ತಾತಯ್ಯನ ಪಾತ್ರಕ್ಕೆ ಬಾಲನಿಗೆ ಸಿಕ್ಕ ಘಾಟಿ ತಾತ!

By ಪೂರ್ವ

ಸತ್ಯ ಧಾರವಾಹಿ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸತ್ಯ ಯಾಕೆ ಈ ಪರಿಯಾಗಿ ಬೇಸರಿಸಿಕೊಳ್ಳುತ್ತಿದ್ದಾಳೆ ಎಂದು ಚಿಂತಾಕ್ರಾಂತನಾಗಿದ್ದಾರೆ ಕಾರ್ತಿಕ್. ಸತ್ಯಳ ಬಳಿ ಬಂದು ''ನಾನು ನಿನ್ನೆ ಡ್ರಿಂಕ್ಸ್ ಮಾಡಿದ್ದೆ ಇದಕ್ಕೆಲ್ಲ ನೀನೇ ಕಾರಣ ಎಂದು ಅಮ್ಮಂಗೆ ಗೊತ್ತಾಗಿ ಇರುತ್ತೆ. ಅದಕ್ಕೆ ಅಮ್ಮ ನಿನಗೆ ಮನೆಯಿಂದ ಹೊರಟು ಹೋಗು ಎಂದು ಬೈದು ಇರುತ್ತಾರೆ. ನಿನಗೆ ಒಟ್ಟಾರೆ ಅಮ್ಮ ಕ್ಲಾಸ್ ತೆಗೆದುಕೊಂಡಿದ್ದಾರೆ. ನನ್ನ ಮಗ ಹಾಳಾಗಲು ನೀನೇ ಕಾರಣ. ಮನೆ ಬಿಟ್ಟು ಓಡಿಸುತ್ತೇನೆ ಎಂದು ಹೇಳಿರಬೇಕು ಅಲ್ವಾ'' ಎಂದು ಕಾರ್ತಿಕ್ ಹೇಳುತ್ತಾನೆ.

ಆ ಮಾತಿಗೆ ಸತ್ಯ ಶಾಕ್ ಆಗಿ ಕಾರ್ತಿಕ್ ಮುಖ ನೋಡುತ್ತಾಳೆ. ನಿನ್ನ ಮನೆ ಬಿಟ್ಟು ಕಳುಹಿಸುವುದು ಆದರೆ ನೀನು ಯಾವತ್ತೂ ವಾಪಸ್ ಬರಬಾರದು ಆ ರೀತಿ ಇರಬೇಕು ಪರ್ಮನೆಂಟ್ ಆಗಿ ಎಂದು ಈ ರೀತಿ ಬಾಯಿ ಮಾತಿನಲ್ಲಿ ಹೇಳಿದರೆ ಎನು ಪ್ರಯೋಜನ ಎಂದು ಹೇಳುತ್ತಾನೆ ಕಾರ್ತಿಕ್. ಅದಕ್ಕೆ ಸತ್ಯ ಮನದಲ್ಲಿ ಅತ್ತೆ ನನ್ನ ಪರ್ಮನೆಂಟ್ ಆಗಿ ಮನೆಗೆ ಕಳುಹಿಸಬೇಕು ಅಂತಿರುವುದು ಕಾರ್ತಿಕ್ ಎಂದು ಅಳುತ್ತಾಳೆ. ಬಳಿಕ ಕಾರ್ತಿಕ್ ಹೇಳುತ್ತಾನೆ ನೋಡು ಸತ್ಯ ಆ ರೀತಿ ಏನು ಆಗಲ್ಲ ಯಾಕೆ ಹೇಳು ನನ್ನ ಹಣೆ ಬರಹ ಸರಿ ಇಲ್ಲ. ನಾನೇ ನೀನು ಬೇಡ ಎಂದು ಆಚೆ ತಳ್ಳಿದರು ನೀನು ನನ್ನ ಲೈಫ್ ನಿಂದಾ ಹೋಗಲು ಆಗಲ್ಲ. ನೀನು ಈ ಮನೆಯಲ್ಲಿಯೇ ಫಿಕ್ಸ್ ಡೊಂಟ್ ವರಿ ಎಂದು ನಗುತ್ತಾ ಹೇಳುತ್ತಾನೆ.

ಸತ್ಯ-ಕಾರ್ತಿಕ್ ಜಗಳ

ಸತ್ಯ-ಕಾರ್ತಿಕ್ ಜಗಳ

ಅದಕ್ಕೆ ಸತ್ಯ ಹೇಳುತ್ತಾಳೆ ''ನಾನು ನಿನಗೆ ಏಷ್ಟು ಕಷ್ಟ ಕೊಡುತ್ತಿದ್ದೇನೆ ಎಂದು ಕೇಳುತ್ತಾಳೆ. ಅದಕ್ಕೆ ಕಾರ್ತಿಕ್ ಹೇಳುತ್ತಾನೆ ಕಷ್ಟನಾ ಟಾರ್ಚರ್ ನೀನು. ಅಲ್ಲಾ ಅಮ್ಮ ಬೈದಾಗ ಎಲ್ಲಾ ಒಂದು ಕಿವಿಲಿ ಕೇಳಿಸಿಕೊಂಡು ಇನ್ನೊಂದು ಕಿವೀಲಿ ಬಿಡುತ್ತಿದ್ದೆ. ಇವಾಗ ಏನಾಯ್ತು. ಏನು ಸ್ಪೆಷಲ್ ಇಷ್ಟೊಂದು ಯಾಕೆ ಫೀಲ್ ಮಾಡುತ್ತಿದ್ದೀಯಾ. ಹೀಗೆಲ್ಲ ಕೂರಬೇಡ ನೀನು ಅಳುತ್ತಾ ಕೂರುವುದು ನಿನಗೆ ಸ್ವಲ್ಪವೂ ಸೂಟ್ ಆಗಲ್ಲಾ. ಕಣ್ಣು ಒರೆಸಿಕೊ ಎಂದು ಸಮಾಧಾನ ಮಾಡುತ್ತಾನೆ. ಆದರೂ ಸತ್ಯ ಅಳು ಮುಂದುವರೆಸಿದನ್ನು ನೋಡಿ ಬೇಸರಿಸಿಕೊಂಡ ಕಾರ್ತಿಕ್ ಹೇಳುತ್ತಾನೆ ಕಣ್ಣೀರು ಒರೆಸಿಕೋ ಸತ್ಯ ಎನ್ನುತ್ತಾನೆ ಬಳಿಕ ಕರ್ಚೀಫ್ ಕೊಟ್ಟು ಹೇಳುತ್ತಾನೆ ತಗೋ ಕಣ್ಣೀರು ಒರೆಸಿಕೋ ಎಂದು ಸಮಾಧಾನಿಸುತ್ತಾನೆ.

ತಾತನನ್ನು ಹುಡುಕಿದ ಚೋಟು

ತಾತನನ್ನು ಹುಡುಕಿದ ಚೋಟು

ಇತ್ತ ಬಾಲ ತಾತಯ್ಯನನ್ನು ಹುಡುಕುತ್ತಿದ್ದಾನೆ ದಿ ಹೇಗಾದರೂ ಮೋಸದ ಕೆಡ್ಡಕ್ಕೆ ಬೀಳಿಸಿ ತನ್ನ ಕಾರ್ಯ ಮುಂದುವರೆಸುವತ್ತಾ ಚಿತ್ತ ಹರಿಸಿದ್ದಾರೆ. ಇತ್ತ ಚೋಟು ಹೇಗಾದರೂ ನಾಟಕ ಮಾಡಲು ತಾತಯ್ಯ ಪಾತ್ರವನ್ನು ಹುಡುಕಿ ಕೊಡುತ್ತಾನೆ. ಒಬ್ಬ ತಾತಯ್ಯ ಬೀಡಿ ಸೇದುತ್ತಾ ಗದ್ದೆ ಬದಿ ಕುಳಿತುಕೊಂಡಿರುತ್ತಾರೆ. ಇತ್ತ ಚೋಟು ಸಿಗರೇಟ್ ಪ್ಯಾಕ್ ಅನ್ನು ಅವರ ಎದುರು ತೋರಿಸಿ ಎನು ಹೇಗಿದ್ದೀರಾ ಎಂದು ಕೇಳುತ್ತಾನೆ. ಅದಕ್ಕೆ ತಾತಯ್ಯ ಏಯ್ ಚೋಟು ಉರೈಕಳು ಎಲ್ಲಾ ಪಾಪದವರು ಅವರನ್ನು ಯಾಮಾರಿಸಿ ನೀನು ಎನು ಸಾಧನೆ ಮಾಡುತ್ತಿದ್ದೀರ ಎಂದು ಗೋಗ್ಗಯ್ಯ ಹೇಳುತ್ತಾನೆ.

ಘಾಟಿ ತಾತನ್ನೇ ಹುಡುಗಿದ ಚೋಟು

ಘಾಟಿ ತಾತನ್ನೇ ಹುಡುಗಿದ ಚೋಟು

ಅದಕ್ಕೆ ಚೋಟು ಹೇಳುತ್ತಾನೆ ನಾನು ಯಾರನ್ನೂ ಯಾಮಾರಿಸಿಲ್ಲ ಗೋಗ್ಗಯ. ನಮ್ಮೂರ ಹೈದಂಗೆ ಹೆಲ್ಪ್ ಕೇಳಿಕೊಂಡು ಬಂದಿದ್ದೀನಿ ಅಷ್ಟೇ ಎಂದು ಹೇಳುತ್ತಾನೆ. ಅದಕ್ಕೇ ಗೋಗ್ಗಾಯ, ''ಬೆಂಗಳೂರಿನವರಿಗೆ ನೀರು ಕುಡಿಯಲು ದುಡ್ಡು ಕೊಡಬೇಕು. ಅಂಥದ್ರಲ್ಲಿ ಈ ಪುಗ್ಸಾಟೆ ದೊಡ್ಡ ಬೀಡಿ ತಂದು ಇಟ್ಟಾಗ್ಲೆ ನಾನು ಅಂದುಕೊಂಡೆ ಏನೋ ಇದೆ ಎಂದು ಹೇಳೊ ಬೇಗ ಹಾಗಾದರೆ ಎಂದು ಹೇಳುತ್ತಾನೆ. ಅದಕ್ಕೆ ಚೋಟು ಬಾಲ ಬಳಿ ಬಂದು ಅಗಬಹುದಾ ಇವಾ ಈ ತಾತ ಬಲೆ ಕಿರಾತಕ. ಎಲ್ಲಾ ಪೇಪರ್ ಎಲ್ಲಾ ಓದುತ್ತಾನೆ ಎನ್ನುತ್ತಾನೆ. ಅದಕ್ಕೆ ಬಾಲ ಎಲ್ಲಾ ವಿಚಾರವನ್ನು ಗೊಗ್ಗಾಯ ಬಳಿ ಹೇಳುತ್ತಾನೆ. ಎಲ್ಲಾ ವಿಚಾರ ಹೇಳಿದ ಬಳಿಕ ಗೋಗ್ಗಾಯಾ ಜೋರಾಗಿ ನಗುತ್ತಾನೆ.

ಒಪ್ಪಿಗೆ ಸೂಚಿಸಿದ ತಾತಯ್ಯ

ಒಪ್ಪಿಗೆ ಸೂಚಿಸಿದ ತಾತಯ್ಯ

ಅದಕ್ಕೆ ಬಾಲ ಹೇಳುತ್ತಾನೆ ಗೊಗ್ಗಾಯಾ ನಗಬೇಡ ನಾನು ಅವಳನ್ನು ಯಾಮಾರಿಸಿ ಇರಬಹುದು ಆದರೆ ನನ್ನ ಪ್ರೀತಿ ಸುಳ್ಳಲ್ಲ ಎನ್ನುತ್ತಾನೆ ಅದಕ್ಕೆ ಗೋಗ್ಗಾಯ ಹೇಳುತ್ತಾನೆ. ಹೇ ಬಾ ಈ ಪ್ರೀತಿ ಪ್ರೇಮ ಎಲ್ಲಾ ವಯಸ್ಸಿನ ಆಟ ಕಣೋ ಎಂದಾಗ ಬಾಲ ಹೇಳುತ್ತಾನೆ ನಿಮ್ಮ ಲವ್ ಫೇಲ್ಯೂರ್ ಆಗಿದೆ ಅದಕ್ಕೆ ಹೀಗೆ ಹೇಳುತ್ತೀರಿ ಅಂದಾಗ ನನ್ನ ವಯಸ್ಸಿನಲ್ಲಿ ಈ ಥರ ತುಂಬಾ ಆಗಿದೆ ಎಂದೆಲ್ಲಾ ಹೇಳುತ್ತಾನೆ. ಕೊನೆಗೂ ಗೋಗ್ಗಾಯ ಅಭಿನಯ ಮಾಡಲು ಒಪ್ಪಿಗೆ ಸೂಚಿಸುತ್ತಾನೆ.

English summary
Kannada serial satya written updated on 16th August. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X