Satya ; ಬಾಲ ಹೊಟ್ಟೆ ಮೇಲೆ ಹೊಡೆದ ದಿವ್ಯಾ ; ದಿವ್ಯಾ ಆಟಕ್ಕೆ ಅಂತ್ಯ ಹಾಡುತ್ತಾನಾ ಬಾಲ?

By ಪೂರ್ವ

ಬಾಲ ಅದೆಷ್ಟೋ ಕಷ್ಟ ಪಟ್ಟು ರುಕ್ಕು ದರ್ಶಿನಿ ಎನ್ನುವ ಹೋಟೆಲ್ ಶುರು ಮಾಡುತ್ತಾನೆ. ಮೊದಲಿನಿಂದಲೂ ಬಹಳ ಚೆನ್ನಾಗಿ ಓಡುತ್ತಿದ್ದ ಹೋಟೆಲ್ ಗೆ ದಿವ್ಯಾ ವಕ್ರ ದೃಷ್ಟಿ ಬಿದ್ದಿದೆ. ಬಾಲ ಹಾಗೂ ರುಕ್ಕು ಮದುವೆ ಆಗುತ್ತಾರೆ ಎಂದು ನಂಬಿಕೊಂಡು ಇರುವ ದಿವ್ಯಾ ಇವರಿಬ್ಬರನ್ನು ಹೇಗಾದ್ರೂ ಮಾಡಿ ದೂರ ಮಾಡಲೇ ಬೇಕು ಇಲ್ಲವಾದರೆ ಖಂಡಿತವಾಗಿಯೂ ಬಾಲ ನನಗೆ ಸಿಗುವುದು ಇಲ್ಲ ಎಂದು ಚಿಂತೆ ಮಾಡುತ್ತಿದ್ದಾಳೆ, ಚೆನ್ನಾಗಿ ಓಡುತ್ತಿರುವ ಈ ಹೋಟೆಲ್ ನ ಹೇಗಾದರೂ ಮಾಡಿ ಮುಚ್ಚಿಸಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಇದಕ್ಕೆ ಕಾರಣ ರುಕ್ಕು ಮೇಲಿನ ದ್ವೇಷ. ಯಾಕೆಂದರೆ ರುಕ್ಕು ಬಾಲನನ್ನು ಮದುವೆ ಆಗಬೇಕು ಎಂದು ನಿರ್ಧಾರವನ್ನ ಮಾಡಿರುತ್ತಾಳೆ.ಈ ವಿಷಯ ತಿಳಿದು ದಿವ್ಯಾ ಹೊಟ್ಟೆ ಉರಿದುಕೊಂಡು ಬಿಡುತ್ತಾಳೆ.

ನಾನು ಇಲ್ಲಿ ಜೀವಂತ ಇರುವಾಗ ಬಾಲ ಇನ್ನೊಂದು ಮದುವೆ ಆಗುತ್ತಾನ? ಅದು ಹೇಗೆ ಮದುವೆ ಆಗುತ್ತಾನೆ ಎಂಬುವುದನ್ನು ನಾನು ನೋಡಿಯೇ ನೋಡುತ್ತೇನೆ ಎಂದು ಹೇಳುತ್ತಾರೆ . ದಿವ್ಯನ ಎದುರು ರುಕ್ಕುವನ್ನೂ ಅಟ್ಟಕ್ಕೆರಿ ಮಾತನಾಡಿಸುತ್ತಾರೆ. ಆದರೆ ದಿವ್ಯ ಗೆ ಬಾಲನ ಮೇಲೆ ಸಂಪೂರ್ಣ ಪ್ರೀತಿ ಬಂದಾಗಿರುತ್ತದೆ. ಆಕೆಗೆ ಬಾಲ ನನ್ನು ಹೇಗಾದರೂ ಮಾಡಿ ಪಡೆದುಕೊಳ್ಳಲು ಬೇಕು. ನಾನು ನನ್ನ ಗಂಡನನ್ನು ಯಾವತ್ತೂ ಬೇರೆ ಯವರಿಗೆ ಬಿಟ್ಟು ಕೊಡುವುದು ಇಲ್ಲ ಎಂದು ಮನದಲ್ಲಿ ಹೇಳುತ್ತಿರುತ್ತಾರೆ. ಆದರೆ ದಿವ್ಯ ಬದಲಾಗಿದ್ದಾಳೆ ಎಂದು ಬಾಲ ಕೊಂಚ ನಂಬುವ ವೇಳೆ ಗೆ ದಿವ್ಯ ಆ ನಂಬಿಕೆಗೆ ಕೊಳ್ಳಿ ಇಟ್ಟಿದ್ದಳು.

kannada serial satya written 7th june

ರುಕ್ಕು ಮೇಲೆ ಸೇಡು ತೀರಿಸಿಕೊಳ್ಳುವ ಭರದಲ್ಲಿ ದಿವ್ಯ , ಬಾಲ ನ ಹೊಟ್ಟೆ ಮೇಲೆ ಹೊಡೆದು ಬಿಡುತ್ತಾಳೆ. ಫುಡ್ ಇನ್ಸ್ಪೆಕ್ಟರ್ ಗೆ ಕರೆ ಮಾಡಿದ ದಿವ್ಯ ರುಕ್ಕು ದರ್ಶಿನಿ ಎನ್ನುವ ಹೋಟೆಲ್ ನಲ್ಲಿ ತಿನ್ನುವ ಅನ್ನದಲ್ಲಿ ಹುಳಗಳು ಕಾಣಿಸಿಕೊಳ್ಳುತ್ತಿದೆ. ದಯವಿಟ್ಟು ನೀವು ಆ ಹೋಟೆಲ್ ಗೆ ಒಮ್ಮೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆಯನ್ನು ಒಮ್ಮೆ ಪರೀಕ್ಷೆ ಮಾಡಿ ಎಂದು ಹೇಳಿದಾಗ ಫುಡ್ ಇನ್ಸ್ಪೆಕ್ಟರ್ ನೀವು ಯಾರು ಎಂದೆಲ್ಲ ಕೇಳುತ್ತಾರೆ.ಇದಕ್ಕೆ ನಾನು ಯಾರು ಎಂದು ಹೇಳಿದರೆ ನನಗೆ ತೊಂದರೆ ಆಗುತ್ತದೆ ಅದಕ್ಕೆ ನಾನು ಯಾರು ಎನ್ನುವುದು ಬೇಡ ನೀವು ಹೋಟೆಲ್ ಗೆ ಹೋಗಿ ಅಲ್ಲಿನ ಸ್ವಚ್ಛತೆಯ ಬಗ್ಗೆ ಹಾಗೆಯೇ ಫುಡ್ ಬಗ್ಗೆ ನೋಡಿ ಎಂದು ಹೇಳಿ ದಿವ್ಯಾ ಕರೆ ಕಟ್ ಮಾಡುತ್ತಾಳೆ.

ಬಾಲನ ಹೋಟೆಲ್ ಗೆ ಬಂದ ಫುಡ್ ಇನ್ಸ್ಪೆಕ್ಟರ್

ಫುಡ್ ಇನ್ಸ್ಪೆಕ್ಟರ್ ಬಾಲ ಹೋಟೆಲ್‌ಗೆ ಹೋಗುತ್ತಾನೆ. ಬಾಲ ಗೆ ಅವರು ಯಾರು ಎಂದು ತಿಳಿಯುವುದಿಲ್ಲ . ಕೊನೆಗೆ ನಾನು ಫುಡ್ ಇನ್ಸ್ಪೆಕ್ಟರ್ ನನಗೆ ದೂರು ಬಂದಿದೆ. ನಿಮ್ಮ ಹೋಟೆಲ್ ನಲ್ಲಿ ಹುಳ ಆಗಿರುವ ಊಟವನ್ನು ನೀಡುತ್ತಿದ್ದಿರಾ ಎಂದು ಹೇಳಿ ಎಲ್ಲಾ ಕ್ಲೀನ್ ಆಗಿದೆಯಾವೆಂದು ನೋಡಲು ಹೋಗುತ್ತಾನೆ. ಅಕ್ಕಿಯ ಮೂಟೆಯನ್ನು ತೆಗೆಯಬೇಕಾದರೆ ಇಲಿಯೊಂದು ಓಡಿ ಹೋಗುತ್ತಿರುವುದನ್ನು ಕಂಡು ಆ ಹೋಟೆಲ್ ನೀಟ್ ಆಗಿಲ್ಲ ಎಂದು ಇನ್ಸ್ಪೆಕ್ಟರ್ ಹೇಳಿ ಹೋಟೆಲ್ ಮುಚ್ಚಿಸಿ ಬಿಡುತ್ತಾನೆ.

kannada serial satya written 7th june

ದಿವ್ಯಗೆ ಕಪಾಳಮೋಕ್ಷ ಮಾಡಿದ ಬಾಲ

ದಿವ್ಯ ಗೆ ಮಾತ್ರ ಬಹಳ ಖುಷಿ ಆದರೆ ಬಾಲಗೆ ಬಹಳ ದುಃಖ ಆಗುತ್ತದೆ. ನಾನು ಕಟ್ಟಿ ಬೆಳೆಸಿದ ಹೋಟೆಲ್ ಇದೀಗ ಮುಚ್ಚಿ ಹೋಯಿತಲ್ಲ ಎಂದು ಕೊರಗುತ್ತಾನೆ. ಕೊನೆಗೆ ಆತನಿಗೆ ತಿಳಿಯುತ್ತದೆ. ಇದೆಲ್ಲ ದಿವ್ಯ ಮಾಡಿದ ಕೆಲಸ ಎಂದು. ದಿವ್ಯ ಬದಲಾಗಿದ್ದಾಳೆ ಎಂದುಕೊಂಡು ಇದ್ದೆ ಅತ್ತೆ ಆದರೆ ಆಕೆ ಮಾಡಿದ್ದು ಎನು ಎನ್ನುವುದು ಆಕೆಗೆ ಸಣ್ಣ ಅರಿವಾದರೂ ಇದೆಯಾ ಎಂದು ಜಾನಕಿ ಬಳಿ ತನ್ನ ಮನದಲ್ಲಿದ್ದ ನೋವನ್ನು ಹೇಳುತ್ತಾನೆ

ಕೊನೆಗೂ ತಪ್ಪೊಪ್ಪಿಕೊಂಡ ದಿವ್ಯ

ನಾನು ಹೇಳಿದ್ದೆ ಅಲ್ವಾ ಅಳಿಯಂದಿರೆ ಯಾವತ್ತೂ ದಿವ್ಯ ಬದಲಾಗುವುದು ಇಲ್ಲ ಎಂದು ಆದರೆ ನೀವು ದಿವ್ಯ ಬದಲಾಗುತ್ತಾರೆ ಎಂದು ಹೇಳುತ್ತಿದ್ದೀರಿ ಆದರೆ ಇದೀಗ ನಿಮಗೆ ಆಕೆಯ ಬಗ್ಗೆ ತಿಳಿಯಿತಲ್ಲ ಎಂದು ಜಾನಕಿ ಹೇಳುತ್ತಾರೆ. ಇದನ್ನು ಕೇಳಿದ ಬಾಲ ಮಾತ್ರ ದಿವ್ಯ ಗೆ ತಕ್ಕ ಪಾಠ ಕಲಿಸಬೇಕು ಇಲ್ಲವಾದರೆ ಆಕೆ ಬದಲಾಗುವುದೇ ಇಲ್ಲ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಮನೆಗೆ ಬಂದ ಬಾಲ ದಿವ್ಯ ನ ಕಪಾಳಕ್ಕೆ ಹೊಡೆಯುತ್ತಾನೆ. ಬಾಲ ಕಪಾಳಕ್ಕೆ ಹೊಡೆದದ್ದನ್ನು ನೋಡಿದ ದಿವ್ಯ ಯಾಕೆ ಹೊಡೆದೆ ಎಂದು ಪ್ರಶ್ನೆ ಮಾಡುತ್ತಾಳೆ.ಇದನ್ನು ಕೇಳಿದ ಬಾಲ ದಿವ್ಯ ನೀನು ಬದಲಾಗಿದ್ದಿಯಾ ಅಂದುಕೊಂಡೆ, ಎಲ್ಲರೂ ಹೇಳಿದರು ನೀನು ಬದಲಾಗಿದ್ದಿಯಾ ಎಂದು ನಾನೆಷ್ಟು ಖುಷಿ ಪಟ್ಟೆ ಗೊತ್ತಾ? ಆದರೆ ನೀನು ಸ್ವಲ್ಪ ಕೂಡ ಬದಲಾಗಿಲ್ಲ ಕಣೆ. ಯಾಕೆ ನೀನು ಹೀಗೆ ಮಾಡ್ತಿದ್ದೀಯಾ ಎಂದಾಗ ದಿವ್ಯ ಗೆ ಏನು ಹೇಳಬೇಕು ಎಂದು ತಿಳಿಯದೇ ಮುಖ ಮುಖ ನೋಡುತ್ತಲೇ ಇರುತ್ತಾಳೆ. ರುಕ್ಕು ದರ್ಶಿನಿ ಎಂದು ಹೆಸರಿಟ್ಟಿದ್ದರಿಂದ ನಿನಗೆ ಏನಾದರು ಸಂಕಟ ಆಯಿತಾ ಎಂದೆಲ್ಲ ಬಾಲ ಪ್ರಶ್ನೆ ಮಾಡುತ್ತಾನೆ. ಇದನ್ನು ಕೇಳಿದ ದಿವ್ಯ ಮಾತ್ರ ಕೊಂಚ ಜೋರಾಗಿಯೇ ನನಗೆ ಯಾರ ಮೇಲೂ ಕೋಪ ಇಲ್ಲ. ಯಾರ ಹೊಟ್ಟೆ ಮೇಲೂ ಹೊಡೆಯಬೇಕು ಅಂದುಕೊಂಡು ಇಲ್ಲ. ರುಕ್ಕು ಮೇಲಿನ ಕೋಪಕ್ಕೆ ಹಾಗೆ ಮಾಡಿದೆ. ಎಲ್ಲರೂ ರುಕ್ಕುವನ್ನು ತಲೆಯಲ್ಲಿ ಹೊತ್ತು ಮೆರೆಸುತ್ತಾರೆ ಇದು ನನಗೆ ಆಗುತ್ತಿಲ್ಲ. ನಾನು ಏನೇ ಮಾಡಿದರು ತಪ್ಪು ಹುಡುಕುತ್ತಿರಾ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಾಲ ಗೆ ಮನೆಯವರಿಗೆ ಶಾಕ್ ಆಗುತ್ತದೆ.

More from Filmibeat

English summary
kannada serial satya written 7th june
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X