ಯಾರು ಏನೇ ಅಂದರೂ ಕಾರ್ತಿಕ್ ನನ್ನು ಬಿಟ್ಟುಕೊಡದ ಸತ್ಯ!
ಸತ್ಯ ಧಾರಾವಾಹಿ ಚೆನ್ನಾಗಿ ಮೂಡಿ ಬರುತ್ತಿದೆ ಇದೀಗ ಸತ್ಯ ಮೇಲೆ ಕಾರ್ತಿಕ್ ತಾಯಿ ಕಿಡಿ ಕಾರಿದ್ದಾರೆ. ಮಡಿಲಕ್ಕಿ ಶಾಸ್ತ್ರ ಮಾಡಲು ಮಡಿಲಕ್ಕಿ ತಂದಿರದ ಕಾರಣ ಗರಂ ಆಗಿದ್ದಾಳೆ. ಶಾಸ್ತ್ರ ಇಲ್ಲದೆ ಇದ್ದರೆ ಏನು ಅದನ್ನು ಪಾಲಿಸುವ ಮನಸಿರಬೇಕಲ್ವಾ ಎಂದು ಕಾರ್ತಿಕ್ ತಾಯಿ ಪ್ರಶ್ನೆ ಮಾಡಿದ್ದಾರೆ.
ಅದಕ್ಕೆ ಸತ್ಯ ಉತ್ತರ ಕೊಡಲು ಯತ್ನಿಸಿದಾಗ, ಕಾರ್ತಿಕ್ ತಾಯಿ ಕೋಪದಿಂದ 'ಮಾತನಾಡಬೇಡ, ನೀನೇನು ಊರ್ಮಿಳಾನಾ ನೀನು ಅವಳು ಅದನ್ನೆಲ್ಲ ಮಾಡುತ್ತಾಳೆ ಅಂತ ಅಂದುಕೊಂಡಿದ್ದೀಯಾ. ಗಂಡು ಬೀರಿ ಸೊಸೆ ಶಾಸ್ತ್ರ ಪಾಲಿಸುತ್ತಾಳ? ಕೈ ಬೀಸಿಕೊಂಡು ಬರುತ್ತಾಳೆ? ಇವಳಿಗಂತು ಎನು ಗೊತ್ತಾಗಲ್ಲ. ಇವರ ಮನೆಯವರಿಗೆ ಏನು ಗೊತ್ತಾಗಲ್ವಾ? ಛೇ ಎಲ್ಲಾ ನಮ್ಮ ಕರ್ಮ' ಎಂದು ಹೇಳಿ ಕೋಪದಿಂದ ಒಳ ಹೋಗುತ್ತಾಳೆ.
ಇದನ್ನು ಕಂಡ ಸತ್ಯ ಬಹಳ ಬೇಸರ ಮಾಡಿಕೊಳ್ಳುತ್ತಾಳೆ. ಆಗ ಕಾರ್ತಿಕ್ ಅಕ್ಕನ ಗಂಡ ಹೇಳುತ್ತಾನೆ ಹಾ ಸೆಕೆಂಡ್ ಟೈಮ್ ಎಂಟ್ರಿಗು ಕೂಡ ವಿಘ್ನ ಆಯಿತಾ ಎಂದಾಗ ಊರ್ಮಿಳಾ ಹೇಳುತ್ತಾಳೆ ಏನು ಅಂದುಕೊಳ್ಳಬೇಡ ಸತ್ಯ ನೀನು ಬರಿಗೈಯಲ್ಲಿ ಬಂದಿರೋದನ್ನು ನೋಡಿ ಕಾರಲ್ಲಿ ಬಿಟ್ಟು ಬಂದಿದ್ದೀಯಾ ಅಂದುಕೊಂಡೆ. ಛೇ ನಾನಾದರೂ ಸುಮ್ಮನಿರಬೇಕು ಇತ್ತು ಎಂದು ನೊಂದುಕೊಳ್ಳುತ್ತಾರೆ.

ಬೇಸರ ಇಲ್ಲ ಎನ್ನುವ ಸತ್ಯ
ಅದಕ್ಕೆ ಸತ್ಯ ಹೇಳುತ್ತಾಳೆ ಇರಲಿ ಚಿಕ್ಕತ್ತೆ ನನಗೇನು ಬೇಸರ ಇಲ್ಲ ಎಂದು ಹೇಳಿದಾಗ ಕಾರ್ತಿಕ್ ಹೇಳುತ್ತಾರೆ. ನಿನಗೇನು ಬೇಜಾರ ಇಲ್ಲ, ನನ್ನಮ್ಮ ಬೇಜಾರು ಮಾಡಿಕೊಂಡು ಹೋದ್ರಲ್ವಾ ಎಂದು ಹೇಳುತ್ತಾನೆ. ಬಳಿಕ ಊರ್ಮಿಳಾ ಹೇಳುತ್ತಾಳೆ ಸರಿ ಮನೆಯ ಒಳಗೆ ಬನ್ನಿ ಎಂದು ಹೇಳುತ್ತಾಳೆ. ಮನೆಯ ಒಳಗೆ ಬರುತ್ತಾರೆ. ಆಗ ನಾದಿನಿ ಬಂದು ಅತ್ತಿಗೆ ಒಳಗೆ ಬನ್ನಿ. ಕಾರ್ತಿಕ್ ನನ್ನು ಕಂಡು ಅಣ್ಣ ಬಹಳ ಕೊಬ್ಬಿದ್ದಾನೆ ನಿಮ್ಮ ಮನೆಯಲ್ಲಿ ಒಳ್ಳೆ ಊಟ ಹಾಕಿದ್ರೂ ಅಂದುಕೊಳ್ಳುತ್ತೇನೆ. ಎಂದು ಹೇಳಿದಾಗ ಕಾರ್ತಿಕ್ ಹೇಳುತ್ತಾನೆ ಏನೇ ನಿಂದು ಗಲಾಟೆ ಎಂದಾಗ ಕಾರ್ತಿಕ್ ತಂಗಿ ಹೇಳುತ್ತಾಳೆ ಮತ್ತೆ ಇನ್ನೇನು ಅತ್ತಿಗೆ ಬಳಿ ಇಷ್ಟು ರೂಡ್ ಆಗಿ ಮಾತನಾಡುತ್ತಿದ್ದಿಯಾ ಪಾಪ ಅವರಿಗೆ ಬೇಜಾರು ಆಗಲ್ವಾ ಎಂದು ಹೇಳುತ್ತಾಳೆ.

ತಂಗಿಯೊಟ್ಟಿಗೆ ಕಾರ್ತಿಕ್ ಜಗಳ
ಹೌದು ಕಣೆ ನನಗೆ ಕೊಬ್ಬು ಏನಿವಾಗ ಎಂದು ಜಗಳ ತೆಗೆಯುತ್ತಾನೆ. ಅದಕ್ಕೆ ತಂಗಿ ಹೇಳುತ್ತಾಳೆ ಹಾ...ನನ್ನ ಅತ್ತಿಗೆ ಕೊಬ್ಬು ಕರಗಿಸೋದರಲ್ಲಿ ಎಕ್ಸ್ ಪರ್ಟ್ ಮುಂಚೆ 30 ಜನಕ್ಕೆ ಹೇಗೆ ಕೊಬ್ಬು ಕರಗಿಸಬೇಕು ಟ್ರೇನಿಂಗ್ ತೆಗೆದುಕೊಂಡಿದ್ದರೂ ಎಂದು ಹೇಳುತ್ತಾಳೆ. ಆಗ ಕಾರ್ತಿಕ್ ಹೇಳುತ್ತಾನೆ ಹೇ ಏನೇ ಕೊಬ್ಬು ಕರಗಿಸೋದು ಎಂದು ರೇಗಿದಾಗ ಕಾರ್ತಿಕ್ ನನ್ನು ಸತ್ಯ ತಡೆಯುತ್ತಾಳೆ.

ಕಾರ್ತಿಕ್‌ಗೆ ಬಾವನ ಪ್ರಶ್ನೆ
ಆಗ ಊರ್ಮಿಳಾ ಹೇಳುತ್ತಾಳೆ ಸರಿ ಸರಿ ಇಬ್ಬರೂ ಒಳಗೆ ಬನ್ನಿ ಎಂದು ಹೇಳಿ ಊರ್ಮಿಳಾ ಒಳ ಹೋಗುತ್ತಾಳೆ. ಆಗ ಕಾರ್ತಿಕ್‌ರ ಬಾವ ಹೇಳುತ್ತಾನೆ 'ಬಾಮೈದಾ ಒಂದು ನಿಮಿಷ .. ಬಾಮೈದ ಏನಾದರು ಪ್ರಾಬ್ಲಂ' ಎಂದು ಕೇಳಿದಾಗ ಕಾರ್ತಿಕ್ ಹೇಳುತ್ತಾನೆ ಏನು ಪ್ರಾಬ್ಲಂ ಇಲ್ಲ. ಅದಕ್ಕೆ ಅವನು ಹೇಳುತ್ತಾನೆ ಮತ್ತೆ 'ಯಾಕೆ ಕರ್ಚಿಪ್ ಬಾಯಿಗೆ ಇಟ್ಟುಕೊಂಡಿದ್ದಿಯಾ' ಎಂದಾಗ ಸತ್ಯ ಹೇಳುತ್ತಾಳೆ ಹಲ್ಲು ನೋವು ಎಂದು.

ಸುಳ್ಳು ಹೇಳುವ ಸತ್ಯ
ಆಗ ಕಾರ್ತಿಕ್ ಕೂಡಾ ಹಲ್ಲು ನೋವು ಎಂದು ಹೇಳುತ್ತಾನೆ. ಆಗ ಬಾವ ಹೇಳುತ್ತಾರೆ ಇಲ್ಲ ಏನೋ ಸ್ಮೆಲ್ ಬರುತ್ತಿದೆ ಎಂದಾಗ ಸತ್ಯ ಹೇಳುತ್ತಾಳೆ ನಮ್ಮ ಮನೆಯಲ್ಲಿ ಆಲೂಗಡ್ಡೆ ಪಲ್ಯ ಮಾಡಿದರು. ಅದನ್ನು ಅವರು ತಿಂದ್ರು ಅದಕ್ಕೆ ಸ್ಮೆಲ್ ಬರುತ್ತಿದೆ ಹೇಳುತ್ತಾಳೆ. ಇನ್ನೇನಾದರೂ ಡೌಟ್ ಇದ್ಯಾ... ಎಂದು ಹೇಳುತ್ತಾಳೆ. ಇನ್ನೆನಾಗುತ್ತೆ ಎಂದು ಕಾದು ನೋಡಬೇಕಿದೆ.


Click it and Unblock the Notifications











