Sathya Serial: ಲಕ್ಷ್ಮಣನಿಗೆ ಮಾತಿನ ಏಟು ಕೊಟ್ಟ ಸತ್ಯ.. ಆ ಮಾತಿಗೆ ಫುಲ್ ಶಾಕ್ !

By ಪೂರ್ವ

ಈ ಧಾರಾವಾಹಿಯಲ್ಲಿ ಇದೀಗ ಲಕ್ಷ್ಮಣನ ಎಲ್ಲಾ ವಿಚಾರ ಸತ್ಯಗೆ ತಿಳಿದಿದೆ. ಲಕ್ಷ್ಮಣ ತನ್ನ ಹೆಂಡತಿ ಊರ್ಮಿಳಾಗೆ ಮೋಸ ಮಾಡಿ ಇನ್ನೊಂದು ಸಂಸಾರವನ್ನು ಕಟ್ಟಿಕೊಂಡಿದ್ದಾರೆ. ಆತನಿಗೆ ಇನ್ನೊಂದು ಗಂಡು ಮಗು ಬೇರೆ ಇದೆ. ಆದರೆ, ಊರ್ಮಿಳಾ ಮಾತ್ರ ತನ್ನ ಗಂಡ ಶ್ರೀ ರಾಮ ಚಂದ್ರ ಆತನ ಮೇಲೆ ಯಾವುದೇ ಕೆಟ್ಟ ಕಣ್ಣು ಬೀಳಬಾರದು ಎಂದೆಲ್ಲ ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಇರುತ್ತಾಳೆ. ಇನ್ನೂ ಊರ್ಮಿಳಾಗೆ ತನ್ನ ಗಂಡ ಎಂದರೆ ಅಪಾರವಾದ ಪ್ರೀತಿ.

ಆದರೆ, ಸತ್ಯಗೆ ಮಾತ್ರ ಲಕ್ಷ್ಮಣನ ಮೇಲೆ ಬಹಳ ಕೋಪ ಬಂದಿದೆ.. ಚಿನ್ನದಂತಹ ಹೆಂಡತಿಗೆ ಮೋಸ ಮಾಡಿ ಬೇರೆ ಸಂಸಾರ ಹೂಡಿರುವ ಲಕ್ಷ್ಮಣನ ಬಂಡವಾಳ ಮನೆಯಲ್ಲಿ ಹೇಳಿದರೆ ಎಲ್ಲಿ ಊರ್ಮಿಳಾಗೆ ಬೇಸರವಾಗುತ್ತದೊ.. ಗಂಡನನ್ನೂ ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿರುವ ಊರ್ಮಿಳಾ ಮನಸ್ಸು ಒಡೆದು ಹೋಗಬಾರದು ಎಂಬ ಕಾರಣಕ್ಕೆ ಮನೆಯಲ್ಲಿ ಎನು ಹೇಳದೆ ತೆಪ್ಪಗೆ ಇದ್ದಾಳೆ ಸತ್ಯ.

Kannada serial Sathya written updated on August 9th

ಎಲ್ಲಾದರೂ ಮನೆಯಲ್ಲಿ ಈ ವಿಚಾರವನ್ನು ಹೇಳಿದರೆ ಯಾರು ಸುಮ್ಮನೆ ಇರಲಾರರು ಎಂಬುವುದು ಸತ್ಯಗೆ ತಿಳಿದಿದೆ. ಇನ್ನೂ ಈಗ ತಾನೇ ಸೀತಮ್ಮಗೆ ಸತ್ಯ ಮೇಲೆ ಪ್ರೀತಿ ಬರುತ್ತಿದೆ. ಸತ್ಯ ಬಗ್ಗೆ ಬಹಳ ಕೀಳಗಿ ನೋಡುತ್ತಿದ್ದ ಸೀತಾ ಮನಸ್ಸು ಕರಗಿದೆ. ಇನ್ನೂ ಮನೆಗೆ ಇದೀಗ ಲಕ್ಷ್ಮಣ್ ಬಂದಿದ್ದಾನೆ. ವಿದೇಶದಲ್ಲಿ ಮೀಟಿಂಗ್ ಇದೆ ಎಂದು ಸುಳ್ಳು ಹೇಳಿ ಎರಡನೇ ಹೆಂಡತಿ ಜೊತೆ ದೇವಸ್ಥಾನ ಸುತ್ತಿ ಇದೀಗ ಮನೆಗೆ ಬಂದಿದ್ದೀರಾ ಎಂದು ಸತ್ಯ ಮನದಲ್ಲಿ ಹೇಳಿಕೊಂಡಿದ್ದಾಳೆ.

ಊರ್ಮಿಳಾ ಬಗ್ಗೆ ಬೇಸರಗೊಂಡ ಸತ್ಯ

ಇನ್ನೂ ಊರ್ಮಿಳಾ ಹುಟ್ಟುಹಬ್ಬ ಕೂಡ ಆವತ್ತೇ. ಆದರೆ ಲಕ್ಷ್ಮಣನಿಗೆ ಮಾತ್ರ ಅದ್ಯಾವುದೂ ನೆನಪೇ ಇಲ್ಲ. ಮನೆ ಮಂದಿ ಎಲ್ಲಾ ಆತನಿಗೆ ಹೇಳಿದಾಗ ತಿಳಿಯುತ್ತದೆ. ಆದರೂ, ಬೇಸರ ಮಾಡಿಕೊಳ್ಳದ ಊರ್ಮಿಳಾ ತನ್ನ ಗಂಡನಿಗಾಗಿ ವಿಧ ವಿಧ ವಾದ ಅಡುಗೆ ಮಾಡಿ ವಾದಿಸುತ್ತಾ ಇರುತ್ತಾಳೆ. ಅಷ್ಟೊಂದು ಪ್ರೀತಿ ಆಕೆಗೆ.. ಆದರೆ ಆ ಪ್ರೀತಿ ಲಕ್ಷ್ಮಣನ ಮಾತಿನಲ್ಲಿ ಮಾತ್ರ ಗೋಚರ ಆಗುತ್ತಿದೆ.

Kannada serial Sathya written updated on August 9th

ಹೆಂಡತಿಗೆ ಬೊಕ್ಕೆ ಕೊಟ್ಟು ವಿಶ್ ಮಾಡಿದ ಲಕ್ಷ್ಮಣ

ನಿಜವಾಗಲೂ ಪ್ರೀತಿ ಇದ್ದಿದ್ದರೆ ಯಾವುದು ಮರೆಯುತ್ತಿರಲಿಲ್ಲ ಎನ್ನುವುದು ತಿಳಿದೇ ಇರುವ ವಿಚಾರ. ಇನ್ನೂ ಎಲ್ಲರೂ ಊಟ ಮಾಡಿದ ಮೇಲೆ ಕುಳಿತುಕೊಂಡು ಹರಟೆ ಹೊಡೆಯುತ್ತಾ ಇರುವಾಗ ಲಕ್ಷ್ಮಣ ಬಂದು ಊರ್ಮಿಳಾ ಹುಟ್ಟು ಹಬ್ಬದ ಶುಭಾಶಯಗಳು ಎಂದು ವಿಶ್ ಮಾಡುತ್ತಾನೆ. ಆಗ ಊರ್ಮಿಳಾಗೆ ಬಹಳ ಖುಷಿ ಆಗುತ್ತದೆ. ಆದರೆ ಸತ್ಯ ಮಾತ್ರ ಚಿಕ್ಕತ್ತೆ ನಿಮಗೆ ನಿಜ ಗೊತ್ತಾದರೆ ನೀವು ತಡೆದುಕೊಳ್ಳುವುದಿಲ್ಲ ಎಂದಿದ್ದಾಳೆ.

ಉರ್ಮಿಳಾ ಬಗ್ಗೆ ಮರುಕ ಪಟ್ಟ ಸತ್ಯ

ಇನ್ನೂ ಲಕ್ಷ್ಮಣ, ಊರ್ಮಿಳಾಗೆ "ನೀನು ನನ್ನ ಜೊತೆ ಯಾವತ್ತೂ ಇರಬೇಕು" ಎಂದು ಹೇಳಿದಾಗ ಸತ್ಯ ಹೇಳುತ್ತಾಳೆ. "ಇದ್ದಾರೆ ನಿಮ್ಮ ತರ ಇರಬೇಕು ಚಿಕ್ಕ ಮಾವ. ಹೇಗೆ ಹೆಂಡತಿ ಜೊತೆ ಅನ್ಯೋನ್ಯವಾಗಿ ಇರಬೇಕು. ಹೇಗೆ ಪ್ರೀತಿ ತೋರಿಸಬೇಕು. ನಿಮ್ಮನ್ನು ನೋಡಿ ಕಲಿಬೇಕು ಚಿಕ್ಕ ಮಾವ" ಎಂದಾಗ ಲಕ್ಷ್ಮಣನಿಗೆ ಬಹಳ ಶಾಕ್ ಆಗುತ್ತೆ. ಮನೆ ಮಂದಿ ಎದುರು ಯಾರಿಗೇ ಗೊತ್ತಾಗಬೇಕು ಅವರಿಗೆ ಗೊತ್ತಾದರೆ ಸಾಕು ಎನ್ನುವ ತರ ಮಾತಿನ ಏಟನ್ನು ಕೊಡುತ್ತಿದ್ದಾಳೆ ಸತ್ಯ.

More from Filmibeat

English summary
Kannada serial Satya written updated on August 9th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X