Sathya: ಅಣ್ಣನ ಮಾತಿಗೆ ಲಕ್ಷ್ಮಣ ಗಲಿಬಿಲಿ: ರಿತು ಮದುವೆ ಕೈ ಬಿಡುತ್ತಾನಾ?

By Poorva

ರಾಮಚಂದ್ರ ರಾಯರು ಮನೆಗೆ ಬರುತ್ತಾರೆ. ಮನೆಗೆ ಬರಬೇಕಾ ಅಥವಾ ಬೇಡವೋ ಎಂಬ ದ್ವಂದ್ವ ಮನಸ್ಥಿತಿಯಿಂದ ಬರುತ್ತಾರೆ. ಬಂದು ಸೋಫಾ ಮೇಲೆ ಕುಳಿತುಕೊಂಡು ಯೋಚನೆ ಮಾಡುತ್ತಾ ಇರುವ ವೇಳೆಗೆ ಉರ್ಮಿಳಾ ಬರುತ್ತಾಳೆ. ಬಾವ ನಿಮಗೆ ಇವತ್ತು ತಿಂಡಿಗೆ ಏನು ಮಾಡಲಿ ಚಪಾತಿ, ಮುದ್ದೆ ಏನು ಮಾಡಲಿ ಎಂದು ಕೇಳುತ್ತಾಳೆ. ಇದನ್ನು ಕೇಳಿದ ರಾಮಚಂದ್ರ ರಾಯರು ಸುಮ್ಮನೆ ಇರುತ್ತಾರೆ.

ಆಗ ಮನೆಯ ಒಳಗಿನಿಂದ ಲಕ್ಷ್ಮಣ ಹಾಗೂ ಸೀತಾ ಬರುತ್ತಾರೆ. ಆಗ ಊರ್ಮಿಳಾ ಬಳಿ ನನಗೇನು ಬೇಡ. ಅಲ್ಲಿ ನೀರು ಇಟ್ಟು ಹೋಗಮ್ಮ ಎಂದು ಹೇಳಿದಾಗ ಬಹಳ ಬೇಸರ ಆಗುತ್ತದೆ. ಏನು ಮಾಡಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾಳೆ. ಆಗ ಸೀತಾ ಬಂದು ತನ್ನ ಗಂಡನ ಬಳಿ ಸಮಾಜಾಯಿಸಿ ನೀಡುತ್ತಾಳೆ. ಆದರೆ ಹೆಂಡತಿಯ ಮಾತಿಗೆ ಬೆಲೆ ಕೊಡದ ರಾಮಚಂದ್ರ ರಾಯರು ಮಾತ್ರ ಏನು ಮಾತನಾಡದೆ ಸುಮ್ಮನಾಗುತ್ತಾರೆ.

Kannada serial sathya written update on 8th may

ಬಳಿಕ ನೀವು ರಿತು ನಿಶ್ಚಿತಾರ್ಥದ ಬಗ್ಗೆ ನನ್ನ ಬಳಿ ಮಾತನಾಡಲು ಬಂದಿದ್ದೀರಿ ಅಲ್ವಾ? ನನಗೆ ಮನೆಯವರು ಹೇಳದಿದ್ದರೂ ಮೂರನೇಯವರು ಹೇಳುತ್ತಾರೆ ಎಂದು ಕಟುವಾಗಿ ಹೇಳುತ್ತಾರೆ. ಇದನ್ನು ಕೇಳಿದ ಸೀತಾ ಮಾತ್ರ ಇಲ್ಲ ರೀ ಲಕ್ಷ್ಮಣ ನಿಮ್ಮ ಬಳಿ ಹೇಳಲು ಬಹಳ ಪ್ರಯತ್ನ ಪಟ್ಟಿದ್ದಾನೆ. ಆದರೆ ನಿಮಗೆ ಫೋನ್ ಸರಿಯಾಗಿ ಸಿಗದ ಕಾರಣ ಹೀಗೆ ಆಯಿತು. ನಿಮ್ಮ ಗೆಳೆಯನ ಮಗನ ಜೊತೆ ನಿಶ್ಚಿತಾರ್ಥ ಮಾಡಬೇಕು ಅಂದುಕೊಂಡು ಇದ್ದೇವೆ ಅದು ನಾಳೆಯೇ.. ಇಲ್ಲಿ ನಿಮಗೆ ತಿಳಿಯದೇ ಏನೇನೋ ನಡೆಯುತ್ತಿದೆ ಎಂದು ಲಕ್ಷ್ಮಣ ಹೇಳಲು ಬಂದಾಗ ಸೀತಾ ತಡೆಯುತ್ತಾಳೆ.

ರಾಮಚಂದ್ರರಾಯರ ಮಾತಿಗೆ ಸೀತಾ ಸೈಲೆಂಟ್

ಕೊನೆಗೆ ರಾಮಚಂದ್ರ ರಾಯರು ಕೇಳುತ್ತಾರೆ. ನಾನು ಈ ನಿಶ್ಚಿತಾರ್ಥದಲ್ಲಿ ಭಾಗಿ ಆಗಬೇಕೋ ಬೇಡವೋ ಎಂಬುವುದನ್ನು ನೀವು ಹೇಳಿ ಎಂದಾಗ ಸೀತಾಗೆ ಕೊಂಚ ಶಾಕ್ ಆಗುತ್ತದೆ. ರಾಮ ಚಂದ್ರ ರಾಯರ ಮಾತು ಅಷ್ಟು ಖಾರವಾಗಿ ಇರುತ್ತದೆ. ಇನ್ನು ದಿವ್ಯಾ ಮನೆಗೆ ಬಂದು ರಂಪಾಟ ಮಾಡುತ್ತಾಳೆ.

ಬಾಲನ ಜೊತೆ ದಿವ್ಯಾ ಕಿರಿಕ್

ನಾನು ಆ ಕೋಟೆ ಮನೆಯ ಸಂಬಂಧ ಬಿಟ್ಟು ನಿನ್ನ ಜೊತೆ ಬಂದೆ ಅಲ್ವಾ ಎಂದು ದಿವ್ಯಾ ಬೇಸರ ಮಾಡಿಕೊಂಡು ಇರುತ್ತಾಳೆ. ಬಳಿಕ ಇಷ್ಟೆಲ್ಲ ಡ್ರಾಮಾ ಆಡಿದ್ದಕ್ಕೆ ದಿವ್ಯಾ, ಬಾಲನ ಕೆನ್ನೆಗೆ ಹೊಡೆಯುತ್ತಾಳೆ. ಆಗ ಜಾನಕಿ, ದಿವ್ಯಾಳ ಕೆನ್ನೆಗೆ ಹೊಡೆಯುತ್ತಾಳೆ.

Kannada serial sathya written update on 8th may

ದಿವ್ಯಾಳನ್ನೂ ನೋಡಿ ಅತ್ತ ಗಿರಿಜಮ್ಮ

ಇದನ್ನು ನೋಡಿದ ಗಿರಿಜಮ್ಮ ಮಾತ್ರ ಜೋರಾಗಿ ಅಳುತ್ತಾರೆ. ನನ್ನ ಮೊಮ್ಮಗಳ ದುರಾಸೆಯಿಂದ ಆಗಿ ಈ ರೀತಿ ಎಲ್ಲ ನಡೆಯಿತು ಎಂದು ಅಂದುಕೊಳ್ಳುತ್ತಾಳೆ. ಬಾಲನಿಗೇ ಮಾತ್ರ ಏನು ಮಾಡಬೇಕು ಎಂದು ತಿಳಿಯಸಾಗುತ್ತದೆ. ತಾನು ದಿವ್ಯಾಳನ್ನು ಕಳೆದುಕೊಳ್ಳುತ್ತೇನೆ ಎಂಬ ಭೀತಿಯಿಂದ ಸುಳ್ಳಿಗೆ ಸುಳ್ಳು ಸೇರಿಸಿ ಸುಳ್ಳಿನ ಗೋಪುರ ಕಟ್ಟಿರುತ್ತಾನೆ. ಅದು ಒಂದೇ ಸಮನೆ ಬಿದ್ದಾಗ ದಿವ್ಯಾಗೆ ಮಾತ್ರ ಇದನ್ನು ಅರಗಿಸಲು ಸಾಧ್ಯ ಆಗುತ್ತಿಲ್ಲ.

ಸತ್ಯ ಪ್ರೀತಿಯಲ್ಲಿ ಕವಿಯಾದ ಕಾರ್ತಿಕ್

ಇನ್ನು ಸತ್ಯ ಹಾಗೂ ಕಾರ್ತಿಕ್ ಪ್ರೀತಿಯ ಹಕ್ಕಿಗಳ ಹಾಗೆ ಹಾರಾಡಿಕೊಂಡು ಇರುತ್ತಾರೆ. ಸತ್ಯಳನ್ನು ಇಂಪ್ರೆಸ್ ಮಾಡಲು ಕಾರ್ತಿಕ್ ಬಹಳ ಕಸರತ್ತು ನಡೆಸುತ್ತಾ ಇರುತ್ತಾನೆ. ಇದನ್ನು ನೋಡಿದ ಸತ್ಯಗೆ ಮಾತ್ರ ಕಾರ್ತಿಕ್ ನನ್ನ ನೋಡಿದರೆ ಕಿಡಿ ಕಾರುತ್ತಿದ್ದ ಆದರೆ ಇದೀಗ ನನ್ನ ನೋಡಿದರೆ ಕವಿ ವರ್ಣಿಸಿದ ಹಾಗೆ ವರ್ಣಿಸುತ್ತಾ ಇದ್ದಾನೆ ಎಂದೆಲ್ಲ ಹೇಳುತ್ತಾಳೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial sathya written update on 8th may. Here is Details About Ramachandra Rayaru does not agree to Ritu's marriage. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X