Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Sathya serial: ಬಾಲನ ನಿಜ ರೂಪ ಗಿರಿಜಮ್ಮನಿಗೆ ತಿಳಿಯಿತೇ?
ಬಾಲನ ನಿಜವಾದ ಮುಖವಾಡ ಗಿರಿಜಮ್ಮನ ಎದುರು ಬಯಲಾಗಿದೆ. ತಾನು ಮೋಸ ಹೋದೆನಲ್ಲ ಎಂದು ತಲೆಗೆ ಕೈ ಇಟ್ಟು ಕುಳಿತಿರುತ್ತಾರೆ. ಇದನ್ನು ನೋಡಿದ ಜಾನಕಿ ಅತ್ತೆ ಎಂದು ಜೋರಾಗಿ ಕರೆದಾಗ ಗಿರಿಜಮ್ಮಗೆ ಎಚ್ಚರ ಆಗುತ್ತದೆ. ಮಾತು ಮುಂದುವರೆಸಿದ ಜಾನಕಿ ಅತ್ತೆ ಸುಶೀಲ ಕೈಯಲ್ಲಿ ಇರುವ ಸೀರೆ ಹಾಗೂ ನಿಮ್ಮ ಸೀರೆ ಒಂದೇ ಅಲ್ವಾ ಅದಕ್ಕೆ ನಾಲ್ಕು ಸಾವಿರ ಅಂತೆ ಎಂದು ಹೇಳಿದಾಗ ಗಿರಿಜಾ ನಾಲ್ಕು ಸಾವಿರ ಅಲ್ಲ ಕಣೆ, ಡಿಸ್ಕೌಂಟ್‌ನಲ್ಲಿ ಎರಡೂವರೆ ಸಾವಿರ ಎಂದು ಹೇಳುತ್ತ ಬಾಲ ಮೋಸ ಮಾಡಿರುವ ವಿಚಾರ ತಿಳಿಯುತ್ತದೆ. ಬಳಿಕ ಜಾನಕಿ ಬಾಲ ದಿವ್ಯಗೆ ಮೋಸ ಮಾಡಿದ್ದಾನೆ ಆಕೆ ಆತನ ಬಳಿ ಎನು ನಿರೀಕ್ಷೆ ಮಾಡಿದ್ದಾಳೆ ಗೊತ್ತಾ ನಿಮಗೆ ಎಂದು ಜಾನಕಿ ಕೇಳುತ್ತಾಳೆ.
ಗಿರಿಜಮ್ಮ ಆಕೆಯನ್ನು ಬಾಲ ಬಹಳ ಪ್ರೀತಿ ಮಾಡುತ್ತಾ ಇದ್ದಾನೆ ಎಂದಾಗ ಕೊಂಚ ಭಯಗೊಂಡ ಜಾನಕಿ ಆಕೆಗೆ ಹಣ ಮೊದಲು ಪ್ರೀತಿ ಆಮೇಲೆ, ಅದಕ್ಕೆ ಅವಳು ಆತನನ್ನು ಮದುವೆ ಆಗಿದ್ದು ಕೂಡ ಬಾಲ ಏನಾದರು ಅವಳಿಗೆ ಮೋಸ ಮಾಡುತ್ತಾ ಇದ್ದರೆ ಖಂಡಿತ ಅವನ ಜೊತೆ ಅವಳು ಬಾಳುವುದಿಲ್ಲ ಎನ್ನುತ್ತಾಳೆ. ಆದರೆ ಗಿರಿಜಮ್ಮ ಅಸಡ್ಡೆ ಮಾಡುತ್ತಾರೆ. ಆಕೆಗೆ ಬೇಗ ಬುದ್ದಿ ಬಂದಿರುತ್ತದೆ, ಆಕೆ ಮಾಡಿದ ಮೋಸಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ, ಆಕೆಗೆ ಈ ಮೂಲಕ ಶಿಕ್ಷೆ ಆದರೆ ಆಕೆಗೆ ಬದುಕು ಏನು ಎಂಬುವುದು ಇದೀಗ ಅರ್ಥ ಆಗುತ್ತಿದೆ ಎಂದು ಹೇಳುತ್ತಾಳೆ.

ಜಾನಕಿ ಮುಂದೆ ಸತ್ಯ ಬಯಲು
ಆದರೆ ಜಾನಕಿಗೆ ಮಾತ್ರ ಇದೆಲ್ಲವನ್ನೂ ಸತ್ಯನ ಬಳಿ ಹೇಳುವುದು ಒಳಿತು ಎಂದು ಅತ್ತೆಗೆ ಮನವರಿಕೆ ಮಾಡುತ್ತಾ ಇದ್ದಾಳೆ.. ಬಾಲ ಮರದ ಕೆಳಗೆ ಬೀಡಿ ಸೇದುತ್ತಾ ಇರುತ್ತಾನೆ. ಆಗ ಅಲ್ಲಿಗೆ ಬಂದ ಆತನ ಗೆಳೆಯ ನನಗೊಂದು ಚೂರು ಅನ್ನುತ್ತಾನೆ. ಇದನ್ನು ನೋಡಿದ ಬಾಲ ಇಷ್ಟು ಚಿಕ್ಕ ವಯಸ್ಸಿಗೇ ಬೀಡಿ ಬೇಕಾ ಎಂದು ಚೆನ್ನಾಗಿ ಬಯ್ಯುತ್ತಾ ಇರುತ್ತಾನೆ. ಆದರೆ ಆತನ ಗೆಳೆಯ ಮಾತ್ರ ನೀನು ಸಂಬಳ ಬೇರೆ ಕೊಡುತ್ತಿಲ್ಲ, ಮತ್ತೆ ಟೆನ್ಶನ್ ಆಗದೆ ಇರುತ್ತಾ, ನಾನೇನೋ ನಿನ್ನ ಅರ್ಥ ಮಾಡಿಕೊಂಡು ಇದ್ದೇನೆ ಆದರೆ ಕಾವೇರಿ ಅಕ್ಕ ನಿನ್ನ ಬಳಿ ಒಂದು ಬಾರಿ ಜಗಳ ಆಡಿದ್ದಾಳೆ ಆದರೆ ಈ ಬಾರಿಯೂ ನೀನು ಹಣ ಕೊಡದೆ ಹೋದರೆ ಬಹಳ ದೊಡ್ಡ ಪ್ರಾಬ್ಲಂ ಆಗುತ್ತದೆ ಎಂದು ಕಾವೇರಿ ದಿವ್ಯ ಬಳಿ ಏನೇನೋ ಮಾತನಾಡುತ್ತಾ ಇರುವ ವಿಚಾರವನ್ನು ಬಾಲನಿಗೆ ಹೇಳುತ್ತಾನೆ. ಇದನ್ನು ಕೇಳಿದ ಬಾಲ ಭಯಗೊಳ್ಳುತ್ತಾನೆ.

ಅಮುಲ್ ಬೇಬಿ ಮುಂದೆ ಮುನಿಸಿಕೊಂಡ ಸತ್ಯ
ಇನ್ನು ಸತ್ಯ ಮಾತ್ರ ಅಮುಲ್ ಬೇಬಿ ಮೇಲೆ ಮುನಿಸಿಕೊಂಡು ಇದ್ದಳು. ಆಕೆ ಕಾರ್ತಿಕ್ ಜೊತೆ ಕೊಂಕು ಮಾತನಾಡುತ್ತಾ ಇದ್ದಳು. ಇದನ್ನು ಕಂಡ ಕಾರ್ತಿಕ್ ಸತ್ಯ ಮುನಿಸಿಗೆ ಕಾರಣ ಏನು ಎಂಬುವುದನ್ನು ಹುಡುಕಲು ಹೊರಡುತ್ತಾನೆ. ಆದರೆ ಸತ್ಯಗೆ ತೊಂದರೆ ಏನು ಇಲ್ಲ. ಕಾರ್ತಿಕ್‌ಗೆ ಮಧ್ಯಾಹ್ನ ಕಾಲ್ ಮಾಡಿದ್ದಾಗ ಕಾರ್ತಿಕ್ ಕೆಲಸದಲ್ಲಿ ಬ್ಯುಸಿ ಇದ್ದ ಕಾರಣ ಮತ್ತೆ ಕರೆ ಮಾಡುತ್ತೇನೆ ಎಂದು ಹೇಳಿದ್ದ ಅದೇ ವಿಚಾರ ಇದೀಗ ಸತ್ಯ ಮುನಿಸಿಗೆ ಕಾರಣವಾಗಿದೆ.

ಸತ್ಯ ಬಳಿ ಸಬೂಬು ಹೇಳಿದ ಕಾರ್ತಿಕ್
ಯಾಕೆ ಕರೆ ಮಾಡಿಲ್ಲ ಎಂದು ಸತ್ಯ ಜೋರಾಗಿ ಹೇಳುತ್ತಾಳೆ. ಕೊನೆಗೆ ಕಾರ್ತಿಕ್ ಏನೇನೋ ಸಬೂಬು ಹೇಳಿದರು ಸತ್ಯ ಮಾತ್ರ ಅದನ್ನು ಒಪ್ಪದೇ ಮಲಗಿ ಬಿಡುತ್ತಾಳೆ. ಇತ್ತ ಬಾಲನಿಗೆ ದಿವ್ಯ ಗೋಳು ಕೇಳುವುದು ತಪ್ಪುವುದಿಲ್ಲ. ಕಾವೇರಿ ಶೋಕಿ ಮಾಡುತ್ತಾ ಇದ್ದಾಳೆ ಆದರೆ ನಾನು ಹೆಸರಿಗೆ ಮಾತ್ರ ಕೋಟ್ಯಾಧಿಪತಿ ಹೆಂಡತಿ. ನಾನು ಇಲ್ಲಿ ಎಲ್ಲರ ಚಾಕರಿ ಮಾಡಿಕೊಂಡು ಇರಬೇಕು ಎಂದೆಲ್ಲ ಬಾಲನ ಬಳಿ ಹೇಳುತ್ತ ಇರುತ್ತಾಳೆ. ಇದನ್ನು ಕೇಳಿದ ಬಾಲ ಸುಮ್ಮನೆ ಆಗುತ್ತಾನೆ. ಈ ವೇಳೆ ಬಾಲನಿಗೆ ದಿವ್ಯ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಮರುದಿನ ದಿವ್ಯ ಕೆಲಸ ಮಾಡಿ ಬರುವ ಹೊತ್ತಿಗೆ ಕಾರ್ತಿಕ್ ಆಫೀಸ್‌ಗೆ ಹೋಗಿರುತ್ತಾನೆ. ಇದನ್ನು ನೋಡಿದ ಸತ್ಯ ಬೇಸರ ಮಾಡಿಕೊಳ್ಳುತ್ತಾಳೆ. ಆದರೆ ಆ ವೇಳೆ ಆಕೆಯನ್ನು ಚಿಕ್ಕ ಅತ್ತೆ ಸಮಾಧಾನ ಮಾಡುತ್ತಾರೆ. ಮುಂದೇನು ಕಾದು ನೋಡಬೇಕಿದೆ..