Don't Miss!
- News
Bengaluru-Mysuru Expressway: ಫೆ. 15ರೊಳಗೆ ಟೋಲ್ ಸಂಗ್ರಹ ಆರಂಭ
- Technology
ಏರ್ಟೆಲ್ ಜೊತೆಗೆ ಕೈ ಮಿಲಾಯಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
- Automobiles
ರೀ ಎಂಟ್ರಿ ಕೊಡಲಿವೆಯೇ ಮಿಂಚಿ ಮರೆಯಾದ ಲೆಜೆಂಡರಿ ಕಾರುಗಳು?: ಹೊಸ ವಿನ್ಯಾಸ, ಎಂಜಿನ್ ಬದಲಾವಣೆ!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತದತ್ತ ಪ್ರಯಾಣ ಆರಂಭಿಸಿದ ಆಸಿಸ್ ಆಟಗಾರರು
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Finance
Budget 2023: ರಾಷ್ಟ್ರಪತಿ ಭಾಷಣದೊಂದಿಗೆ ಜ.31ರಿಂದ ಬಜೆಟ್ ಅಧಿವೇಶನ ಆರಂಭ, ಈ ಮಾಹಿತಿ ತಿಳಿದಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅತ್ತೆ ಮನ ಗೆಲ್ಲುವ ಪ್ರಯತ್ನದಲ್ಲಿ ದಿವ್ಯ; ಬಾಲ ಮಾಡುತ್ತಿರುವ ಕುತಂತ್ರ ದಿವ್ಯ ಗಮನಕ್ಕೆ ಬರುತ್ತಾ?
ಗಿರಿಜಾ ಹಾಗೂ ಜಾನಕಿ ಸತ್ಯನ ಮನೆಗೆ ಆಗಮಿಸಿ ಬಹಳ ಖುಷಿ ಪಡುತ್ತಾರೆ. ಸತ್ಯ ಮನೆಮಂದಿ ಎಲ್ಲರ ಮನಸು ಗೆದ್ದಿರುವ ವಿಚಾರ ತಿಳಿದು ಇನ್ನೂ ಖುಷಿ ಪಡುತ್ತಾರೆ. ಆದರೆ ಸತ್ಯಗೆ ಒಂದೇ ಮುನಿಸು ನನ್ನ ಗಂಡ ನನಗೆ ಇನ್ನೂ ಬರ್ತ್ ಡೇ ವಿಶ್ ಮಾಡಿಯೇ ಇಲ್ಲ ಎಂಬುದು. ಇನ್ನು ಜಾನಕಿ ಸತ್ಯ ಬಳಿ ಸತ್ಯ ನನಗೆ ನಿನ್ನ ಬಗ್ಗೆ ತುಂಬಾ ಹೆಮ್ಮೆ ಆಗುತ್ತದೆ, ನನಗೆ ಇಂತಹ ಒಂದು ಕಾಲ ಬರುತ್ತದೆ ಎಂದು ಗೊತ್ತೇ ಇರಲಿಲ್ಲ, ಎಂದು ಜೋರಾಗಿ ಅಳುತ್ತಾರೆ. ಇದನ್ನು ಕೇಳಿದ ಸತ್ಯ ಅಮ್ಮ ಯಾಕೆ ಅಳುತ್ತ ಇದ್ದಿಯಾ ಏನಾಯಿತು ಈಗ ಎಂದು ಕೇಳುತ್ತಾಳೆ. ಜಾನಕಿ ಎಲ್ಲರೂ ನಿನ್ನನ್ನು ಗಂಡು ಬೀರಿ ಎಂದು ಹೇಳುತ್ತಾ ಇದ್ದರು, ಇವಳನ್ನು ಯಾರು ಮದುವೆ ಆಗುತ್ತಾರೆ, ಇವಳು ಹೇಗೆ ಬಾಳುತ್ತಾಳೆ, ಬರೀ ಹೊಡಿ ಬಡಿ ಎಂದೆಲ್ಲ ಹೇಳುತ್ತ ಇದ್ದರು, ಆದ್ರೆ ನೀನು ಅವತ್ತಿನ ಸತ್ಯಗೆ ಹಾಗೂ ಇವತ್ತಿನ ಸತ್ಯಗೆ ಬಹಳಷ್ಟು ವ್ಯತ್ಯಾಸ ಇದೆ, ನಾನು ಅವತ್ತು ಆ ಮಾತು ಕೇಳಿ ನಿನ್ನ ಅನ್ನಬಾರದ ಮಾತುಗಳಿಂದ ನಿಂದಿಸಿದೆ, ಆದರೆ ನೀನು ನನ್ನ ಮಾತು ಸುಳ್ಳು ಮಾಡಿ ಬಿಟ್ಟೆ ಎಂದು ಹೇಳುತ್ತಾಳೆ. ಆದರೆ ಸತ್ಯ ಅಮ್ಮನ ಬಳಿ ನೀನು ಹೊಗಳಿದರೆ ಚೆಂದ ಅಲ್ಲ, ಬೈದರೆ ಚೆಂದ ಎಂದು ಹೇಳಿದಾಗ ಜಾನಕಿ ಇನ್ಯಾವತ್ತೂ ನಿನಗೆ ಏನು ಹೇಳುವುದಿಲ್ಲ ಎಂದು ಹೇಳುತ್ತಾಳೆ..
ಇನ್ನು ಸತ್ಯ ಕಾರ್ತಿಕ್ ನನ್ನ ಮನಸ್ಸನ್ನು ಯಾಕೆ ಅರ್ಥ ಮಾಡಿಕೊಂಡಿಲ್ಲ, ಆತ ಯಾಕೆ ನನಗೆ ಇನ್ನೂ ಹುಟ್ಟು ಹಬ್ಬದ ಶುಭಾಶಯ ಹೇಳಲಿಲ್ಲ ಎಂದೆಲ್ಲ ಹೇಳುತ್ತಾಳೆ. ಆತ ಬಂಡ ನನ್ನ ಗಂಡ ಎಂದು ಹೇಳಿದಾಗ ಗಿರಿಜಮ್ಮ ಸಮಾಧಾನ ಮಾಡುತ್ತಾರೆ. ಮರೆತು ಹೋಗಿರಬೇಕು ಅವರಿಗೆ ಎಂದು ಹೇಳುತ್ತಾರೆ. ಆದರೆ ಸತ್ಯ ಕೊಂಚ ಸಮಾಧಾನ ಮಾಡಿಕೊಂಡು ಎಲ್ಲರ ಬಳಿ ಬಹಳ ಖುಷಿಯಿಂದ ಮಾತನಾಡುತ್ತಾಳೆ.

ಅತ್ತೆಗೆ ಅತಿಥಿ ಸತ್ಕಾರ ಮಾಡಿದ ದಿವ್ಯ
ಇನ್ನು ಬಾಲನ ತಾಯಿ ಎಂದು ಹೇಳಿಕೊಂಡು ಬಂದವರನ್ನು ದಿವ್ಯ ಬಹಳ ಉತ್ತಮ ರೀತಿ ಸತ್ಕಾರ ಮಾಡುತ್ತಾಳೆ. ಅತ್ತೆ ಅದೆಷ್ಟು ಬಾರಿ ಆ ತಾತನನ್ನು ಬಯ್ಯುತ್ತಾ ಇದ್ದರೂ ದಿವ್ಯ ಮಾತ್ರ ಸಮಾಧಾನದಿಂದ ಇರುತ್ತಾಳೆ. ಬಳಿಕ ಅತ್ತೆಗೆ ಮುದ್ದೆ ಹಾಗೂ ಮಸ್ಸುಪ್ಪು ಸಾರು ಉಣ ಬಡಿಸುತ್ತಾಳೆ. ಇದನ್ನು ನೋಡಿದ ಆಕೆಯ ಅತ್ತೆಗೆ ಬಹಳ ಖುಷಿ ಆಗುತ್ತದೆ.

ದಿವ್ಯಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅತ್ತೆ
ದಿವ್ಯ ಕೈ ಅಡಿಗೆ ಬಹಳ ರುಚಿಕರವಾಗಿರುತ್ತದೆ, ಅತ್ತೆ ನಿಮ್ಮ ಕಾಲು ಒತ್ತುತ್ತೇನೆ ಎಂದು ಹೇಳಿ ಅತ್ತೆಯ ಕಾಲು ಒತ್ತುತ್ತಾಳೆ, ಅತ್ತೆ ಮಾತ್ರ ಫುಲ್ ಇಂಪ್ರೆಸ್ ಆಗಿದ್ದಾರೆ ಎಂದುಕೊಂಡು ಮಾವ ಇನ್ನಾದರೂ ನಮ್ಮನ್ನು ಒಪ್ಪಿಕೊಳ್ಳುತ್ತಾರೆ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಡ್ಯುಬ್ಲಿಕೆಟ್ ಅತ್ತೆಗೆ ಏನು ಹೇಳಬೇಕೋ ತಿಳಿಯದೇ ಸುಮ್ಮನೆ ಆಗುತ್ತಾಳೆ. ಬಳಿಕ ನೀನು ಅಂದು ತಾತನೀಗೆ ಎದುರು ಮಸ್ತು ಹೇಳಿದೆ ಅಂತೆ ಅಲ್ವಾ ಅದರಿಂದ ನಿಮ್ಮ ಮಾವನಿಗೆ ಬಹಳ ಕೋಪ ಬಂದಿದೆ ಎಂದು ಹೇಳುತ್ತಾರೆ. ಅದನ್ನು ಕೇಳಿದ ದಿವ್ಯ ಅತ್ತೆ ಬಳಿ ಈ ವಿಚಾರ ಮಾವನಿಗೆ ಕೂಡ ತಿಳಿಯಿತ ಎಂದು ಹೇಳುತ್ತಾಳೆ. ಹೌದು ಎನ್ನುತ್ತಾಳೆ

ಕಣ್ಣೀರು ಹಾಕಿದ ಸತ್ಯ
ಇನ್ನು ಗಿರಿಜಾ ಹಾಗೂ ಜಾನಕಿ ಮನೆ ಬಿಟ್ಟು ಅವರ ಮನೆಗೆ ಹೊರಡುವ ವೇಳೆ ಸತ್ಯ ಕಣ್ಣೀರು ಹಾಕುತ್ತಾಳೆ. ಇದನ್ನು ನೋಡಿದ ಗಿರಿಜಾ ನಾವು ವಿದೇಶದಲ್ಲಿ ಇದ್ದೇವ ನಿನಗೆ ನಮ್ಮ ನೆನಪು ಆದಾಗ ನೀನು ನಮ್ಮ ಮನೆಗೆ ಬಾ ಎಂದು ಹೇಳುತ್ತಾಳೆ. ಸತ್ಯಳನ್ನು ನಮಗೆ ಆಗಾಗ ಕಳುಹಿಸಲು ಸಾಧ್ಯ ಇಲ್ಲ, ನೀವೇ ಬರಬೇಕು ಎಂದು ಸತ್ಯ ಚಿಕ್ಕತ್ತೆ ಹೇಳಿದಾಗ ಎಲ್ಲರೂ ನಗುತ್ತಾರೆ. ರಿತು ನಾನು ರಾಕಿಯನ್ನು ಬಹಳ ಪ್ರೀತಿ ಮಾಡುತ್ತಾ ಇದ್ದೇನೆ ಎಂದೆಲ್ಲ ಹೇಳಿದಾಗ ರಿತು ಗೆಳತಿ ಈ ಪ್ರಪಂಚದಲ್ಲಿ ಅವನು ಒಬ್ಬನೇ ಇರುವುದಾ ಬಿಡೆ, ಅವನನ್ನು ಮರೆತುಬಿಡು ಎಂದರೂ ರಿತು ಏನನ್ನೂ ಕೇಳದೇ ಹಠ ಹಿಡಿಯುತ್ತಾಳೆ.

ಸತ್ಯಗೆ ಸರ್ಪ್ರೈಸ್ ಕೊಡಲು ಕಾಯುತ್ತಿರುವ ಕಾರ್ತಿಕ್
ಇನ್ನು ಕಾರ್ತಿಕ್ ಕಾಯುತ್ತಾ ಇರುತ್ತಾನೆ. ತನ್ನ ಗೆಳೆಯ ಎಷ್ಟು ಹೊತ್ತಿಗೆ ಬರುತ್ತಾನೆ. ತನ್ನ ಹೆಂಡತಿಗೆ ಹುಟ್ಟು ಹಬ್ಬದ ಶುಭಾಶಯ ಕೋರಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.. ಆ ವೇಳೆ ಕಾರ್ತಿಕ್ ಗೆಳೆಯ ಬರ್ತ್ ಡೆ ಕೇಕ್ ತರುತ್ತಾನೆ.. ಯಾವ ರೀತಿ ಸತ್ಯಗೆ ಕಾರ್ತಿಕ್ ಸರ್ಪ್ರೈಸ್ ಕೊಡುತ್ತಾನೆ ಕಾದು ನೋಡಬೇಕಿದೆ.