Sathya: ಕೆರಳಿದ ಸೀತಮ್ಮನನ್ನು ಹೇಗೆ ಸಮಾಧಾನ ಮಾಡುತ್ತಾಳೆ ಸತ್ಯ?
ಲಕ್ಷ್ಮಣ ಆಡಿದ ಮಾತುಗಳನ್ನು ಕೇಳಿದ ಸೀತಾ ಏನು ಮಾಡಬೇಕು ಎಂದು ದಿಕ್ಕೇ ತೋಚದಂತಾಗಿದ್ದಾರೆ. ಬಳಿಕ ಸತ್ಯ ಮೇಲೆ ಕೋಪ ಮಾಡಿಕೊಂಡ ಸೀತಾ ಹೇಳುತ್ತಾಳೆ ಇಷ್ಟೆಲ್ಲ ಆಗಿದ್ದು ಇವಳಿಂದ ಇವಳ ವಕ್ರ ದೃಷ್ಟಿ ಎಲ್ಲರ ಮೇಲೂ ಬಿದ್ದಿದೆ. ಆದರಿಂದ ಹೀಗೆಲ್ಲ ಆಗುತ್ತಿದೆ. ಹೀಗೆ ಮಾತನಾಡುತ್ತಾ ಜೋರಾಗಿ ಕಿರುಚಾಡಿ ಬಿಡುತ್ತಾಳೆ.
ಆದರೆ ಸತ್ಯ ಮಾತ್ರ ಮೆಲ್ಲಗೆ ಮಾತನಾಡುತ್ತಾಳೆ. ನಾನು ಏನು ಮಾಡಿಲ್ಲ, ಸೀತಮ್ಮ ಎಂದಾಗಲೂ ಕೂಡ ಕೋಪಗೊಂಡ ಸೀತಾ ಜೋರಾಗಿ ಬೈಯ್ಯುತ್ತಲೇ ಇರುತ್ತಾಳೆ. ಸೀತಾ ಬೈಯುತ್ತಾ ಇರುವುದನ್ನು ನೋಡಿದ ಕಾರ್ತಿಕ್‌ಗೆ ತಲೆಕೆಟ್ಟು ಹೋಗುತ್ತದೆ. ನಾನು ಮಾತನಾಡುತ್ತಾ ಇರುವುದು ಸತ್ಯ ಬಗ್ಗೆ ಅಲ್ಲ ರಿತು ಬಗ್ಗೆ ಸತ್ಯ ಬಗ್ಗೆ ಈ ರೀತಿ ಮಾತನಾಡಿದರೆ ಹೇಗೆ ಎಂದು ಹೆಂಡತಿ ಪರ ವಕಾಲತ್ತು ವಹಿಸುವುದು ನೋಡಿ ಸೀತಾ ಕೋಪ ಮತ್ತಷ್ಟು ಹೆಚ್ಚಾಗುತ್ತದೆ.

ಸತ್ಯ ಪರವಾಗಿ ಮಾತನಾಡಿದ ಕಾರ್ತಿಕ್
ನೀನು ಅಮ್ಮನ ವಿರುದ್ದ ಮಾತನಾಡುವುದು ಯಾವಾಗ ಕಲಿತೆ ನೀನು ಈ ರೀತಿ ಮಾತನಾಡುತ್ತಾ ಇರಲಿಲ್ಲ. ನನಗೆ ಬಹಳ ಬೇಸರ ಆಗುತ್ತದೆ. ನನ್ನ ಮೇಲೆ ಇಷ್ಟೆಲ್ಲ ಗೌರವ ಇಟ್ಟುಕೊಂಡು ಇದ್ದೆ. ಆದರೆ ಸತ್ಯ ಮನೆಗೆ ಬಂದಿದ್ದೆ ಬಂದಿದ್ದು ನಿನ್ನಲ್ಲಿ ಬಹಳ ಬದಲಾವಣೆ ತಂದು ಬಿಟ್ಟಿದ್ದಾಳೆ ಎಂದು ಸೀತಾ ಚುಚ್ಚಿ ಮಾತನಾಡುತ್ತಾಳೆ. ಇದನ್ನು ನೋಡಿದ ಸತ್ಯ ಮಾತ್ರ ಮೆತ್ತಗೆ ಹೇಳುತ್ತಾಳೆ. ಹೀಗೆಲ್ಲ ನನ್ನ ಬಗ್ಗೆ ಮಾತನಾಡಬೇಡಿ ಸೀತಮ್ಮ ನನಗೆ ಬಹಳ ನೋವು ಆಗುತ್ತದೆ ಎನ್ನುತ್ತಾಳೆ.
ಕಾರ್ತಿಕ್, ಸತ್ಯ ಪರ ಮಾತನಾಡಿದ್ದನ್ನು ನೋಡಿ ಈಕೆ ಬಗ್ಗೆ ಇನ್ನೂ ಹೆಚ್ಚಾಗಿ ಮಾತನಾಡು, ಆದರೆ ಈಕೆ ಖಂಡಿತವಾಗಿಯೂ ಮನೆ ಒಡೆಯುವುದು ಗ್ಯಾರೆಂಟಿ, ನೀನು ಕಾಯುತ್ತಿರು ಎಂದು ಹೇಳಿ ಅಲ್ಲಿಂದ ಸೀತಾ ಹೊರಟು ಹೋಗುತ್ತಾಳೆ.
ಸೀತಾ ಮಾತಿಗೆ ನೊಂದುಕೊಂಡ ಸತ್ಯ
ಇದನ್ನೆಲ್ಲಾ ಕೇಳಿದ ಸತ್ಯ, ಕಾರ್ತಿಕ್ ಬಳಿ ಬಂದು ಕೇಳುತ್ತಾಳೆ. ಏನು ನಾನು ಮನೆ ಒಡೆಯುತ್ತೇನಾ? ಎಂದು ಹೇಳಿ ಅಲ್ಲಿಂದ ಕಾರ್ತಿಕ್ ಉತ್ತರವನ್ನು ನಿರೀಕ್ಷೆ ಮಾಡದೇ ಓಡಿ ಹೋಗುತ್ತಾಳೆ. ಇದನ್ನು ನೋಡಿದ ಕಾರ್ತಿಕ್ ಮಾತ್ರ ಬಹಳ ಬೇಸರ ಮಾಡಿಕೊಂಡು ಇರುತ್ತಾನೆ. ಇತ್ತ ದಿವ್ಯಾಳನ್ನು ತಬ್ಬಿ ಹಿಡಿದುಕೊಂಡು ಬಾಲ ನಾಟಕ ಆಡುತ್ತಿದ್ದಾನೆ.

ದಿವ್ಯಾ ಮುಂದೆ ಬಾಲನ ಹೈಡ್ರಾಮಾ
ಬಾಲನ ನಾಟಕ ನೋಡಿದ ತಾತ ಮಾತ್ರ ಎನು ಮಾಡಬೇಕು ಎಂದು ತಿಳಿಯದೇ ಪರದಾಡುತ್ತಾರೆ . ಇನ್ನು ಚೋಟುಗೆ ಮಾತ್ರ ಬಾಬಯ್ಯ ಸಖತ್ ಆಗಿ ನಾಟಕ ಆಡುತ್ತಾನೆ ಎಂದು ಮನದಲ್ಲಿ ಅಂದುಕೊಂಡು ಇರುತ್ತಾನೆ. ಬಾಲನ ನಾಟಕದ ಕಣ್ಣೀರು ನೋಡಲಾಗದೇ ಸರಿ ಅಳಬೇಡ ಎಂದು ಸಮಾಧಾನ ಮಾಡುತ್ತಾಳೆ. ಅವಳು ಅತ್ತ ಹೋಗುತ್ತಿದ್ದಂತೆ ಬಾಲ ಬಹಳ ಖುಷಿ ಪಡುತ್ತಾನೆ. ಇನ್ನು ನನ್ನ ತಂದೆಯ ಬಗ್ಗೆ ದಿವ್ಯಾ ಏನು ಕೇಳುವುದೇ ಇಲ್ಲ ಅಂದುಕೊಂಡು ಇರುತ್ತಾಳೆ.
ತಂದೆ ಬಳಿ ಮಾತನಾಡಿದ ಸತ್ಯ
ಸತ್ಯ ತನ್ನ ತಂದೆಯ ಫೋಟೋ ನೋಡಿ ಅಳುತ್ತಾಳೆ. ನನ್ನ ಮೇಲೆ ಇಲ್ಲ ಸಲ್ಲದ ಆರೋಪವನ್ನು ಹೊರಿಸುತ್ತಾ ಇರುತ್ತಾರೆ, ನನಗೆ ಬಹಳ ಕಷ್ಟ ಆಗುತ್ತಿದೆ ಇದೆಲ್ಲವನ್ನೂ ತಡೆದುಕೊಳ್ಳಲು ನಾನು ಮಾಡಿದ ತಪ್ಪಾದರೂ ಏನು ಎಂದೆಲ್ಲ ಹೇಳುತ್ತಿರುತ್ತಾಳೆ. ಇದೇ ವೇಳೆ ಕಾರ್ತಿಕ್ ಅಲ್ಲಿಗೆ ಬರುತ್ತಾನೆ. ಆತ ಸತ್ಯಗೆ ಆದಷ್ಟು ಸಮಾಧಾನ ಮಾಡುತ್ತಾನೆ. ಸತ್ಯ ಕಾರ್ತಿಕ್ ಮಾತಿಗೆ ಕೊಂಚ ರಿಲ್ಯಾಕ್ಸ್ ಆಗುತ್ತಾಳೆ.


Click it and Unblock the Notifications











