Sathya: ಬಾಲನ ಕಂಡರೆ ದಿವ್ಯಾ ಸಿಡಿಮಿಡಿ: ಆಕೆಯ ಮಾತಿಗೆ ಮಣೆ ಹಾಕುತ್ತಾನಾ ಬಾಲ?
'ಸತ್ಯ' ಧಾರಾವಾಹಿ ಇತ್ತೀಚಿನ ದಿನಗಳಲ್ಲಿ ಬಹಳ ಕುತೂಹಲಕಾರಿ ಘಟ್ಟ ತಲುಪಿದೆ. ರಿತು ತನ್ನ ತಾಯಿಯ ಫೋನ್‌ನಲ್ಲಿ ಗುಟ್ಟಾಗಿ ರಾಕೇಶ್ ಜೊತೆ ಮಾತನಾಡುತ್ತಾ ಇರುತ್ತಾಳೆ. ರಾಕೇಶ್ ನಿನ್ನನ್ನು ತುಂಬಾ ಪ್ರೀತಿಸುತ್ತಾ ಇರುವೆ ನೀನು ಬಿಟ್ಟು ಹೋದರೆ ನನಗೆ ಇನ್ಯಾರು ಗತಿ ಎಂದು ಹೇಳಿದಾಗ ರಾಕೇಶ್ ಮಾತ್ರ ಮನೆ ಬಿಟ್ಟು ಓಡಿ ಬರಲು ತಯಾರಾಗಿ ಇರುವುದಿಲ್ಲ.
ಯಾಕೆಂದರೆ ರಾಕೇಶ್‌ಗೆ ಸತ್ಯ ಹಾಗೂ ಆತನ ಗೆಳೆಯರು ಅಂದರೆ ಬಹಳ ಇಷ್ಟ. ಆದರೆ ತಾನು ಇಷ್ಟಪಡುತ್ತಿರುವ ಹುಡುಗಿ ಜೊತೆ ಪಲಾಯನ ಮಾಡಿ ಮದುವೆ ಆದರೆ ಸತ್ಯ ನನ್ನನ್ನು ಯಾವಾಗಲೂ ಕ್ಷಮಿಸುವುದು ಇಲ್ಲ. ಇದೆಲ್ಲವನ್ನೂ ರಿತುಗೆ ಎಷ್ಟೇ ಬಿಡಿಸಿ ಹೇಳಿದರೂ ಆಕೆ ಮಾತ್ರ ಅದನ್ನು ಕೇಳುತ್ತಿಲ್ಲ.

ರಿತು, ರಾಕೇಶ್ ಬಳಿ ಬ್ಲಾಕ್ ಮೇಲ್ ಮಾಡಿ ಮದುವೆಗೆ ಒಪ್ಪಿಸುತ್ತಾಳೆ. ನಾಳೆ ಬೆಳಗ್ಗೆ ನೀನು ನನ್ನನು ಹುಡುಕಿ ಬರಲಿಲ್ಲ ಎಂದರೆ ನನ್ನ ಹೆಣ ನೋಡಬೇಕು ಎಂದಾಗ ಮೆತ್ತಗೆ ರಾಕೇಶ್ ಹೇಳುತ್ತಾನೆ ಸರಿ ಆಯಿತು ಎಂದು ಹೇಳುತ್ತಾನೆ. ಊರ್ಮಿಳಾ ಮನೆ ಎಲ್ಲಾ ಮೊಬೈಲ್‌ಗಾಗಿ ಹುಡುಕಾಟ ನಡೆಸುತ್ತಿರುತ್ತಾಳೆ.
ರಿತು ಮೇಲೆ ಊರ್ಮಿಳಾ ಗರಂ
ತನ್ನ ಮೊಬೈಲ್ ಕಾಣದೆ ಇರುವುದನ್ನು ಕಂಡು ಊರ್ಮಿಳಾ ನನ್ನ ಮೊಬೈಲ್ ಏನಾದರು ರಿತು ತೆಗೆದುಕೊಂಡು ಇರಬಹುದಾ ಎಂದು ಅನುಮಾನಗೊಳ್ಳುತ್ತಾಳೆ. ರಿತುಳನ್ನು ಬಹಳ ಕಡೆ ಹುಡುಕುತ್ತಾಳೆ ಇರುವುದಿಲ್ಲ. ಕೊನೆಗೆ ಮನೆಯ ಮಹಡಿ ಮೇಲೆ ಹತ್ತಿ ನೋಡಿದಾಗ ರಿತು ಯಾರ ಬಳಿಯೋ ಮಾತನಾಡುತ್ತಾ ಇರುವುದನ್ನು ನೋಡಿದ ಊರ್ಮಿಳಾ ಮಾತ್ರ ಬಹಳ ಕೋಪದಿಂದ ಜೋರಾಗಿ ರಿತುವನ್ನ ಕರೆಯುತ್ತಾಳೆ.

ಅಮ್ಮನನ್ನು ಕಂಡು ಬೆಚ್ಚಿ ಬಿದ್ದ ರಿತು
ಅಮ್ಮನನ್ನು ನೋಡಿದ ರಿತು ಬಹಳ ಭಯದಿಂದ ಇರುತ್ತಾಳೆ. ನಾನು ಮಾತನಾಡಿರುವುದು ಅಮ್ಮನ ಕಿವಿಗೆ ಬಿತ್ತಾ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನು ಬಾಲ ಊಟ ಬಡಿಸಿಕೊಂಡು ಇರಬೇಕಾದರೆ ಜಾನಕಿ ಕೊಂಚ ಗಲಿಬಿಲಿಗೊಳ್ಳುತ್ತಾಳೆ. ಇದೇನಿದು ಅಳಿಯಂದಿರನ್ನು ಅರ್ಥ ಮಾಡಿಕೊಳ್ಳಲು ಆಗುವುದು ಇಲ್ಲ. ಅಲ್ವಾ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾರೆ
ದಿವ್ಯಾಗೆ ಊಟ ತಿನ್ನಿಸಲು ಹೊರಟ ಬಾಲ
ಇನ್ನೂ ಗಿರಿಜಾಮ್ಮ, ಬಾಲನ ಬಳಿ ಕೇಳುತ್ತಾರೆ ಯಾರಿಗೆ ಇದು ಊಟ ಎಂದು. ದಿವ್ಯಾಗೆ ಎಂದು ಹೇಳುತ್ತಾನೆ. ದಿವ್ಯಾ ಎಷ್ಟೇ ಒತ್ತಾಯ ಮಾಡಿದರೂ ಆಕೆ ಊಟ ಮಾಡಲು ರೆಡಿ ಇಲ್ಲ. ಕೊನೆಗೆ ಬಾಲನ ಕೈಯಲ್ಲಿದ್ದ ತಟ್ಟೆಯನ್ನು ಚೆಲ್ಲುತ್ತಾಳೆ. ಬಾಲನನ್ನು ನೋಡಿದಾಗ ದಿವ್ಯಾ ಬಹಳ ಸಿಡಿಮಿಡಿಗೊಳ್ಳುತ್ತಾಳೆ. ಇದನ್ನು ನೋಡಿದ ಗಿರಿಜಾ ಹಾಗೂ ಜೆಂಡ್ಕಿಗೆ ಬಹಳ ಬೇಸರ ಆಗುತ್ತದೆ .

ದಿವ್ಯಾಳ ಸ್ಥಿತಿ ಕಂಡು ಗಿರಿಜಮ್ಮಗೆ ಸಂಕಟ
ಚಿನ್ನದಂತಹ ಹುಡುಗನನ್ನು ಆಸ್ತಿಯ ಆಸೆಗೆ ಕಳೆದುಕೊಳ್ಳುತ್ತಾ ಇದ್ದಾಳೆ ಎಂದು ಬಹಳ ಬೇಸರ ಪಟ್ಟುಕೊಳ್ಳುತ್ತಾರೆ. ಇನ್ನು ಸತ್ಯಗೆ ಕಾರ್ತಿಕ್ ಇತ್ತೀಚಿನ ದಿನಗಳಲ್ಲಿ ಬಹಳ ಹತ್ತಿರ ಆಗುತ್ತಾ ಇದ್ದಾನೆ. ಆದರೆ ಅವರಿಬ್ಬರನ್ನು ಹೇಗಾದರೂ ಮಾಡಿ ದೂರ ಮಾಡಲೇಬೇಕು ಎಂದು ಸೀತಾ ಯೋಚನೆ ಮಾಡುತ್ತಾ ಇರುತ್ತಾಳೆ. ಸೀತಾಗೆ ಸತ್ಯನ ಕಂಡರೆ ಆಗುವುದೇ ಇಲ್ಲ. ಹಾಗಾಗಿ ಸತ್ಯ ಏನು ತಪ್ಪು ಮಾಡದೇ ಇದ್ದರೂ ಆಕೆ ಮಾಡಿದ್ದನ್ನು ತಪ್ಪು ಎಂದು ಹೇಳುತ್ತಾ ಇರುತ್ತಾಳೆ. ಸತ್ಯ ಮಾತ್ರ ಏನು ಮಾಡಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾಳೆ.


Click it and Unblock the Notifications











