Sathya: ಮಗಳು ರಿತು ಮೇಲೆ ಲಕ್ಷ್ಮಣ ಗರಂ: ರಾಕೇಶ್‌ಗೆ ಪ್ರಾಣ ಸಂಕಟ
'ಸತ್ಯ' ಧಾರಾವಾಹಿ ದಿನದಿಂದ ದಿನಕ್ಕೆ ಪ್ರೇಕ್ಷಕರ ಮನಗೆಲ್ಲುತ್ತಿದೆ. ಸದ್ಯ ಕತೆಯಲ್ಲಿ ಸೀತಾ ಹಾಗೂ ಊರ್ಮಿಳಾ ಇಬ್ಬರು ಸೇರಿ ಸತ್ಯಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ರಾಕೇಶ್ ವಿಚಾರದಲ್ಲಿ ಸತ್ಯ ಮಾಡಿದ್ದು ಅವರ ಪ್ರಕಾರ ತಪ್ಪಾಗಿತ್ತು. ಸೀತಾ ಬಳಿ ಸತ್ಯ ಎಷ್ಟೇ ಬೇಡಿಕೊಂಡರು ಪ್ರಯೋಜನವಾಗುತ್ತಿಲ್ಲ. ಸತ್ಯಗೆ ಸರಿಯಾಗಿ ಬುದ್ಧಿ ಹೇಳುತ್ತಿದ್ದಾಳೆ. ಇದಕ್ಕೆ ಊರ್ಮಿಳಾ ಬೆಂಬಲ ಕೂಡ ಇದೆ.
ಸೀತಮ್ಮ ನಾನು ನಿಮ್ಮ ಹಾಗೆ ಮನೆ ಬೆಳಗಲು ಬಂದ ಹುಡುಗಿ ನಾನು ಯಾವತ್ತೂ ಯಾರ ಮನೆಯನ್ನು ಹಾಳು ಮಾಡುವುದು ಇಲ್ಲ. ನನ್ನನ್ನು ನೀವು ಈ ರೀತಿ ನಡೆಸಿಕೊಳ್ಳಬೇಡಿ ಎಂದು ಸತ್ಯ ಹೇಳುತ್ತಾಳೆ. ಅದಕ್ಕೆ ನಾವು ಯಾರು ಅಡುಗೆ ಮನೆಯಲ್ಲಿ ಇಲ್ಲದೇ ಇರುವ ವೇಳೆ ಬಾ ಅಲ್ಲಿತನಕ ಬರಬೇಡ ಎಂದು ಸೀತಾ ಕೋಪದಿಂದ ಹೇಳುತ್ತಾಳೆ. ಸತ್ಯ ಊರ್ಮಿಳಾ ಕಡೆ ನೋಡಿದಾಗ ಆಕೆ ಕೂಡ ಕೋಪದಿಂದ ಮಾತನಾಡುತ್ತಾಳೆ.

ನಿನಗೆ ನಾನು ನನ್ನ ಗಂಡ ಎಷ್ಟೆಲ್ಲ ಸಹಾಯ ಮಾಡಿದೆವು. ಆದರೆ ನಿನಗೆ ಮಾತ್ರ ಅದರ ನೆನಪು ಇಲ್ಲ. ಅದ್ಯಾವುದನ್ನು ನೋಡದೇ ನನ್ನ ಗಂಡನನ್ನೇ ಹೆಸರು ಹಿಡಿದು ಕರೆಯುತ್ತೀಯಾ, ನಾನು ಹೇಗೆ ನಿನಗೆ ಸಹಾಯ ಮಾಡಲಿ ಎಂದು ಊರ್ಮಿಳಾ ಹೇಳಿದಾಗ ಸತ್ಯಗೆ ದುಃಖ ಉಮ್ಮಳಿಸಿ ಬರುತ್ತದೆ. ಆದರೂ ಅದನ್ನು ಸಹಿಸಿಕೊಂಡು ಒಳಗೆ ಹೋಗುತ್ತಾಳೆ.
ರಿತು ಮಾತಿಗೆ ಕೋಪಗೊಂಡ ಲಕ್ಷ್ಮಣ
ಇನ್ನು ರಾಕೇಶ್ ಜೊತೆ ರಿತು ಫೋನ್ ಮಾತನಾಡುವ ವೇಳೆ ಲಕ್ಷ್ಮಣ ಹಾಗೂ ರಿತು ನಡುವೆ ದೊಡ್ಡ ಜಗಳ ನಡೆದು ಹೋಗುತ್ತದೆ. ರಿತು ತಂದೆಯ ಬಳಿ ಅದೆಷ್ಟು ಬೇಡಿಕೊಂಡರು, ಲಕ್ಷ್ಮಣ ಮನಸ್ಸು ಕರಗುವುದಿಲ್ಲ. ನನ್ನ ಮಗಳು ನಾನು ಹೇಳಿದ ಹಾಗೆಯೇ ಕೇಳಿಕೊಂಡು ಇರಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಹಾಗೆಯೇ ಆಕೆಯ ಕೈಯಿಂದ ಮೊಬೈಲ್ ಕಸಿದುಕೊಳ್ಳುತ್ತಾನೆ.
ರಿತು ಮೇಲೆ ಕೈ ಮಾಡಲು ಹೊರಟ ಲಕ್ಷ್ಮಣ
ರಿತು ಮೇಲೆ ಲಕ್ಷ್ಮಣ ಕೈ ಮಾಡಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ಕಾರ್ತಿಕ್ ಬರುತ್ತಾನೆ. ಲಕ್ಷ್ಮಣಗೆ ಬುದ್ದಿ ಮಾತನ್ನು ಹೇಳುತ್ತಾನೆ. ಆದರೆ ಲಕ್ಷ್ಮಣ ಮಾತ್ರ ಅದ್ಯಾವುದನ್ನು ಕೇಳಿಸಿಕೊಳ್ಳದೇ ನನಗೆ ಯಾರ ಬುದ್ಧಿವಾದ ಅಗತ್ಯ ಇಲ್ಲ ಎಂದು ಹೇಳಿ ಹೋಗುತ್ತಾನೆ. ರಿತು ಅಣ್ಣನನ್ನು ನೋಡಿ ಜೋರಾಗಿ ಅಳುತ್ತಾಳೆ . ರಿತು ಹಾಗೂ ಆಕೆಯ ತಂದೆಯ ನಡುವೆ ಏನೋ ಜಗಳ ನಡೆಯುತ್ತಿದೆ ಎನ್ನುವುದು ರಾಕೇಶ್‌ಗೆ ತಿಳಿಯುತ್ತದೆ.

ಹಠ ಹಿಡಿದ ರಾಕೇಶ್
ರಾಕೇಶ್ ಮಾತ್ರ ತಾನು ರಿತುವನ್ನು ನೋಡಲೇಬೇಕು ಎಂದು ಹಠ ಹಿಡಿಯುತ್ತಾನೆ. ಆಗ ಆತನ ಗೆಳೆಯರು ಅವನಿಗೆ ಬುದ್ದಿ ಹೇಳುತ್ತಾರೆ. ನೀನು ಈ ರೀತಿ ಮಾಡಿದರೆ ಖಂಡಿತವಾಗಿಯೂ ಸತ್ಯಗೆ ಪ್ರಾಬ್ಲಂ ಆಗುತ್ತದೆ ಎಂದು ಹೇಳುತ್ತಾರೆ. ಆದರೂ ಆತ ಮಾತ್ರ ನಾನು ರಿತುವನ್ನು ನೋಡಲೇಬೇಕು ಎಂದು ಪಟ್ಟು ಹಿಡಿಯುತ್ತಾನೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











