Sathya: ಊರ್ಮಿಳಾಗೆ ನಿಜ ಹೇಳಲು ಮುಂದಾದ ಸುಹಾಸ್; ಸತ್ಯ ನಡೆಯೇನು?
ಸತ್ಯ ಕುಟುಂಬದ ಮರ್ಯಾದೆ ಉಳಿಸಲು ಅದೆಷ್ಟು ಹರಸಾಹಸ ಪಡುತ್ತಿದ್ದಾಳೆ ಎಂದರೆ ಸುಹಾಸ್ ಹಾಗೂ ಕೀರ್ತನ ಬಾಯಿ ಮುಚ್ಚಿಸಲು ಸಾಧ್ಯ ಆದಷ್ಟು ಪ್ರಯತ್ನ ಪಟ್ಟಿದ್ದಾಳೆ. ಆದರೆ ರಿತುಗೆ ಮಾತ್ರ ಇದೀಗ ಸತ್ಯ ಮೇಲೆ ಬಹಳಷ್ಟು ಸಿಟ್ಟು ಬಂದಿದೆ. ಯಾಕೆಂದರೆ ತನ್ನ ತಾಯಿಗೆ ಅನ್ಯಾಯ ಆಗುತ್ತಾ ಇದ್ದರೂ ಅದೆಲ್ಲವನ್ನು ನೋಡಿಕೊಂಡು ಸುಮ್ಮನಿರುವುದಕ್ಕೆ.
ಪದ್ಮ ತನ್ನ ತಂದೆಯ ಎರಡನೇ ಹೆಂಡತಿ ಎಂದು ತಿಳಿದಿದ್ದರೂ ಕೂಡ ಆಕೆಯನ್ನು ಈ ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ರಿತು ಗರಂ ಆಗಿದ್ದಾಳೆ. ಪದ್ಮಳನ್ನು ಕಂಡರೆ ರಿತು ಉರಿದು ಬೀಳುತ್ತಾಳೆ.

ರಿತು ಈಗ ತಂದೆ ಲಕ್ಷ್ಮಣ ಮಾತನ್ನು ಕೇಳುವುದಕ್ಕೆ ಕೂಡ ತಯಾರಿಲ್ಲ. ಲಕ್ಷ್ಮಣ ಮಾಡಿದ ಮೋಸಕ್ಕೆ ರಿತು ಬಹಳ ಬೇಸರ ಮಾಡಿಕೊಂಡಿದ್ದಾಳೆ. ಆದರೆ ಅಮ್ಮನಿಗೆ ಈ ವಿಚಾರ ಎಲ್ಲಾ ತಿಳಿದರೆ ಗತಿ ಏನು ಎನ್ನುವುದು ರಿತು ಮನದಲ್ಲಿ ಇರುವ ಸಣ್ಣ ಅಳುಕು. ಹೌದು ರಿತುಗೆ ಅಮ್ಮನೇ ಮುಖ್ಯ . ಅಮ್ಮನಿಗೆ ಆದ ಅನ್ಯಾಯವನ್ನು ತನ್ನ ತಂದೆಯೇ ಸರಿ ಪಡಿಸಬೇಕು ಎನ್ನುವುದು ಆಕೆಯ ವಾದ. ಲಕ್ಷ್ಮಣನಿಗೆ ಆತನ ಅಣ್ಣ ಕೂಡಾ ಅದೇ ಮಾತನ್ನು ಹೇಳುತ್ತಾರೆ. ನಿನ್ನಿಂದ ಆದ ತಪ್ಪನ್ನು ನೀನೇ ಸರಿಪಡಿಸಬೇಕು ಎಂದು.
ಲಕ್ಷ್ಮಣ ಅದ್ಯಾಕೋ ತುಟಿ ಬಿಚ್ಚುತ್ತಾ ಇಲ್ಲ. ಇನ್ನು ಕೀರ್ತನಾ ಮಾತ್ರ ಸುಹಾಸ್ ಬಳಿ ಹೇಳುತ್ತಾಳೆ ಹೇಗಾದರೂ ಮಾಡಿ ಊರ್ಮಿಳಾ ಚಿಕ್ಕಮ್ಮನಿಗೆ ನಿಜ ವಿಚಾರವನ್ನು ನೀವು ತಿಳಿಸಲೇ ಬೇಕು. ಇಲ್ಲದಿದ್ದರೆ ಕಷ್ಟ. ನಾನು ಹೇಳಿದರೆ ಅಮ್ಮ ನನ್ನನ್ನು ಮನೆಯಿಂದ ಹೊರ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಾಳೆ. ಆದರೆ ನೀನು ಊರ್ಮಿಳಾ ಅತ್ತೆಯ ಬಳಿಯೇ ಹೇಳಿದರೆ ಅವರಿಗೆ ನಿಜ ವಿಚಾರ ತಿಳಿದರೆ ಮತ್ತೆ ಮನೆಯಲ್ಲಿ ಡ್ರಾಮಾ ಶುರು ಆಗುತ್ತದೆ. ಹಾಗೆಯೇ ಮನೆಯ ನೆಮ್ಮದಿ ಕೆಡಿಸಬಹುದು ಎನ್ನುವುದು ಕೀರ್ತನಾ ಪ್ಲಾನ್ .
ಊರ್ಮಿಳಾ ಬಳಿ ಮಾತನಾಡಲು ಬಂದ ಸುಹಾಸ್
ಇನ್ನು ಸುಹಾಸ್ ಅಡಿಗೆ ಮನೆಗೆ ಬರುತ್ತಾನೆ. ಊರ್ಮಿಳಾ ಬಳಿ ಮಾತು ಶುರು ಮಾಡಿದ ಸುಹಾಸ್‌ಗೆ ಸತ್ಯ ಕಣ್ಣಿನಲ್ಲೆ ವಾರ್ನಿಂಗ್ ಮಾಡುತ್ತಾಳೆ. ಆದರೆ ಅದು ಯಾವುದಕ್ಕೂ ಜಗ್ಗದ ಸುಹಾಸ್, ಊರ್ಮಿಳಾ ಬಳಿ ಮಾತು ಶುರು ಮಾಡುತ್ತಾನೆ. ಪೂಜೆಗೆ ಬೇಕಾಗಿರುವ ಎಲ್ಲಾ ಸಾಮಗ್ರಿಯನ್ನು ತಂದಿದ್ದಿಯಾ ಅಲ್ವಾ? ಇಲ್ಲವಾದರೆ ಅಕ್ಕ ಬಯ್ಯುತ್ತಾಳೆ ಎಂದು ಸತ್ಯ ಬಳಿ ಊರ್ಮಿಳಾ ಹೇಳುತ್ತಾಳೆ.

ಕಣ್ಣಲ್ಲೇ ಸುಹಾಸ್‌ಗೆ ಸನ್ನೆ ಮಾಡಿದ ಸತ್ಯ
ಆಗ ಸುಹಾಸ್‌ನನ್ನು ನೋಡಿದ ಊರ್ಮಿಳಾ ಕೇಳುತ್ತಾಳೆ. ಸುಹಾಸ್ ನೀವು ಯಾಕೆ ಇಲ್ಲಿ ನಿಂತಿದ್ದೀರಾ? ಏನಾದರೂ ಕೇಳುವುದು ಇತ್ತಾ? ಎಂದಾಗ ಸುಹಾಸ್ ಸುಮ್ಮನೆ ಹಾಗೆಯೇ ಬಂದೆ ಎನ್ನುತ್ತಾನೆ. ಏನು ಕಾರಣ ಇಲ್ಲದೇ ಇಲ್ಲಿಗೆ ನೀವು ಬರಲು ಸಾಧ್ಯ ಇಲ್ಲ, ವಿಚಾರ ಏನು ಹೇಳಿ ಎನ್ನುತ್ತಾಳೆ. ಇದನ್ನು ಕೇಳಿದ ಸುಹಾಸ್ ಸಿಕ್ಕಿದ್ದೇ ಚಾನ್ಸ್ ಎಂದುಕೊಂಡು , ಕೀರ್ತನಾ ಬಹಳ ಬೇಸರ ಮಾಡಿಕೊಂಡು ಇದ್ದಾಳೆ, ನೀವು ಮಾಡಿದ್ದು ತಪ್ಪು ಅತ್ತೆ ಬೆಳೆದ ಮಕ್ಕಳ ಜೊತೆ ಯಾರಾದರೂ ಹೀಗೆಲ್ಲ ನಡೆದುಕೊಳ್ಳುತ್ತಾರ? ಇದೇ ವಿಚಾರವಾಗಿ ನನ್ನ ಡಾರ್ಲಿಂಗ್ ಬೇಸರ ಮಾಡಿಕೊಂಡು ಇದ್ದಾಳೆ ಎನ್ನುತ್ತಾನೆ.
ಊರ್ಮಿಳಾ ಮಾತಿಗೆ ಪೆಚ್ಚಾದ ಸುಹಾಸ್
ರಿತು ನಡವಳಿಕೆ ಸರಿಯಾಗಿ ಇಲ್ಲ ಬಗ್ಗೆ ಊರ್ಮಿಳಾ ಬಿಡಿಸಿ ಹೇಳುತ್ತಾಳೆ . ಇತ್ತೀಚಿಗೆ ಆಕೆ ಸತ್ಯ , ಪದ್ಮ ಜೊತೆ ಸರಿಯಾಗಿ ನಡೆದುಕೊಳ್ಳದೇ ಇರುವುದು ನನಗೆ ಸರಿ ಬರುತ್ತಿಲ್ಲ. ಆಕೆ ಹೇಗೆ ನಡೆದುಕೊಳ್ಳುತ್ತಿದ್ದಾಳೆ ಎಂಬುವುದನ್ನು ನೀವು ನೋಡಿದ್ದೀರಿ ಅಲ್ವಾ? ಎನ್ನುತ್ತಾಳೆ. ಅದಕ್ಕೆ ಸುಹಾಸ್, ಇಷ್ಟು ದಿನ ಚಿಕ್ಕ ಮಾವ ಪದ್ಮ ಪರ ಇದ್ದರೂ ಇದೀಗ ನೀವು ಕೂಡ ಪದ್ಮ ಪರ ನಿಂತುಕೊಂಡು ಇದ್ದೀರಾ? ಅದರಿಂದ ಅವಳಿಗೆ ನೋವು ಆಗಲ್ವಾ? ಎಂದು ಕೀರ್ತನಾ ಹೇಳುತ್ತಿದ್ದಳು ನಾನು ಹೇಳಿದ್ದು ಅಲ್ಲಪ್ಪ ಎಂದು ಹೇಳುತ್ತಾನೆ. ಇದನ್ನು ಕೇಳಿದ ಊರ್ಮಿಳಾ ಕೋಪ ದುಪ್ಪಟ್ಟು ಆಗುತ್ತದೆ .
ಸತ್ಯಗೆ ಶುರು ಆಯಿತು ತಳಮಳ
ಊರ್ಮಿಳಾ ಜೋರಾಗಿ ಸುಹಾಸ್‌ನನ್ನು ಪ್ರಶ್ನೆ ಮಾಡುತ್ತಾಳೆ. ನೀವು ಯಾಕೆ ನಮ್ಮವರ ಹೆಸರಿನ ಜೊತೆ ಪದ್ಮ ಹೆಸರು ತಳುಕು ಹಾಕುತ್ತೀರಾ? ಎನ್ನುತ್ತಾಳೆ. ಇದೆಲ್ಲವನ್ನೂ ನೋಡಿದರೆ ಸುಹಾಸ್ ನಿಜ ವಿಚಾರವನ್ನು ವಿವರವಾಗಿ ಹೇಳುವ ಹಾಗೆ ಕಾಣುತ್ತಿದೆ.


Click it and Unblock the Notifications











