ಸತ್ಯ ಮೇಲೆ ಕೋಪ ಮಾಡಿಕೊಂಡ ಸೀತಾ; ಅತ್ತೆಗೆ ಹೆದರಿ ಆಫೀಸ್‌ನತ್ತ ಮುಖಮಾಡಿದ ಸತ್ಯ?
ಸತ್ಯ ಬಹಳ ಖುಷಿಯಿಂದ ತನ್ನ ಗಂಡನಿಗೆ ಅಡುಗೆ ಮಾಡಲು ತೊಡಗುತ್ತಾಳೆ. ಕಾರ್ತಿಕ್ ಗೆ ಏನು ಇಷ್ಟ ಅದೆಲ್ಲವನ್ನೂ ಮಾಡುತ್ತಾ ಇರುವ ಸತ್ಯಳನ್ನು ನೋಡಿದ ಆಕೆಯ ಚಿಕ್ಕತ್ತೆ ಬಹಳ ಸಂತಸಗೊಳ್ಳುತ್ತಾರೆ. ಸತ್ಯ ಅಡುಗೆ ಮಾಡುವ ವೇಳೆ ಕೈ ಕೊಯ್ದುಕೊಂಡರೂ ಆಕೆ ಮಾತ್ರ ಅದನ್ನು ಲೆಕ್ಕಿಸದೇ ಅಡುಗೆ ಮಾಡುತ್ತಾ ಇರುತ್ತಾಳೆ. ಸಹಾಯಕ್ಕೆ ಬಂದ ಚಿಕ್ಕತ್ತೆಯನ್ನು ಬದಿಗೆ ಕುಳ್ಳಿರಿಸಿ ಮಾತನಾಡುತ್ತಾ ಅಡುಗೆ ಮಾಡುತ್ತಾ ಇರುತ್ತಾಳೆ. ಆಕೆಯ ಚಿಕ್ಕತ್ತೆ ಸತ್ಯಾಳನ್ನು ಹೊಗಳುತ್ತಾ ಇರುತ್ತಾರೆ.
ನೋಡು ಸತ್ಯ ನಿನ್ನ ಗಂಡ ನೀನು ಮಾಡಿದ ಅಡುಗೆಯನ್ನು ಚಪ್ಪರಿಸಿ ತಿನ್ನುತ್ತಾನೆ ಎಂದೆಲ್ಲ ಹೇಳಿದಾಗ ಸತ್ಯಾಗೆ ನಾಚಿಕೆ ಆಗುತ್ತದೆ. ಬಳಿಕ ಎಲ್ಲಾ ಬುತ್ತಿಯಲ್ಲಿ ಕಟ್ಟಿ ಅದನ್ನು ತೆಗೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಸೀತಾ ಬರುತ್ತಾಳೆ. ಬಳಿಕ ಸಿಟ್ಟಿನಿಂದ ಏನು ಅಡುಗೆ ಇನ್ನೂ ಆಗಿಲ್ವಾ ನೀನು ಬೇಗ ಆಡುಗೆ ಮಾಡಿ ತೆಗೆದುಕೊಂಡು ಹೋಗದಿದ್ದರೆ ಕಾರ್ತಿಕ್ ಹೋಟೆಲ್‌ನಲ್ಲಿ ತಿನ್ನಬಹುದು ಎಂದು ಹೇಳಿದಾಗ ತನ್ನ ಅತ್ತೆಯ ಬಳಿ ಕ್ಷಮೆ ಕೇಳುತ್ತಾಳೆ .
ಆಗಲೇ ತಡ ಆಗಿದೆ ಇನ್ನೂ ತಡ ಮಾಡುವುದು ಬೇಡ ಎಂದು ಡಬ್ಬಿ ಕಟ್ಟಿ ಇಟ್ಟಿದ್ದೇನೆ ಎಂದೆಲ್ಲ ಹೇಳುತ್ತಾಳೆ. ಬಳಿಕ ಹೊರಡಲು ಅನುವಾದಗ ಸೀತಾ ಆಕೆಯನ್ನು ತಡೆಯುತ್ತಾಳೆ. ಸತ್ಯಾಳ ಚಿಕ್ಕತ್ತೆ ಏನೇನೋ ಸಬೂಬು ಹೇಳಿ ಸತ್ಯಳನ್ನು ಊಟ ಕೊಡಲು ಕಳುಹಿಸುತ್ತಾರೆ.

ದಿವ್ಯ ಮೇಲೆ ಬಾಲಗೆ ಅನುಮಾನ
ಬಾಲ ನಮ್ಮಿಬ್ಬರ ಮಧ್ಯೆ ಏನು ನಡೆದಿಲ್ಲ, ಅದು ಹೇಗೆ ನಮಗೆ ಮಕ್ಕಳಾಗುತ್ತೆ ಎಂದೆಲ್ಲ ದಿವ್ಯ ಬಳಿ ತನಗೆ ಇರುವ ಅನುಮಾನ ಹೊರ ಹಾಕುತ್ತಾನೆ. ಆದರೆ ದಿವ್ಯ ಇದನ್ನು ಕೇಳಿ ಹೈ ಡ್ರಾಮಾ ಶುರು ಮಾಡುತ್ತಾಳೆ. ಯಾಕೆ ಏನಾಯಿತು, ಯಾಕೆ ನೀವು ಈ ರೀತಿ ಅನುಮಾನ ಪಡುತ್ತಿರಾ, ಮಾಡ ಬಾರದ್ದನ್ನೆಲ್ಲಾ ಮಾಡಿ ಇದೀಗ ಈ ರೀತಿ ಮಾತನಾಡುತ್ತಾ ಇರುವುದು ಸರಿಯಟಾ ಎಂದೆಲ್ಲ ಕೇಳುತ್ತಾಳೆ. ಇದನ್ನು ಕೇಳಿದ ಬಾಲ ಅಯ್ಯೋ ಹೇಗಾಯಿತು ಎಂದೆಲ್ಲ ಅಂದುಕೊಳ್ಳುತ್ತಾ ಇರುತ್ತಾನೆ. ಬಳಿಕ ದಿವ್ಯ ಬಾಲ ಬಳಿ ನನಗೆ ಸುಸ್ತು ಆಗುತ್ತಿದೆ ಮಲಗುತ್ತೇನೆ ಎಂದು ಹೇಳಿ ಹೋಗುತ್ತಾಳೆ.

ಡಾಕ್ಟರ್ ಮಾತು ಕೇಳಿ ಬೆಚ್ಚಿದ ಬಾಲ
ದಿವ್ಯಗೆ ಪಿತ್ತದ ವಾಂತಿ ಆಗಿರುವುದು ಎಂದು ಡಾಕ್ಟರ್ ಹೇಳುತ್ತಾರೆ. ಇದನ್ನು ಕೇಳಿದ ಬಾಲ ಡಾನ್ಸ್ ಮಾಡುತ್ತಾನೆ. ಆದರೆ ಆ ಬಳಿಕ ಬಂದ ಡಾಕ್ಟರ್ ದಿವ್ಯ ಅವಳಿ ಜವಳಿ ಮಕ್ಕಳಿಗೆ ತಾಯಿ ಆಗುತ್ತಿದ್ದಾರೆ ಬಹಳ ಕೇರ್ ಫುಲ್ ಆಗಿ ನೋಡಿಕೊಳ್ಳಿ ಎಂದು ಹೇಳುತ್ತಾನೆ. ಇದನ್ನು ಕೇಳಿದ ಬಾಲಗೆ ಆಕಾಶವೇ ಕಳಚಿ ಮೇಲೆ ಬಿದ್ದ ಹಾಗೆ ಆಗುತ್ತದೆ. ಇದನ್ನು ಕೇಳಿಸಿಕೊಂಡ ಆತನ ಗೆಳೆಯರು ಡಾನ್ಸ್ ಮಾಡುತ್ತಾರೆ.

ರಾಕೇಶ್ ನೋಡಿ ಶಾಕ್ ಆದ ರಿತು
ಇನ್ನು ರಿತು ಸೇಲ್ಸ್ ಕೆಲಸ ಮಾಡುತ್ತಾ ಇರುತ್ತಾಳೆ. ಆಕೆ ಪುಸ್ತಕ ಹಿಡಿದು ಮನೆ ಮನೆ ತಿರುಗುತ್ತಾ ಇರುತ್ತಾಳೆ . ಈ ವೇಳೆ ಮನೆಗೆ ಬಂದ ರಿತು ಬಾಗಿಲು ತೆರೆದಿರುವುದನ್ನು ನೋಡಿ ಒಳಗೆ ಬರುತ್ತಾಳೆ. ಅಕ್ಕ ಅಣ್ಣ ಮನೆಯಲ್ಲಿ ಯಾರಾದರೂ ಇದೀರಾ ಎಂದೆಲ್ಲ ಕೇಳಿಕೊಂಡು ಹೋಗುತ್ತಾಳೆ. ಆ ವೇಳೆ ರಾಕೇಶ್ ಮನೆಯಿಂದ ಹೊರಗೆ ಬಂದು ರಿತುವನ್ನು ನೋಡಿ ಶಾಕ್ ಆಗುತ್ತಾನೆ. ರಿತುಗೆ ಬುದ್ದಿ ಹೇಳುತ್ತಾನೆ. ಇದೇನು ನೀನು ಮಾಡುತ್ತಿರುವ ಕೆಲಸ ನೀನು ನನ್ನ ಗೆಳತಿ ಆಗಿರುವುದಕ್ಕೆ ನಾನು ನಿನ್ನ ಬಳಿ ಕೇಳಿಕೊಳ್ಳುತ್ತ ಇದ್ದೇನೆ ದಯಮಾಡಿ ನೀನು ಇಂತಹ ಕೆಲಸ ಮಾಡಬೇಡ ಎಂದೆಲ್ಲ ಹೇಳುತ್ತಾನೆ. ಆದರೆ ರಿತು ನನಗೆ ನೀನು ಸಿಗುವವರೆಗೆ ಈ ಕೆಲಸ ಮಾಡುತ್ತಾ ಇರುತ್ತೇನೆ ಎಂದಾಗ ರಾಕೇಶ್ ರಿತು ಬಳಿ ನೀನು ನನ್ನ ಗೆಳತಿ ಅದಕ್ಕೂ ಮೀರಿದ್ದು ನಮ್ಮ ಮಧ್ಯೆ ಎನು ಇಲ್ಲ, ಆದರೆ ನೀನು ಏನೇನೋ ಮಾತನಾಡುತ್ತಾ ಇರುತ್ತಿಯಾ ಎನ್ನುತ್ತಾನೆ. ಅದನ್ನೆಲ್ಲ ಕೇಳಿದ ರಿತು ಅಲ್ಲಿಂದ ಹೊರಟು ಹೋಗುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











