ್ಟು ಸಿಟ್ಟು ಬಂತಾ ಸತ್ಯ ಏನು ಬೇರೆಯವಳಲ್ಲ, ಆಕೆ ನಮ್ಮ ಮನೆಯವಳು, ಸತ್ಯ ಏನೇ ಮಾಡಿದರೂ ಅದರಲ್ಲಿ ಏನಾದರು ಒಳ್ಳೆಯದು ಇರುತ್ತದೆ, ಆಕೆ ಗಂಡ ನಾನು, ಬೇಕು ಬೇಕೆಂದ ಹಾಗೆ ಆಕೆಗೆ ಬಯ್ಯಲು ಯಾರು ಬರುವುದು ಬೇಡ ಯಾರೋ ಮೂರನೇಯವರು ಮಾಡಿದ ಪಿತೂರಿಯಿಂದ ಹೀಗೆ ಆಡುತ್ತಿದ್ದರೆ ಅದನ್ನು ಇಲ್ಲಿಗೆ ಸ್ಟಾಪ್ ಮಾಡಿ ಎಂದು ಖಡಕ್ ಆಗಿ ಹೇಳುತ್ತಾನೆ. ಕಾರ್ತಿಕ್ ಮಾತಿಗೆ ಸೀತಾ ಕೀರ್ತನ ಶಾಕ್ ಆಗುತ್ತಾರೆ. ಕಾರ್ತಿಕ್ ತನ್ನ ಹೆಂಡತಿಯನ್ನು ಕರೆದುಕೊಂಡು ರೂಮ್ ನತ್ತ ಹೋಗುತ್ತಾನೆ.

More from Filmibeat

English summary
Kannada serial satya written updated on 27th March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X