Sathya ; ಹರ್ಷಿತ್ ಎನ್‌ಕೌಂಟರ್ ಮಾಡಿದ ಸತ್ಯ,ಕೊನೆಗೂ ಸಿಕ್ಕಿದೆ ಉಷಾ ಗೆ ನ್ಯಾಯ
ಪೋಲಿಸ್ ಸ್ಟೇಷನ್ ಗೆ ಹೋಗುವ ಸಂದರ್ಭದಲ್ಲಿ ಆರೋಪಿ ಇದ್ದಂತಹ ಬುಲೆರೋ ಗಾಡಿ ಕೆಟ್ಟು ನಿಲ್ಲುತ್ತದೆ. ಇದನ್ನು ನೋಡಿದ ಸತ್ಯ ಗೆ ಏನು ಮಾಡಬೇಕು ಎಂದು ಗೊತ್ತಾಗಲ್ಲ. ಜೀಪ್ ಯಾಕೆ ಸಡನ್ ಆಗಿ ನಿಂತುಬಿಟ್ಟಿತು ಎಂದು ವಿಚಾರಿಸಿದರೆ ಅದಕ್ಕೆ ಉತ್ತರ ಕೂಡ ಸಿಗಲಿಲ್ಲ. ಇದೀಗ ಪೊಲೀಸರು ಜೀಪ್ ಸರಿ ಮಾಡಲು ಹರ ಸಾಹಸ ಪಡುತ್ತಿದ್ದಾರೆ. ಇತ್ತ ಸತ್ಯ ಅದೇ ಟೆನ್ಶನ್ ನಲ್ಲಿ ಇರುತ್ತಾಳೆ. ಕೇಸ್ ಒಂದು ವೇಳೆ ನಮ್ಮ ಕಡೆ ತಿರುಗದೇ ಇದ್ದರೆ ನಾವೇನು ಮಾಡುವುದು ಎಂಬ ಯೋಚ್ನೇ ಮಾಡುತ್ತಿರುತ್ತಾಳೆ
ಇದೀಗ ಸತ್ಯ ಗೆ ಭಯ ಶುರು ಆಗಿ ಬಿಟ್ಟಿದೆ ನಾವು ಈ ಕೇಸ್ ಗೆಲ್ಲುತ್ತೆವೆಯಾ ಎನ್ನುವುದು. ಆಗಲೇ ಸತ್ಯ ಗೆ ಮೇಲಾಧಿಕಾರಿಗಳಿಂದ ಕರೆ ಬರುತ್ತದೆ. ಸತ್ಯ ಬಳಿ ಪೊಲೀಸರು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿರುವಾಗ ಸತ್ಯ, ಉಷಾ ಗೆ ನ್ಯಾಯ ಸಿಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ ಸರ್ .ಯಾಕೆಂದರೆ ಉಷಾ ಪರ ಯಾವುದೇ ಸಾಕ್ಷಿ ಇಲ್ಲ .ನಾಳೆ ಕೋರ್ಟ್ ಗೆ ಆತನನ್ನು ಹಾಜರು ಪಡಿಸಿದರೆ ಖಂಡಿತವಾಗಿಯೂ ಉಷಾ ಗೆ ಅನ್ಯಾಯ ಆಗುತ್ತದೆ ಎಂದು ಹೇಳುತ್ತಾಳೆ.

ಮೆತ್ತಗೆ ಎಸ್ಕೇಪ್ ಆಗಲು ನೋಡಿದ ಹರ್ಷಿತ್
ಇದನ್ನು ನೋಡಿದ ಹರ್ಷಿತ್ ಸಾಕಷ್ಟು ಫೈಟ್ ಮಾಡುತ್ತಾನೆ ಇದರಿಂದ ಶಿವು ಎನ್ನುವ ಪೊಲೀಸ್ ಗೆ ಗಾಯ ಆಗುತ್ತದೆ. ಇದನ್ನೆಲ್ಲ ನೋಡಿದ ಸತ್ಯ ಹರ್ಷಿತ್ ನನ್ನು ಶೂಟ್ ಮಾಡಲು ಮುಂದಾಗುತ್ತಾಳೆ. ಸತ್ಯ ಬೇಡ ನನ್ನನ್ನು ಸಾಯಿಸಬೇಡ ಎಂದು ಸಾಕಷ್ಟು ಬಾರಿ ಕೇಳಿಕೊಳ್ಳುತ್ತಾನೆ ಆದರೆ ಸತ್ಯ ಹರ್ಷಿತ್ ನ ಎನ್ಕೌಂಟರ್ ಮಾಡುತ್ತಾಳೆ. ಇದನ್ನು ನೋಡಿದ ಪೊಲೀಸ್ ಸಿಬ್ಬಂದಿ ಎಲ್ಲರೂ ಕೂಡ ಶಾಕ್ ಆಗುತ್ತಾರೆ.
ಮುನಿಸ್ವಾಮಿ ಕಣ್ಣಲ್ಲಿ ಸಂತಸದ ಕಣ್ಣೀರು
ಹಾಗೆಯೇ ಸತ್ಯ ಗೆ ಶಹಬ್ಬಾಶ್‌ಗಿರಿ ಕೊಡುತ್ತಾರೆ. ಮುನಿಸ್ವಾಮಿ ಮಾತ್ರ ಸತ್ಯ ಗೆ ಕೈ ಮುಗಿಯುತ್ತಾನೆ. ತನ್ನ ಮಗಳಿಗೆ ನ್ಯಾಯವನ್ನು ನೀವೇ ಕೊಟ್ಟು ಬಿಟ್ಟಿರಿ ಎಂದು ಅಳುತ್ತಾನೆ. ಇದನ್ನು ನೋಡಿದ ಸತ್ಯ ಮುನಿ ಸ್ವಾಮಿ ಗೆ ಸಾಂತ್ವನ ಹೇಳುತ್ತಾಳೆ ಹಾಗೆಯೇ ಧೈರ್ಯ ತುಂಬುತ್ತಾಳೆ. ಆ ನಂತರ ಸತ್ಯ ಹರ್ಷಿತ್ ಡೆಡ್ ಬಾಡಿ ಬಳಿ ಬಂದು ಆತನ ಮುಖವನ್ನು ನೋಡುತ್ತಾಳೆ. ಮುನಿ ಸ್ವಾಮಿ ಸತ್ಯ ಬಳಿ ಬಂದು ಸೆಲ್ಯೂಟ್ ಮಾಡುತ್ತಾನೆ.

ಮೇಲಾಧಿಕಾರಿಗೆ ಸುಳ್ಳು ಹೇಳಿ ಬಚಾವ್ ಆದ ಸತ್ಯ
ಇನ್ನೂ ಸತ್ಯ ತನ್ನ ಮೇಲಾಧಿಕಾರಿ ಗೆ ಕರೆ ಮಾಡಿ ಸರ್ ಹರ್ಷಿತ್ ನನ್ನು ಕೋರ್ಟ್ ಗೆ ಕರೆದುಕೊಂಡು ಬರುತ್ತಿದ್ದೆವು, ಆದರೆ ಆತ ಜೀಪ್ ಕೆಟ್ಟು ನಿಂತಿದ್ದ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ ಈ ಸಮಯದಲ್ಲಿ ನಾವು ಆತನನ್ನು ತಡೆಯಲು ತುಂಬಾ ಪ್ರಯತ್ನ ಪಟ್ಟೆವು ಆದರೆ ಆತ ನಮ್ಮನ್ನು ಅಟ್ಯಾಕ್ ಮಾಡಲು ನೋಡಿದ ಅದಕ್ಕೆ ನಾವು ಆತನನ್ನು ಶೂಟ್ ಮಾಡಬೇಕಾಯಿತು ಎಂದು ಹೇಳುತ್ತಾಳೆ. ಅದಕ್ಕೆ ಮೇಲಾಧಿಕಾರಿ ನೀವು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಾಗ ಸತ್ಯ ಸರ್ ನಾವು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಆದರೆ ಬದುಕುವ ಚಾನ್ಸ್ ಇಲ್ಲ ಸರ್ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮೇಲಾಧಿಕಾರಿಗೆ ಅವರಿಗೆ ಕೂಡ ಏನು ಮಾಡಬೇಕು ತಿಳಿಯಾದಾಗುತ್ತದೆ


Click it and Unblock the Notifications











