Sathya ; ಬಾಲ ಜೊತೆ ರುಕ್ಕು ನೋಡಿ ಕೋಪಗೊಂಡ ದಿವ್ಯ,ರುಕ್ಕುವನ್ನೆ ಮುಗಿಸಲು ಮಾಸ್ಟರ್ ಪ್ಲಾನ್ ..!
ಬಾಲನನ್ನು ಪಡೆದುಕೊಳ್ಳಬೇಕು ಎನ್ನುವ ಆತುರದಿಂದ ದಿವ್ಯ ಇದೀಗ ಕೆಟ್ಟ ಕೆಲಸಗಳನ್ನು ಮಾಡಲು ಮುಂದಾಗಿದ್ದಾಳೆ. ಇದುವರೆಗೂ ಕೂಡ ದಿವ್ಯ ಕೆಟ್ಟ ಕೆಲಸಗಳನ್ನೇ ಮಾಡಿಕೊಂಡು ಬಂದಿದ್ದಾಳೆ. ಆಕೆಗೆ ಒಂದು ವಸ್ತು ಬೇಕೆನಿಸಿದರೆ ಅದು ಸಿಗುವವರೆಗೆ ಪಟ್ಟು ಬಿಡುವುದು ಇಲ್ಲ. ಆಕೆಗೆ ಇದೀಗ ಬಾಲ ಬೇಕು. ರುಕ್ಕು ಜೊತೆ ಬಾಲನ್ನನ್ನ ನೋಡಿದರೆ ದಿವ್ಯ ಮಾತ್ರ ಉರಿದು ಬೀಳುತ್ತಾಳೆ. ಇದೀಗ ರುಕ್ಕು ಹಾಗೂ ಬಾಲ ಇವರಿಬ್ಬರ ಲಗ್ನ ಪತ್ರಿಕೆ ಪ್ರಿಂಟ್ ಆಗಿದೆ. ಲಗ್ನ ಪತ್ರಿಕೆ ಗೆ ಪೂಜೆ ಮಾಡಲು ಅರ್ಚಕರನ್ನು ಮನೆಗೆ ಕರೆಸುತ್ತಾನೆ ಬಾಲ.
ಇತ್ತ ದಿವ್ಯ ಮಾತ್ರ ರೂಮ್ ಒಳಗೆ ಇರಬೇಕಾದರೆ ರೂಮ್ ಲಾಕ್ ಹಾಕಿ ಬಿಡುತ್ತಾರೆ. ಯಾಕೆಂದರೆ ಲಗ್ನ ಪತ್ರಿಕೆ ಮಾಡುವ ವೇಳೆ ಕೂಡ ಇದೆ ಏನಾದರು ಒಂದು ಅನಾಹುತ ಮಾಡುತ್ತಾಳೆ. ಅದಕ್ಕಾಗಿ ಆಕೆ ರೂಮ್ ನಲ್ಲಿ ಇರಲಿ ಎಂಬ ಆಲೋಚನೆ ಮನೆ ಮಂದಿಯದ್ದು. ಇತ್ತ ಲಗ್ನ ಪತ್ರಿಕೆಗೆ ಪೂಜೆ ಆಗುತ್ತಿರುವುದು ದಿವ್ಯ ಗಮನಕ್ಕೆ ಬರುತ್ತದೆ. ಆ ವೇಳೆ ದಿವ್ಯ ಗೆ ಇದು ತಿಳಿಯುತ್ತದೆ. ಆಕೆ ಏನೇ ಮಾಡಿದರು ಮನೆಯ ಬಾಗಿಲು ಓಪನ್ ಮಾಡಲು ಆಗುವುದು ಇಲ್ಲ. ಏನು ಮಾಡಬೇಕು ಎಂದು ದಿಕ್ಕೇ ತೋಚದ ಹಾಗೆ ಆಗುತ್ತದೆ. ಮನೆಯಲ್ಲಿ ಏನೋ ಕಾರ್ಯಕ್ರಮ ನಡೆಯುತ್ತಿದೆ ಆದರೆ ಅದಕ್ಕೆ ನಾನು ಅಡ್ಡಿ ಆಗಬಾರದು ಎಂದು ಹೀಗೆಲ್ಲ ಮಾಡುತ್ತಿದ್ದೀರಾ ಎಂದು ಜೋರಾಗಿ ಕಿರುಚಿಕೊಂಡು ಇರುತ್ತಾಳೆ.

ಈ ಥರ ಜೋರಾಗಿ ಶಬ್ದ ಕೇಳಿದಾಗ ಅರ್ಚಕರು ಆ ರೂಮ್ ನತ್ತ ನೋಡುತ್ತಾರೆ. ಆ ವೇಳೆ ಅರ್ಚಕರ ಬಳಿ ಏನೇನೋ ಸಬೂಬು ಹೇಳಿ ಮ್ಯಾನೇಜ್ ಮಾಡುತ್ತಾರೆ. ಎಲ್ಲಾ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಆದ ಬಳಿಕ ದಿವ್ಯ ರೂಮ್ ಬಾಗಿಲು ತೆಗೆಯುತ್ತಾರೆ. ಇದರಿಂದ ಕೆರಳಿದ ದಿವ್ಯ ಮಾತ್ರ ಬಗಳ ಕೋಪಗೊಂಡು ಮನೆ ಮಂದಿಯವರ ಜೊತೆ ಗಲಾಟೆ ಮಾಡುತ್ತಾಳೆ. ಯಾಕೆ ಹೀಗೆಲ್ಲ ಮಾಡಿದಿರಿ ಎಂದೆಲ್ಲ ಕೇಳುತ್ತಾರೆ ಆದರೆ ಮನೆಯವರು ಆಕೆಗೆ ಯಾವುದೇ ಉತ್ತರ ಕೊಡುವುದು ಇಲ್ಲ. ದಿವ್ಯ ಅದೇ ಆಲೋಚನೆಯಲ್ಲಿ ಇರುತ್ತಾಳೆ. ಆಕೆಗೆ ತನ್ನ ಗಂಡ ಬೇರೆ ಹುಡುಗಿಯನ್ನು ಮದುವೆ ಆಗುತ್ತಾಳೆ ಎಂದರೆ ದಿವ್ಯ ಗೆ ಬಹಳ ನೋವು ಆಗುತ್ತಿರುತ್ತದೆ.
ದಿವ್ಯ ಮಾತು ಕೇಳದ ಬಾಲ
ಬಾಲ ನನಗೆ ನೀನು ಬೇಕು ನಿನಗಾಗಿ ನಾನು ಏನು ಬೇಕಾದರೂ ಮಾಡಲು ರೆಡಿ ಎಂದು ದಿವ್ಯ ಹೇಳಿದಾಗ ಮಾತ್ರ ಯಾರು ಕೂಡ ಆಕೆಯ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಇನ್ನೂ ರಾತ್ರಿಯ ವೇಳೆ ಎಲ್ಲರೂ ಮಲಗಿರುವ ವೇಳೆ ರುಕ್ಕು ವನ್ನು ಹೇಗಾದರೂ ಮಾಡಿ ಸಾಯಿಸಿ ಬಿಡಬೇಕು ಎನ್ನುವ ಆಲೋಚನೆ ಬರುತ್ತದೆ. ರುಕ್ಕುವೆ ಇಲ್ಲದ ಹಾಗೆ ಮಾಡಿದರೆ ಹೇಗೆ ಎಂದು ಆಲೋಚನೆ ಮಾಡಿ ಬಾಗಿಲು ತೆಗೆದು ನೋಡಿದಾಗ ರುಕ್ಕು ಕೊನೆಯಲ್ಲಿ ಮಲಗಿ ಇರುತ್ತಾಳೆ. ಆಕೆಯ ಬಳಿಗೆ ಬಂದ ದಿವ್ಯ ಆಕೆಯನ್ನು ದಿಟ್ಟಿಸಿ ನೋಡುತ್ತಾಳೆ.

ರುಕ್ಕು ಮೇಲೆ ಕೋಪಿಸಿಕೊಂಡ ದಿವ್ಯ
ರುಕ್ಕು ನಿನಗೆ ನನ್ನ ಗಂಡನೇ ಬೇಕು ಅಲ್ವಾ ಅದಕ್ಕೆ ನಾನು ನಿನ್ನನ್ನು ಸಾಯಿಸಲು ಬಂದಿರುವೆ ಎಂದು ಮನಸಲ್ಲಿ ಯೋಚನೆ ಮಾಡಿಕೊಂಡು ಆಕೆಯ ಕುತ್ತಿಗೆ ಬಳಿಗೆ ಕೈ ತೆಗೆದುಕೊಂಡು ಬರುತ್ತಾಳೆ. ಆ ಕೂಡಲೇ ರುಕ್ಕು ಗೆ ಎಚ್ಚರ ಆಗುತ್ತಾಳೆ. ಪಕ್ಕದಲ್ಲಿ ದಿವ್ಯ ಇರುವುದನ್ನು ನೋಡಿ ಶಾಕ್ ಆಗುತ್ತಾಳೆ. ದಿವ್ಯನನ್ನು ನೋಡಿ ಶಾಕ್ ಆದ ರುಕ್ಕು ಜೋರಾಗಿ ಕಿರುಚುತ್ತಾಳೆ. ಮನೆ ಮಂದಿಗೆ ಗಾಬರಿ ಆಗುತ್ತದೆ. ದಿವ್ಯ ರೂಮ್ ನೊಳಗೆ ಓಡಿ ಹೋಗಿ ಬಾಗಿಲು ಹಾಕಿಕೊಳ್ಳುತ್ತಾಳೆ
ದಿವ್ಯಳನ್ನು ನೋಡಿ ಬೆದರಿದ ರುಕ್ಕು
ರುಕ್ಕು ಜಾನಕಿಯ ಬಳಿ ದಿವ್ಯ ಬಂದು ನನ್ನ ಕತ್ತು ಹಿಸುಕಲು ನೋಡಿದಳು ನಾನು ಕಿರುಚಿದ ಕೂಡಲೇ ಆಕೆ ಓಡಿ ಹೋದಳು ಎಂದು ಹೇಳುತ್ತಾಳೆ. ಇದನ್ನು ನೋಡಿದ ಗಿರಿಜಾ ಮತ್ತು ಬಾಲ ನಿನಗೆ ಕನಸು ಬಿದ್ದಿರಬೇಕು ಸರಿ ನಾನು ನಿಮ್ಮ ಪಕ್ಕ ಮಲಗುತ್ತೇನೆ ಎಂದು ಹೇಳಿ ರುಕ್ಕು ಪಕ್ಕ ಮಲಗುತ್ತಾನೆ. ಎಲ್ಲರೂ ನಿದ್ದೆ ಹೋದ ಬಳಿಕ ದಿವ್ಯ ಮೆತ್ತಗೆ ಬಾಗಿಲು ತೆಗೆದು ನೋಡುತ್ತಾಳೆ ರುಕ್ಕು ಪಕ್ಕ ಬಾಲ ಮಲಗಿದ್ದನ್ನು ಕಂಡ ದಿವ್ಯ ಗೆ ಮತ್ತೆ ಕೋಪ ಬರುತ್ತದೆ ನಾನು ಅದೆಷ್ಟು ಬಾರಿ ಇವರನ್ನು ದೂರ ಮಾಡಲು ಯತ್ನಿಸುತ್ತೇನೆ ಅಷ್ಟೇ ಇವರು ಹತ್ತಿರ ಆಗುತ್ತಾರೆ ಎಂದು ಯೋಚನೆ ಮಾಡುತ್ತಾಳೆ.


Click it and Unblock the Notifications











