Sathya ; ಸತ್ಯ ಹಾಗೂ ಟೀಮ್ ನ ಸಸ್ಪೆಂಡ್ ಮಾಡಿದ ಪೊಲೀಸರು, ಅದ್ದೂರಿಯಾಗಿ ಮನೆಗೆ ವೆಲ್ ಕಮ್ ಮಾಡಿದ ಸೀತಾ..!
ಸತ್ಯ ಹಾಗೂ ಆಕೆಯ ಟೀಮ್ ನ ಮೇಲಾಧಿಕಾರಿಗಳು ಕರೆಸಿಕೊಳ್ಳುತ್ತಾರೆ. ಎಲ್ಲಾ ಕಡೆಯೂ ಹರ್ಷಿತ್ ಸಾವಿನ ಗುಸು ಗುಸು ಹೆಚ್ಚಾಗುತ್ತಿದೆ. ಇದರಿಂದಾಗಿ ಸತ್ಯ ಹಾಗೂ ಆಕೆಯ ಟೀಮ್‌ನ ಸಸ್ಪೆಂಡ್ ಮಾಡಲು ಪೊಲೀಸ್ ಉನ್ನತ ಅಧಿಕಾರಿಗಳು ಮುಂದಾಗುತ್ತಾರೆ. ಸತ್ಯ ಹಾಗೂ ಆಕೆಯ ಜೊತೆ ಕೆಲಸ ಮಾಡಿದ ಸಹೋದ್ಯೋಗಿಗಳನ್ನು ಎಲ್ಲರನ್ನೂ ಕರೆಸುತ್ತಾರೆ .
ಆ ಬಳಿಕ ಉನ್ನತ ಅಧಿಕಾರಿಗಳು ಸತ್ಯ ನಿಮ್ಮ ರಕ್ಷಣೆಗಾಗಿ ಒಬ್ಬ ಆರೋಪಿಯನ್ನು ಶೂಟ್ ಮಾಡಿದ್ದೀರಾ ಇದರಿಂದ ಆತನ ಪ್ರಾಣಕ್ಕೆ ಸಂಚಕಾರ ಬಂದಿದೆ. ಆದ ಕಾರಣ ನಿಮ್ಮೆಲ್ಲರನ್ನೂ ಇಲ್ಲಿಗೆ ಕರೆಸಿಕೊಂಡು ಇದ್ದೇವೆ ಎಂದು ಹೇಳುತ್ತಾರೆ.ಹಾಗೆಯೇ ಸತ್ಯ ನಾವು ಈ ಕೇಸ್ ಬಗ್ಗೆ ತನಿಖೆ ಮಾಡಬೇಕಿದೆ ಆದ ಕಾರಣ ನಿಮ್ಮನ್ನು ಈ ಕೆಲಸದಿಂದ ಸಸ್ಪೆಂಡ್ ಮಾಡುತ್ತಿದ್ದೇವೆ.ನಿಮ್ಮ ಜೊತೆ ಇದ್ದ ಟೀಮ್ ಕೂಡ ನಾವು ಸಸ್ಪೆಂಡ್ ಮಾಡಿದ್ದೇವೆ ಎಂದು ಹೇಳಿದಾಗ ಸತ್ಯ ಗೆ ಮಾತ್ರ ಏನು ಹೇಳಬೇಕು ತಿಳಿಯದಾಗುತ್ತದೆ. ಸತ್ಯ ಗೆ ಬಹಳ ದೊಡ್ಡ ತಲೆನೋವು ಆಗಿ ಬಿಡುತ್ತದೆ.

ಮನೆಗೆ ಬಹಳ ಸಪ್ಪೆ ಮೋರೆ ಹಾಕಿಕೊಂಡು ಸತ್ಯ ಬರುತ್ತಾಳೆ. ಆದರೆ ಸತ್ಯಳನ್ನು ಬಹಳ ಅದ್ದೂರಿಯಾಗಿ ಸ್ವಾಗತ ಮಾಡಲು ಆಕೆಯ ಮನೆಯ ಮಂದಿ ಕಾಯುತ್ತಿರುತ್ತಾರೆ. ಗಂಡನಿಂದ ಹಿಡಿದು ಮಾವನ ವರೆಗೆ ಕೂಡ ಎಲ್ಲರೂ ಖುಷಿಯಿಂದ ಇರುತ್ತಾರೆ. ಸಪ್ಪೆ ಮುಖ ಹಾಕಿಕೊಂಡು ಇರುವ ಆಕೆಯ ಮುಖ ನೋಡಿದ ಆಕೆಯ ಅತ್ತೆ ಏನಾಯಿತು ಸತ್ಯ.ನೀನು ಯಾಕೆ ಇಷ್ಟು ಡಲ್ ಆಗಿದ್ದಿಯಾ. ಅಷ್ಟಕ್ಕೂ ನಿನಗೆ ಏನಾಯಿತು ಎಂದು ಕೇಳುತ್ತಾರೆ. ಇದನ್ನು ನೋಡಿದ ಸತ್ಯ ಅತ್ತೆ ನಮ್ಮನ್ನು ಹೈಯರ್ ಅಥಾರಿಟಿಯವರು ಕೆಲಸದಿಂದ ಸಸ್ಪೆಂಡ್ ಮಾಡಿದ್ದಾರೆ ಎಂದು ಹೇಳುತ್ತಾಳೆ
ಸೊಸೆನ ಅದ್ದೂರಿಯಾಗಿ ಮನೆಗೆ ವೆಲ್ ಕಮ್ ಮಾಡಿದ ಸೀತಾ
ಇದನ್ನು ಕೇಳಿದ ಸೀತಾ ಮಾತ್ರ ಅಷ್ಟೇ ತಾನೆ ಅದಕ್ಕೆಲ್ಲ ಯಾಕೆ ನೀನು ತಲೆ ಕೆಡಿಸಿಕೊಳ್ಳುತ್ತಿಯಾ? ಒಳ್ಳೆಯ ಕೆಲಸ ಮಾಡಿದ್ದೀಯಾ ಅದಕ್ಕಾಗಿ ನಿನಗೆ ಒಳ್ಳೆಯದೇ ಆಗುತ್ತದೆ. ಮುಖ್ಯವಾಗಿ ನೀನು ಆ ಹೆಣ್ಣು ಮಗಳಿಗೆ ನ್ಯಾಯ ಒದಗಿಸಿಕೊಟ್ಟಿದ್ದಿಯಾ ನನಗೆ ಅದೇ ಸಾಕು ಎಂದು ಹೇಳುತ್ತಾಳೆ. ಇನ್ನೂ ರಾಮಚಂದ್ರ ರಾಯರು ಕೂಡ ಅದೇ ಮಾತು ಹೇಳುತ್ತಾರೆ. ಆತ ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆಯನ್ನು ಆತನಿಗೆ ನೀಡಿದ್ದಿಯಾ. ನನಗೆ ಅದರ ಬಗ್ಗೆ ಹೆಮ್ಮೆ ಇದೆ ಎಂದು ಅತ್ತೆ ಹೇಳುತ್ತಾರೆ.
ಮಾವನ ಮಾತು ಕೇಳಿ ನಿಟ್ಟುಸಿರುಬಿಟ್ಟ ಸತ್ಯ
ಆಗ ಸತ್ಯ ಮನಸ್ಸಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ಆಗುತ್ತದೆ. ಇತ್ತ ರುಕ್ಕು ಹಾಗೂ ಬಾಲ ಮದುವೆ ಬಹಳ ಅದ್ದೂರಿಯಾಗಿ ತಯಾರಿ ನಡೆಯುತ್ತಿದೆ.ಹೌದು ದಿವ್ಯ ಅದೆಷ್ಟೇ ಮದುವೆ ತಪ್ಪಿಸಲು ಹೋದರು ಬಾಲ ಮತ್ತು ರುಕ್ಕು ಮತ್ತಷ್ಟು ಹತ್ತಿರ ಆಗುತ್ತಿದ್ದಾರೆ. ದಿವ್ಯ ಗೆ ರುಕ್ಕು ನ ಕಂಡರೆ ಬಹಳ ಸಿಟ್ಟು ನನ್ನ ಜೀವನದಲ್ಲಿ ಆಕೆ ಕಪ್ಪು ಚುಕ್ಕೆ ಆಗಿಬಿಟ್ಟಳು ಎಂದು ದಿವ್ಯ ಗೆ ಅನ್ನಿಸುತ್ತಿರುತ್ತದೆ. ಬಾಲ ಹಾಗೂ ರಕ್ಕುವನ್ನು ದೂರ ಮಾಡಲೇ ಬೇಕು ಎಂದು ಪಣ ತೊಡುತ್ತಾರೆ. ಆಕೆ ಎಲ್ಲಾ ಕೆಲಸವನ್ನು ಕೂಡ ಬಹಳ ಅಚ್ಚುಕಟ್ಟಾಗಿ ಪ್ಲಾನ್ ಮಾಡಿ ಇರುತ್ತಾಳೆ. ಆದರೆ ಅದೆಲ್ಲವೂ ಫ್ಲಾಪ್ ಆಗುತ್ತದೆ .

ಬಾಲನ ಕೋಪಕ್ಕೆ ಗುರಿಯಾದ ದಿವ್ಯ
ಬಾಲನ ಕೋಪಕ್ಕೆ ಗುರಿ ಆಗಬೇಕಾಗುತ್ತದೆ. ಬಾಲ ಮಾತ್ರ ದಿವ್ಯ ಗೆ ಹೇಗಾದರೂ ಬುದ್ದಿ ಕಲಿಸಲು ಬೇಕು ಎಂದು ಪಣ ತೊಟ್ಟು ಇರುತ್ತಾನೆ. ಇನ್ನೂ ಗಿರಿಜಮ್ಮ ಹಾಗೂ ಜಾನಕಿ ಕೂಡ ಸತ್ಯ ಗೆ ಹೇಗಾದರೂ ಮಾಡಿ ಬುದ್ದಿ ಕಲಿಸಲೆಬೇಕು ಎಂದು ಆಲೋಚನೆ ಮಾಡುತ್ತಾ ಇರ್ತಾರೆ.


Click it and Unblock the Notifications











