ಲಕ್ಷ್ಮಣನ ಕೋಪ ಕಂಡು ಶಾಕ್ ಆದ ಕಾರ್ತಿಕ್: ಸತ್ಯಳನ್ನು ಶಪಿಸಿದ ಸೀತಾ
'ಸತ್ಯ' ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ರಿತುವನ್ನು ಗೆಳತಿಯ ಮನೆಯಿಂದ ಲಕ್ಷ್ಮಣ ನೇರವಾಗಿ ಮನೆಗೆ ಕರೆದುಕೊಂಡು ಬರುತ್ತಾನೆ. ಕೋಪದಲ್ಲಿ ಇದ್ದ ಸತ್ಯಳನ್ನು ನೋಡಿ ಲಕ್ಷ್ಮಣಗೆ ಇನ್ನೂ ಕೋಪ ಉಕ್ಕಿ ಹರಿಯುತ್ತದೆ. ಬೀಳುತ್ತಿದ್ದ ರಿತುವನ್ನೂ ಸತ್ಯ ಹಿಡಿದುಕೊಳ್ಳುತ್ತ ಇರುತ್ತಾಳೆ. ಬಳಿಕ ಲಕ್ಷ್ಮಣನ ಬಳಿ ಏನಾಯಿತು ಎಂದೆಲ್ಲ ಕೇಳುತ್ತಾಳೆ ಸತ್ಯ.
ಸತ್ಯ ಮಾತಿಗೆ ಚಕಾರ ಎತ್ತದೇ ತನ್ನ ಹೆಂಡತಿ ಊರ್ಮಿಳಾಳನ್ನು ಕರೆದು ಮಗಳನ್ನು ಸರಿಯಾಗಿ ನೋಡಿಕೊಳ್ಳಲು ಆಗಲ್ವಾ ಎಂದು ಜೋರಾಗಿ ಹೇಳುತ್ತಾನೆ. ಆ ಬಳಿಕ ರಿತು, ರಾಕೇಶ್‌ನನ್ನು ಮರೆತಿಲ್ಲ. ಆತನಿಗೆ ಕರೆ ಮಾಡುತ್ತಿದ್ದಾಳೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಊರ್ಮಿಳಾ ಮಾತ್ರ ಬಹಳ ಬೇಸರ ಪಟ್ಟುಕೊಂಡು ಇರುತ್ತಾಳೆ.

ಮಗಳ ಮೇಲೆ ಬೇಸರಗೊಂಡ ಊರ್ಮಿಳಾ
ತನ್ನ ಮಗಳು ತಾನು ಎಳೆದ ಗೆರೆಯನ್ನು ದಾಟುವುದಿಲ್ಲ ಎಂದು ಅಂದುಕೊಂಡಿದ್ದೆ. ಆದರೆ ನನ್ನ ಮಗಳಿಗೆ ಹೆತ್ತ ತಂದೆ ತಾಯಿಗಿಂತ ಅವಳು ಪ್ರೀತಿಸುತ್ತಿರುವ ಹುಡುಗನೇ ಮುಖ್ಯ ಅಲ್ವಾ ಎಂದು ಊರ್ಮಿಳಾ ನೋವಲ್ಲಿ ಮಾತನಾಡುತ್ತಾಳೆ. ಆದರೆ ಲಕ್ಷ್ಮಣ ಮಾತ್ರ ಅದ್ಯಾವುದನ್ನು ಯೋಚನೆ ಮಾಡದೆ ಜೋರಾಗಿ ಬೈಯುತ್ತಲೇ ಇರುತ್ತಾನೆ. ನಾನು ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದೆನೋ ಏನೋ ಎಂದು ಬೇಸರ ಮಾಡಿಕೊಳ್ಳುತ್ತಾನೆ. ಇದನ್ನು ನೋಡಿ ಕಾರ್ತಿಕ್ ಮಾತ್ರ ಬಹಳ ಬೇಸರಪಟ್ಟುಕೊಳ್ಳುತ್ತಾನೆ.
ಚಿಕ್ಕಪ್ಪನ ಮಾತಿಗೆ ಬೇಸರಗೊಂಡ ಕಾರ್ತಿಕ್
ರಿತು ನನ್ನ ತಂಗಿ. ಆಕೆಯ ವಯಸ್ಸು ಹಾಗಿದೆ. ಆಕೆಯ ಬಳಿ ಮಾತನಾಡುವಾಗ ಸ್ವಲ್ಪ ಮೃದುವಾಗಿ ಮಾತನಾಡಿ ಎಂದು ಪರಿ ಪರಿ ಆಗಿ ಕಾರ್ತಿಕ್ ಬೇಡಿಕೊಳ್ಳುತ್ತಾನೆ. ಇದನ್ನು ನೋಡಿದ ಲಕ್ಷ್ಮಣ ಮಾತ್ರ ಕಠೋರವಾದ ಮಾತುಗಳನ್ನಾಡುತ್ತಾನೆ. ನನ್ನ ಹಾಗೂ ನನ್ನ ಫ್ಯಾಮಿಲಿ ಬಗ್ಗೆ ಮಾತನಾಡಲು ಯಾರಿಗೂ ನಾನು ರೈಟ್ಸ್ ಕೊಟ್ಟಿಲ್ಲ, ಕೊಡೋದು ಇಲ್ಲ ಎಂದಾಗ ಕಾರ್ತಿಕ್‌ಗೆ ಬಹಳ ನೋವಾಗುತ್ತದೆ. ಸೀತಾಗೆ ಕೂಡ ಲಕ್ಷ್ಮಣನ ಮಾತಿನಿಂದ ಬೇಸರವಾಗುತ್ತದೆ.
ಅತ್ತಿಗೆಗೆ ಸಮಜಾಯಿಷಿ ನೀಡಿದ ಲಕ್ಷ್ಮಣ
ಏನು ಮಾತನಾಡುತ್ತಿದ್ದೀಯಾ ಲಕ್ಷ್ಮಣ ಎಂದಾಗ ಅತ್ತಿಗೆಗೆ ಸಮಜಾಯಿಷಿ ನೀಡುತ್ತಾನೆ. ಇನ್ನು ಕಾರ್ತಿಕ್ ಬಹಳ ದುಃಖ ದಿಂದ ಹೇಳುತ್ತಾನೆ. ನಾನು ರಿತುಳನ್ನು ಸ್ವಂತ ತಂಗಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದೇನೆ. ಆದರೆ ಚಿಕ್ಕಪ್ಪನ ಮಾತು ನನಗೆ ಘಾಸಿ ಗೊಳಿಸಿತು ಎಂದು ರಿತುವನ್ನು ತಬ್ಬಿ ಹಿಡಿದು ಹೇಳುತ್ತಾನೆ. ನಾನು ನಿನಗೆ ಯಾವತ್ತೂ ನೋವು ಕೊಡುವುದಿಲ್ಲ. ನಿನಗೆ ಏನು ಇಷ್ಟ ಅದನ್ನೇ ಮಾಡುತ್ತೇನೆ ಎಂದು ಸಮಾಧಾನ ಮಾಡಿಕೊಳ್ಳುತ್ತಾ ರಿತುಗೆ ಕೂಡ ಸಮಾಧಾನ ಹೇಳುತ್ತಾನೆ.

ರಿತುಗೆ ಸಮಾಧಾನ ಮಾಡಿದ ಕಾರ್ತಿಕ್
ಇದನ್ನು ನೋಡಿದ ರಿತು ತಂದೆಗೆ ಇನ್ನೂ ಕೋಪ ಬರುತ್ತದೆ. ನೋಡು ಕಾರ್ತಿಕ್ ನಾನು ಹೇಳಿದ್ದನ್ನು ಎಲ್ಲ ಹೇಳಿದ್ದೇನೆ, ಇನ್ನು ನೀನು ಹೀಗೆಯೇ ಆಡುತ್ತಿದ್ದರೆ ಖಂಡಿತ ನನ್ನ ಫ್ಯಾಮಿಲಿಯನ್ನು ಕರೆದುಕೊಂಡು ದೂರ ಹೋಗುತ್ತೇನೆ ಎನ್ನುತ್ತಾನೆ. ರಿತುಳನ್ನು ಅಲ್ಲಿಂದ ಎಳೆದುಕೊಂಡು ಹೋಗುತ್ತಾನೆ. ಇತ್ತ ಬಾಲ ಮಾತ್ರ ದಿವ್ಯ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದೆ ತಡಬಡಾಯಿಸುತ್ತ ಇರುತ್ತಾನೆ.
ದಿವ್ಯಾ ಮುಂದೆ ಬಾಲನ ನಾಟಕ
ಇತ್ತ ಹಳ್ಳಿಯಲ್ಲಿ ಬಾಲ ತನ್ನ ನಾಟಕವನ್ನು ಮತ್ತೆ ಮುಂದುವರೆಸಿದ್ದಾನೆ. ಎಲ್ಲರಿಗೂ ಏನೇನೋ ಸಬೂಬು ಹೇಳಿ ನಾಟಕ ಮಾಡುತ್ತಾ ದಿವ್ಯಳನ್ನು ಕೂಡ ನಂಬಿಸುವ ಕೆಲಸ ಮುಂದುವರೆಸಿದ್ದಾನೆ. ತಾತ ಹೆಂಡತಿಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡಿಲ್ಲ ಎಂದು ಬಾಲ ಹೇಳಿದಾಗ ಅದೆಲ್ಲಾ ನಿನಗೆ ಗೊತ್ತಾಗಲ್ಲ, ಅದು ನಾವು ಒಬ್ಬರಿಗೊಬ್ಬರು ಕೊಡುವ ಗೌರವ ಅಂತೆಲ್ಲಾ ಹೇಳುತ್ತಿದ್ದಾನೆ. ಆದರೆ ತಾತ ಮಾತ್ರ ಇದನ್ನೆಲ್ಲಾ ಕೇಳೋಕೆ ಸಿದ್ಧರಿಲ್ಲ.


Click it and Unblock the Notifications











