Sathya ; ಅನ್ಯಾಯದ ವಿರುದ್ಧ ಸಿಡಿದು ನಿಂತ ಸತ್ಯ, ಉಷಾ ಗೆ ಕೊನೆಗೂ ನ್ಯಾಯ ಸಿಗುತ್ತಾ?

By ಪೂರ್ವ

ಸತ್ಯನಿಗೆ ಇದೀಗ ಭಯ ಕಾಡತೊಡಗಿದೆ.ಉಷಾ ಗೆ ನ್ಯಾಯ ಒದಗಿಸಲು ನನ್ನಿಂದ ಸಾಧ್ಯ ಇದೆಯಾ ಎನ್ನುವ ಆತಂಕ ಆಕೆಗೆ ಶುರು ಆಗಿದೆ. ಯಾಕೆಂದರೆ ಹರ್ಶಿತ್ ಕಡೆ ಇರುವ ಲಾಯರ್ ಉಷಾ ಬಳಿ ಬೇಕಾ ಬಿಟ್ಟಿಯಾಗಿ ಪ್ರಶ್ನೆ ಮಾಡುತ್ತಿದ್ದಾರೆ.ಇದರಿಂದ ಉಷಾ ಬಹಳ ನೊಂದಿದ್ದಾಳೆ. ಅಷ್ಟರಲ್ಲಿ ನಾಳೆ ಅಂತಿಮ ತೀರ್ಪು ಹೊರ ಬರಲಿದೆ ಎಂದು ಹೇಳಿದಾಗ ಸತ್ಯ ಗೆ ಮಾತೇ ಹೊರಡದೆ ಆಗುತ್ತದೆ. ನ್ಯಾಯ ದೇವತೆಯಿಂದ ಯಾವತ್ತೂ ಅನ್ಯಾಯ ಆಗುವುದು ಇಲ್ಲ ಎಂದು ಸತ್ಯ ನಂಬಿದ್ದಾಳೆ . ಆದರೆ ದುರುಳರ ಅಟ್ಟಹಾಸದಿಂದಾಗಿ ಉಷಾ ಗೆ ಅನ್ಯಾಯ ಆಗುವ ಸಂಭವ ಹೆಚ್ಚಾಗಿದೆ. ಸತ್ಯ ಳನ್ನು ಹೇಗಾದರೂ ಮಾಡಿ ಈ ಕೇಸ್ ನಲ್ಲಿ ಸೋಲಿಸಬೇಕು ಎಂದು ಎದುರಾಳಿಗಳು ಪಣ ತೊಟ್ಟುಕೊಂಡು ಇರುತ್ತಾರೆ. ಆದರೆ ಸತ್ಯ ಗೆ ಉಷಾ ಸ್ಥಿತಿ ಕಂಡು ಸಹೋದ್ಯೋಗಿ ಆಗಿರುವ ಮುನಿಸ್ವಾಮಿ ಅವರ ಸ್ಥಿತಿ ಕಂಡು ಬಹಳ ಬೇಸರ ಆಗುತ್ತೆ.

ಹಾಗೆಯೇ ನೇರವಾಗಿ ಮನೆಗೆ ಬರುತ್ತಾಳೆ. ಸಪ್ಪಗಿರುವ ಸತ್ಯ ಮುಖ ನೋಡಿದ ಸೀತಾ ಸತ್ಯ ಬಳಿ ಪ್ರಶ್ನೆ ಮಾಡುತ್ತಾಳೆ. ಯಾಕೆ ಸತ್ಯ ಕೋರ್ಟ್ ನಲ್ಲಿ ಏನೆಲ್ಲ ನಡೆಯಿತು. ನೀನು ಯಾಕೆ ಸಪ್ಪಾಗಿದ್ದಿಯಾ ಎಂದು ಕೇಳಿದಾಗ ಸತ್ಯ ಅದ್ಯಾಕೋ ಬಹಳ ನೋವು ಆಗುತ್ತಿದೆ . ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಉಷಾ ಕೂಡಾ ಬಹಳ ಮುದ್ದಾಗಿ ಬೆಳೆದ ಹುಡುಗಿ . ಆಕೆಗೆ ಹೀಗೆಲ್ಲ ಆಯಿತು ಎಂದು ತಿಳಿದರೆ ನನಗೆ ಸಂಕಟ ಆಗುತ್ತಿದೆ. ನಾಳೆ ದಿನ ಕೋರ್ಟ್ ನಲ್ಲಿ ಅವರ ವಿರುದ್ಧವಾಗಿ ತೀರ್ಪು ಬಂದು ಬಿಟ್ಟರೆ ನಾನು ಹೇಗೆ ಅದನ್ನು ತಡೆದುಕೊಳ್ಳಲೀ. ಇದರಿಂದ ಆಕೆಗೆ ಅದೆಷ್ಟು ನೋವು. ಮುನಿ ಸ್ವಾಮಿ ಅವರ ಎದುರು ನಾನು ಹೇಗೆ ತಲೆ ಎತ್ತಿ ಮಾತನಾಡಲೀ ಎಂದು ಹೇಳುತ್ತಾಳೆ.ಆಗ ಸತ್ಯ ಗೆ ಸೀತಾ ಧೈರ್ಯ ಮಾತುಗಳನ್ನು ಹೇಳುತ್ತಾಳೆ.

kannada-serial-satya-written-18th-june

ಸತ್ಯ ಗೆ ಧೈರ್ಯ ತುಂಬಿದ ಸೀತಾ

ಯಾವತ್ತೂ ನಾವು ನೆಗೆಟಿವ್ ಯೋಚನೆ ಮಾಡಬಾರದು. ನಾವು ಉಷಾ ಗೆ ಹೇಗೆ ನ್ಯಾಯ ಒದಗಿಸಿ ಕೊಡುವುದು ಎಂಬುವುದನ್ನು ಯೋಚನೆ ಮಾಡಬೇಕು ಅದಕ್ಕಾಗಿ ಯೋಚಿಸಿ ಕೆಲಸ ಮಾಡಿ ಎಂದು ಅತ್ತೆ ಧೈರ್ಯ ತುಂಬುತ್ತಾಳೆ .ಅತ್ತೆಯ ಮಾತಿಗೆ ಸತ್ಯ ಮನಸ್ಸು ಸ್ವಲ್ಪ ನಿರಾಳ ಆಗುತ್ತದೆ. ಇತ್ತ ದಿವ್ಯ ಮಾಯಾ ಮಂತ್ರ ಮಾಡಿಸಿ ಆದರೂ ಬಾಲನನ್ನ ಹೇಗಾದರೂ ಮಾಡಿ ಪಡೆದುಕೊಳ್ಳಬೇಕು ಎಂದು ಅಂದುಕೊಂಡು ಇರುತ್ತಾಳೆ.

ಬಾಲನನ್ನು ಪಡೆದುಕೊಳ್ಳುವ ಸಾಹಸದಲ್ಲಿ ದಿವ್ಯ

ಆಕೆಗೆ ರುಕ್ಕು ಜೊತೆ ಬಾಲ ಇರುವುದು ಸ್ವಲ್ಪ ಕೂಡಾ ಇಷ್ಟ ಇರುವುದು ಇಲ್ಲ. ಇತ್ತ ಬಾಲ ಹಾಗೂ ಮನೆಯವರಿಗೆ ಮಂತ್ರಿಸಿ ತಂದಿರುವ ನಿಂಬೆ ಹಣ್ಣಿನ ಬಗ್ಗೆ ತಿಳಿದಿರುತ್ತದೆ. ದಿವ್ಯ ಅದನ್ನು ಮನೆಗೆ ತಂದು ಅಡಗಿಸಿ ಇಟ್ಟಿರುತ್ತಾರೆ. ಅದನ್ನು ನೋಡಿದ ಮನೆ ಮಂದಿ ಅದಾಗಲೇ ಹೊರಗಡೆ ಎಸೆಯುತ್ತಾರೆ. ಬಾಲ ದಿವ್ಯ ಜೊತೆ ನಾಟಕ ಮಾಡಲು ಪ್ರಾರಂಭ ಮಾಡುತ್ತಾನೆ. ದಿವ್ಯ ಇದು ನಿಜ ಎಂದು ನಂಬುತ್ತಾರೆ.ಬಾಲ ಯಾವತ್ತೂ ನನ್ನ ಬಿಟ್ಟು ಹೋಗಬಾರದು ಎಂದು ಮನದಲ್ಲಿ ಅಂದುಕೊಂಡು ಇರುತ್ತಾಳೆ.

kannada-serial-satya-written-18th-june

ದಿವ್ಯ ಸ್ಥಿತಿ ನೋಡಿ ನಕ್ಕ ರುಕ್ಕು

ಇತ್ತ ಬಾಲ ಹಾಗೂ ಮನೆಯವರಿಗೆ ದಿವ್ಯನನ್ನು ನೋಡಿ ಜೋರಾಗಿಯೇ ನಗು ಬರುತ್ತದೆ. ದಿವ್ಯ ಗೆ ಬುದ್ದಿ ಕಲಿಸುವ ಭರದಲಿ ಆಕೆಯ ಮನಸ್ಸಿಗೆ ಕೂಡ ಸಾಕಷ್ಟು ನೋವು ಕೊಡುತ್ತಾರೆ. ಇದೀಗ ದಿವ್ಯ ಗೆ ತಿಳಿದು ಹೋಗಿದೆ ಬಾಲ ಅದ್ಯಾಕೋ ಸುಳ್ಳು ಹೇಳಿದ್ದಾನೆ. ನನ್ನ ಮೇಲೆ ಪ್ರೀತಿ ಇದೆ ಎನ್ನುವ ಹಾಗೆ ಡ್ರಾಮ ಮಾಡುತ್ತಿದ್ದಾನೆ. ಇದರಿಂದ ನನಗೆ ಬಹಳ ಬೇಸರ ಆಗುತ್ತಿದೆ ಎಂದು ಹೇಳುತ್ತಾರೆ

More from Filmibeat

English summary
kannada serial satya written 18th june
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X