Sathya: ಸತ್ಯ ಮನದಲ್ಲಿ ಮನೆ ಮಾಡಿದ ಸಂಭ್ರಮ, ಕಾರ್ತಿಕ್ ಬಳಿ ಮನದ ನೋವು ಹಂಚಿಕೊಂಡ ಬಾಲ!
ಸತ್ಯ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ. ಇದೀಗ ಬಾಲ ಹಾಗೂ ಕಾರ್ತಿಕ್ ಅತ್ತೆ ಮನೆಯಲ್ಲಿ ಕಡುಬು ಮಾಡುವ ಟಾಸ್ಕ್ ತೆಗೆದುಕೊಂಡು ಇದ್ದಾರೆ . ಹೌದು.. ಸತ್ಯ ಮನೆಯಲ್ಲಿ ಅದ್ದೂರಿಯಾಗಿ ಗಣೇಶ ಹಬ್ಬ ಮಾಡಲಾಗುತ್ತಿದೆ.
ತನ್ನ ಅತ್ತೆಯ ಜೊತೆ ಅಮ್ಮನ ಮನೆಗೆ ಬಂದ ಸತ್ಯಗೆ ಬಹಳ ಪ್ರೀತಿಯ ಆತಿಥ್ಯ ಸಿಕ್ಕಿದೆ. ದಿವ್ಯಾ ಕೊಂಕು ಮಾತುಗಳಿಗೆ ತಲೆ ಕೆಡಿಸಕೊಳ್ಳದೆ ಎಲ್ಲಾ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡುತ್ತಾಳೆ . ಆದರೆ ಸೀತಾಗೆ ಮಾತ್ರ ದಿವ್ಯಾ ಮೇಲೆ ವಿಪರೀತ ಸಿಟ್ಟು ಬರುತ್ತಿದೆ. ವಿಪರೀತವಾಗಿ ಸತ್ಯ ಮೇಲೆ ದ್ವೇಷ ಇಟ್ಟುಕೊಂಡಿರುವ ದಿವ್ಯಳನ್ನು ಸೀತಾ ಪ್ರಶ್ನೆ ಮಾಡುತ್ತಾಳೆ. ಹಾಗೆಯೇ ಕಪಾಳಕ್ಕೆ ಹೊಡೆಯುವ ಹಾಗೆ ಮಾತನಾಡುತ್ತಾಳೆ.

ಇನ್ನೂ ಕಾರ್ತಿಕ್ ಹಾಗೂ ಊರ್ಮಿಳಾ, ರಿತು ಗಣೇಶ ದೇವರನ್ನು ಹಿಡಿದುಕೊಂಡು ಬರುತ್ತಾರೆ. ಮನೆಯಲ್ಲಿ ಗಣೇಶ ಹಬ್ಬದ ಸಂಬ್ರಮ ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಇನ್ನೂ ಗಣೇಶ ಹಬ್ಬ ನೋಡಿದ ಅಕ್ಕ ಪಕ್ಕದ ಮನೆಯವರು ಕೂಡ ಬಹಳ ಖುಷಿ ಪಡುತ್ತಾರೆ. ಇನ್ನೂ ಬಾಲ ಮಾತ್ರ ದಿವ್ಯಗೆ ಸರಿಯಾಗಿ ಪಾಠ ಕಲಿಸಿದ್ದಾನೆ.
ಸತ್ಯ ಬಗ್ಗೆ ತುಚ್ಛವಾಗಿ ಮಾತನಾಡಿದ ದಿವ್ಯಾ
ದಿವ್ಯಾ, ಸತ್ಯ ಬಗ್ಗೆ ತುಚ್ಛವಾಗಿ ಮಾತನಾಡುತ್ತಾ ಇರುವುದನ್ನು ನೋಡಿದ ಆಕೆಯನ್ನು ಬಾಲ ತರಾಟೆಗೆ ತೆಗೆದುಕೊಂಡು ಬಾಯಿ ಮುಚ್ಚಿಸಿ ಬಿಡುತ್ತಾನೆ. ಇನ್ನೂ ಬಾಲ ಹಾಗೂ ಕಾರ್ತಿಕ್ ಕಡುಬು ಮಾಡುತ್ತಾ ಇರುವಾಗಲೂ ಅದೇ ಯೋಚನೆ ಮಾಡುತ್ತಾ ಇರುತ್ತಾನೆ. ನಾನು ದಿವ್ಯಾಗೆ ಮೋಸ ಬಿಡಿಬಿಟ್ಟೆ ಇದೀಗ ಅವಳು ಬಹಳ ದುಃಖದಲ್ಲಿ ಇರುತ್ತಾಳೆ. ಬೇಕು ಬೇಕು ಎಂದು ಕಾಲು ಕೆರೆದುಕೊಂಡು ಬಂದು ಗಲಾಟೆ ಮಾಡುತ್ತಾಳೆ ಇದರಿಂದ ಮನೆಯವರಿಗೆ ಕೂಡ ಬಹಳ ಕಷ್ಟ ಆಗುತ್ತಿದೆ ಎಂದೆಲ್ಲ ಹೇಳುತ್ತಾನೆ.. ಇದನ್ನು ಕೇಳಿದ ಕಾರ್ತಿಕ್ ಹೌದು ಎಂದು ಹೇಳುತ್ತಾನೆ.

ಕಾರ್ತಿಕ್ ಮಾತಿನಿಂದ ನಿಟ್ಟುಸಿರು ಬಿಟ್ಟ ಬಾಲ
ನನಗೆ ನೀವು ದಿವ್ಯಾ ಮದುವೆ ಆಗಿದ್ದು ಬಹಳ ಖುಷಿ ಇದೆ. ನಾನು ದಿವ್ಯಾನ ಪ್ರೀತಿ ಮಾಡಿಯೇ ಇಲ್ಲ. ನೀವು ದಿವ್ಯಾನನ್ನು ಮನಸಾರೆ ಪ್ರೀತಿ ಮಾಡಿದ್ದೀರಿ. ನೀವು ಮದುವೆ ಆಗಿರುವುದೇ ಸರಿ ಎಂದೆಲ್ಲ ಹೇಳುತ್ತ ಇರುತ್ತಾನೆ. ಇನ್ನೂ ಬಾಲ ಬಳಿ ಕಾರ್ತಿಕ್ ಹೇಳುತ್ತಾನೆ. ಬಾಲ ಅವರೇ ದಿವ್ಯಾ ಯಾವತ್ತಾದರೂ ಸರಿ ಹೋಗಿಯೇ ಹೋಗುತ್ತಾರೆ.. ನೀವು ನೋವು ಮಾಡಿಕೊಳ್ಳಬೇಡಿ ಎಂದೆಲ್ಲ ಸಮಾಧಾನ ಮಾಡುತ್ತಾನೆ.
ಆಗ ಬಾಲ ಮೆತ್ತಗೆ ಹೇಳುತ್ತಾನೆ ಆಕೆ ಖುಷಿಯಾಗಿ ಇದ್ದರಷ್ಟೇ ಸಾಕು ಎಂದು ಹೇಳಿ ನಾನು ಮೊದಲಿನ ಹಾಗೆ ಇಲ್ಲ ಇದೀಗ ಬದಲಾಗಿದ್ದೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿ ಖುಷಿಯಲ್ಲಿ, ನನಗೇ ತಿಳಿದು ಬಹಳ ಖುಷಿ ಆಯಿತು ಬಾಲ ಎಂದು ಕಾರ್ತಿಕ್ ಹೇಳುತ್ತಾನೆ. ಇದನ್ನು ಕೇಳಿದ ಬಾಲನಿಗೆ ಕೂಡ ಬಹಳ ಖುಷಿ ಆಗುತ್ತದೆ.


Click it and Unblock the Notifications











