Sathya: ಸತ್ಯ ಮೇಲೆ ಕುಪಿತಗೊಂಡ ಸೀತಾ; ಕೀರ್ತನಾ ಕಳ್ಳಾಟ ಸೀತಾಗೆ ತಿಳಿಯುತ್ತಾ?

By Poorva

ಸತ್ಯ ಧಾರವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನಸ್ಸನ್ನು ಸೆಳೆಯಲು ಪ್ರಯತ್ನ ಮಾಡುತ್ತಿದೆ. ಇದೀಗ ಸ್ತೋತ್ರ ಪಠಣ ಮಾಡಲೂ ಕೀರ್ತನ ಹಾಗೂ ಸತ್ಯ ಗೆ ಟಾಸ್ಕ್ ಕೊಟ್ಟಿರುತ್ತಾರೆ ಇದನ್ನು ನೋಡಿದ ಕೀರ್ತನ ಹೇಗಾದರೂ ಮಾಡಿ ಇದರಲ್ಲಿ ಗೆಲ್ಲಲೇ ಬೇಕು ಎಂದು ಹೇಳಿ ಕಲ್ಲ ದಾರಿಯನ್ನು ಹಿಡಿಯುತ್ತಾಳೆ. ಇದನ್ನು ನೋಡಿದ ಕಾರ್ತಿಕ್ ಹಾಗೂ ಆತನ ತಂಗಿ ಗೆ ಬಹಳ ಆಶ್ಚರ್ಯ ಆಗುತ್ತದೆ. ಇನ್ನೂ ಕಾರ್ತಿಕ್ ತಂದೆ ಅವರ ತಮ್ಮ ಬಹಳ ಸಪ್ಪಗೆ ಇರುವುದನ್ನು ನೋಡಿ ಏನಾಯಿತೆಂದು ಕೇಳಿದಾಗ ಅವರ ತಮ್ಮ ಏನೇನೋ ಸಬೂಬು ಹೇಳಿ ಸುಮ್ಮನೆ ಆಗುತ್ತಾರೆ .

ಇದನ್ನು ನೋಡಿದ ಕಾರ್ತಿಕ್ ತಂದೆ ಮಾತ್ರ ಆವರನ್ನು ಸಮಾಧಾನ ಮಾಡುವುದರಲ್ಲಿ ತೊಡಗಿದ್ದಾರೆ...ಹಾಗೆಯೇ ಮಹಿಳೆಯರೆಲ್ಲರೂ ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡುವತ್ತ ಗಮನ ಕೊಡುತ್ತಾ ಲಕ್ಷ್ಮೀ ದೇವಿ ಗೆ ಬಹಳ ಅದ್ದೂರಿ ಸಿಂಗಾರವನ್ನು ಮಾಡಿ ಬಿಡುತ್ತಾರೆ ಇದೆಲ್ಲವಾನ್ನು ನೋಡಿದ ಮನೆ ಮಂದಿ ಗೆ ಖುಷಿಯೋ ಖುಷಿ.. ಇನ್ನೂ ಸತ್ಯ ಮಾತ್ರ ಸ್ತೋತ್ರ ಪಠಣ ಮಾಡುವಲ್ಲಿ ಬ್ಯುಸಿ ಆಗಿ ಇರುತ್ತಾರೆ ..

kannada-serial-sathya

ಇನ್ನೂ ವರ ಮಹಾಲಕ್ಷ್ಮೀ ತಯಾರಿ ಎಲ್ಲ ನಡೆಯಿತು ಕೀರ್ತನ ಹಾಗೂ ಸತ್ಯ ಎಲ್ಲಿಯೂ ಕಾಣದ್ದನ್ನು ನೋಡಿ ಸೀತಾ ಜೋರಾಗಿ ಕರೆಯುತ್ತಾಳೆ.. ಆಗ ಕೀರ್ತನ ಮನೆಯಿಂದ ಹೊರಗೆ ಬರುತ್ತಾಳೆ.. ಕೀರ್ತನಾ ಬಹಳ ಸಾಂಪ್ರದಾಯಕ ವಾಗಿ ಬಟ್ಟೆಯನ್ನು ಧರಿಸಿ ರೂಮ್ ನಿಂದಾ ಹೊರಗೆ ಬರುವುದನ್ನು ನೋಡಿದ ಮನೆ ಮಂದಿಗೆ ಶಾಕ್ ಆಗುತ್ತದೆ.

ಆ ವೇಳೆ ಕಾರ್ತಿಕ್ ಹಾಗೂ ಆತನ ತಂಗಿ ಮಾತ್ರ ಇದೇನಿದು ಕೀರ್ತನ ಇಷ್ಟು ಚೆನ್ನಾಗಿ ರೆಡಿ ಆಗಿದ್ದಾಳಲ್ಲ ಎಂದು ಬಹಳ ಆಶ್ಚರ್ಯ ಗೊಂಡು ನೋಡುತ್ತಾ ಇರುತ್ತಾಳೆ.. ಇನ್ನೂ ಸತ್ಯ ಕೂಡ ಮನೆಯ ಒಳಗಡೆಯಿಂದ ಹೊರಗೆ ಬರುತ್ತಾಳೆ.. ಆ ವೇಳೆ ಸೀತಾ ಹೇಳಿರುವ ಸ್ತೋತ್ರ ಪಠಣವನ್ನೂ ಹೇಳಲು ಹೇಳುತ್ತಾಳೆ.

ಆಗ ಕೀರ್ತನ ಮಾತ್ರ ಬಹಳ ನೀರ್ಘಳವಾಗಿ ಸ್ತೋತ್ರ ಪಠಣ ಮಾಡುತ್ತಾಳೆ.. ಅದನ್ನು ನೋಡಿದ ಕಾರ್ತಿಕ್ ಗೆ ಇದೇನಿದು ಅಕ್ಕ ಸ್ತೋತ್ರ ಪಠಣ ಮಾಡುವುದ ನಾನೇನು ಕನಸು ಕಾಣುತ್ತಾ ಇಲ್ಲವಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾರೆ..

ಇದನ್ನು ಕೇಳಿದ ಆತನ ತಂಗಿ ಕೂಡ ಅದೇ ಯೋಚನೆ ಮಾಡುತ್ತಾ ಇರುತ್ತಾಳೆ ಆ ವೇಳೆ ಆಕೆ ಮತ್ತೆ ಮತ್ತೆ ಕಿವಿಯತ್ತ ಕೈ ಇಡುತ್ತಿರುವುದನ್ನು ನೋಡಿದ ಕಾರ್ತಿಕ್ ಹಾಗೂ ರಿತು ಗೆ ಶಾಕ್ ಆಗುತ್ತದೆ.. ಓ.. ಅಕ್ಕ ಇದರ ಸಹಾಯದಿಂದ ತಾನೇ ಇಷ್ಟೆಲ್ಲ ಮಾಡಿಸುವುದು ಸರಿ ಇರಲಿ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾರೆ..

ಇನ್ನೂ ಸತ್ಯ ಬಳಿ ಅಸ್ಟೋತ್ರ ಪಠಣ ಮಾಡಲು ಹೇಳುತ್ತಾರೆ.. ಇನ್ನೂ ಸತ್ಯ ಪಠಣ ಮಾಡುತ್ತಾ ಇರುವಾಗ ಮಧ್ಯದಲ್ಲಿ ಕೊಂಚ ಭಯ ಪಟ್ಟು ತಪ್ಪಾಗಿ ಹೇಳುತ್ತಾಳೆ.. ಇದನ್ನು ನೋಡಿದ ಸೀತಾ ಜೋರಾಗಿ ಹೇಳುತ್ತಾಳೆ.. ನಿಲ್ಲಿಸಿ ಸ್ತೋತ್ರ ವನ್ನೂ ತಪ್ಪಾಗಿ ಹೇಳಬೇಡ ಅದು ನಿನಗೆ ಒಳ್ಳೆಯದು ಅಲ್ಲ ಎಂದು ಹೇಳುತ್ತಾಳೆ.. ಕಾರ್ತಿಕ್ ಕೀರ್ತನೆ ಬಂಡವಾಳ ಹೊರ ಹಾಕಲು ಮಧ್ಯ ಬಾಯಿ ಹಾಕಿದಾಗ ಸೀತಾ ಕಾರ್ತಿಕ್ ಬಾಯಿ ಮುಚ್ಚಿಸಿ ಬಿಡುತ್ತಾರೆ

More from Filmibeat

English summary
Kannada serial satya written updated on 28th August
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X