Satya ; ಸತ್ಯ-ಕಾರ್ತಿಕ್ ನಡುವೆ ಮತ್ತೆ ವಿರಸ,ಹೊಸ ಬ್ಯುಸಿನೆಸ್ ಗೆ ಮಾಡಲು ಹೊರಟ ದಿವ್ಯ..!

By ಪೂರ್ವ

ಸತ್ಯ ಹಾಗೂ ಕಾರ್ತಿಕ್ ನಡುವೆ ಮಗುವಿನ ವಿಚಾರಕ್ಕಾಗಿ ಗಲಾಟೆ ನಡೆಯುತ್ತಿದೆ. ಸತ್ಯ ಗೆ ಇದೀಗ ಮಗುವಿಗಿಂತ ಆಕೆಯ ತಂದೆಯ ಸಾವಿಗೆ ಕಾರಣ ಎನು ಅವರನ್ನು ಸಾಯಿಸಿದವರು ಯಾರು ಎನ್ನುವ ವಿಚಾರ ತಿಳಿಯಬೇಕು. ಆದರೆ ಕಾರ್ತಿಕ್ ಗೆ ಮಗು ಬೇಕು. ಸತ್ಯ ಯಾವ ಕೆಲಸ ಮಾಡಬೇಕು ಅದಕ್ಕೆಲ್ಲ ಸ್ಪಂದನೆಯನ್ನು ನಾವು ಮಾಡಿದ್ದೇವೆ ಆದರೆ ಸತ್ಯ ಮಾತ್ರ ನಾವು ಹೇಳುವ ಒಂದು ಕೆಲಸವನ್ನು ಕೂಡ ಮಾಡುವುದು ಇಲ್ಲ ಎನ್ನುವ ಮನೋಭಾವ ಕಾರ್ತಿಕ್ ಗೆ ಬರುತ್ತದೆ.

ಆತ ಬಹಳ ನೋವಿನಲ್ಲಿ ಇರುತ್ತಾನೆ. ಸತ್ಯ ಅದೆಷ್ಟೇ ಸಮಾಧಾನದ ಮಾತುಗಳನ್ನು ಹೇಳಿದರು ಅದ್ಯಾವುದನ್ನೂ ಕೇಳುವ ಗುಂಗಿಗೆ ಆತ ಹೋಗುತ್ತಿಲ್ಲ. ಯಾಕೆಂದರೆ ಆತನಿಗೆ ಅದೆಲ್ಲ ಬೇಕಾಗಿಲ್ಲ. ಇದರಿಂದ ಸತ್ಯ ಗೆ ಬಹಳ ನೋವು ಆಗುತ್ತದೆ. ಆಕೆಗೆ ಎನು ಮಾಡಬೇಕು, ಎನು ಹೇಳಬೇಕು ಎಂದು ತಿಳಿಯದೇ ಸುಮ್ಮನೆರುತ್ತಾಳೆ. ಮಗುವಿನ ವಿಚಾರಕ್ಕೆ ಕಲಹ ಆಗುತ್ತಿರುವುದು ಮಾತ್ರ ಸತ್ಯ. ಇನ್ನೂ ದಿವ್ಯ ಬ್ಯೂಟಿಪಾರ್ಲರ್ ಓಪನ್ ಮಾಡುವ ತರಾತುರಿಯಲ್ಲಿ ಇದ್ದಾಳೆ. ದಿವ್ಯ ಬಾಲನನ್ನು ಹೇಗಾದರೂ ಮಾಡಿ ಪಡೆದುಕೊಳ್ಳಬೇಕು. ಆತನ ಜೊತೆ ಬಹಳ ಖುಷಿಯಿಂದ ಇರಬೇಕು ಎನ್ನುವ ಆಸೆಯಲ್ಲಿ ಇರುತ್ತಾಳೆ.

kannada serial satya written 19th july

ಆದರೆ ಇತ್ತೀಚಿಗೆ ಬಾಲಗು ದಿವ್ಯ ಬದಲಾಗಿದ್ದಾಳೆ ಎನ್ನುವ ಆಲೋಚನೆ ಮೂಡುತ್ತದೆ. ದಿವ್ಯ ಗೆ ಬ್ಯೂಟಿಪಾರ್ಲರ್ ಮಾಡಲು ಸಹಾಯ ಮಾಡುತ್ತಿರುವುದೇ ಬಾಲ. ಕೆಲಸ ಇಲ್ಲದೆ ಮನೆಯಲ್ಲಿ ಕುಳಿತಿರುವ ದಿವ್ಯ ಮೊದಲಿಗೆ ಬಾಲನ ಅಂಗಡಿಯಲ್ಲಿ ಬಜ್ಜಿ ಹಾಕಿಕೊಂಡು ದಿನ ಕಳೆಯುತ್ತಿದ್ದಳು. ಆದರೆ ಅದಾದ ಬಳಿಕ ಆಕೆ ತನ್ನ ಮನದಲ್ಲಿರುವ ಕನಸನ್ನು ಹೊರ ಹಾಕುತ್ತಾಳೆ. ಇದನ್ನು ಕೇಳಿಸಿಕೊಂಡ ಬಾಲ ಹೇಳುತ್ತಾನೆ. ಲೋನ್ ಮಾಡಿ ನಮ್ಮ ತಲೆಗೆ ತರುವುದು ಬೇಡ. ನೀನು ಬ್ಯುಸಿನೆಸ್ ಮಾಡುತ್ತೀಯಾ ಎಂದಾದರೆ ಸಾಲದ ರೂಪದಲ್ಲಿ ಹಣ ಕೊಡುತ್ತೇನೆ

ಬದಲಾದ ದಿವ್ಯಳನ್ನು ಕಂಡು ಖುಷಿ ಪಟ್ಟ ಗಿರಿಜಮ್ಮ

ಅದನ್ನು ಇಟ್ಟುಕೊಂಡು ನೀನು ಬ್ಯುಸಿನೆಸ್ ಮಾಡು. ಆ ಬಳಿಕ ನನಗೆ ಆ ಹಣವನ್ನು ಕೊಡು ಅಷ್ಟೇ ಎಂದು ಹೇಳಿದಾಗ ದಿವ್ಯ ಗೆ ಬಹಳ ಖುಷಿ ಆಗುತ್ತದೆ. ಆಯಿತು ಎಂದು ಒಪ್ಪಿಗೆ ನೀಡುತ್ತಾಳೆ. ಇನ್ನೂ ದಿವ್ಯ ಬ್ಯೂಟಿಪಾರ್ಲರ್ ಓಪನಿಂಗ್ ಮರುದಿನವೇ ಇದ್ದ ಕಾರಣ ದಿವ್ಯ ಬಹಳ ಬ್ಯುಸಿ ಆಗಿ ಇರುತ್ತಾಳೆ. ಗಿರಿಜಮ್ಮ ಜಾನಕಿ ಹಾಗೂ ಬಾಲ ಈ ಮೂವರು ನಿಂತುಕೊಂಡು ಮಾತನಾಡುತ್ತಿರುತ್ತಾರೆ. ಇನ್ನೂ ದಿವ್ಯ ಮನೆಯ ಹೊರಗಿನಿಂದ ಬರುತ್ತಾಳೆ ಆಕೆಯನ್ನು ನೋಡಿದ ಗಿರಿಜಮ್ಮ ಕೇಳುತ್ತಾರೆ

kannada-serial-satya-written-19th-july


ನಾಳೆಯೇ ಬ್ಯೂಟಿಪಾರ್ಲರ್ ಓಪನ್ ಎಂದ ದಿವ್ಯ

ದಿವ್ಯ ಹೋದ ಕೆಲಸ ಏನಾಯಿತು ಎಂದು ಕೇಳಿದಾಗ ದಿವ್ಯ ಹೇಳುತ್ತಾಳೆ ನಾನು ಆ ಶಾಪ್ ನೋಡುತ್ತಿದ್ದ ಹಾಗೆಯೇ ಅಡ್ವಾನ್ಸ್ ಕೊಟ್ಟೆ ಹಾಗೆಯೇ ಇಬ್ಬರು ಹುಡುಗಿಯರನ್ನು ತೆಗೆದುಕೊಂಡಿದ್ದೇನೆ. ಅವರಿಗೆ ಕೆಲಸ ಬರುವುದಿಲ್ಲ ಅವರಿಗೆ ನಾನೇ ಕೆಲಸ ಕೊಡುತ್ತೇನೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಗಿರಿಜಮ್ಮ ಗೆ ಮತ್ತಷ್ಟು ಖುಷಿ ಆಗುತ್ತದೆ. ನಾಳೇನೇ ಒಳ್ಳೆ ದಿನ ಓದೆ ಪಾರ್ಲರ್ ಉದ್ಘಾಟನೆ ಮಾಡಿ ಬಿಡೋಣ ಎಂದು ಹೇಳುತ್ತಾಳೆ ಇದನ್ನು ಕೇಳಿದ ಗಿರಿಜಮ್ಮ ಗೆ ಬಹಳ ಖುಷಿ ಆಗುತ್ತದೆ. ಬಾಲ ನಿಗೆ ದಿವ್ಯ ಹೇಳಿದ ಮಾತು ಖುಷಿ ತಂದರು ಅದನ್ನು ತೋರಿಸಿಕೊಳ್ಳುವುದಿಲ್ಲ.

ಬ್ಯೂಟಿಪಾರ್ಲರ್ ಉದ್ಘಾಟನೆಗೆ ಸತ್ಯ ಬರುತ್ತಾಳ?

ದಿವ್ಯ ಗಿರಿಜಮ್ಮ ಬಳಿ ಹೇಳುತ್ತಾಳೆ ಅಜ್ಜಿ ನಾಳೆಯ ಈ ಕಾರ್ಯಕ್ರಮಕ್ಕೆ ಸತ್ಯಳನ್ನು ಕರೆಯಿರಿ ಎಂದು ಹೇಳಿದಾಗ ಗಿರಿಜಮ್ಮ ಹೇಳುತ್ತಾರೆ ನಾನು ಯಾಕೆ ಕರೆಯಬೇಕು. ನೀನೇ ಕರೆ ಆಕೆಗೆ ಬಹಳ ಖುಷಿ ಆಗುತ್ತದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ದಿವ್ಯ ಹೇಳುತ್ತಾಳೆ ನಾನು ಸತ್ಯ ಗೆ ಬಹಳಷ್ಟು ನೋವು ಕೊಟ್ಟಿದ್ದೇನೆ ಆದ ಕಾರಣ ನಾನು ಹೇಗೆ ಕರೆಯಲಿ, ಯಾವ ಮುಖ ಇಟ್ಟುಕೊಂಡು ಆಕೆಯನ್ನು ಕರೆಯಲಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಆಕೆಗೆ ಬಹಳ ನೋವು ಆಗುತ್ತದೆ. ಇನ್ನೂ ಬಾಲ ಹೇಳುತ್ತಾನೆ ಅಜ್ಜಿ ಸತ್ಯಾಳನ್ನು ಕರೆಯಿರಿ ಈಕೆಯ ಬಂಡವಾಳ ಎನು ಎನ್ನುವುದು ತಿಳಿಯುತ್ತದೆ ಅಲ್ವಾ ಎಂದು ಹೇಳುತ್ತಾನೆ ಇದನ್ನು ಕೇಳಿದ ಅಜ್ಜಿ ಆಯಿತು ಸತ್ಯಳನ್ನೂ ಕರೆಯುತ್ತೇನೆ ಎಂದು ಹೇಳುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X