For Quick Alerts
  ALLOW NOTIFICATIONS  
  For Daily Alerts

  Sathya: ಮನೆಯಿಂದ ಹೊರಹೋಗಲು ತೀರ್ಮಾನ ಮಾಡಿದ ದಿವ್ಯ?

  By Poorva
  |

  ಮನೆಯಿಂದ ಹೊರ ಹೋಗಲು ದಿವ್ಯ ಎಲ್ಲಾ ಡ್ರೆಸ್ ಪ್ಯಾಕ್ ಮಾಡುತ್ತಾ ಇರುತ್ತಾಳೆ. ಇದನ್ನು ನೋಡಿದ ಬಾಲ ಯಾಕೆ ಏನಾಯಿತು ಎಲ್ಲಿಗೆ ಹೊರಟೆ ಎಂದು ಕೇಳುತ್ತಾನೆ. ದಿವ್ಯ ಬಹಳ ಕುಪಿತಗೊಳ್ಳುತ್ತಾ ಇರುತ್ತಾಳೆ. ನಾನು ಸುಡುಗಾಡುಗೆ ಹೋಗುತ್ತಾ ಇದ್ದೇನೆ ಎಂದು ಜೋರಾಗಿ ಹೇಳುತ್ತಾಳೆ. ಬಳಿಕ ನಿನ್ನ ಡ್ರಾಮಾ ನೋಡಿ ನೋಡಿ ಸಾಕಾಗಿ ಹೋಗಿದೆ, ಈ ಹಾಳು ಕೊಂಪೆಯಲ್ಲಿ ನನಗೆ ಬದುಕಲು ಆಗುವುದಿಲ್ಲ, ಉಸಿರು ಕಟ್ಟಿದ ಹಾಗೆ ಆಗುತ್ತಾ ಇದೆ ನಾನು ಹೋಗುತ್ತ ಇದ್ದೇನೆ ಎಂದು ಕೋಪದಲ್ಲಿ ಹೇಳುತ್ತಾಳೆ.

  ಇದನ್ನು ಕೇಳಿದ ಬಾಲ ಮೆತ್ತಗೆ ಮಾತನಾಡು ಬೇಬಿ, ತಾತಾ ಕೇಳಿಸಿಕೊಂಡರೆ ಕಷ್ಟ ಎನ್ನುತ್ತಾನೆ. ಆದರೆ ದಿವ್ಯ ಮಾತ್ರ ಜೋರಾಗಿ ಕೇಳಿಸಿಕೊಂಡರೆ ಕೇಳಿಸಿಕೊಳ್ಳಲಿ ನಾನು ಮನೆ ಬಿಟ್ಟು ಹೋಗುತ್ತೇನೆ ಎಂದು ಹಠ ಮಾಡುತ್ತಾಳೆ. ಆದರೆ ಬಾಲ ದಿವ್ಯಳನ್ನು ತಡೆಯಲು ಹರಸಾಹಸ ಮಾಡುತ್ತಾನೆ. ಬಾಲ ಓವರ್ ಆಕ್ಟ್ ಮಾಡುವುದನ್ನು ನೋಡಿದ ಸತ್ಯ ಚುಚ್ಚಿ ಸಾಯಿಸಿಬಿಡುತ್ತೇನೆ ಎಂದು ಹೇಳಿ ಕೋಪಾಗೊಳ್ಳುತ್ತ ಇರುತ್ತಾ.ಳೆ ಬಳಿಕ ಬಾಲನನ್ನು ತಿವಿಯಲು ಬರುತ್ತಾಳೆ.

  ಇದನ್ನು ನೋಡಿದ ಬಾಲ ಹೆದರಿ ಕಂಗಾಲಾಗಿ ಹೋಗುತ್ತಾನೆ. ಇನ್ನು ಬಾಲನಿಗೆ ಒಂದು ದಿನದ ಗಡುವು ಕೊಡುತ್ತಾಳೆ. ತಂದೆ ತಾಯಿ ಬಳಿ ಕರೆದುಕೊಂಡು ಹೋಗದೆ ಇದ್ದರೆ ನಿನ್ನ ಪಾಡು ನಿನಗೆ ನನ್ನ ಪಾಡು ನನಗೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಾಲ ಏನು ಮಾಡಬೇಕು ತಿಳಿಯದೇ ಕಂಗಾಲಾಗಿದ್ದಾನೆ. ರಿತುವನ್ನು ಹುಡುಕಿಕೊಂಡು ಸತ್ಯ ಗೆಳೆಯ ಬಂದಿದ್ದಾನೆ.

  ಟ್ಯೂಷನ್ ಕೊಡಲು ಬಂದಾತನನ್ನೆ ರಿತು ಅದೆಷ್ಟು ಪ್ರೀತಿ ಮಾಡು ಎಂದು ಹೇಳಿದರೂ ಆತ ಮಾತ್ರ ಒಪ್ಪದೇ ಇರುವುದೇ ರಿತುಗೆ ದೊಡ್ಡ ತಲೆನೋವು ಆಗುತ್ತದೆ. ಇನ್ನು ಅಲ್ಲಿಗೆ ಬಂದ ರಾಕೇಶ್ ಜೊತೆ ಇವತ್ತು ನನಗೆ ಟ್ಯೂಷನ್ ಬೇಡ ಎಂದು ರಿತು ಹೇಳುತ್ತಾಳೆ. ಇದನ್ನು ಕೇಳಿದ ರಾಕೇಶ್ ನೀನು ಆಗಲೇ ಹೇಳಿದ್ದರೆ ನಾನು ಇಷ್ಟು ದೂರ ಬಂದು ಟೈಮ್ ವೇಸ್ಟ್ ಮಾಡುತ್ತಾ ಇರಲಿಲ್ಲ ಎಂದು ಹೊರಡಲು ಮುಂದಾಗುತ್ತಾನೆ. ಈ ಸಮಯಕ್ಕೆ ರಿತು ರಾಕಿ ಕೈ ಹಿಡಿದು ನಿಲ್ಲು ರಾಕಿ ನನ್ನ ಬಳಿ ಮಾತನಾಡಲು ಇಷ್ಟ ಇಲ್ವಾ ಎಂದು ಕೈ ಹಿಡಿದು ಕೇಳುತ್ತಾಳೆ.

  ರಾಕಿ ಕೈ ಹಿಡಿದ ರಿತು

  ರಾಕಿ ಕೈ ಹಿಡಿದ ರಿತು

  ಇದನ್ನು ನೋಡಿದ ರಾಕಿ ಕೈ ಬಿಡಿಸಿಕೊಂಡು ಏನು ಮಾತನಾಡುತ್ತಾ ಇದ್ದೀಯಾ ಎನ್ನುತ್ತಾನೆ. ರಿತು ನಾನು ನಿನ್ನ ಇಷ್ಟ ಪಡುತ್ತಾ ಇದ್ದೇನೆ ಬಾವನೆಗಳಿಗೆ ಬೆಲೆ ಕೊಡು ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿದ ರಾಕಿ ನೀನು ನನ್ನ ಗೆಳತಿ ಅದಕ್ಕಿಂತ ಹೆಚ್ಚು ಆಗುವುದು ಬೇಡ ಎಂದೆಲ್ಲ ಹೇಳಿದಾಗ ರಿತು ತಾಯಿ ಹಾಗೂ ದೊಡ್ಡಮ್ಮ ಮಾತನಾಡುತ್ತಾ ಇರುವ ವಿಚಾರವನ್ನು ಹಂಚಿಕೊಳ್ಳುತ್ತಾ ಇರುತ್ತಾಳೆ. ಇದನ್ನು ಕೇಳಿದ ರಾಕಿಗೂ ಶಾಕ್ ಆಗುತ್ತದೆ..

  ಆಫೀಸ್‌ಗೆ ಬಂದ ಸತ್ಯ

  ಆಫೀಸ್‌ಗೆ ಬಂದ ಸತ್ಯ

  ಆದರೆ ರಿತು ಅಳುತ್ತಾ ನಾನು ಗಂಡನ ಸ್ಥಾನ ನಿನಗೆ ಕೊಟ್ಟಿದ್ದೇನೆ ನನಗೆ ನಿನ್ನ ಬಿಟ್ಟು ಬೇರೆ ಯಾರೂ ಬೇಡ ಎಂದು ಹೇಳುತ್ತಾಳೆ. ರಾಕಿಗೆ ಏನು ಹೇಳಬೇಕೋ ತಿಳಿಯದೇ ಸುಮ್ಮನೆ ಆಗುತ್ತಾನೆ . ಇತ್ತ ಕಾರ್ತಿಕ್ ಮತ್ತು ಆತನ ಗೆಳೆಯ ಆಫೀಸ್ ನಲ್ಲಿ ಮೊಬೈಲ್ ಗೇಮ್ ಆಡುತ್ತಾ ಇರುತ್ತಾರೆ. ಈ ವೇಳೆ ಸತ್ಯ ಕಾರ್ತಿಕ್ ಗೆ ಕರೆ ಮಾಡಿ ರಾತ್ರಿ ಏನಾದರು ತಪ್ಪು ಮಾತನಾಡಿದ್ನಾ ಎಂದು ಕೇಳುತ್ತಾಳೆ. ಅದಕ್ಕೆ ಕಾರ್ತಿಕ್ ಏನೇನೋ ಸಬೂಬು ಹೇಳುತ್ತಾನೆ.

  ರಾಕಿಗೆ ರಿತು ಗಿಫ್ಟ್

  ರಾಕಿಗೆ ರಿತು ಗಿಫ್ಟ್

  ಇನ್ನು ಸತ್ಯ ಆಫೀಸ್ ಗೆ ಟಿಫನ್ ಹಿಡಿದುಕೊಂಡು ಬರುತ್ತಾಳೆ ಇ.ದನ್ನು ನೋಡಿದ ಕಾರ್ತಿಕ್ ಶಾಕ್ ಆಗುತ್ತಾನೆ ಸತ್ಯ. ಆಫೀಸ್ ಗೆ ಬಂದಿರುತ್ತಾಳೆ. ಇನ್ನೂ ರಾಕಿಗೆ ರಿತು ಗಿಫ್ಟ್ ಕೊಡುತ್ತಾಳೆ. ಇದನ್ನು ನೋಡಿದ ರಾಕಿ ಇದನ್ನು ತೆಗೆದುಕೊಳ್ಳಲು ಹಣ ಎಲ್ಲಿಂದ ಬಂತು ಎನ್ನುತ್ತಾನೆ. ಇದಕ್ಕೆ ಉತ್ತರಿಸುವ ರಿತು ಅಪ್ಪ ಹಣ ಕೊಟ್ಟರು ಎಂದು ಹೇಳುತ್ತಾಳೆ.

  ರಿತುಗೆ ಬುದ್ದಿ ಹೇಳಿದ ರಾಕಿ

  ರಿತುಗೆ ಬುದ್ದಿ ಹೇಳಿದ ರಾಕಿ

  ನಮ್ಮ ಕಾಲ ಮೇಲೆ ನಿಲ್ಲುವವರೆಗೂ ಯಾರನ್ನು ಲವ್ ಮಾಡಬಾರದು ಎಂದು ಹೇಳುತ್ತಾನೆ. ನನಗೂ ನಿನಗೂ ಸೆಟ್ ಆಗಲ್ಲ ಎಂದು ಅರ್ಥ ಮಾಡಿಸುತ್ತಾನೆ. ತಂದೆ ತಾಯಿ ಕನಸಿಗೆ ಬೆಲೆ ಕೊಡಬೇಕು ಎಂದು ಬುದ್ದಿ ಮಾತು ಹೇಳುತ್ತಾನೆ. ಇನ್ನು ಗಿಫ್ಟ್ ತೆಗೆದುಕೊಳ್ಳಲು ರಾಕಿಗೆ ಇಷ್ಟ ಇಲ್ಲದೆ ಇದ್ದರೂ ಆಣೆ ಪ್ರಮಾಣ ಮಾಡಿ ಗಿಫ್ಟ್ ತೆಗೆದುಕೊಳ್ಳುವ ಹಾಗೆ ಮಾಡುತ್ತಾಳೆ ರಿತು. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ..

  English summary
  Kannada serial satya written update on 13th January
  Saturday, January 14, 2023, 15:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X