For Quick Alerts
  ALLOW NOTIFICATIONS  
  For Daily Alerts

  ಸತ್ಯ ಮನಸ್ಸು ಅರ್ಥ ಮಾಡಿಕೊಳ್ಳುತ್ತಾರ ರಾಮಚಂದ್ರ ರಾಯರು?

  By ಪೂರ್ವ
  |

  ಸತ್ಯ ಧಾರವಾಹಿ ಕುತೂಹಲಕಾರಿ ತಿರುವು ಪಡೆದುಕೊಳ್ಳುತ್ತಿದೆ. ಇತ್ತ ಸತ್ಯ ಸಪ್ಪಗೆ ಮುಖ ಹಾಕಿರುವುದನ್ನು ನೋಡಿದ ರಾಮ ಚಂದ್ರ ರಾಯರು ಸತ್ಯ ಏನಯ್ತಮ್ಮಾ ಯಾರಾದರೂ ಏನಾದರೂ ಅಂದ್ರಾ? ಕಾರ್ತಿಕ್ ಏನಾದರು ಅಂದ್ನಾ, ಸೀತಾ ಏನಾದರು ಹೇಳಿದಳಾ, ಏನಾದರು ಸಮಸ್ಯೆನಾ? ಎಂದು ಕೇಳುತ್ತಾರೆ. ಅದಕ್ಕೆ ಸತ್ಯ ತನ್ನ ಅತ್ತೆ ಸೀತಾ ಮಾತನಾಡಿರುವುದನ್ನು ಒಮ್ಮೆ ನೆನಪು ಮಾಡಿಕೊಳ್ಳುತ್ತಾಳೆ.

  ಕಾರ್ತಿಕ್ ವಿಚ್ಛೇದನ ಪತ್ರ ಇದಕ್ಕೆ ಸಹಿ ಹಾಕಬೇಕು, ಈ ಮನೆಯಿಂದ ನೀನು ದೂರ ಹೋಗಬೇಕು ಎಂದು ಸೀತಾ ಹೇಳಿದ್ದಾರೆ. ಇದು ಸತ್ಯ ಮನಸಿಗೆ ನಾಟಿದೆ. ಆದರೆ ಇದನ್ನು ಬಾಯಿ ಬಿಟ್ಟು ಯಾರ ಬಳಿಯೂ ಹೇಳಲು ಆಗದೆ ಸತ್ಯ ಒಬ್ಬಳೇ ಒದ್ದಾಡುತ್ತಿದ್ದಾಳೆ.

  'ಜೊತೆಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಔಟ್: ಕಿರುತೆರೆಯಿಂದ ಬಹಿಷ್ಕಾರ?'ಜೊತೆಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಔಟ್: ಕಿರುತೆರೆಯಿಂದ ಬಹಿಷ್ಕಾರ?


  ರಾಮ ಚಂದ್ರ ರಾಯರು ಹೇಳುತ್ತಾರೆ ಸರಿಯಮ್ಮ ನಿನಗೆ ಹೇಳಲು ಇಷ್ಟ ಇಲ್ಲ ಅಂದರೆ ನಾನು ಏನು ಹೇಳಲ್ಲ. ಆದರೆ ಒಂದು ಮಾತು, ಕಾರ್ತಿಕ್ ನಿನ್ನ ಜೊತೆ ಸರಿಯಾಗಿ ಇದ್ದಾನ ನೀನು ತವರು ಮನೆಗೆ ಹೋದಾಗ ನಿನ್ನ ಜೊತೆ ಸರಿಯಾಗಿ ನಡೆದುಕೊಂಡ ತಾನೇ ಎಂದಾಗ, ಸತ್ಯ, ಕಾರ್ತಿಕ್ ನದ್ದು ಎನು ಸಮಸ್ಯೆ ಇಲ್ಲ ರಾಯರೇ ಅವನು ಅಮ್ಮ ಅಜ್ಜಿ ಜೊತೆ ತುಂಬಾ ಚೆನ್ನಾಗಿ ಇದ್ದ. ಅವನಿಗೆ ತುಂಬಾ ಖುಷಿ ಆಗಿದೆ ಎನ್ನುತ್ತಾಳೆ.

  ಸತ್ಯಗೆ ರಾಯರ ಪ್ರಶ್ನೆ

  ಸತ್ಯಗೆ ರಾಯರ ಪ್ರಶ್ನೆ

  ಅದಕ್ಕೆ ರಾಮ ಚಂದ್ರ ರಾಯರು ಕೇಳುತ್ತಾರೆ, ನಾನು ಹೇಳಿದ್ದು ಕಾರ್ತಿಕ್ ನಿನ್ನ ಜೊತೆ ಸರಿಯಾಗಿ ಇದ್ದಾನ ಎಂದು? ನಿನ್ನ ಜೊತೆ ಕಾರ್ತಿಕ್ ಹಾಗೆಯೇ ಇದ್ದಾನಾ? ಬೀಗರ ಮನೆಗೆ ನಿಮ್ಮನ್ನು ಕಳುಹಿಸಿದ್ದು ಒಂದಷ್ಟು ದಿನ ಆನಂದವಾಗಿ ಇರಲಿ ಆಗಲಾದರೂ ನೀವಿಬ್ಬರೂ ಕ್ಲೋಸ್ ಫ್ರೆಂಡ್ಸ್ ಆಗ್ತೀರಾ ಅಂದುಕೊಂಡೆ. ಅದಕ್ಕೆ ನಾವು ಯಾರು ಬೀಗರ ಊಟಕ್ಕೆ ಬರಲೇ ಇಲ್ಲ. ಬರಬಾರದು ಅಂತ ಯಾವುದೇ ಉದ್ದೇಶ ಇರಲಿಲ್ಲ. ನೀನು ಕಾರ್ತಿಕ್ ಜೊತೆಯಾಗಿ ಇರಬೇಕಾದರೆ ನಾವು ಬರಬಾರದು ಅಂತ ಬರಲಿಲ್ಲ ಅಷ್ಟೇ ಎಂದು ಹೇಳುತ್ತಾರೆ.

  ಅಪ್ಪನನ್ನು ಕಾಣುತ್ತಿದ್ದೇನೆ ಎಂದ ಸತ್ಯ

  ಅಪ್ಪನನ್ನು ಕಾಣುತ್ತಿದ್ದೇನೆ ಎಂದ ಸತ್ಯ

  ''ನಿಮ್ಮಿಬ್ಬರ ಬಿರುಕು ಸರಿ ಹೋಗಲಿ ಅಂದುಕೊಂಡೆ ಆದರೆ ಆ ಉದ್ದೇಶ ಯಾಕೋ ನೆರವೇರೋ ಹಾಗೆ ಕಾಣೆ. ನಾವು ಬರಲಿಲ್ಲ ಅಂತ ನೀನು ಬೇಜಾರ್ ಮಾಡಿಕೊಳ್ಳಬೇಡಮ್ಮ ಎಂದು ಹೇಳುತ್ತಾರೆ. ಅದಕ್ಕೆ ಸತ್ಯ, ಇಲ್ಲ ರಾಯರೇ ನನಗೆ ಏನು ಬೇಜಾರಿಲ್ಲ. ನೀವೇನೇ ಮಾಡಿದರು, ಬಲವಾದ ಉದ್ದೇಶ ಇರುತ್ತೆ ಅದಕ್ಕೆ ನಂಬುತ್ತೇನೆ ಅಂದಾಗ ರಾಯರು, ''ನನ್ನ ಮೇಲೆ ನಿನಗೆ ಅಷ್ಟು ನಂಬಿಕೆ ಇದ್ದರೆ ನಿಜ ಹೇಳು ಅಲ್ಲಿ ಏನಾಯ್ತು? ನೀನ್ಯಾಕೆ ಬೇಜಾರು ಆಗಿದ್ದೀಯಾ? ನಿನ್ನ ತಂದೆ ಈ ಪ್ರಶ್ನೆ ಕೇಳುತ್ತಿದ್ದರೆ ಉತ್ತರ ಕೊಡುತ್ತಾ ಇರಲಿಲ್ಲವಾ? ಎಂದು ಕೇಳುತ್ತಾರೆ. ಅದಕ್ಕೆ ಸತ್ಯ ಹೇಳುತ್ತಾಳೆ ರಾಯರೇ ನಿಮ್ಮಲ್ಲಿ ನಾನು ನನ್ನ ಅಪ್ಪನ ಕಾಣುತ್ತಿದ್ದೇನೆ ಎನ್ನುತ್ತಾಳೆ.

  ರಾಯರಿಗೆ ಪ್ರಶ್ನೆ ಕೇಳಿದ ಸತ್ಯ

  ರಾಯರಿಗೆ ಪ್ರಶ್ನೆ ಕೇಳಿದ ಸತ್ಯ

  'ಹಾಗಾದ್ರೆ ಈ ಅಪ್ಪನ ಬಳಿ ಸತ್ಯ ಹೇಳಬಹುದು ಅಲ್ವಾ'' ಎನ್ನುತ್ತಾರೆ ರಾಯರು. ಅದಕ್ಕೆ ಸತ್ಯ ಹೇಳುತ್ತಾಳೆ, ''ನನ್ನ ಪ್ರಶ್ನೆ ಇದೆ ರಾಯರೇ ಅದನ್ನು ನಾನು ನಿಮ್ಮ ಹತ್ರ ಕೇಳಿದರೆ ನೀವು ತಪ್ಪು ತಿಳಿಬಾರದು. ಅದಕ್ಕೆ ರಾಯರು ಇಲ್ಲ ಹೇಳಮ್ಮ ಎಂದು ಹೇಳುತ್ತಾರೆ. ಗಂಡ ಹೆಂಡತಿ ಸಂಬಂಧ ಸರಿ ಹೋಗೋಕೆ ಅವರಿಬ್ಬರೂ ಜೊತೇಲೀ ಇರಬೇಕಾ ಇಲ್ಲ ಬೇರೆ ಬೇರೆ ಆಗಬೇಕಾ ಎಂದು ಕೇಳಿದಾಗ ರಾಯರಿಗೆ ಶಾಕ್ ಆಗುತ್ತದೆ. ಮುಂದೇನು ಎಂದು ಕಾದು ನೋಡಬೇಕಿದೆ.

  English summary
  Kannada serial Satya written updated on 18th August.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X