Sathya Serial: ದಿವ್ಯ ಮಾತಿಗೆ ಕಣ್ಣೀರಿಟ್ಟ ಸತ್ಯ!

By Poorva

ಸತ್ಯ ದಂಪತಿ ಹಾಗೂ ದಿವ್ಯ ದಂಪತಿ ಇಬ್ಬರು ಒಟ್ಟಾಗಿದ್ದಾರೆ. ಸತ್ಯ ಹಾಗೂ ಕಾರ್ತಿಕ್ ನನ್ನು ಅವಾರ್ಡ್ ಕಾರ್ಯಕ್ರಮಕ್ಕೆ ಮುಂಚಿತವಾಗಿಯೇ ಮನೆಯಿಂದ ಶ್ರೀನಿವಾಸ ರಾಯರು ಕಳುಹಿಸಿರುತ್ತಾರೆ. ಹೀಗೆ ಆದರೂ ಇಬ್ಬರು ಒಟ್ಟಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲಿ, ಇಬ್ಬರು ಒಟ್ಟಿಗೆ ಜೀವನ ಸಾಗಿಸಲಿ ಎಂಬುವುದು ರಾಯರ ಉದ್ದೇಶ ಕೂಡ. ಅದಕ್ಕಾಗಿ ಹನಿ ಮೂನ್‌ ಗೆಂದು ಬೀಚ್ ಗೆ ಕಳುಹಿಸಿ ಕೊಡುತ್ತಾರೆ. ಹನಿಮೂನ್ ಮೂಡ್ ನಲ್ಲಿ ಇರುವಾಗ ಸತ್ಯಗೆ ದಿವ್ಯ ಕಾಣಿಸುತ್ತಾಳೆ.

ಅಕ್ಕನನ್ನು ನೋಡಿ ಬಹಳ ಖುಷಿ ಆಗುತ್ತದೆ . ದಿವ್ಯ ಮಾತ್ರ ಸತ್ಯಳ ಬಳಿ ಚುಚ್ಚಿ ಮಾತನಾಡುತ್ತಾಳೆ. ನೀನು ಹೇಗೆ ಆದರೂ ಆತನ ಜೊತೆ ಬಾಳುತ್ತ ಇದ್ದೀಯಾ, ಅದು ಆತನಿಗೆ ಚೂರು ರೊಮ್ಯಾಂಟಿಕ್ ಕೂಡ ಗೊತ್ತಿಲ್ಲ ಎಂದೆಲ್ಲ ಹೇಳಿ ಸತ್ಯ ಮನಸ್ಸಿಗೆ ನೋವು ಮಾಡಿ ಅಲ್ಲಿಂದ ಹೋಗುತ್ತಾಳೆ. ಆದರೆ ದಿವ್ಯ ಮಾತನಾಡಿದ್ದನ್ನು ಕಾರ್ತಿಕ್ ಕೇಳಿಸಿಕೊಂಡು ಬೇಸರ ವ್ಯಕ್ತ ಪಡಿಸುತ್ತಾನೆ. ದಿವ್ಯ ನನ್ನ ಬಗ್ಗೆ ಏನೆಲ್ಲ ಮಾತನಾಡುತ್ತಾ ಇದ್ದಾಳಲ್ಲ ಎಂದು ಬೇಸರ ವ್ಯಕ್ತ ಪಡಿಸುತ್ತಾನೆ.

Kannada serial Sathya written update on 7th March

ಇನ್ನು ದಿವ್ಯ ಬಳಿ ಬಾಲ ಏನೆಲ್ಲ ಸುಳ್ಳು ಹೇಳಿ ಕರೆದುಕೊಂಡು ಬಂದಿದ್ದಾನೆ ಆದರೆ ಇದೆಲ್ಲ ಕಾರ್ತಿಕ್ ಗೆ ತಿಳಿದಿದೆ. ಬಾಲನ ಬಳಿ ಬಂದು ಕಾರ್ತಿಕ್ ಏನು ಬಾಲ ಎಲ್ಲಾ ದುಡ್ಡು ಕೊಟ್ಟು ಸೆಟಲ್ ಮಾಡಿದ ಹಾಗೆ ಇದೆ ಎಂದೆಲ್ಲ ಹೇಳುತ್ತಾನೆ. ಇದನ್ನು ಕೇಳಿದ ಬಾಲ ಬಹಳ ಆತಂಕ ವ್ಯಕ್ತ ಪಡಿಸುತ್ತಾನೆ. ಆ ವೇಳೆ ಅಲ್ಲಿಗೆ ಬಂದ ದಿವ್ಯ ಬಾಲನ ಆತಂಕದ ಬಗ್ಗೆ ಕೇಳುತ್ತಾಳೆ. ಬಾಲ ನಾವು ಆ ಕಾರ್ತಿಕ್ ಹಾಗೂ ಸತ್ಯನ ಸಹವಾಸಕ್ಕೆ ಹೋಗುವುದು ಬೇಡ ನಮ್ಮ ಮೂಡ್ ಹಾಳು ಮಾಡಿಕೊಳ್ಳುವುದು ಬೇಡ ಎಂದಾಗ ದಿವ್ಯ ಸತ್ಯಳನ್ನು ಹೇಗಾದರೂ ಮಟ್ಟ ಹಾಕಲೇಬೇಕು ಎಂದು ಯೋಚನೆ ಮಾಡಿ ನಾನು ಸತ್ಯಳನ್ನು ಮಾತ್ರ ಸುಮ್ಮನೆ ಬಿಡಲ್ಲ ಎಂದು ಹೇಳುತ್ತಾಳೆ.

ದಿವ್ಯ ಮಾತು ಕೇಳಿ ಸುಮ್ಮನೆ ಆಗುತ್ತಾನೆ ಬಾಲ. ಇನ್ನು ಸತ್ಯ ಮಾತ್ರ ದಿವ್ಯ ಹೇಳಿದ ಮಾತುಗಳನ್ನು ಕೇಳಿಕೊಂಡು ಇರುತ್ತಾಳೆ. ಬಳಿಕ ಸತ್ಯ ಮನದಲ್ಲಿ ನಾವಿಬ್ಬರೂ ಗಂಡ ಹೆಂಡತಿ ತರ ಇದ್ದೇವೆ ಆದರೆ ಏನು ನಡೆದೇ ಇಲ್ಲ ಆದರೂ ನಾವು ಬಹಳ ಖುಷಿಯಲ್ಲಿ ಇದ್ದೇವೆ ಬೇಸರ ಮಾಡಿಕೊಂಡು ಇಲ್ಲ ಎಂದೆಲ್ಲ ಯೋಚನೆ ಮಾಡಿಕೊಂಡು ಅಳುತ್ತಾ ಇರಬೇಕಾದರೆ ಕಾರ್ತಿಕ್ ಬರುತ್ತಾನೆ. ಏನು ಸತ್ಯ ಕಣ್ಣಲ್ಲಿ ನೀರು ಎಂದಾಗ ಸತ್ಯ ಕಣ್ಣಿಗೆ ಕಸ ಬಿದ್ದಿದೆ ಎನ್ನುತ್ತಾಳೆ. ಕಾರ್ತಿಕ್ ಕಣ್ಣು ಊದುತ್ತಾನೆ. ಇದನ್ನು ನೋಡಿದ ಕಾರ್ತಿಕ್ ಕಣ್ಣಲ್ಲಿ ಬಿದ್ದ ಕಸ ಹೋಗೆ ಬಿಟ್ಟಿತು ಇನ್ನ ಸ್ವಲ್ಪ ಹೊತ್ತು ನಿನ್ನ ಕಣ್ಣು ನೋಡಿಕೊಂಡು ಇರಬಹುದಾಗಿತ್ತು ಎಂದು ಹೇಳುತ್ತಾನೆ.‌

Kannada serial Sathya written update on 7th March

ಇದನ್ನು ಕೇಳಿದ ಸತ್ಯ ಅರೆರೆ ಇದೇನಿದು ಅಮುಲ್ ಬೇಬಿ ಇದೀಗ ರೊಮ್ಯಾಂಟಿಕ್ ಆಗಿ ಮಾತನಾಡಲು ಶುರು ಮಾಡಿದ್ದಾನೆ ಅಲ್ವಾ ಎಂದು ಯೋಚನೆ ಮಾಡಿಕೊಂಡು ಇರುತ್ತಾಳೆ. ಬಳಿಕ ಕಾರ್ತಿಕ್ ಒಂದು ಜಾಗಕ್ಕೆ ಹೋಗೋಣ ಎಂದು ಕೆರೆದುಕೊಂಡು ಹೋಗುತ್ತಾನೆ. ಇನ್ನ ದೇವಾಲಯಕ್ಕೆ ಕಾರ್ತಿಕ್ ಸತ್ಯಳನ್ನು ಕರೆದುಕೊಂಡು ಬಂದಾಗ ಸತ್ಯಗೆ ಬಹಳ ಖುಷಿ ಆಗುತ್ತದೆ. ಆದೆ ಜಾಗಕ್ಕೆ ಬಾಲ ಹಾಗೂ ದಿವ್ಯ ಬರುತ್ತಾರೆ.

ಸತ್ಯ ಹಾಗೂ ಕಾರ್ತಿಕ್ ನ ಕಂಡು ಛೇ ಎಲ್ಲಿ ಹೋದರು ಇವರೇ ಸಿಗುತ್ತಾರೆ, ಯಾಕಾದರೂ ಇಲ್ಲಿ ಎಂದುಕೊಳ್ತಾರೆ. ಇಲ್ಲಿನ ದೇವಾಲಯದ ಸಂಸ್ಕೃತಿ ಬಗ್ಗೆ ಎಲ್ಲಾ ನಿನಗೆ ಹೇಗೆ ಗೊತ್ತಾಗಬೇಕು, .ಇಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟುಕೊಂಡು ಹೋದರೆ ಒಳ್ಳೆಯದಾಗುತ್ತದೆ ಎಂದು ಎಲ್ಲರೂ ಹೇಳುತ್ತಾರೆ ಎಂದೆಲ್ಲ ಸತ್ಯ ಎದುರಲ್ಲಿ ಮಾತನಾಡಿ ಬಾಲನ ಕೈ ಹಿಡಿದುಕೊಂಡು ಹೋಗುತ್ತಾಳೆ. ಆ ವೇಳೆ ಬಾಲ ನಾವು ಯಾಕೆ ಅವರ ತಂಟೆಗೆ ಹೋಗುವುದು ಸುಮ್ಮನೆ ಇರಬಾರದ ಎಂದೆಲ್ಲ ಹೇಳುತ್ತಾನೆ. ಇದನ್ನು ಕೇಳಿದ ದಿವ್ಯ ಬಾಲನ ದುರುಗುಟ್ಟಿ ನೋಡಿದಾಗ ಬಾಲ ಸುಮ್ಮನೆ ಆಗುತ್ತಾನೆ .

ಇನ್ನು ಸತ್ಯ ತೆಪ್ಪಗೆ ಇರುವುದನ್ನು ನೋಡಿದ ಕಾರ್ತಿಕ್ ನಾನು ನಮ್ಮ ಸಂಸ್ಕೃತಿಯಲ್ಲಿ ಹೆಂಡತಿಯನ್ನು ಹೇಗೆ ದೇವಾಲಯಕ್ಕೆ ಕರೆದುಕೊಂಡು ಹೋಗುತ್ತಾರೋ ಹಾಗೆಯೇ ಹೋಗೋಣ ಎಂದುಕೊಂಡು ಸತ್ಯನ ಎತ್ತಿಕೊಳ್ಳುತ್ತಾನೆ.

More from Filmibeat

English summary
Kannada serial sathya written update on 7th March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X