Sathya: ತನಗೆ ಎದುರಾಡಿದ ರಿತುಗೆ ತಂದೆಯಾಗಿ ತಕ್ಕ ಪಾಠ ಕಲಿಸಿದ ಲಕ್ಷ್ಮಣ!
ಸತ್ಯ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಇನ್ನಷ್ಟು ಕುತೂಹಲ ಮೂಡಿಸುತ್ತಿದೆ. ಕಾರ್ತಿಕ್ ಆಡಿದ ಮಾತುಗಳನ್ನು ಕೇಳಿದ ಸೀತಾ ಅಡುಗೆ ಮನೆಯಲ್ಲಿ ಸುಮ್ಮನೆ ಕುಳಿತುಕೊಂಡಿರುತ್ತಾಳೆ. ಇದನ್ನು ನೋಡಿದ ಊರ್ಮಿಳಾ ಅಕ್ಕನ ಬಳಿ ಬಂದು ಏನು ಯೋಚನೆ ಮಾಡುತ್ತಾ ಇದ್ದಿಯಾ ಅಕ್ಕ ಎಂದು ಕೇಳಿದಾಗ ಸೀತಾ ಮನದ ನೋವನ್ನು ಹೇಳಿಕೊಳ್ತಾಳೆ.
ತನ್ನ ಮಗ ನನ್ನ ಯಾವತ್ತೂ ಪ್ರಶ್ನೆ ಮಾಡಲೇ ಇಲ್ಲ ಆದರೆ ಸೊಸೆ ಬಂದ ಮೇಲೆ ನನ್ನ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾನೆ ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿದ ಊರ್ಮಿಳಾ ಅಕ್ಕನನ್ನು ಸಮಾಧಾನ ಮಾಡಲು ಪ್ರಯತ್ನ ಮಾಡುತ್ತಲೇ ಇರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಸತ್ಯ ನಗುತ್ತಾ ಬರುತ್ತಾ ಇರುವುದನ್ನು ನೋಡಿದ ಸೀತಾ ಸತ್ಯಳನ್ನು ಅಡುಗೆ ಮನೆಗೆ ಬಾರದೆ ಇರುವ ಹಾಗೆ ಮಾಡುತ್ತಾಳ. ಸತ್ಯಳನ್ನು ಅಡುಗೆ ಮನೆಯ ಬಳಿ ನಿಂತುಕೊಂಡಿರಲು ಹೇಳುತ್ತಾಳೆ.

ಇನ್ನು ಮೇಲೆ ನೀನು ಅಡುಗೆ ರೂಮ್ ಕಡೆ ಬರಬಾರದು ದಯವಿಟ್ಟು ಅರ್ಥ ಮಾಡಿಕೋ ನಿನಗೆ ಅಡುಗೆ ಮನೆಗೆ ಬರಬೇಕು ಅನಿಸಿದ ವೇಳೆ ನಾವು ಅಡುಗೆ ರೂಮ್ ನಲ್ಲಿ ಇಲ್ಲದ ವೇಳೆ ನೀನು ಬಾ ಎಂದು ಕಠೋರವಾಗಿ ಹೇಳುತ್ತಾಳೆ. ಇದನ್ನು ಕೇಳಿದ ಸತ್ಯಗೆ ಬಹಳ ನೋವು ಆಗುತ್ತದೆ, ಕೋಪ ಕೂಡ ಬರುತ್ತದೆ. ಇನ್ನು ಚಿಕ್ಕ ಅತ್ತೆಯ ಬಳಿ ಸತ್ಯ ಮಾತನಾಡಲು ಬಂದಾಗ ಆಕೆ ಕೂಡಾ ತಿರಸ್ಕಾರದಿಂದ ಮಾತನಾಡುತ್ತಾ ಇರುತ್ತಾಳೆ. +
ಊರ್ಮಿಳಾ ಸತ್ಯ ಜೊತೆ ಮಾತನಾಡದೆ ಇರಲು ಕಾರಣ ಇದೆ. ತನ್ನ ಗಂಡನಿಗೆ ಅಪಮಾನ ಮಾಡಿದ್ದಾಳೆ. ಹಾಗೆಯೇ ಮಗಳ ವಿಚಾರದಲ್ಲೂ ತಪ್ಪು ಮಾಡಿದ್ದಾಳೆ ಎನ್ನುವ ಭಾವನೆ ಊರ್ಮಿಳಾ ಮನದಲ್ಲಿ ಮೂಡಿದೆ. ಆ ಕಾರಣಕ್ಕೆ ಸತ್ಯ ಬಳಿ ಯಾರು ಮಾತನಾಡಲು ಇಷ್ಟ ಪಡುತ್ತಿಲ್ಲ. ಇದನ್ನು ನೋಡಿದ ಸತ್ಯಗೆ ಬಹಳ ಬೇಸರ ಆಗುತ್ತದೆ. ಇನ್ನು ರಾಕೇಶ್ ತನ್ನ ಗೆಳೆಯರ ಜೊತೆ ಮಾತನಾಡುತ್ತ ಇರುವ ವೇಳೆ ರಿತು ಕರೆ ಮಾಡುತ್ತಾಳೆ.
ರಿತು ಕರೆ ಮಾಡಿದ್ದನ್ನು ನೋಡಿಕೊಂಡ ರಾಕೇಶ್ ಮೊದಲು ಕರೆ ಸ್ವೀಕಾರ ಮಾಡಲಿಲ್ಲ. ಆ ಬಳಿಕ ಆತನೇ ಅಯ್ಯೋ ರಿತು ಏಕೆ ಕರೆ ಮಾಡಿದ್ದಳೋ ಏನೋ ನಾನೇ ಅವಳಿಗೆ ಕರೆ ಮಾಡುತ್ತೇನೆ ಎಂದು ಹೇಳಿ ಕರೆ ಮಾಡಲು ಮುಂದಾಗುತ್ತಾನೆ. ಆಗ ಗೆಳೆಯ ನೀನು ಹಾಗೆ ಮಾತನಾಡುತ್ತಾ ಇದ್ದೀಯಾ ಹೀಗೆ ಕೂಡ ಮಾತನಾಡುತ್ತಾ ಇದ್ದೀಯಾ ಎಂದೆಲ್ಲ ಹೇಳುತ್ತಾನೆ. ಆದರೆ ರಾಕಿ ಅವರ ಮಾತು ಕೇಳದೆ ರಿತುಗೆ ಕರೆ ಮಾಡುತ್ತಾನೆ.

ರಾಕಿ ಮಾತು ಕೇಳಿ ಖುಷಿಯಾದ ರಿತು
ರಾಕಿ ಕರೆ ಮಾಡಿದ್ದನ್ನು ನೋಡಿದ ರಿತುಗೆ ಬಹಳ ಖುಷಿ ಆಗುತ್ತದೆ. ರಿತು ರಾಕಿ ಜೊತೆ ಮನ ಬಿಚ್ಚಿ ಮಾತನಾಡುತ್ತಾಳೆ. ಅದನ್ನು ನೋಡಿದ ಎಲ್ಲರೂ ಖುಷಿ ಪಡುತ್ತಾರೆ. ರಿತು ರಾಕಿ ಬಳಿ ಮಾತನಾಡುತ್ತಾ ಇರುವಾಗ ಅಲ್ಲಿಗೆ ಲಕ್ಷ್ಮಣ ಬರುತ್ತಾನೆ. ಆದರೆ ಇದು ಅರಿಯದೆ ರಿತು ಮಾತನಾಡುತ್ತ ಇರುತ್ತಾಳೆ. ಕೊನೆಗೆ ರಿತು ಗೆಳತಿ ಅಂಕಲ್ ಎಂದಾಗ ರಿತು ತಂದೆಯನ್ನು ನೋಡುತ್ತಾಳೆ. ಇನ್ನು ಅವರಿಬ್ಬರ ಮಧ್ಯೆ ದೊಡ್ಡ ಜಗಳ ಮೂಡಿ ಬರುತ್ತದೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











