Sathya: ಕೊನೆಗೂ ಬಯಲಾಯಿತು ಲಕ್ಷ್ಮಣನ ಎರಡನೇ ಮದುವೆ ವಿಷಯ, ಆಘಾತದಲ್ಲಿ ಊರ್ಮಿಳಾ!
ಊರ್ಮಿಳಗೆ ಆಕೆಯ ಗಂಡನ ಮೇಲೆ ಬಹಳ ನಂಬಿಕೆ ನನ್ನ ಗಂಡ ಯಾವತ್ತೂ ಸುಳ್ಳು ಆಡುವುದಿಲ್ಲ ಆತ ಯಾವತ್ತೂ ನನ್ನ ನಂಬಿಕೆಗೆ ದ್ರೋಹ ಮಾಡುವವರಲ್ಲ ನನ್ನ ಗಂಡ ಶ್ರೀರಾಮಚಂದ್ರ ಎಂದು ಊರ್ಮಿಳ ತನ್ನ ಗಂಡನ ಬಗ್ಗೆ ಅಪಾರವಾದ ನಂಬಿಕೆ ಇಟ್ಟುಕೊಂಡಿರುತ್ತಾಳೆ. ಆದರೆ ಊರ್ಮಿಳ ನಂಬಿಕೆಗೆ ಮಸಿ ಬಳಿದಿದ್ದಾನೇ ಲಕ್ಷ್ಮಣ. ಲಕ್ಷ್ಮಣ ಪದ್ಮಾಳಣ್ಣ ಮದುವೆಯಾಗಿ ಊರ್ಮಿಳಾಗೆ ಬಹಳ ದೊಡ್ಡ ಅನ್ಯಾಯ ಮಾಡಿದ್ದಾನೆ.
ಸತ್ಯ ಲಕ್ಷ್ಮಣನ ಬಳಿ ಬಹಳ ಸಲ ಹೇಗಾದರೂ ಮಾಡಿ ಚಿಕ್ಕತ್ತೆಗೆ ನಿಜ ಹೇಳಿ ಅವರಿಗೆ ನಿಜ ವಿಚಾರ ಗೊತ್ತಾಗೋ ಹಾಗೆ ಮಾಡಿ ಇಲ್ಲವಾದರೆ ಬಹಳ ಕಷ್ಟವಿದೆ ಪದ್ಮಾವರಿಗೆ ಯಾವತ್ತೂ ದ್ರೋಹ ಮಾಡಬೇಡಿ ಎಂದು ಪದೇಪದೇ ಹೇಳಿರುತ್ತಾಳೆ. ಆದರೆ ಸೀತಾ ಮಾತ್ರ ಊರ್ಮಿಳಾಗೆ ಈ ವಿಚಾರ ತಿಳಿಯಲೇ ಬಾರದು ಎಂದು ಖಡಕ್ ವಾರ್ನಿಂಗ್ ನೀಡಿರುತ್ತಾಳೆ. ಇನ್ನು ಸುಹಾಸ್ ಕೂಡ ಸುಮಾರು ಬಾರಿ ಊರ್ಮಿಳಾಗೆ ಈ ವಿಚಾರ ತಿಳಿಸಬೇಕು ಎಂದು ಹಲವು ಬಾರಿಯ ಯೋಜನೆಗಳನ್ನು ಮಾಡಿರುತ್ತಾನೆ.

ಆದರೆ ಅದನ್ನೆಲ್ಲಾ ಸೀತಾ ಕೆಡಿಸಿಬಿಟ್ಟಿರುತ್ತಾಳೆ. ಆದರೆ ಇದೀಗ ಮನೆಗೆ ಬಂದ ಸ್ವಾಮೀಜಿ ಲಕ್ಷ್ಮಣನ ಬಳಿ ಪೂಜೆಗೆ ಕೂತುಕೊಳ್ಳುವಾಗ ಹೆಂಡತಿಯ ಹಣೆಗೆ ಕುಂಕುಮ ಇಡಲು ಹೇಳುತ್ತಾರೆ. ಇದನ್ನು ಕೇಳಿದ ಲಕ್ಷ್ಮಣ ಊರ್ಮಿಳಾ ಹಣೆಗೆ ಕುಂಕುಮ ಹಾಕುತ್ತಾರೆ. ಇದನ್ನು ನೋಡಿದ ಸ್ವಾಮೀಜಿ ಹೇಳುತ್ತಾರೆ. ನಿನ್ನ ಇನ್ನೊಂದು ಹೆಂಡತಿಯ ಹಣೆಗೆ ಕುಂಕುಮವನ್ನು ಇಡಲು ಹೇಳುತ್ತಾರೆ. ಇದನ್ನು ಕೇಳಿ ಊರ್ಮಿಳಾ ಕೊಂಚ ಗಲಿಬಿಲಿ ಆಗುತ್ತಾಳೆ .
ಊರ್ಮಿಳಾ ಮಾತಿಗೆ ಸಂಕಟ ಪಟ್ಟ ಸೀತಾ
ಆದರೆ ಲಕ್ಷ್ಮಣ ನಿಗೆ ಎನು ಮಾಡಬೇಕು ಎಂದು ತೋಚದೇ ಸುಮ್ಮನೆ ಇರುತ್ತಾರೆ. ಇನ್ನು ಸ್ವಾಮೀಜಿ ಊರ್ಮಿಳಾ ಬಳಿ ಹೇಳುತ್ತಾರೆ ಜೀವನ ಎನ್ನುವ ಬ್ರಹ್ಮಾಂಡದಲ್ಲಿ ಗೊತ್ತಿರುವುದು ಒಂದು ಸಾಸಿವೆ ಕಾಳಷ್ಟು. ಹಾಗೆಯೇ ಗೊತ್ತಿಲ್ಲದೆ ಇರುವುದು ಸಾಗರದಷ್ಟು ತಾಯಿ ಎಂದಾಗ ಊರ್ಮಿಳಾ ಇಲ್ಲ ಗುರುಗಳೇ ನನ್ನ ಗಂಡ ನನ್ನ ಬಳಿಯಿಂದ ಏನನ್ನೂ ಕೂಡ ಮುಚ್ಚಿ ಇಟ್ಟಿಲ್ಲ . ನನಗೆ ನನ್ನ ಗಂಡನ ಬಗ್ಗೆ ಎಲ್ಲವೂ ಗೊತ್ತು ಎಂದು ಹೇಳುತ್ತಾಳೆ. ಇದನ್ನು ನೋಡಿದ ಸೀತಾ ಮನದಲ್ಲಿ ಹೇಳಿಕೊಳ್ಳುತ್ತಾಳೆ ಅಯ್ಯೋ ಪೆದ್ದಿ.. ನಿನ್ನ ಗಂಡ ನಿನಗೆ ಮೋಸ ಮಾಡಿದ್ದಾನೆ ಕಣೆ ಎಂದು ಮನದಲ್ಲಿ ಅಂದುಕೊಂಡು ಇರುತ್ತಾರೆ.

ನಿಜ ವಿಚಾರ ಊರ್ಮಿಳಾಗೆ ತಿಳಿಸಲು ಮುಂದಾದ ಸೀತಾ
ಇನ್ನು ಸೀತಾ ಹೇಳುತ್ತಾಳೆ ಇವತ್ತು ಒಂದು ನಿಜ ಸುದ್ದಿಯನ್ನ ನಿನ್ನ ಬಳಿ ನಾನು ಹೇಳುತ್ತೇನೆ ಊರ್ಮಿಳಾ, ನೀನು ಗಟ್ಟಿ ಮನಸ್ಸು ಮಾಡಿ ಇದನ್ನು ಕೇಳಬೇಕು ಎನ್ನುತ್ತಾಳೆ. ನಾನು ಅದನ್ನೇ ಕೆಳುತ್ತ ಇರುವುದು ಏನೇನೋ ಮಾತನಾಡುತ್ತಾ ಇದ್ದೀರಿ ಯಾಕೆ ..ನನ್ನ ಗಂಡ ಶ್ರೀ ರಾಮ ಚಂದ್ರ ಅವರಿಗೆ ಇನ್ನೊಂದು ಹೆಂಡತಿ ಎಂದು ಹೇಳುತ್ತಾ ಇದ್ದಾರೆ ಅದು ಇದೆ ಮನೆಯಲ್ಲಿ ಎಂದು ಹೇಳುತ್ತಾ ಇರುತ್ತಾಳೆ ಊರ್ಮಿಳಾ .
ಪದ್ಮಳನ್ನು ಹೆಂಡತಿ ಎಂದು ಒಪ್ಪಿಕೊಂಡ ಲಕ್ಷ್ಮಣ
ಇನ್ನು ಲಕ್ಷ್ಮಣ ಜೋರಾಗಿ ಪದ್ಮಳನ್ನ ಕರೆಯುತ್ತಾನೆ. ಪದ್ದು ಮುಂದೆ ಬಾ...ಎಂದಾಗ ಊರ್ಮಿಳಾ ಅರ್ಥ ಆಗದೆ ನೋಡುತ್ತಾಳೆ..ಹಾಗೆಯೇ ತನ್ನ ಅಕ್ಕ ಸೀತಾ ಬಳಿ ಹೇಳುತ್ತಾಳೆ ಊರ್ಮಿಳಾ..ಅಕ್ಕ ನೋಡಿ ನನ್ನ ಯಜಮಾನರು ಪದ್ಮ ಅವರನ್ನು ಪದ್ದು ಪದ್ದು ಅನ್ನುತ್ತಾರೆ. ಪದ್ಮ ಅವರೇ ಬೇಸರ ಮಾಡಬೇಡಿ ನನ್ನ ಗಂಡ ಈಗಲು ಕೂಡ ತಮಾಷೆ ಮಾಡುತ್ತಾ ಇದ್ದಾರೆ ಎಂದಾಗ ಲಕ್ಷ್ಮಣ ಜೋರಾಗಿ ಹೇಳುತ್ತಾನೆ ಊರ್ಮಿಳಾ , ಪದ್ಮ ನನ್ನ ಹೆಂಡತಿ ಹಾಗೆಯೇ ನಚಿಕೇತ್ ನನ್ನ ಮಗ ಎಂದು ಹೇಳಿದಾಗ ಊರ್ಮಿಳಾಗೆ ಸಿಡಿಲು ಬಡಿದ ಹಾಗೆ ಆಗುತ್ತದೆ .


Click it and Unblock the Notifications











