ರುಕ್ಕು ಕೊಲೆ ಮಾಡಲು ಬಂದ ದಿವ್ಯ, ದಿವ್ಯ ಆಟಕ್ಕೆ ಬ್ರೇಕ್ ಹಾಕುತ್ತಾನ ಬಾಲ?

By ಪೂರ್ವ

ರುಕ್ಕು ಹಾಗೂ ಬಾಲ ಮದುವೆ ಆಗುವುದು ನಿಶ್ಚಿತ ಆಗಿದೆ ಅದಕ್ಕೆ ಒಂದಷ್ಟು ಪ್ರಿಪರೇಷನ್ ನಡೆಯುತ್ತಿದೆ. ಮನೆಯಲ್ಲಿ ಲಗ್ನ ಪತ್ರಿಕೆ ಮಾಡುತ್ತಿರುವಾಗ ದಿವ್ಯ ಅರಚಾಡುತ್ತಿರುವುದನ್ನು ನೋಡಿದ ಅರ್ಚಕರಿಗೆ ಕೂಡ ಗಾಬರಿ ಆಗುತ್ತದೆ. ಇನ್ನೂ ಮನೆಯಲ್ಲಿ ಪೂಜೆ ಆದ ಬಳಿಕ ಅರ್ಚಕರು ಹೊರಟು ಹೋಗುತ್ತಾರೆ ಆದಾದ ಬಳಿಕ ರೂಮ್ ಬಾಗಿಲು ತೆಗೆಯುತ್ತಾನೆ ಬಾಲ. ರೂಮ್ ನಿಂದಾ ದಿವ್ಯ ಬಹಳ ಕೋಪದಿಂದ ಹೊರಗೆ ಬರುತ್ತಾಳೆ. ಇದನ್ನು ನೋಡಿದ ಗಿರಿಜಮ್ಮ ಯಾಕೆ ನೀನು ಹೀಗೆಲ್ಲ ಆಡುತ್ತಿದ್ದಿಯಾ, ಮನೆಯಲ್ಲಿ ಪೂಜೆ ನಡೆಯುತ್ತಿತ್ತು ಆದರೆ ನೀನು ಗಲಾಟೆ ಮಾಡುತ್ತಿದ್ದಿಯಾ ಎಂದಾಗ ದಿವ್ಯ ಗೆ ಬಹಳ ಕೋಪ ಬರುತ್ತದೆ.

ರುಕ್ಕು ಮೇಲೆ ಕಿಡಿ ಕಾರುತ್ತ ಇರುತ್ತಾಳೆ. ನನಗೆ ನನ್ನ ಬಾಲ ಬೇಕು, ಎಲ್ಲಾ ಆಗುತ್ತಿರುವುದು ಈ ರುಕ್ಕುವಿನಿಂದ. ಈ ರುಕ್ಕುವನ್ನೆ ಇಲ್ಲವಾಗಿಸಿದರೆ ಹೇಗೆ ಎಂದು ಯೋಚನೆ ಮಾಡುತ್ತಾಳೆ. ಆದರೆ ದಿವ್ಯ ಮನದಲ್ಲಿ ರುಕ್ಕುವನ್ನು ಸಾಯಿಸಿಬಿಡುವಷ್ಟು ಕೋಪ ಬರುತ್ತದೆ. ಆಕೆ ನೇರವಾಗಿ ಅಡಿಗೆ ರೂಮ್ ಗೆ ಹೋಗಿ ಚಾಕು ತೆಗೆದುಕೊಂಡು ಬರುತ್ತಾಳೆ. ಆ ಬಳಿಕ ರುಕ್ಕುವನ್ನು ನೋಡಿ ಏಯ್ ನಿನಗೆ ನನ್ನ ಗಂಡನೇ ಬೇಕಾಯಿತಾ ಬೇರೆ ಹುಡುಗನನ್ನು ನೋಡಿ ಮದುವೆ ಆಗಬಹುದು ಆಗಿತ್ತಲ್ಲ ಇದೀಗ ನಿನಗೆ ನನ್ನ ಗಂಡ ಬೇಕಾ ಎಂದು ಹೇಳಿ ಆಕೆಗೆ ತಿವಿಯಲು ಮುಂದಾಗುತ್ತಾಳೆ.

kannada-serial-satya-written-26th-june

ಎಲ್ಲರಿಗೂ ಕೂಡ ಬಹಳ ಭಯ ಆಗುತ್ತದೆ. ಗಿರಿಜಮ್ಮ ಕಿರುಚಿಕೊಳ್ಳುತ್ತಾರೆ. ಇದನ್ನು ನೋಡಿದ ಬಾಲ ಒಮ್ಮೆಲೆ ದಿವ್ಯ ಕೈ ಹಿಡಿದುಕೊಂಡು ಬಿಡುತ್ತಾನೆ. ಆತ ರುಕ್ಕು ಗೆ ಎದುರಾಗುತ್ತ ಇದ್ದ ಜೀವಾಪಾಯದಿಂದ ಪಾರು ಮಾಡುತ್ತಾನೆ. ಇನ್ನೂ ದಿವ್ಯ ಮಾತ್ರ ಬಾಲಗೋಸ್ಕರ ಏನು ಮಾಡಲು ಹೇಸುವುದು ಇಲ್ಲ ಎಂದು ಇದರಿಂದ ಅರ್ಥ ಆಗುತ್ತದೆ.

ಬಾಲ ಮನೆಯಲ್ಲಿ ಮದುವೆಯದ್ದೆ ಸದ್ದು

ಇತ್ತ ಬಾಲ ಮದುವೆಯ ಖುಷಿಯಲ್ಲಿ ಇರುತ್ತಾನೆ. ಅದಕ್ಕೆ ಅವನಿಂದ ಆದಷ್ಟು ಕೆಲಸ ಮಾಡುತ್ತಾ ಇರುತ್ತಾನೆ ಆ ವೇಳೆ ಅಲ್ಲಿಗೆ ಬಾಲ ಗೆಳೆಯ ಬರುತ್ತಾನೆ.ಬಾಲ ಗೆಳೆಯ ಕೂಡ ಬಾಲ ಗೆ ಬಹಳ ಸಹಾಯ ಮಾಡುತ್ತಾ ಇರುತ್ತಾರೆ ಆ ವೇಳೆ ಬಾಲ ಗೆ ಒಂದು ಕರೆ ಬರುತ್ತದೆ ಅದನ್ನು ಆಕೆಯ ಗೆಳೆಯ ಪಿಕ್ ಮಾಡಿ ಮಾತನಾಡುತ್ತಾನೆ. ಇನ್ನ ಫೋನ್ ನಲ್ಲಿ ಹೆಣ್ಣಿನ ದ್ವನಿ ಕೇಳಿ ಬಾಲನ ಗೆಳೆಯ ಮಾತ್ರ ಬಹಳ ಖುಷಿ ಪಡುತ್ತಾನೆ. ಏನೋ ಆಫರ್ ಇದೆ ಎಂದೆಲ್ಲ ಕಾಗೆ ಹಾರಿಸಿ ಓಟಿಪಿ ಎಲ್ಲಾ ತೆಗೆದುಕೊಳ್ಳುತ್ತಾಳೆ

kannada-serial-satya-written-26th-june

ಬಾಲ ಗೆ ಪಂಗನಾಮ ಹಾಕಿದ ಮಹಿಳೆ

ಇದನ್ನು ನೋಡಿದ ಬಾಲ ಗೆ ಸಣ್ಣ ಡೌಟ್ ಬರುತ್ತದೆ ಆತ ಫೋನ್ ನಲ್ಲಿ ಮಾತನಾಡುತ್ತಾ ಇರುವುದು ಯಾರು ಎಂದೆಲ್ಲ ಕೇಳಿದಾಗ ಯಾರೋ ಹೆಂಗಸು ಎಂದೆಲ್ಲ ಹೇಳುತ್ತಾನೆ ಆತನ ಗೆಳೆಯ ಕೊನೆಗೆ ಫೋನ್ ತೆಗೆದುಕೊಂಡು ಬಾಲ ಮಾತನಾಡಬೇಕು ಎನ್ನುವ ವೇಳೆ ಕರೆ ಕಟ್ ಆಗುತ್ತದೆ. ಪುನ ಆ ನಂಬರ್ ಗೆ ಕರೆ ಮಾಡಿದಾಗ ಕಾಲ್ ಸ್ವಿಚ್ ಆಫ್ ಎಂದು ಬರುತ್ತದೆ ಹಾಗೆಯೇ ಬಾಲ ಬಳಿ ಇದ್ದ ಎಲ್ಲಾ ಹಣವೂ ಡ್ರಾ ಆಗಿರುವ ಮೆಸೇಜ್ ಬರುತ್ತದೆ ಇದರಿಂದ ಬಾಲ ಮಾತ್ರ ಕಂಗೆಟ್ಟು ಹೋಗಿದ್ದಾನೆ ಆತನಿಗೆ ಎನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗಿ ಹೋಗುತ್ತಾನೆ.

ಬೇಸರದಲ್ಲಿರುವ ಸತ್ಯ

ಸತ್ಯ ಮಾತ್ರ ಇದೀಗ ಸಸ್ಪೆಂಡ್ ಆಗಿ ಮನೆಯಲ್ಲಿಯೇ ಉಳಿಯುವ ಹಾಗೆ ಆಗಿದೆ ಇದೀಗ ಸತ್ಯಗೆ ಕೀರ್ತನ ಕೂಡ ಶಹಭಾಷ್ ಎಂದು ಹೇಳಿದ್ದಾಳೆ. ಆಕೆಗೆ ಬಹಳ ನೋವು ಆಗುತ್ತದೆ.ನಾನು ಒಳ್ಳೆಯ ಕೆಲಸ ಮಾಡಿದ್ದರು ಈ ಥರ ನನಗೆ ಸ್ಥಿತಿ ಬಂತಲ್ಲ ಎಂದು ಬೇಸರದಲ್ಲಿ ಇರುತ್ತಾಳೆ .

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X