Sathya: ಸತ್ಯಳನ್ನು ಮನೆಯಿಂದ ಹೊರಗೆ ಹಾಕುತ್ತಾಳಾ ಸೀತಾ?
ಬಾಲ ಹಣಕ್ಕಾಗಿ ಕಿರ್ತನಾಳನ್ನು ಪೀಡಿಸುತ್ತ ಇರುತ್ತಾನೆ. ಆತ ಎಷ್ಟೇ ಕರೆ ಮಾಡಿದರೂ ಕೀರ್ತನ ಮಾತ್ರ ಕರೆ ಸ್ವೀಕರಿಸದೆ ಇರುವುದನ್ನು ನೋಡಿದ ಸುಹಾಸ್ ಕೀರ್ತನಗೆ ಪ್ರಶ್ನೆ ಮಾಡುತ್ತಾನೆ. ಯಾಕೆ ಕರೆ ಸ್ವೀಕರಿಸುತ್ತಿಲ್ಲ ಎನ್ನುವಾಗ ಕೀರ್ತನ ಮಾತ್ರ ಸಿಡಿದು ಬೀಳುತ್ತಾಳೆ. ಬಳಿಕ ಬಾಲನ ಕರೆ ಸ್ವೀಕರಿಸಿ ಆತನ ಪ್ರಾಬ್ಲಂ ಏನೆಂದು ಕೇಳುತ್ತಾಳೆ. ಬಾಲನ ಬಳಿ ಕೀರ್ತನ ಏನಯ್ಯ ಬಾಲ ಯಾಕೆ ನನಗೆ ಇಷ್ಟೊಂದು ಕಾಟ ಕೊಡುತ್ತಾ ಇದ್ದೀಯಾ, ನಾನು ಕರೆ ಕಟ್ ಮಾಡಿದೆ ಎಂದರೆ ಬ್ಯುಸಿ ಇದ್ದೇನೆ ಎಂದು ಅರ್ಥ ನೀನು ಆದರೂ ಪದೇ ಪದೇ ಕರೆ ಮಾಡುತ್ತಾ ಇದ್ದರೆ ಹೇಗೆ ಎಂದು ಕಿಡಿಕಾರುತ್ತಾಳೆ.
ಇದಕ್ಕೆ ಉತ್ತರಿಸಿದ ಬಾಲ ನಾನು ಕರೆ ಮಾಡುತ್ತಾ ಇದ್ದೇನೆ ಎಂದರೆ ನನಗೆ ದುಡ್ಡು ಅರ್ಜೆಂಟ್ ಬೇಕಾಗಿದೆ ಎಂದರ್ಥ ಎಂದಾಗ ದುಡ್ಡು ಕೊಡಲ್ಲ ಎಂದು ಕೀರ್ತನ ಹೇಳುತ್ತಾಳೆ. ಇದನ್ನು ಕೇಳಿದ ಬಾಲ ಒಂದು ವಿಡಿಯೋ ನಿಮ್ಮ ವಾಟ್ಸ್ ಆ್ಯಪ್ ಗೆ ಕಳುಹಿಸಿದ್ದೇನೆ ಅದನ್ನು ನೋಡಿ ಹೇಳಿ ದುಡ್ಡು ಕೊಡಬೇಕೋ ಬೇಡವೋ ಎಂದಾಗ ಕೀರ್ತನ ತಕ್ಷಣ ವಾಟ್ಸ್ ಆ್ಯಪ್ ಆನ್ ಮಾಡಿ ನೋಡಿದಾಗ ಆಕೆಗೆ ಶಾಕ್ ಆಗುತ್ತದೆ. ಆ ಕೂಡಲೇ ಬಾಲ ಅದನ್ನು ಸತ್ಯಗೆ ಕಳುಹಿಸಿದರೆ ಹೇಗೆ ಇರುತ್ತೆ ಗೊತ್ತಾ ಎಂದಾಗ ಕೀರ್ತನ ಆ ಕೂಡಲೇ ಹಣ ಕೊಡುತ್ತೇನೆ ಯಾರಿಗೂ ಈ ವಿಡಿಯೋ ಕಳುಹಿಸಬೇಡ ಎಂದು ತಾಕೀತು ಮಾಡುತ್ತಾಳೆ. ಬಳಿಕ ಬಾಲ ಕರೆ ಕಟ್ ಮಾಡಿ ಊರಿಗೆಲ್ಲ ಬಾಡೂಟ ಹಾಕುವ ಪ್ಲಾನ್ ಮಾಡುತ್ತಾ ಇರುತ್ತಾನೆ.

ಇದಕ್ಕೆ ಆತನ ಗೆಳೆಯರು ಸಾತ್ ನೀಡುತ್ತಾರೆ. ಇನ್ನು ಸೀತಾಗೆ ಒಂದೇ ಚಿಂತೆ ಅದು ಬೇರೆ ಎನು ಅಲ್ಲ ತನ್ನ ಮಗನದ್ದು. ನನ್ನ ಮಗ ಯಾವತ್ತೂ ನನ್ನ ವಿರುದ್ದ ಒಂದು ಮಾತು ಆಡದವನಲ್ಲ ಆದರೆ ಇದೀಗ ನನ್ನ ಬಗ್ಗೆ ಈ ರೀತಿ ಮಾತನಾಡುತ್ತಾ ಇದ್ದಾನೆ ಎಂದರೆ ಏನು ಅರ್ಥ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಬಳಿಕ ಇದೆಲ್ಲ ಸತ್ಯ ಮಾಡಿದ ಕೆಲಸ ಅಮ್ಮ ಮಗನ ಮಧ್ಯೆ ತಂದಿಟ್ಟು ತಮಾಷೆ ನೋಡುತ್ತಾ ಇದ್ದಾಳೆ ಎಂದೆಲ್ಲ ಹೇಳುತ್ತಾಳೆ.
ಊರ್ಮಿಳಾ, ನನ್ನ ಗಂಡ, ರಿತು ಎಲ್ಲರೂ ಸತ್ಯ ಪರ ಮಾತನಾಡಿದ್ದೆ ಮಾತನಾಡಿದ್ದು ಆದರೆ ನನ್ನ ಪರ ಯಾರು ಬರುತ್ತಿಲ್ಲ ನನ್ನ ವಿರುದ್ದವಾಗಿ ಮಾತನಾಡಲು ಬರುತ್ತಾರೆ ಎಂದು ಅಸಮಾಧಾನ ಹೊರ ಹಾಕುತ್ತ ಇರುತ್ತಾಳೆ. ಇನ್ನು ಸೀತಾ ಯೋಚನೆ ಮಾಡುತ್ತಾ ಇರುವಾಗ ಅಲ್ಲಿಗೆ ಆಕೆಯ ಗಂಡ ಬರುತ್ತಾರೆ.

ಸೀತಾ ಸತ್ಯ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಇರುವಾಗ ಅವರು ಮಾತ್ರ ಸೀತಾ ಇದೆಲ್ಲ ನಿನ್ನ ತಪ್ಪು, ಈಗಿನ ಮಕ್ಕಳ ಕಾಲಕ್ಕೆ ನಾವು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು, ನೀವು ಈ ತರಹ ಕಚ್ಚಾಟ ಮಾಡಿಕೊಂಡು ಹೋಗುವುದು ಅಲ್ಲ ಕಾರ್ತಿಕ್ ತನ್ನ ಹೆಂಡತಿ ಪರ ಮಾತನಾಡಿದ್ದು ನನಗೆ ತಪ್ಪು ಎಂದು ಅನ್ನಿಸಲಿಲ್ಲ, ಆತ ನಿನ್ನ ಬಳಿ ಊಟ ತೆಗೆದುಕೊಂಡು ಬಂದ ವೇಳೆ ನೀನು ನಡೆದುಕೊಂಡ ರೀತಿ ಸರಿ ಇಲ್ಲ ಎಂದೆಲ್ಲ ಹೇಳಿದಾಗ ಆಕೆ ಕುಪಿತಗೊಳ್ಳುತ್ತಾಳೆ .
ಇನ್ನು ಸತ್ಯಳನ್ನು ಈ ಮನೆಯಲ್ಲಿ ಇಟ್ಟುಕೊಂಡರೆ ನನಗೆ ಉಳಿಗಾಲ ಇಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಸತ್ಯಗೆ ಊರ್ಮಿಳಾ ಸಮಾಧಾನ ಹೇಳುತ್ತ ಇರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬಂದ ಸೀತಾ ಲೆ ಹುಡುಗಿ ನಿನ್ನ ಬಳಿ ನನಗೆ ಮಾತನಾಡಬೇಕು ಬಾ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಸತ್ಯ ಬಹಳ ಅಳುಕಿನಿಂದಲೇ ಆಕೆಯ ಹಿಂದೆಯಿಂದ ಹೋಗುತ್ತಾಳೆ. ಇನ್ನು ಸೀತಾ ಮಾತ್ರ ಸತ್ಯಳನ್ನು ತರಾಟೆಗೆ ತೆಗೆದುಕೊಂಡುಬಿಡುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











