Sathya ; ಸತ್ಯಾ ತವರು ಮನೆಗೆ ಅವಮಾನ ಮಾಡಿದ ಕೀರ್ತನ..!
ಸತ್ಯ ಶ್ರಮ ಜೀವಿ. ಆಕೆ ದುಡಿದ ದುಡ್ಡಲ್ಲಿ ತನ್ನ ಹೆತ್ತವರಿಗೆ ಒಂದು ಪಾಲನ್ನು ಎತ್ತಿಡುವ ಮಹಾನ್ ದೇವತೆ. ತನ್ನನ್ನು ಹೊತ್ತು ಹೆತ್ತು ಬೆಳೆಸಿದ ಅಮ್ಮ ಹಾಗೂ ಅಜ್ಜಿ ಎಷ್ಟು ಕಷ್ಟದಲ್ಲಿ ಜೀವನ ಸಾಗಿಸುತ್ತಾ ಇದ್ದಾರೋ, ಅವರಿಗೆ ಇನ್ನೂ ಯಾರು ದಿಕ್ಕು ಎಂದೆಲ್ಲ ಯೋಚನೆ ಮಾಡುತ್ತಿರಬೇಕಾದರೆ ಭಾವ ಮನೆಯಲ್ಲಿ ಇರುವ ತನಕ ಮನೆಯಲ್ಲಿ ಅಮ್ಮ ಹಾಗೂ ಅಜ್ಜಿ ಚೆನ್ನಾಗಿ ಇರುತ್ತಾರೆ ಎನ್ನುವ ನಂಬಿಕೆ ಬಂದಿದೆ. ಆದರೆ ತಾನು ಕೂಡ ಅಮ್ಮ ನಿಗೆ ಹಣ ನೀಡಿದರೆ ಅವರಿಗೆ ಮತ್ತಷ್ಟು ಸಹಾಯ ಆಗಬಹುದು ಎನ್ನುವ ಆಸೆ.
ಈ ಬೇಡಿಕೆಯನ್ನು ಮೊದಲು ಅತ್ತೆಯ ಬಳಿ ಹೇಳಿಕೊಳ್ಳುತ್ತಾಳೆ ಸತ್ಯ. ಸತ್ಯಗೆ ಅತ್ತೆ ಎಂದರೆ ಕೊಂಚ ಅಂಜಿಕೆ. ಸೀತಾ ಎಷ್ಟೇ ನಾಜೂಕಾಗಿ ಇದ್ದರು ಸತ್ಯಗೆ ಬಹಳ ಭಯ ಆಗುತ್ತದೆ. ಎಲ್ಲಿ ನನ್ನ ಅತ್ತೆ ತವರಿಗೆ ಹಣ ನೀಡುವುದನ್ನು ನೋಡಿ ತಪ್ಪು ತಿಳಿದುಕೊಳ್ಳುತ್ತಾರೆ ಏನೋ ಎನ್ನುವ ಸಣ್ಣ ಅಳುಕು ಇರುತ್ತದೆ. ಆದರೂ ಆ ಬಗ್ಗೆ ಸೀತಾ ಬಳಿ ಹೇಳಿದಾಗ ಸೀತಾ ಕೊಂಚ ಖಡಕ್ ಆಗಿಯೇ ನಡೆದುಕೊಳ್ಳುತ್ತಾರೆ. ನೋಡೇ ಊರ್ಮಿಳಾ ಸತ್ಯ ಕೆಲಸಕ್ಕೆ ಸೇರಿ ಮೊದಲ ಸಂಬಳ ಬಂದಿದೆ. ಅದನ್ನು ತವರಿಗೆ ಕೊಡಲು ನೋಡುತ್ತಿದ್ದಾಳೆ. ಹೆಸರಿಗೆ ಅಷ್ಟೇ ನನ್ನ ಬಳಿ ಹಣ ಕೊಡುವ ಹಾಗೆ ನಾಟಕ ಮಾಡುತ್ತಿರುವುದು. ಆದರೆ ಸತ್ಯ ಬೇರೇನೇ ಇದೆ ಎಂದು ಹೇಳಿದಾಗ ಸತ್ಯಗೆ ಎನು ಮಾಡಬೇಕು ಎಂದು ತಿಳಿಯದಾಗುತ್ತದೆ.

ಇತ್ತ ಸೀತಾ ಗೆ ನಗು ಬರುತ್ತದೆ. ಸತ್ಯ ಟೆನ್ಶನ್ ಮಾಡಿಕೊಂಡು ಇರುವುದನ್ನು ನೋಡಿದ ಊರ್ಮಿಳಾ ಹಾಗೂ ಸೀತಾ ಜೋರಾಗಿ ನಗುತ್ತಾರೆ. ಆಗ ಸತ್ಯ ಯಾಕಪ್ಪಾ ಇವರು ನಗುತ್ತಿದ್ದಾರೆ ಎನ್ನುವ ಹಾಗೆ ಅವರನ್ನು ನೋಡುತ್ತಾಳೆ. ಸೀತಾ ಆಗ ಸತ್ಯ ಬಳಿ ಹೇಳುತ್ತಾಳೆ. ನಿನ್ನ ತಂದೆ ತಾಯಿ ಗೆ ಹಣ ಕೊಡಲು ನನ್ನ ಪರ್ಮಿಷನ್ ಯಾಕೆ. ಅವರಿಗೆ ನೀನೇ ಆಧಾರ. ಅವರಿಗೆ ಈ ಹಣ ಸಹಾಯ ಆಗುವುದಾದರೆ ಕೊಟ್ಟು ಬಿಡು ಎಂದು ಹೇಳುತ್ತಾರೆ. ಇದನ್ನು ಕೇಳಿದ ಸತ್ಯ ಗೆ ಬಹಳ ಖುಷಿ ಆಗುತ್ತದೆ.

ಅತ್ತೆ ಮಾತಿಗೆ ಖುಷಿಯಲ್ಲಿದ್ದ ಸತ್ಯ
ಆಕೆ ಹಣವನ್ನು ತೆಗೆದುಕೊಂಡು ಮಹಡಿ ಹತ್ತಿ ಬರಬೇಕಾದರೆ ಕೀರ್ತನ ಹಾಗೂ ಸುಹಾಸ್ ಇರುತ್ತಾರೆ. ಸತ್ಯ ಖುಷಿಯಾಗಿ ಇರುವುದನ್ನು ಕಂಡು ಎನು ಸತ್ಯ ಖುಷಿ ಆಗಿದ್ಯಾ? ಮೊದಲ ತಿಂಗಳ ಸಂಬಳ ಬಂತಾ? ಏನೋ ತವರು ಮನೆಗೆ ಸ್ವಲ್ಪ ಹಣ ಕೊಡುತ್ತೇನೆ ಎಂದು ಹೇಳುತ್ತಿದ್ದೀ? ತವರು ಮನೆಯಿಂದ ಮಗಳನ್ನು ಗಂಡನ ಮನೆಗೆ ಕಳುಹಿಸಿದ ಬಳಿಕ ಕೂಡ ತವರಿನ ಮೋಹ ಬಿಡದೆ ಇರುವ ನೀನು ಅವರಿಗೆ ಹಣ ಕಳುಹಿಸಲು ನೋಡುತ್ತಿದ್ದಿಯಾ. ಅಷ್ಟಕ್ಕೂ ಈ ಹಣವನ್ನು ನಿಮ್ಮ ಮನೆಯವರು ತೆಗೆದುಕೊಳ್ಳುತ್ತಾರ? ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿರಬೇಕಾದರೆ ಸತ್ಯ ಗೆ ಏನು ಮಾತನಾಡಬೇಕು ಏನು ಹೇಳಬೇಕು ಎಂದು ತೋಚದಾಗುತ್ತದೆ.
ಕೀರ್ತನ ಮಾತಿಗೆ ಬೇಸರಗೊಂಡ ಸತ್ಯ
ಅದರಲ್ಲೂ ಸತ್ಯ ಎದುರು ಕೀರ್ತನ ಆಕೆಯ ತವರು ಮನೆಯನ್ನು ನಿಂದನೆ ಮಾಡಿ ಮಾತನಾಡುತ್ತಾಳೆ ಇದನ್ನು ಸೀತಾ ಕದ್ದು ಕೇಳಿಸಿಕೊಂಡು ಇರುತ್ತಾಳೆ. ಸತ್ಯ ನಿಗೆ ಬಹಳ ಬೇಸರ ಆಗುತ್ತದೆ. ಆಕೆ ತವರು ಮನೆಗೆ ನೀಡಬೇಕಾದ ಹಣವನ್ನು ಎಲ್ಲಿ ಇಡಬೇಕೊ ಅಲ್ಲಿಯೇ ವಾಪಸ್ ಹೋಗಿ ಇರುತ್ತಾಳೆ. ಇದನ್ನು ನೋಡಿದ ಸೀತಾ ಗೆ ಬಹಳ ನೋವಾದರೆ ಕೀರ್ತನ ಕೇಕೆ ಹಾಕಿ ನಗುತ್ತಾಳೆ.

ಕೀರ್ತನ ಮೊಂಡಾಟಕ್ಕೆ ಬ್ರೇಕ್ ಹಾಕುತ್ತಾಳ ಸೀತಾ
ಇದನ್ನೆಲ್ಲ ಕದ್ದು ಕೇಳಿಸಿಕೊಳ್ಳುತ್ತಿದ್ದ ಸೀತಾ ಗೆ ಬಹಳ ನೋವು ಆಗುತ್ತದೆ.ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳ ಇವಳು. ಯಾಕೆ ಹೀಗೆ ಮಾಡುತ್ತಿದ್ದಾಳೆ ಎಂದು ಮನದಲ್ಲಿ ಬಹಳ ಬೇಸರ ಮೂಡುತ್ತದೆ ಆದರೆ ಅದನ್ನು ಯಾರ ಜೊತೆಯೂ ಹೇಳಿಕೊಳ್ಳದ ಸ್ಥಿತಿಯಲ್ಲಿ ಇರುತ್ತಾರೆ. ಸತ್ಯ ಗೆ ಕೀರ್ತನ ಗುಣ ಸ್ವಭಾವದ ಬಗ್ಗೆ ಅರಿವಿದೆ. ಆದರೆ ಈ ಬಾರಿ ಕೀರ್ತನ ಮಾತನಾಡಿದ ಮಾತು ಸತ್ಯ ಮನಸ್ಸನ್ನು ಕದಲಿಸಿದೆ.


Click it and Unblock the Notifications











