Don't Miss!
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- News
ಮಂಗಳೂರಿನಲ್ಲಿ ಚಾಕು ಇರಿತದಿಂದ ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಸಾವು
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸತ್ಯ ಕೈಗೆ ಸಿಕ್ಕಿ ಬಿದ್ದ ಕೀರ್ತನ; ಮನೆಯವರ ಮುಂದೆ ಕೀರ್ತನ ಮುಖವಾಡ ಕಳಚುತ್ತಾಳಾ ಸತ್ಯ?
ಸತ್ಯ ಎದುರು ಕೀರ್ತನ ಬಂಡವಾಳ ಬಯಲಾಗುವ ಸಮಯ ಬಂದೇ ಬಿಟ್ಟಿದೆ. ಕೀರ್ತನ ಅದೆಷ್ಟೇ ಪ್ಲಾನ್ ಮಾಡಿದರು ಸತ್ಯ ಕೈಗೆ ಸರಿಯಾಗಿ ಸಿಕ್ಕಿ ಬಿದ್ದಿದ್ದಾಳೆ. ಇದನ್ನೆಲ್ಲ ನೋಡಿದ ಸತ್ಯ ಮಾತ್ರ ಕೀರ್ತನಳನ್ನು ಖಂಡಿತ ಸುಮ್ಮನೆಯಂತು ಬಿಡಲು ಸಾಧ್ಯ ಇಲ್ಲ.. ಕೀರ್ತನ ಬಳಿ ಈ ವಿಚಾರದ ಬಗ್ಗೆ ಕೇಳಿದಾಗ ಕೀರ್ತನ ಮಾತ್ರ ನಾನು ತಪ್ಪು ಮಾಡಿ ಇಲ್ಲ ಎಂದು ಹೇಳುತ್ತಾಳೆ ಇದನ್ನು ಕೇಳಿದ ಸತ್ಯಗೆ ಬಹಳ ಕೋಪ ಬರುತ್ತದೆ ಸತ್ಯ ಹಾಗೂ ಕೀರ್ತನ ನೀನು ನಿನ್ನ ಸ್ವಂತ ತಮ್ಮನ ಮೇಲೆ ಇಂತಹ ಆರೋಪ ಮಾಡುತ್ತೀಯಾ ಅಂದುಕೊಂಡು ಇರಲಿಲ ನೀನು ಅಂದು ಆ ಮಾಳವಿಕ ಜೊತೆ ಇದ್ದಾಗ ಕೂಡ ನಾನು ನಿನ್ನ ನಂಬಿದೆ ಯಾಕೆ ಎಂದರೆ ನೀನು ಕಾರ್ತಿಕ್ ಅಕ್ಕ ಎಂದು ಆದರೆ ಈಗ ಎಂದಾಗ ಕೀರ್ತನ ಸ್ವಂತ ತಮ್ಮನ ಮೇಲೆ ನಾನು ಯಾಕೆ ಪ್ಲಾನ್ ಮಾಡಲಿ ಎಂದು ಕೀರ್ತನಾ ಹೇಳುತ್ತಾಳೆ
ಇದನ್ನು ಕೇಳಿದ ಸತ್ಯ ಆದರೆ ಈಗ ಮನೆಗೆ ಬೆಂಕಿ ಇಟ್ಟು ಬಿಟ್ಟಿಯಲ್ಲಾ ಎಂದು ಹೇಳುತ್ತಾಳೆ. ಆದರೆ ನಾನು ಆ ಕೆಲಸ ಮಾಡಿಯೇ ಇಲ್ಲ ಎಂದು ಕೀರ್ತನಾ ಹೇಳುತ್ತಾಳೆ. ಇದಕ್ಕೆ ಸತ್ಯ ಮಾತ್ರ ಕುಪಿತಗೊಳ್ಳುತ್ತಾಳೆ. ನಿನ್ನೆ ರಾತ್ರಿ ಚಿಕ್ಕ ಮಾವನ ಬೀರುವಿನಿಂದ ಹಣ ತೆಗೆಯುವಾಗ ನೀನು ಅದನ್ನು ಕದ್ದು ನೋಡುತ್ತಿದ್ದೆ. ನೀನು ಅಲ್ಲಿ ಇರುವುದನ್ನು ನಾನು ನೋಡಿದೆ. ಆಗಲೇ ನನ್ನ ಅರಿವಿಗೆ ಬಂತು ಈ ಎಲ್ಲಾ ಆಟದ ಸೂತ್ರಧಾರಿ ನೀನು ಎಂದು. ಅಲ್ಲಿಯೇ ನಿನ್ನ ಹಿಡಿದು ಹೊಡೆತ ಕೊಡಬೇಕು ಎಂದು ಅನ್ನಿಸಿತು ಆದರೆ ಕಂಟ್ರೋಲ್ ಮಾಡಿಕೊಂಡೆ ಎಂದಾಗ ಕೀರ್ತನ ಮಾತ್ರ ತಾನು ತಪ್ಪೇ ಮಾಡಿಲ್ಲ ಎನ್ನುವ ತರ ಈಗಲೂ ಮಾತನಾಡುತ್ತಲೇ ಇರುತ್ತಾಳೆ..
ಕೀರ್ತನಾ ಸತ್ಯಾಳಿಗೆ ಅವಮಾನ ಆಗುವ ಹಾಗೆ ಮಾತನಾಡುತ್ತಾಳೆ. ಇದನ್ನು ಕೇಳಿದ ಸತ್ಯ ಇನ್ನೊಂದು ಬಾರಿ ಕೀರ್ತನ ಕೆನ್ನೆಗೆ ಬಲವಾಗಿ ಹೊಡೆಯುತ್ತಾಳೆ. ಇದನ್ನು ನೋಡಿದ ಸುಹಾಸ್ ಗೆ ಶಾಕ್ ಆಗುತ್ತದೆ. ಬಳಿಕ ಕೀರ್ತನ ಬಳಿ ತಾನು ಮಾಡಿದ ಎಲ್ಲಾ ಕೆಲಸವನ್ನು ಹೇಳುತ್ತಾಳೆ. ಕಾರ್ತಿಕ್ ಬಳಿಯಿಂದ ಹಣ ತೆಗೆದುಕೊಂಡ ಹೋದ ಮಾಳವಿಕ ಕಾರನ್ನು ಸತ್ಯ ತಡೆದು ನಿಲ್ಲಿಸುತ್ತಾಳೆ. ಇದನ್ನು ನೋಡಿದ ಮಾಳವಿಕ ಡ್ರೈವರ್ ಬಳಿ ಯಾಕೆ ಏನಾಯಿತು ಯಾಕೆ ಹೀಗೆ ತಡೆದು ನಿಲ್ಲಿಸಿದಿರಿ ಎಂದು ಕೇಳುತ್ತಾಳೆ.

ಮಾಳವಿಕಾ ಕಾರಿಗೆ ಅಡ್ಡ ಬಂದ ಸತ್ಯ
ಇದನ್ನು ಕೇಳಿದ ಡ್ರೈವರ್ ಮೇಡಂ ಎದುರು ನೋಡಿ ಎಂದಾಗ ಮಾಳವಿಕ ಶಾಕ್ ಆಗುತ್ತಾಳೆ. ರೌಡಿಗಳನ್ನು ಸರಿಯಾಗಿ ಜಾಡಿಸಿ ಒದ್ದ ಸತ್ಯ ಮಾಳವಿಕಳನ್ನು ಕಾರಿನಿಂದ ಇಳಿಯಲು ಹೇಳುತ್ತಾಳೆ. ಮಾಳವಿಕಳನ್ನು ಕಾರಿನಿಂದ ಹಿಡಿದು ಎಳೆದ ಸತ್ಯ ಕುತ್ತಿಗೆಯನ್ನು ಹಿಡಿಯುತ್ತಾಳೆ ಹಾಗೂ ನಿಜ ಹೇಳುವಂತೆ ಹೇಳುತ್ತಾಳೆ.

ಸತ್ಯ ಬಳಿ ನಿಜ ಒಪ್ಪಿಕೊಂಡ ಮಾಳವಿಕ
ನಿಜ ಹೇಳದೆ ಇದ್ದರೆ ನನ್ನ ಸತ್ಯ ಕೊಂದೆ ಬಿಡುತ್ತಾಳೆ ಎಂಬ ಭಯದಲ್ಲಿ ಮಾಳವಿಕ ಇದೆಲ್ಲ ಕೀರ್ತನ ಅವರ ಪ್ಲಾನ್, ಕಾರ್ತಿಕ್ ಹಿಂದೆ ಬಿದ್ದು ಇದನೆಲ್ಲಾ ಮಾಡಲು ಹೇಳಿದ್ದೆ ಅವರು, ಕೀರ್ತನ ಯಾಕೆ ಹಾಗೆ ಹೇಳಿದರೋ ಗೊತ್ತಿಲ್ಲ, ದುಡ್ಡಿನ ಆಸೆಗೆ ಹೀಗೆ ಮಾಡಿದೆ ಎಂದು ಸತ್ಯ ಮುಂದೆ ನಿಜ ಒಪ್ಪಿಕೊಳ್ಳುತ್ತಾಳೆ ಮಾಳವಿಕ. ಇದನ್ನು ಕೇಳಿದ ಸತ್ಯ ಮಾತ್ರ ಕೆಂಡ ಮಂಡಲಗೊಂಡು ಛೀ ನಿಮ್ಮದು ಒಂದು ಬಾಳ, ದುಡಿದು ತಿನ್ನುವ ಯೋಗ್ಯತೆ ಇಲ್ಲ, ಕಿತ್ತುಕೊಂಡು ತಿನ್ನುತ್ತಿರಾ ಅಲ್ವಾ ಎಂದು ಬಯ್ಯುತ್ತಾಳೆ.

ಮಾಳವಿಕಾಳನ್ನು ಪೊಲೀಸರ ಕೈಗೆ ಒಪ್ಪಿಸಿದ ಸತ್ಯ
ಬಳಿಕ ಸತ್ಯ ಅಲ್ಲೇ ಇದ್ದ ಪೊಲೀಸರನ್ನು ಬರ ಹೇಳಿ ಮಾಳವಿಕಳನ್ನು ಪೊಲೀಸರ ಕೈಗೆ ಒಪ್ಪಿಸುತ್ತಾಳೆ. ಇದನ್ನು ನೋಡಿದ ಮಾಳವಿಕ ನನ್ನ ಬಿಡಿ ಎಂದು ಹೇಳುತ್ತ ಇರುತ್ತಾಳೆ.. ಪೊಲೀಸರು ಮಾತ್ರ ಇವಳನ್ನ ಬಹಳ ಸಮಯದಿಂದ ಹುಡುಕುತ್ತಾ ಇದ್ದೆ ಆದರೆ ಈಗ ಸಿಕ್ಕಿ ಹಾಕಿಕೊಂಡು ಬಿಟ್ಟಳು ಎನ್ನುತ್ತಾರೆ. ಇದನ್ನು ಕೇಳಿದ ಸತ್ಯ ಹೌದು ಸರ್ ಇವಳ ಹಳ್ಳವನ್ನು ಇವಳೇ ತೋಡಿಕೊಂಡು ಬಿಟ್ಟಳು ಎಂದು ಹೇಳುತ್ತಾಳೆ. ಬಳಿಕ ಪೊಲೀಸರ ಬಳಿಗೆ ಇನ್ನಷ್ಟು ಡಾಕಿಮೆಂಟ್ ಅನ್ನು ಕೊಟ್ಟು ಇದು ನಿಮ್ಮ ಸಹಾಯಕ್ಕೆ ಬರಬಹುದು ಎಂದು ಸತ್ಯ ಹೇಳುತ್ತಾಳೆ.

ಸತ್ಯ ಮಾತಿಗೆ ನಡುಗಿದ ಕೀರ್ತನ - ಸುಹಾಸ್
ಪೊಲೀಸರು ಮಾಳವಿಕಳನ್ನು ಎಳೆದುಕೊಂಡು ಹೋಗುತ್ತಾರೆ. ಇದನ್ನೆಲ್ಲ ಕೀರ್ತನ ಬಳಿ ಹೇಳಿದಾಗ ಕೀರ್ತನ ಮಾತ್ರ ಫುಲ್ ಶಾಕ್ ಆಗುತ್ತಾಳೆ. ಇನ್ನು ಕೀರ್ತನ ಮುಖವಾಡ ಮನೆಯವರ ಮುಂದೆ ಕಳಚಿ ಬಿಡುತ್ತಾಳ ಸತ್ಯ ಎಂಬುವುದನ್ನು ಕಾದು ನೋಡಬೇಕಿದೆ.