Sathya: ಗೆಳೆಯನ ಹನಿಮೂನ್ ಪ್ಲಾನ್ ಕೇಳಿ ಸುಸ್ತಾದ ಕಾರ್ತಿಕ್!
ಸತ್ಯ ಧಾರಾವಾಹಿಯಲ್ಲಿ ಸತ್ಯ ಸೀತಾರ ಮನ ಗೆದ್ದಿದ್ದಾಳೆ. ಸೀತಾಗೆ ಸತ್ಯ ಬಗ್ಗೆ ಇದ್ದ ಕೆಟ್ಟ ಭಾವನೆ ಹೊರಟು ಹೋಗಿದೆ.. ಆಕೆಯ ಮೇಲೆ ಪ್ರೀತಿ ಕಾಳಜಿ ಹೆಚ್ಚಾಗಿದೆ. ಹುಷಾರಿಲ್ಲದ ವೇಳೆ ಸತ್ಯ ಮೇಲೆ ಅತಿಯಾದ ಕಾಳಜಿಯನ್ನು ತೋರಿಸಿದ್ದಾಳೆ ಸೀತಾ. ಇನ್ನೂ ಸೀತಾಗೆ ದಿವ್ಯ ಮೇಲೆ ಕೋಪ ಇನ್ನೂ ಹೆಚ್ಚಾಗಿದೆ.
ದಿವ್ಯ ಬಗ್ಗೆ ಕೋಪ ಮಾಡಿಕೊಂಡ ಸೀತಾ ಮಾತ್ರ ಆಕೆಯನ್ನು ಕ್ಷಮಿಸದಷ್ಟು ಸಿಟ್ಟು ಮಾಡಿಕೊಂಡಿದ್ದಾಳೆ. ದಿವ್ಯ ಸತ್ಯ ಬಗ್ಗೆ ಬಹಳ ಕೆಟ್ಟ ರೀತಿಯಲ್ಲಿ ಮಾತನಾಡಿದ್ದಾಳೆ. ಸತ್ಯ ಅತ್ತೆಯ ಮನಸ್ಸನ್ನು ಕೆಡಿಸಿಬಿಟ್ಟರೆ ಸತ್ಯಗೆ ಆ ಮನೆಯಲ್ಲಿ ಉಳಿಗಾಲ ಇಲ್ಲ ಎಂದು ಹೇಳುತ್ತ ಮನದಲ್ಲಿ ನಗುತ್ತಾ ಇರುತ್ತಾಳೆ.

ಇನ್ನೂ ದಿವ್ಯ ಮಾತುಗಳನ್ನು ಕೇಳಿಸಿಕೊಂಡ ಸೀತಾ, ದಿವ್ಯಗೆ ಶಾಕ್ ನಿಡಿದ್ದು, ತನ್ನ ಸೊಸೆಯ ಬಗ್ಗೆ ಮಾತನಾಡದ ಹಾಗೆ ಎಚ್ಚರಿಕೆ ನೀಡಿದ್ದಾಳೆ. ಮನೆಗೆ ಬಂದು ಸತ್ಯ ಬಳಿಯೂ ದಿವ್ಯ ಬಗ್ಗೆ ಅಸಮಾಧಾನದ ಮಾತುಗಳನ್ನು ಆಡಿದಾಗ ಸತ್ಯಗೆ ಎನು ಹೇಳಬೇಕು ಎಂದು ತಿಳಿಯದ ಹಾಗೆ ಆಗುತ್ತದೆ. ಇನ್ನೂ ಸತ್ಯ ಕಾರ್ತಿಕ್ ಮಲಗಿರುವ ವೇಳೆ ಕಾರ್ತಿಕ್ ಗೆಳೆಯ ಕರೆ ಮಾಡುತ್ತಾನೆ.
ಸತ್ಯ - ಕಾರ್ತಿಕ್ ಹನಿಮೂನ್!
ಕಾರ್ತಿಕ್ ಬಗೆಗಿನ ಕಾಳಜಿ ಬಗ್ಗೆ ಆತ ಕರೆ ಮಾಡಿದ್ದರೆ ಕಾರ್ತಿಕ್ ಮಾತ್ರ ಗೂರ್ ಎನ್ನುತ್ತಾನೆ.. ಹಾಗೆಯೇ ಕಾರ್ತಿಕ್ ಗೆಳೆಯ ಸತ್ಯ ಆರೋಗ್ಯ ವಿಚಾರಿಸುತ್ತಾನೆ. ಸತ್ಯ ಆರೋಗ್ಯ ಹೇಗಿದೆ ರಂದು ಕೇಳಲು ಫೋನು ಮಾಡಿದೆ ಎಂದು ಹೇಳಿ, ಬಳಿಕ ಹನಿಮೂನ್ ಬಗ್ಗೆ ಕಾರ್ತಿಕ್ ನನ್ನು ಪ್ರಶ್ನೆ ಮಾಡುತ್ತಾನೆ.

ಹನಿಮೂನ್ ಎಂದು ಕಾರ್ತಿಕ್ ಹೇಳುವ ವೇಳೆಯೇ ಸತ್ಯ ನಿದ್ದೆಯಿಂದ ಎಚ್ಚರವಾಗುತ್ತಾಳೆ. ಆಕೆ ಮೆತ್ತಗೆ ಕಾರ್ತಿಕ್ ಹೇಳುತ್ತಿರುವುದನ್ನು ಕೇಳಿಸಿಕೊಳ್ಳುತ್ತಾ ಎದ್ದಿದ್ದಾಳೆ. ಕಾರ್ತಿಕ್ ಮೆತ್ತಗೆ ಆತನ ಗೆಳೆಯನ ಫೋನ್ ಇಡುತ್ತಾನೆ. ನಂತರ ಸತ್ಯ ಕಾರ್ತಿಕ್ ನನ್ನು ಪ್ರಶ್ನೆ ಮಾಡುತ್ತಾಳೆ. ಯಾರದು ಕರೆ ಮಾಡಿದ್ದು ಎಂದಾಗ ತನ್ನ ಗೆಳೆಯ ಎಂದು ಕಾರ್ತಿಕ್ ಹೇಳುತ್ತಾನೆ.
ಹನಿಮೂನ್ ಬಗ್ಗೆ ಕಾರ್ತಿಕ್ ಬಳಿ ಸತ್ಯ ಪ್ರಶ್ನೆ
ಫೋನಿನಲ್ಲಿ ಏನೋ ಹನಿಮೂನ್ ಎಂದೆಲ್ಲ ಮಾತನಾಡಿದ ಹಾಗಿತ್ತು ಎಂದು ಸತ್ಯ ಕಾರ್ತಿಕ್ ಬಳಿ ಕೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಕಾರ್ತಿಕ್ ಗೆ ತಿಳಿಯುತ್ತದೆ ಸತ್ಯ ಎಲ್ಲಾ ಕೇಳಿಸಿಕೊಂಡಿದ್ದಾಳೆ ಎಂದು ಆತನಿಗೆ ಬಹಳ ಜೋರು ನಗು ಬರುತ್ತದೆ. ಕಾರ್ತಿಕ್ ನಗುತ್ತಾ ಇರುವುದನ್ನು ಕಂಡು ಏನು ಜೋಕ್ ಮಾಡುತ್ತಾ ಇದ್ದೀನ ಎಂದು ಸತ್ಯ ಕೋಪ ಮಾಡಿಕೊಂಡಿದ್ದಾಳೆ. ಸತ್ಯ ಮುನಿಸಿಕೊಂಡರೆ ಕಾರ್ತಿಕ್ ಸತ್ಯ ಬಗ್ಗೆ ಬಿದ್ದು ಬಿದ್ದು ನಗುತ್ತಾನೆ.
ಸತ್ಯ ಮೇಲೆ ಕಾರ್ತಿಕ್‌ಗೆ ಫುಲ್ ಲವ್
ಸತ್ಯಗೆ ಕಾರ್ತಿಕ್ ಮೇಲೆ ಬಹಳ ಲವ್ ಆಗಿದೆ. ಆದರೆ ಕಾರ್ತಿಕ್ ಮಾತ್ರ ಸತ್ಯ ಕಾಲು ಎಳೆಯುತ್ತಾ ಇರುತ್ತಾನೆ. ಇನ್ನೂ ಸತ್ಯ ಹಾಗೂ ಕಾರ್ತಿಕ್ ಒಂದಾಗುವುದನ್ನು ನೋಡಲು ಅಭಿಮಾನಿಗಳು ನೋಡಲು ಕಾತರದಿಂದ ಕಾಯುತ್ತಾ ಇದ್ದಾರೆ.


Click it and Unblock the Notifications











